• Home
 • »
 • News
 • »
 • ipl
 • »
 • IPL 2021: ಐಪಿಎಲ್​ ಪ್ಲೇಯಿಂಗ್​​ ಇಲೆವೆನ್​ನಲ್ಲಿ ಯಾರಿಗೆಲ್ಲಾ ಸ್ಥಾನ..?

IPL 2021: ಐಪಿಎಲ್​ ಪ್ಲೇಯಿಂಗ್​​ ಇಲೆವೆನ್​ನಲ್ಲಿ ಯಾರಿಗೆಲ್ಲಾ ಸ್ಥಾನ..?

IPL Teams

IPL Teams

7 ಪಂದ್ಯಗಳಿಂದ 14 ವಿಕೆಟ್ ಉರುಳಿಸಿರುವ ರಾಜಸ್ಥಾನ್ ರಾಯಲ್ಸ್ ತಂಡ ಆಲ್​ರೌಂಡರ್ ಕ್ರಿಸ್ ಮೋರಿಸ್ ಅವರನ್ನು 7ನೇ ಆಟಗಾರನಾಗಿ ಸ್ಥಾನ ಪಡೆದಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ 18 ಎಸೆತಗಳಲ್ಲಿ ನಾಲ್ಕು ಸಿಕ್ಸರ್​ನೊಂದಿಗೆ 36 ರನ್‌ ಬಾರಿಸಿ ಮೋರಿಸ್ ರಾಜಸ್ಥಾನ್ ತಂಡಕ್ಕೆ ಭರ್ಜರಿ ಗೆಲುವು ತಂದುಕೊಟ್ಟಿದ್ದರು.

ಮುಂದೆ ಓದಿ ...
 • Share this:

  ಕೊರೋನಾ ಕಾರಣದಿಂದ ಇಂಡಿಯನ್ ಪ್ರೀಮಿಯರ್ ಲೀಗ್ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಇದಾಗ್ಯೂ ಟೂರ್ನಿಯಲ್ಲಿ 29 ಪಂದ್ಯಗಳನ್ನು ಆಡಲಾಗಿದ್ದು, ಎಲ್ಲಾ ತಂಡಗಳು 7 ಪಂದ್ಯಗಳನ್ನು ಪೂರ್ಣಗೊಳಿಸಿದೆ. ಇದರಲ್ಲಿ ಕೆಲ ಆಟಗಾರರು ಮಿಂಚಿನ ಪ್ರದರ್ಶನ ನೀಡಿದರೆ, ಬಹುತೇಕ ಸ್ಟಾರ್ ಆಟಗಾರರು ಭರ್ಜರಿ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ.


  ಸದ್ಯ 12 ಅಂಕಗಳೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ಅಗ್ರಸ್ಥಾನದಲ್ಲಿದ್ದರೆ, ಸತತ ಸೋಲಿನಿಂದ ಕಂಗೆಟ್ಟ ಸನ್​ರೈಸರ್ಸ್​ ಹೈದರಾಬಾದ್ 2 ಪಾಯಿಂಟ್​ಗಳೊಂದಿಗೆ ಕೊನೆಯ ಸ್ಥಾನದಲ್ಲಿದೆ. ಇನ್ನು ಕಳೆದ ಬಾರಿ ಮಿಂಚಿದ್ದ ಬಹುತೇಕ ಆಟಗಾರರು ಈ ಸಲ ಕೂಡ ಉತ್ತಮ ಪ್ರದರ್ಶನ ನೀಡಿದ್ದು, ಹೀಗೆ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರರನ್ನು ಒಳಗೊಂಡಿಗೆ ಐಪಿಎಲ್ ಮಿಡ್ ಸೀಸನ್ ಪ್ಲೇಯಿಂಗ್ ಇಲೆವೆನ್ ಹೀಗಿದೆ.


  ಪೃಥ್ವಿ ಶಾ - ಶಿಖರ್ ಧವನ್‌ (ಓಪನರ್ಸ್): ಡೆಲ್ಲಿ ಕ್ಯಾಪಿಟಲ್ಸ್ ತಂಡದ ಯಶಸ್ಸಿನ ಗುಟ್ಟು ತಂಡ ಆರಂಭಿಕರು ಎಂದರೆ ತಪ್ಪಾಗಲಾರದು. ಅದರಲ್ಲೂ ಈ ಸೀಸನ್​ನಲ್ಲಿ ಪೃಥ್ವಿ-ಶಿಖರ್ ಜೋಡಿಯು ಭರ್ಜರಿ ಪ್ರದರ್ಶನ ನೀಡಿದ್ದಾರೆ. ಆಡಿದ 8 ಪಂದ್ಯಗಳಿಂದ ಧವನ್ 380 ರನ್ ಕಲೆಹಾಕಿದರೆ, ಪೃಥ್ವಿ ಶಾ 308 ರನ್ ಬಾರಿಸಿದ್ದಾರೆ. ಹೀಗಾಗಿ ಐಪಿಎಲ್ ಪ್ಲೇಯಿಂಗ್ ಇಲೆವೆನ್​ ಬೆಸ್ಟ್ ಆರಂಭಿಕ ಜೋಡಿಯಾಗಿ ಪೃಥ್ವಿ ಶಾ - ಶಿಖರ್ ಧವನ್ ಆಯ್ಕೆಯಾಗಿದ್ದಾರೆ.


  ​ಮಧ್ಯಮ ಕ್ರಮಾಂಕದಲ್ಲಿ ಮೂವರು ಆಟಗಾರರು ಸ್ಥಾನ ಪಡೆದಿದ್ದಾರೆ. ಅದರಂತೆ ಪಂಜಾಬ್ ಕಿಂಗ್ಸ್​ ತಂಡದ ನಾಯಕ ಕೆಎಲ್ ರಾಹುಲ್ ಅವರಿಗೆ ಈ ಪ್ಲೇಯಿಂಗ್​ ಇಲೆವೆನ್​ನಲ್ಲಿ 3ನೇ ಸ್ಥಾನ ನೀಡಲಾಗಿದೆ. 7 ಪಂದ್ಯಗಳಿಂದ 331 ರನ್ ಬಾರಿಸಿರುವ ರಾಹುಲ್ ಭರ್ಜರಿ ಫಾರ್ಮ್​ನಲ್ಲಿದ್ದಾರೆ. ಇನ್ನು ಸಿಎಸ್​ಕೆ ಪರ ಆರಂಭಿಕರಾಗಿ ಕಣಕ್ಕಿಳಿಯುತ್ತಿರುವ ಫಾಫ್ ಡುಪ್ಲೆಸಿಸ್​ 7 ಪಂದ್ಯಗಳಲ್ಲಿ 329 ರನ್​ ಕಲೆಹಾಕಿದ್ದು, 4ನೇ ಕ್ರಮಾಂಕದಲ್ಲಿ ಸ್ಥಾನ ನೀಡಲಾಗಿದೆ.


  5ನೇ ಕ್ರಮಾಂಕವನ್ನು ಆರ್​ಸಿಬಿ ತಂಡದ ಆಪತ್ಭಾಂಧವ ಎಬಿ ಡಿವಿಲಿಯರ್ಸ್ ಪಡೆದಿದ್ದಾರೆ. ಎಬಿಡಿ 7 ಪಂದ್ಯಗಳಿಂದ ಈ ಬಾರಿ 164 ಸ್ಟ್ರೈಕ್ ರೇಟ್​ನಲ್ಲಿ 207 ರನ್ ಬಾರಿಸಿದ್ದಾರೆ. ಅದರಲ್ಲಿ ಎರಡು ಸ್ಪೋಟಕ ಅರ್ಧಶತಕಗಳು ಮೂಡಿಬಂದಿರುವುದು ವಿಶೇಷ.


  ​ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಇಬ್ಬರು ಆಟಗಾರರು ಸ್ಥಾನ ಪಡೆದಿದ್ದು, ಸಿಎಸ್​ಕೆ ತಂಡದ ಬೆನ್ನೆಲುಬು ರವೀಂದ್ರ ಜಡೇಜಾ ಅವರನ್ನು 6ನೇ ಕ್ರಮಾಂಕದಲ್ಲಿ ಆಯ್ಕೆ ಮಾಡಲಾಗಿದೆ. ಆರ್​ಸಿಬಿ ವಿರುದ್ದ ಭರ್ಜರಿ ಪ್ರದರ್ಶನ ನೀಡಿದ್ದ ಜಡೇಜಾ, ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್​ನಲ್ಲಿ ತಂಡಕ್ಕೆ ಉತ್ತಮ ಕೊಡುಗೆ ನೀಡಿದ್ದರು.


  ಹಾಗೆಯೇ 7 ಪಂದ್ಯಗಳಿಂದ 14 ವಿಕೆಟ್ ಉರುಳಿಸಿರುವ ರಾಜಸ್ಥಾನ್ ರಾಯಲ್ಸ್ ತಂಡ ಆಲ್​ರೌಂಡರ್ ಕ್ರಿಸ್ ಮೋರಿಸ್ ಅವರನ್ನು 7ನೇ ಆಟಗಾರನಾಗಿ ಸ್ಥಾನ ಪಡೆದಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ 18 ಎಸೆತಗಳಲ್ಲಿ ನಾಲ್ಕು ಸಿಕ್ಸರ್​ನೊಂದಿಗೆ 36 ರನ್‌ ಬಾರಿಸಿ ಮೋರಿಸ್ ರಾಜಸ್ಥಾನ್ ತಂಡಕ್ಕೆ ಭರ್ಜರಿ ಗೆಲುವು ತಂದುಕೊಟ್ಟಿದ್ದರು.


  ​ಬೌಲರ್‌ಗಳ ವಿಭಾಗದಲ್ಲಿ ವೇಗಿಗಳಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬೌಲರ್ ಹರ್ಷಲ್ ಪಟೇಲ್ ಅವರು ಆಯ್ಕೆಯಾಗಿದ್ದಾರೆ. 7 ಪಂದ್ಯಗಳಲ್ಲಿ 17 ವಿಕೆಟ್ ಪಡೆದಿರುವ ಹರ್ಷಲ್ ಪಟೇಲ್ ಸದ್ಯ ಪರ್ಪಲ್ ಕ್ಯಾಪ್ ಒಡೆಯರಾಗಿದ್ದಾರೆ. ಇನ್ನು ಮತ್ತೋರ್ವ ವೇಗಿಯಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬೌಲರ್ ಅವೇಶ್ ಖಾನ್ ಸ್ಥಾನ ಪಡೆದಿದ್ದಾರೆ. ಅವೇಶ್ ಈ ಬಾರಿ 8 ಪಂದ್ಯಗಳಿಂದ 14 ವಿಕೆಟ್ ಉರುಳಿಸಿ ಮಿಂಚಿದ್ದಾರೆ.


  ಅದೇ ರೀತಿ ಸ್ಪಿನ್ನರ್​ಗಳ ವಿಭಾಗದಲ್ಲಿ ಮುಂಬೈ ಇಂಡಿಯನ್ಸ್ ತಂಡದ ರಾಹುಲ್‌ ಚಹರ್‌ ಆಯ್ಕೆಯಾಗಿದ್ದು, ಕೋಲ್ಕತಾ ನೈಟ್‌ ರೈಡರ್ಸ್ ವಿರುದ್ಧ 27 ರನ್ ನೀಡಿ 4 ವಿಕೆಟ್‌ ಕಬಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅಲ್ಲದೆ 7 ಪಂದ್ಯಗಳಿಂದ 11 ವಿಕೆಟ್ ಉರುಳಿಸಿ ಉತ್ತಮ ಪ್ರದರ್ಶನ ನೀಡಿದ್ದಾರೆ.


  ಹಾಗೆಯೇ ಮತ್ತೋರ್ವ ಸ್ಪಿನ್ನರ್ ಆಗಿ ರಶೀದ್ ಖಾನ್ ಅವರು ಐಪಿಎಲ್ ಮಿಡ್ ಸೀಸನ್ ಪ್ಲೇಯಿಂಗ್ ಇಲೆವೆನ್​ನಲ್ಲಿ ಸ್ಥಾನ ಪಡೆದಿದ್ದಾರೆ. ಟೂರ್ನಿಯುದ್ದಕ್ಕೂ ಸ್ಪಿನ್ ಮೋಡಿ ಮಾಡಿದ್ದ ರಶೀದ್ ಖಾನ್ 7 ಪಂದ್ಯಗಳಿಂದ 10 ವಿಕೆಟ್ ಕಬಳಿಸಿದ್ದಾರೆ. ಹೀಗಾಗಿ ಐಪಿಎಲ್ ಮಿಡ್ ಸೀಸನ್ ಪ್ಲೇಯಿಂಗ್​ ಇಲೆವೆನ್​ನಲ್ಲಿ ಸ್ಥಾನ ಪಡೆದಿದ್ದಾರೆ. ನಿಮ್ಮ ಪ್ರಕಾರ ಮಿಡ್ ಸೀಸನ್ ಪ್ಲೇಯಿಂಗ್ ಇಲೆವೆನ್​ನಲ್ಲಿ ಯಾರಿಗೆ ಚಾನ್ಸ್ ಸಿಗಬೇಕಿತ್ತು ಎಂಬುದನ್ನು ಕಮೆಂಟ್ ಮೂಲಕ ತಿಳಿಸಿ. ಹಾಗೆಯೇ ನಮ್ಮ ಚಾನೆಲ್​ನ್ನು ಸಬ್ಸ್​ಕ್ರೈಬ್ ಮಾಡಿ. ಧನ್ಯವಾದಗಳು.

  Published by:zahir
  First published: