Prithvi Shaw: ಬ್ಯಾಕ್ ಟು ಬ್ಯಾಕ್ ಬೌಂಡರಿ...ಐಪಿಎಲ್ ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಪಂಟರ್ ಪೃಥ್ವಿ..!

ಈ ಪಂದ್ಯದಲ್ಲಿ ಪೃಥ್ವಿ ಶಾ ಕೇವಲ 18 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಇದು ಈ ಸೀಸನ್​ನ ಅತೀ ವೇಗದ ಅರ್ಧಶತಕವಾಗಿದೆ.  ತಮ್ಮ ಇನಿಂಗ್ಸ್​ನಲ್ಲಿ 41 ಎಸೆತಗಳನ್ನು ಎದುರಿಸಿದ ಪೃಥ್ವಿ 3 ಭರ್ಜರಿ ಸಿಕ್ಸರ್ ಹಾಗೂ 11 ಬೌಂಡರಿಗಳೊಂದಿಗೆ 82 ರನ್ ಬಾರಿಸಿದರು.

prithvi shaw

prithvi shaw

  • Share this:
    ಇಂಡಿಯನ್ ಪ್ರೀಮಿಯರ್ ಲೀಗ್​ನ 25ನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್​ ರೈಡರ್ಸ್​ ವಿರುದ್ದ ಡೆಲ್ಲಿ ಕ್ಯಾಪಿಟಲ್ಸ್ ​ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಕೆಕೆಆರ್ ನೀಡಿದ 155 ರನ್​ಗಳ ಟಾರ್ಗೆಟ್​ನ್ನು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ 16.3 ಓವರ್​ನಲ್ಲಿ ಗುರಿ ಮುಟ್ಟುವ ಈ ಸೀಸನ್​ 5ನೇ ಗೆಲುವು ದಾಖಲಿಸಿತು. ಈ ಗೆಲುವಿನೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದೆ.

    ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೊಲ್ಕತ್ತಾ ನೈಟ್​ ರೈಡರ್ಸ್​ ಆಂಡ್ರೆ ರಸೆಲ್ ಅವರ ಅಬ್ಬರದ 45 ರನ್​ಗಳ ನೆರವಿನಿಂದ ನಿಗದಿತ 20 ಓವರ್​ನಲ್ಲಿ 154 ರನ್ ಕಲೆಹಾಕಿತ್ತು. ಈ ಸಾಧಾರಣ ಗುರಿಯನ್ನು ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟ್ಸ್​ಮನ್​ಗಳು ಅಸಾಧಾರಣವಾಗಿ ಚೇಸ್ ಮಾಡಲು ಮುಂದಾದರು. ಅದರಂತೆ ಮೊದಲ ಓವರ್​ನಲ್ಲೇ ಪೃಥ್ವಿ ಶಾ ಅಬ್ಬರಿಸಿದರು. ಅದು ಕೂಡ ಸಿಡಿಲಬ್ಬರ ಎಂಬುದು ವಿಶೇಷ.

    ಹೌದು, ಮೊದಲ ಎಸೆದ ಶಿವಂ ಮಾವಿಗೆ ಬ್ಯಾಕ್ ಟು ಬ್ಯಾಕ್ ಬೌಂಡರಿ ಉತ್ತರ ನೀಡುವ ಮೂಲಕ ಪೃಥ್ವಿ ಶಾ ಐಪಿಎಲ್​ ಇತಿಹಾಸದಲ್ಲಿ ಹೊಸ ದಾಖಲೆ ಬರೆದರು. ಮೊದಲ ಎಸೆತವನ್ನು ವೈಡ್ ಎಸೆದಿದ್ದ ಮಾವಿ, ಬಳಿಕ 6 ಎಸೆತಗಳಲ್ಲಿ ಬೌಂಡರಿ ಚಚ್ಚಿಸಿಕೊಂಡಿದ್ದರು. ಈ ಮೂಲಕ ಐಪಿಎಲ್​ನ ಮೊದಲ ಓವರ್​ನಲ್ಲಿ ಸತತ 6 ಎಸೆತಗಳಲ್ಲಿ ಬೌಂಡರಿ ಬಾರಿಸಿ ಮೊದಲ ಬ್ಯಾಟ್ಸ್​ಮನ್​ ಎಂಬ ದಾಖಲೆಯನ್ನು ಪೃಥ್ವಿ ಶಾ ಬರೆದರು.



    ಇದಕ್ಕೂ ಮೊದಲು 2012 ರಲ್ಲಿ ರಾಜಸ್ಥಾನ್ ರಾಯಲ್ಸ್​ ತಂಡದಲ್ಲಿದ್ದ ಅಜಿಂಕ್ಯ ರಹಾನೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬೌಲರ್ ಶ್ರೀನಾಥ್ ಅರವಿಂದ್ ಎಸೆದ ಒಂದೇ ಓವರ್​ನಲ್ಲಿ 6 ಬೌಂಡರಿ ಬಾರಿಸಿ ದಾಖಲೆ ಬರೆದಿದ್ದರು. ಆದರೆ ಈ ಸಾಧನೆ 14ನೇ ಓವರ್​ನಲ್ಲಿ ಮೂಡಿಬಂದಿತ್ತು. ಈ ದಾಖಲೆಯನ್ನು ಸರಿಗಟ್ಟಿರುವ ಪೃಥ್ವಿ ಶಾ ಐಪಿಎಲ್​ನ ಮೊದಲ ಓವರ್​ನಲ್ಲೇ 6 ಬೌಂಡರಿ ಬಾರಿಸಿದ ಹೊಸ ಇತಿಹಾಸ ಬರೆದಿದ್ದಾರೆ.



    ಇನ್ನು ಈ ಪಂದ್ಯದಲ್ಲಿ ಪೃಥ್ವಿ ಶಾ ಕೇವಲ 18 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಇದು ಈ ಸೀಸನ್​ನ ಅತೀ ವೇಗದ ಅರ್ಧಶತಕವಾಗಿದೆ.  ತಮ್ಮ ಇನಿಂಗ್ಸ್​ನಲ್ಲಿ 41 ಎಸೆತಗಳನ್ನು ಎದುರಿಸಿದ ಪೃಥ್ವಿ 3 ಭರ್ಜರಿ ಸಿಕ್ಸರ್ ಹಾಗೂ 11 ಬೌಂಡರಿಗಳೊಂದಿಗೆ 82 ರನ್ ಬಾರಿಸಿದರು.



    ಪೃಥ್ವಿ ಶಾ ಅವರ ಈ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 16.3 ಓವರ್​ನಲ್ಲಿ ಗುರಿಮುಟ್ಟುವ ಮೂಲಕ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು.
    Published by:zahir
    First published: