HOME » NEWS » Ipl » IPL 2021 PBKS VS SRH AND KKR VS CSK MATCHES TODAY SNVS

IPL 2021 - ಇಂದು ಎರಡು ಪಂದ್ಯ; ಚೊಚ್ಚಲ ಗೆಲುವಿಗೆ ಹೈದರಾಬಾದ್ ತಡಕಾಟ; ಚೆನ್ನೈಗೆ ಹ್ಯಾಟ್ರಿಕ್ ಕನಸು

ಚೆನ್ನೈನ ಚಿದಂಬರಂ ಸ್ಟೇಡಿಯಂನಲ್ಲಿ ಇಂದು ಮಧ್ಯಾಹ್ನ 3:30ಕ್ಕೆ ಪಂಜಾಬ್ ಕಿಂಗ್ಸ್ ಮತ್ತು ಹೈದರಾಬಾದ್ ಸನ್ ರೈಸರ್ಸ್ ಪಂದ್ಯ ನಡೆಯಲಿದೆ. ರಾತ್ರಿ ಮುಂಬೈನಲ್ಲಿ ಸಿಎಸ್​ಕೆ ಮತ್ತು ಕೆಕೆಆರ್ ಹಣಾಹಣಿ ನಡೆಸಲಿವೆ.

cricketnext
Updated:April 21, 2021, 12:57 PM IST
IPL 2021 - ಇಂದು ಎರಡು ಪಂದ್ಯ; ಚೊಚ್ಚಲ ಗೆಲುವಿಗೆ ಹೈದರಾಬಾದ್ ತಡಕಾಟ; ಚೆನ್ನೈಗೆ ಹ್ಯಾಟ್ರಿಕ್ ಕನಸು
ಪಂಜಾಬ್ ಕಿಂಗ್ಸ್ ತಂಡ
  • Cricketnext
  • Last Updated: April 21, 2021, 12:57 PM IST
  • Share this:
ಬೆಂಗಳೂರು: ಐಪಿಎಲ್ 2021ನ ನಾಲ್ಕನೇ ಸುತ್ತಿನಲ್ಲಿ ಇಂದು ಎರಡು ಪಂದ್ಯಗಳು ನಡೆಯುತ್ತಿವೆ. ಮೊದಲ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿವೆ. ಎರಡನೇ ಪಂದ್ಯ ಕೋಲ್ಕತಾ ನೈಟ್ ರೈಡರ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಮಧ್ಯೆ ನಡೆಯಲಿದೆ. ಪಂಜಾಬ್ ಮತ್ತು ಹೈದರಾಬಾದ್ ಪಂದ್ಯ ಚೆನ್ನೈನ ಚೇಪಾಕ್ ಸ್ಟೇಡಿಯಂನಲ್ಲಿ ಮಧ್ಯಾಹ್ನ 3:30ಕ್ಕೆ ಆರಂಭವಾಗುತ್ತದೆ. ಕೋಲ್ಕತಾ ಮತ್ತು ಚೆನ್ನೈ ಪಂದ್ಯ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಸಂಜೆ 7:30ರಿಂದ ನಡೆಯಲಿದೆ.

ಕೆಎಲ್ ರಾಹುಲ್ ನೇತೃತ್ವದ ಪಂಜಾಬ್ ತಂಡಕ್ಕೆ ಸವಾಲೊಡ್ಡಿರುವ ಹೈದರಾಬಾದ್ ಸನ್ ರೈಸರ್ಸ್ ತಂಡ ಈ ಸೀಸನ್​ನಲ್ಲಿ ಚೊಚ್ಚಲ ಗೆಲುವಿಗಾಗಿ ತಡಕಾಡುತ್ತಿದೆ. ಪಂಜಾಬ್ ತಂಡ ಆಡಿರುವ ಮೂರು ಪಂದ್ಯಗಳಲ್ಲಿ ಗೆದ್ದಿರುವುದು ಒಮ್ಮೆ ಮಾತ್ರ. ಎರಡು ಪಂದ್ಯಗಳನ್ನ ಸೋತಿದೆ. ನಾಯಕ ಕೆಎಲ್ ರಾಹುಲ್ ಸೇರಿದಂತೆ ತಂಡದ ಬ್ಯಾಟಿಂಗ್ ಪಡೆ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲವಾಗಿದೆ. ನಾಯಕನ ಜೊತೆ ಕ್ರಿಸ್ ಗೇಲ್ ಮತ್ತು ಮಯಂಕ್ ಅಗರ್ವಾಲ್ ಅವರು ಪಂಜಾಬ್ ಬ್ಯಾಟಿಂಗ್​ನ ಶಕ್ತಿಯಾಗಿದ್ದಾರೆ.

ಇನ್ನು, ಮೂರಕ್ಕೆ ಮೂರೂ ಪಂದ್ಯಗಳನ್ನ ಸೋತಿರುವ ಸನ್ ರೈಸರ್ಸ್ ತಂಡಕ್ಕೆ ಡೇವಿಡ್ ವಾರ್ನರ್ ಮತ್ತು ಮನೀಶ್ ಪಾಂಡೆ ಬ್ಯಾಟಿಂಗ್ ಶಕ್ತಿ ಎನಿಸಿದ್ದಾರೆ. ಬೌಲಿಂಗ್​ನಲ್ಲಿ ಜೇಸನ್ ಹೋಲ್ಡರ್ ಮತ್ತು ರಷೀದ್ ಖಾನ್ ಅವರು ಪ್ರಮುಖರು.

ಇದನ್ನೂ ಓದಿ: MI vs DC: ಬಲಿಷ್ಠ ಮುಂಬೈ ಇಂಡಿಯನ್ಸ್​ನ್ನು ಬಗ್ಗು ಬಡಿದ ಡೆಲ್ಲಿ ಕ್ಯಾಪಿಟಲ್ಸ್​

ಇವೆರಡು ತಂಡಗಳು ಐಪಿಎಲ್​ನಲ್ಲಿ ಈ ಹಿಂದೆ ಆಡಿರುವ ಐದು ಪಂದ್ಯಗಳಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ಮೂರರಲ್ಲಿ ಗೆದ್ದಿದೆ. ಕಳೆದ ವರ್ಷದ ಐಪಿಎಲ್​ನಲ್ಲಿ ಎರಡೂ ತಂಡಗಳು ಒಮ್ಮೊಮ್ಮೆ ಗೆದ್ದಿವೆ. ಇವತ್ತಿನ ಪಂದ್ಯ ಯಾರಿಗೆ ಒಲಿಯುತ್ತೆ ಕಾದುನೋಡಬೇಕು.

ಸಿಎಸ್​ಕೆ ವರ್ಸಸ್ ಕೆಕೆಆರ್:

ಮುಂಬೈನಲ್ಲಿ ಸಂಜೆಯ ಬಳಿಕ ನಡೆಯಲಿರುವ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತಾ ನೈಟ್ ರೈಡರ್ಸ್ ನಡುವೆ ರೋಚಕ ಹಣಾಹಣಿ ನಿರೀಕ್ಷಿಸಲಾಗಿದೆ. ಮೊದಲ ಪಂದ್ಯದಲ್ಲಿ ನೀರಸ ಪ್ರದರ್ಶನ ನೀಡಿ ನಿರಾಸೆ ತೋರಿದ್ದ ಧೋನಿ ನಾಯಕತ್ವದ ಸಿಎಸ್​ಕೆ ತಂಡ ನಂತರದ ಎರಡೂ ಪಂದ್ಯಗಳಲ್ಲಿ ಜಯಭೇರಿ ಭಾರಿಸಿ ತಮ್ಮದು ಪ್ರಬಲ ತಂಡವೆಂದು ಸಾಬೀತು ಮಾಡಿದೆ. ಈಗ ಕೆಕೆಆರ್ ವಿರುದ್ಧ ಗೆದ್ದು ಹ್ಯಾಟ್ರಿಕ್ ಸಾಧನೆ ಮಾಡುವ ಉತ್ಸಾಹದಲ್ಲಿದೆ. ಅತ್ತ, ಇಯಾನ್ ಮಾರ್ಗನ್ ನೇತೃತ್ವದ ಕೋಲ್ಕತಾ ನೈಟ್ ರೈಡರ್ಸ್ ತಂಡ ನಿರಾಸಾದಾಯಕ ಪ್ರದರ್ಶನ ನೀಡಿದೆ. ಈ ಪಂದ್ಯದಲ್ಲಿ ಸದ್ಯಕ್ಕೆ ಚೆನ್ನೈ ತಂಡ ಗೆಲುವಿನ ಫೇವರಿಟ್ ಎನಿಸಿದೆ.
Published by: Vijayasarthy SN
First published: April 21, 2021, 12:57 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories