IPL 2021 Qualifier 1| ರೈನಾ ಇಲ್ಲದ ಮೊದಲ ಕ್ವಾಲಿಫೈಯರ್​ ಆಡಿದ ಚೆನ್ನೈ; ಪಂದ್ಯ ಗೆದ್ದರೂ ಅಭಿಮಾನಿಗಳಿಗೆ ಭಾರೀ ನಿರಾಸೆ

ಸಿಎಸ್​ಕೆ ಐಪಿಎಲ್​ನಲ್ಲಿ ಈವರೆಗೆ ಮೂರು ಬಾರಿ ಚಾಂಪಿಯನ್​ ಪಟ್ಟವನ್ನು ಅಲಂಕರಿಸಿದೆ. ಈ ಮೂರು ಬಾರಿಯೂ ಸುರೇಶ್​ ರೈನಾ ಅವರ ಪಾತ್ರ ಮಹತ್ವದ್ದಾಗಿತ್ತು. ಆದರೆ, ಕಳೆದ 13 ವರ್ಷದ ಇತಿಹಾಸದಲ್ಲಿ ಮಹತ್ವದ ಪಂದ್ಯವೊಂದರಲ್ಲಿ ಸುರೇಶ್​ ರೈನಾ ಅವರಿಗೆ ಆಡುವ 11ರ ಬಳಗದಲ್ಲಿ ಸ್ಥಾನ ನೀಡದಿರುವುದು ಇದೇ ಮೊದಲು.

ಈ ಬಗ್ಗೆ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿರುವ ಸುರೇಶ್​ ರೈನಾ, "ವಿರಾಟ್​ ಕೊಹ್ಲಿಗಾಗಿ ಭಾರತದ ಆಟಗಾರರು ಈ ವರ್ಷ ಟಿ20 ವಿಶ್ವಕಪ್​ ಅನ್ನು ಗೆಲ್ಲಲೇಬೇಕು" ಎಂದು ಸರಳ ಸಂದೇಶವನ್ನು ಮುಂದಿಟ್ಟಿದ್ದಾರೆ.

ಈ ಬಗ್ಗೆ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿರುವ ಸುರೇಶ್​ ರೈನಾ, "ವಿರಾಟ್​ ಕೊಹ್ಲಿಗಾಗಿ ಭಾರತದ ಆಟಗಾರರು ಈ ವರ್ಷ ಟಿ20 ವಿಶ್ವಕಪ್​ ಅನ್ನು ಗೆಲ್ಲಲೇಬೇಕು" ಎಂದು ಸರಳ ಸಂದೇಶವನ್ನು ಮುಂದಿಟ್ಟಿದ್ದಾರೆ.

 • Share this:
  ಭಾನುವಾರ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಮೊದಲ ಕ್ವಾಲಿಫೈಯರ್​ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ಮತ್ತು ಡೆಲ್ಲಿ ಕ್ಯಾಪಿಟಲ್ ಮುಖಾಮುಖಿಯಾಗಿದ್ದವು. ಕಳೆದ ಎರಡು ಪಂದ್ಯದಲ್ಲಿ ಸಿಎಸ್​ಕೆ ತಂಡದಿಂದ ಹೊರಗುಳಿದಿದ್ದ ಸ್ಟಾರ್​ ಬ್ಯಾಟ್ಸ್​ಮನ್ ಸುರೇಶ್​ ರೈನಾ ಈ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ ಎಂದೇ ಎಲ್ಲರೂ ಊಹಿಸಿದ್ದರು. ರೈನಾ ಮತ್ತುಎಂಎಸ್ ಧೋನಿ ಅಭಿಮಾನಿಗಳೂ ಸಹ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ರೈನಾ ತಂಡದಲ್ಲಿರುವುದನ್ನು ಬಯಸಿದ್ದರು. ಆದರೆ, ಟಾಸ್ ನಂತರ ಎಲ್ಲರಿಗೂ ನಿರಾಸೆ ಕಾದಿತ್ತು. ಏಕೆಂದರೆ ರೈನಾ ಬದಲಿಗೆ ಮತ್ತೆ ಕನ್ನಡಿಗ ರಾಬಿನ್ ಉತ್ತಪ್ಪ ಅವರಿಗೆ ಚಾನ್ಸ್​ ನೀಡಲಾಗಿತ್ತು. ಈ ಪಂದ್ಯದಲ್ಲಿ ಉತ್ತಪ್ಪ ಅದ್ಭುತ ಪ್ರದರ್ಶನ ನೀಡಿ ಪಂದ್ಯದ ಗೆಲುವಿಗೆ ಕಾರಣರಾಗಿದ್ದರೂ ಸಹ ರೈನಾ ಅವರನ್ನು ತಂಡದಿಂದ ಹೊರಗಿಟ್ಟಿದ್ದಕ್ಕೆ ಸಿಎಸ್​ಕೆ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

  ಸಿಎಸ್​ಕೆ ಐಪಿಎಲ್​ನಲ್ಲಿ ಈವರೆಗೆ ಮೂರು ಬಾರಿ ಚಾಂಪಿಯನ್​ ಪಟ್ಟವನ್ನು ಅಲಂಕರಿಸಿದೆ. ಈ ಮೂರು ಬಾರಿಯೂ ಸುರೇಶ್​ ರೈನಾ ಅವರ ಪಾತ್ರ ಮಹತ್ವದ್ದಾಗಿತ್ತು. ಆದರೆ, ಕಳೆದ 13 ವರ್ಷದ ಇತಿಹಾಸದಲ್ಲಿ ಮಹತ್ವದ ಪಂದ್ಯವೊಂದರಲ್ಲಿ ಸುರೇಶ್​ ರೈನಾ ಅವರಿಗೆ ಆಡುವ 11ರ ಬಳಗದಲ್ಲಿ ಸ್ಥಾನ ನೀಡದಿರುವುದು ಇದೇ ಮೊದಲು. ಇದೇ ಕಾರಣಕ್ಕೆ ಸಿಎಸ್​ಕೆ ಅಭಿಮಾನಿಗಳು ಟ್ವಿಟರ್​ನಲ್ಲಿ ತಮ್ಮ ಬೇಸರವನ್ನು ಹೊರಹಾಕಿದ್ದಾರೆ.  ಓರ್ವ ಅಭಿಮಾನಿ, "ಸುರೇಶ್ ರೈನಾ ಇಲ್ಲ ಸಿಎಸ್​ಕೆ ಪಂದ್ಯವನ್ನು ನೋಡುವುದು ಹೆಚ್ಚು ನೋವುಂಟು ಮಾಡುತ್ತಿದೆ"ಎಂದು ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ.

  ಮತ್ತೋರ್ವ ಅಭಿಮಾನಿ ಸುರೇಶ್​ ರೈನಾ ಈವರೆಗೆ ಪ್ಲೇ ಆಫ್​ ಮತ್ತು ಕ್ವಾಲಿಫೈಯರ್​ ಪಂದ್ಯಗಳಲ್ಲಿ ಗಳಿಸಿದ ಹೆಚ್ಚಿನ ರನ್ ಗಳ ಅಂಕಿಅಂಶಗಳನ್ನು ಮುಂದಿಟ್ಟು, ರೈನಾ ಇತರ ಸಿಎಸ್‌ಕೆ ಆಟಗಾರರಿಗಿಂತ ಹೇಗೆ ಮುಂದಿದ್ದಾರೆ ಎಂಬುದನ್ನು ತೋರಿಸಿದ್ದಾರೆ.  ಮೊದಲ ಕ್ವಾಲಿಫೈಯರ್‌ ಪಂದ್ಯದಲ್ಲಿ ದೆಹಲಿ ಕ್ಯಾಪಿಟಲ್ಸ್ ತಮ್ಮ ಹಿಂದಿನ ಪಂದ್ಯದಲ್ಲಿದ್ದ ತಂಡದಲ್ಲಿ ಒಂದು ಬದಲಾವಣೆ ಮಾಡಿತ್ತು. ತಂಡದ ಬೌಲಿಂಗ್ ಅನ್ನು ಮತ್ತಷ್ಟು ಬಲಿಷ್ಠಗೊಳಿಸುವ ಸಲುವಾಗಿ ಟಾಮ್ ಕರ್ರನ್ ಅವರಿಗೆ ಆಡುವ ಅವಕಾಶ ನೀಡಿತ್ತು. ಕರ್ರನ್ ಸಹ ಮೊದಲ ಮೂರು ಓವರ್​ಗಳಲ್ಲಿ ಅತ್ಯುತ್ತಮ ನಿರ್ವಹಣೆಯನ್ನೇ ತೋರಿದ್ದರು.

  ಲೀಗ್ ಹಂತಗಳಲ್ಲಿ ದೆಹಲಿ 14 ರಲ್ಲಿ 10 ಪಂದ್ಯಗಳನ್ನು ಗೆದ್ದು 20 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಮತ್ತೊಂದೆಡೆ, ಎಂಎಸ್ ಧೋನಿ ನೇತೃತ್ವದ ಸಿಎಸ್‌ಕೆ 14 ಅಂಕಗಳಿಂದ 9 ಪಂದ್ಯಗಳನ್ನು ಗೆದ್ದು 18 ಅಂಕಗಳೊಂದಿಗೆ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿತ್ತು. ಆದರೆ, ಇದೀಗ ಕ್ವಾಲಿಫೈಯರ್​ನಲ್ಲಿ ಗೆಲುವು ಸಾಧಿಸುವ ಮೂಲಕ ನೇರವಾಗಿ ಫೈನಲ್ ಪ್ರವೇಶಿಸಿದೆ.

  ಇದನ್ನೂ ಓದಿ: IPL 2021- ಐಪಿಎಲ್​ನಲ್ಲಿ ಭರ್ಜರಿ ಆಟದ ಮೂಲಕ ಟೀಮ್ ಇಂಡಿಯಾ ಕದ ತಟ್ಟಿದ್ದಾರೆ ಈ ಆಟಗಾರರು

  ರಾಯಲ್ ಚಾಲೆಂಜರ್ಸ್ ಬೆಂಗಳೂರು, ಲೀಗ್ ಹಂತದ ಅಂತಿಮ ಪಂದ್ಯದಲ್ಲಿ ದೆಹಲಿಯ ವಿರುದ್ಧ ಕೊನೆಯ ಎಸೆತದಲ್ಲಿ ಗೆಲುವು ಸಾಧಿಸಿ 18 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಇಂದು ನಡೆಯಲಿರುವ ಮಹತ್ವದ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ನಾಯಕ ವಿರಾಟ್​ ಕೊಹ್ಲಿ ನೇತೃತ್ವದ ಆರ್​ಸಿಬಿ ಇಯಾನ್ ಮಾರ್ಗನ್ ನೇತೃತ್ವದ ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡವನ್ನು ಎದುರುಗೊಳ್ಳಲಿದೆ.
  Published by:MAshok Kumar
  First published: