IPL 2021: ಸ್ಟೋಕ್ಸ್​ ಸ್ಥಾನದಲ್ಲಿ ರಾಜಸ್ಥಾನ್ ರಾಯಲ್ಸ್​ ತಂಡಕ್ಕೆ ಎಂಟ್ರಿ ಕೊಟ್ಟ ಹೊಡಿಬಡಿ ದಾಂಡಿಗ..!

ಈ ಹಿಂದೆ ಪಾಕಿಸ್ತಾನ ಸೂಪರ್ ಲೀಗ್, ಕೆರಿಬಿಯನ್ ಪ್ರೀಮಿಯರ್ ಲೀಗ್ ಮತ್ತು ಗ್ಲೋಬಲ್ ಟಿ 20 ಕೆನಡಾ ಟೂರ್ನಿಗಳಲ್ಲಿ ಆಡಿದ್ದಾರೆ. ಇದಾಗ್ಯೂ ಇಂಡಿಯನ್ ಪ್ರೀಮಿಯರ್ ಲೀಗ್​ಗೆ ಆಯ್ಕೆಯಾಗಿರಲಿಲ್ಲ.

rassie van der dussen

rassie van der dussen

 • Share this:
  ರಾಜಸ್ಥಾನ್ ರಾಯಲ್ಸ್​ ತಂಡಕ್ಕೆ ಹೊಸ ಆಟಗಾರನ ಆಗಮನವಾಗಿದೆ. ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್ ರಾಸ್ಸಿ ವಾನ್ ಡೆರ್ ಡುಸೆನ್ ರಾಜಸ್ಥಾನ್ ರಾಯಲ್ಸ್ ತಂಡವನ್ನು ಸೇರಿಕೊಂಡಿದ್ದಾರೆ. ಬೆನ್ ಸ್ಟೋಕ್ಸ್ ಬದಲಿಯಾಗಿ ವಾನ್ ಡೆರ್ ಡುಸೆನ್ ಅವರನ್ನು ಆಯ್ಕೆ ಮಾಡಲಾಗಿದ್ದು, ಇದೀಗ ಭಾರತಕ್ಕೆ ಆಗಮಿಸಿ ರಾಜಸ್ಥಾನ್ ರಾಯಲ್ಸ್​ ತಂಡದ ಕ್ವಾರಂಟೈನ್​ನಲ್ಲಿದ್ದಾರೆ.

  ಪಂಜಾಬ್ ಕಿಂಗ್ಸ್​ ವಿರುದ್ದದ ಪಂದ್ಯದ ವೇಳೆ ಕ್ರಿಸ್ ಗೇಲ್ ಕ್ಯಾಚ್ ಹಿಡಿಯುವಾಗ ಬೆನ್​ ಸ್ಟೋಕ್ಸ್​ ಬೆರಳಿಗೆ ಗಾಯವಾಗಿತ್ತು. ಹೀಗಾಗಿ ಅವರು ಅರ್ಧದಲ್ಲೇ ಐಪಿಎಲ್ ತೊರೆದಿದ್ದರು. ಇದಕ್ಕೂ ಮುನ್ನ ಇಂಗ್ಲೆಂಡ್ ವೇಗದ ಬೌಲರ್ ಜೋಫ್ರಾ ಆರ್ಚರ್ ಕೂಡ ಹೊರಗುಳಿದಿದ್ದರು. ಇನ್ನು ಸ್ಟೋಕ್ಸ್ ಬೆನ್ನಲ್ಲೇ ಅದೇ ಆಂಡ್ರ್ಯೂ ಟೈ ಮತ್ತು ಲಿಯಾಮ್ ಲಿವಿಂಗ್ಸ್ಟೋನ್ ವೈಯಕ್ತಿಕ ಕಾರಣಗಳಿಂದ ಆರ್​ಆರ್ ತಂಡವನ್ನು ತೊರೆದಿದ್ದರು. ಪ್ರಸ್ತುತ, ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಕೇವಲ ನಾಲ್ಕು ವಿದೇಶಿ ಆಟಗಾರರು ಮಾತ್ರ ಇದ್ದಾರೆ. ಇದೀಗ ಸ್ಟೋಕ್ಸ್​ ಸ್ಥಾನದಲ್ಲಿ ಡುಸೆನ್ ತಂಡವನ್ನು ಸೇರಿದ್ದಾರೆ. ಇದಾಗ್ಯೂ ಮೂವರು ವಿದೇಶಿ ಆಟಗಾರರ ಅಲಭ್ಯತೆಯು ರಾಜಸ್ಥಾನ್ ತಂಡವನ್ನು ಕಾಡಲಿದೆ.

  ಹೀಗಾಗಿ ಮಿಡ್ ಟ್ರಾನ್ಸ್​ಫರ್ ಮೂಲಕ ಬೇರೆ ತಂಡದಲ್ಲಿರುವ ಆಟಗಾರರನ್ನು ಖರೀದಿಸಲು ರಾಜಸ್ಥಾನ್ ಮುಂದಾಗಿದೆ ಎಂದು ಹೇಳಲಾಗಿದೆ. ಇದಲ್ಲದೆ ಇತರೆ ತಂಡದಲ್ಲಿರುವ ವಿದೇಶಿ ಹೆಚ್ಚುವರಿ ಆಟಗಾರರ ಮೇಲೂ ರಾಜಸ್ಥಾನ್ ರಾಯಲ್ಸ್​ ಕಣ್ಣಿಟ್ಟಿದೆ. ಈ ಬಗ್ಗೆ ಫ್ರಾಂಚೈಸಿಗಳೊಂದಿಗೆ ಮಾತುಕತೆ ನಡೆಯುತ್ತಿದ್ದು, ಇಬ್ಬರು ಆಟಗಾರರನ್ನಾದರೂ ರಾಜಸ್ಥಾನ್ ತಂಡಕ್ಕೆ ಸೇರಿಸಿಕೊಳ್ಳಲಿದೆ ಎಂದು ಹೇಳಲಾಗಿದೆ.

  ಡುಸೆನ್​ಗೆ ಚೊಚ್ಚಲ ಐಪಿಎಲ್​​:
  ದಕ್ಷಿಣ ಆಫ್ರಿಕಾದ ಬಲಗೈ ಸ್ಪೋಟಕ ಬ್ಯಾಟ್ಸ್​ಮನ್ ಈ ಹಿಂದೆ ಪಾಕಿಸ್ತಾನ ಸೂಪರ್ ಲೀಗ್, ಕೆರಿಬಿಯನ್ ಪ್ರೀಮಿಯರ್ ಲೀಗ್ ಮತ್ತು ಗ್ಲೋಬಲ್ ಟಿ 20 ಕೆನಡಾ ಟೂರ್ನಿಗಳಲ್ಲಿ ಆಡಿದ್ದಾರೆ. ಇದಾಗ್ಯೂ ಇಂಡಿಯನ್ ಪ್ರೀಮಿಯರ್ ಲೀಗ್​ಗೆ ಆಯ್ಕೆಯಾಗಿರಲಿಲ್ಲ. ಇತ್ತೀಚೆಗೆ ಪಾಕಿಸ್ತಾನ ವಿರುದ್ಧ ನಡೆದ ಟಿ 20 ಸರಣಿಯಲ್ಲಿ, ಡುಸೆನ್ 153 ಕ್ಕಿಂತ ಹೆಚ್ಚು ಸ್ಟ್ರೈಕ್ ರೇಟ್​ನಲ್ಲಿ 86 ರನ್ ಬಾರಿಸಿದ್ದರು. ಇದಲ್ಲದೆ, ಪಾಕ್ ವಿರುದ್ದ ಏಕದಿನ ಸರಣಿಯ ಎರಡು ಪಂದ್ಯಗಳಲ್ಲಿ 183 ರನ್ ಗಳಿಸಿದ್ದರು. ಈ ವೇಖೆ ಅಜೇಯ 123 ರನ್ ಬಾರಿಸಿ ಗಮನ ಸೆಳೆದಿದ್ದರು. ಈ ಭರ್ಜರಿ ಇನಿಂಗ್ಸ್​ಗಳು ಇದೀಗ ರಾಸ್ಸಿ ವಾನ್ ಡೆರ್ ಡುಸೆನ್ ಐಪಿಎಲ್ ಬಾಗಿಲು ತೆರೆಯುವಂತೆ ಮಾಡಿದೆ.
  Published by:zahir
  First published: