IPL 2021 New Rules: ಮುಂದಿನ ಆವೃತ್ತಿಗೂ ಮುನ್ನ ಐಪಿಎಲ್ ನಿಯಮದಲ್ಲಿ ಬಿಸಿಸಿಐಯಿಂದ ಪ್ರಮುಖ ಬದಲಾವಣೆ
2021 ಐಪಿಎಲ್ ಆವೃತ್ತಿಗೆ ನೂತನ ಫ್ರಾಂಚೈಸಿ ಸೇರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಡಿಸೆಂಬರ್ ತಿಂಗಳಲ್ಲಿ ವಾರ್ಷಿಕ ಸಭೆ ಕರೆಯುವ ನಿರೀಕ್ಷೆಯಿದೆ. ಹೊಸ ಫ್ರಾಂಚೈಸಿಗೆ ಟೆಂಡರ್ ಕರೆಯಲು ವಾರ್ಷಿಕ ಸಭೆಯ ಅಗತ್ಯವಿದೆ.
news18-kannada Updated:November 26, 2020, 3:52 PM IST

IPL 2021
- News18 Kannada
- Last Updated: November 26, 2020, 3:52 PM IST
13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಮುಕ್ತಾಯವಾದ ಬೆನ್ನಲ್ಲೇ ಐಪಿಎಲ್ 2021ರ ಕುರಿತು ಬಿಸಿ ಬಿಸಿ ಚರ್ಚೆ ಶುರುವಾಗಿದೆ. ಬಿಸಿಸಿಐ ಕೂಡ 14ನೇ ಆವೃತ್ತಿ ಐಪಿಎಲ್ ಬಗ್ಗೆ ಕೆಲಸ ಶುರು ಮಾಡಿದ್ದು ಹೊಸ ನಿಯಮ ತರುವ ಅಂದಾಜಿದೆ. ಈಗಾಗಲೇ ಸಿಕ್ಕಿರುವ ಮಾಹಿತಿ ಪ್ರಕಾರ ಐಪಿಎಲ್ 2021ರಲ್ಲಿ ಒಟ್ಟು 9 ತಂಡಗಳಿವೆ ಎಂದು ಹೇಳಲಾಗಿದೆ. ಇದರ ಜೊತೆಗೆ ತಂಡದ ಆಡುವ ಬಳಗದಲ್ಲಿ ವಿದೇಶಿ ಕ್ರಿಕೆಟಿಗರ ಸಂಖ್ಯೆಯನ್ನು ಹೆಚ್ಚಿಸುವ ಬಗ್ಗೆ ಬಿಸಿಸಿಐ ಚಿಂತನೆ ನಡೆಸುತ್ತಿದೆ. ಫ್ರಾಂಚೈಸಿ ಕಡೆಯಿಂದ ಈ ಬಗ್ಗೆ ಸಾಕಷ್ಟು ಒತ್ತಾಯ ಕೇಳಿಬಂದ ಕಾರಣ ಬಿಸಿಸಿಐ ಈ ಹೊಸ ನಿಯಮ ಜಾರಿಗೆ ತರಲು ಮುಂದಾಗಿದೆ ಎಂದು ಹೇಳಲಾಗಿದೆ.
ಬಿಸಿಸಿಐ ಮೂಲಗಳ ಪ್ರಕಾರ, "ಕಳೆದ ಎರಡು ಸೀಸನ್ನಿಂದ ಕೆಲವು ಫ್ರಾಂಚೈಸಿ ವಿದೇಶಿ ಆಟಗಾರರ ಸಂಖ್ಯೆಯನ್ನು ನಾಲ್ಕರಿಂದ ಐದಕ್ಕೆ ಏರಿಸುವ ಬಗ್ಗೆ ಕೇಳಿಕೊಂಡಿತ್ತು. ಸದ್ಯ ನಾವು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಅಧಿಕಾರಿಗಳೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಂಡು ಸದ್ಯದಲ್ಲೇ ಮಾಹಿತಿ ನೀಡುತ್ತೇವೆ" ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ. India vs Australia: ಮೊದಲ ಏಕದಿನಕ್ಕೆ ಬಲಿಷ್ಠ ತಂಡವನ್ನೇ ಕಣಕ್ಕಿಳಿಸಲಿರುವ ಟೀಂ ಇಂಡಿಯಾ: ಇಲ್ಲಿದೆ ಸಂಭಾವ್ಯ ಪಟ್ಟಿ
ಬಿಸಿಸಿಐ ಈ ನಿರ್ಧಾರ ಕೈಗೊಳ್ಳಲು ಪ್ರಮುಖ ಕಾರಣ ಕೂಡ ಇದೆ. ಮುಂದಿನ ಐಪಿಎಲ್ಗೆ ಈಗಿರುವ 8 ತಂಡಗಳ ಜತೆಗೆ ಒಂದು ಹೊಸ ತಂಡಗಳನ್ನು ಸೇರಿಸಲು ಬಿಸಿಸಿಐ ಬಯಸಿದೆ. ಆದರೆ, ಇದಕ್ಕೆ ಈಗಿರುವ ತಂಡಗಳಿಂದ ವಿರೋಧ ವ್ಯಕ್ತವಾಗಬಹುದು ಎಂಬ ಭೀತಿ ಉಂಟಾದ ಹಿನ್ನಲೆಯಲ್ಲಿ ಈಗಿರುವ ತಂಡಗಳ ಮನವೊಲಿಸಲು ಆಡುವ ಬಳಗದಲ್ಲಿ ಐವರು ವಿದೇಶಿ ಆಟಗಾರರನ್ನು ಕಣಕ್ಕಿಳಿಸುವತ್ತ ಚಿತ್ತ ನೆಟ್ಟಿದೆ.
ಅಲ್ಲದೆ ಇದರಿಂದ ವಿದೇಶಿ ಕ್ರಿಕೆಟಿಗರು ಬೆಂಚ್ ಬಿಸಿ ಮಾಡುವುದು ತಪ್ಪುತ್ತದೆ. ಜೊತೆಗೆ ತಂಡ ಹಾಗೂ ಪಂದ್ಯದ ಗುಣಮಟ್ಟ ಕೂಡ ಉತ್ತಮ ಉತ್ತಮಗೊಳ್ಳುತ್ತದೆ ಎಂಬುದು ಬಿಸಿಸಿಐ ಅಧಿಕಾರಿಯೊಬ್ಬರ ಅಭಿಪ್ರಾಯವಾಗಿದೆ. ಈಗಿರುವ ಐಪಿಎಲ್ನ ತಂಡಗಳಲ್ಲಿ ಸುಮಾರು 18ರಿಂದ 25 ಆಟಗಾರರು ಇರುತ್ತಾರೆ. ಈ ಪೈಕಿ ಗರಿಷ್ಠ 8 ವಿದೇಶಿ ಆಟಗಾರರು ಇದ್ದರೆ, ಕಣಕ್ಕಿಳಿಯುವವರು 4 ಜನ ಮಾತ್ರ. ಉಳಿದಂತೆ 7 ಭಾರತೀಯರೇ ಇರಬೇಕು. ಇದರಿಂದಾಗಿ ಕೆಲ ತಂಡಗಳು ಹೆಚ್ಚಿನ ಸ್ಪರ್ಧಾತ್ಮಕತೆ ಕಾಣಲು ಪರದಾಡುತ್ತಿವೆ.
India vs Australia: ನಾಳೆಯಿಂದ ಭಾರತ-ಆಸೀಸ್ ಏಕದಿನ ಸರಣಿ: ಹೇಗೆ ವೀಕ್ಷಿಸುವುದು?, ಯಾವುದರಲ್ಲಿ ನೇರ ಪ್ರಸಾರ?
ಇನ್ನೂ 2021 ಐಪಿಎಲ್ ಆವೃತ್ತಿಗೆ ನೂತನ ಫ್ರಾಂಚೈಸಿ ಸೇರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಡಿಸೆಂಬರ್ ತಿಂಗಳಲ್ಲಿ ವಾರ್ಷಿಕ ಸಭೆ ಕರೆಯುವ ನಿರೀಕ್ಷೆಯಿದೆ. ಹೊಸ ಫ್ರಾಂಚೈಸಿಗೆ ಟೆಂಡರ್ ಕರೆಯಲು ವಾರ್ಷಿಕ ಸಭೆಯ ಅಗತ್ಯವಿದೆ. ಜೊತೆಗೆ ಕೆಲ ಸಮಸ್ಯೆಯನ್ನು ಬಗೆಹರಿಸಲು ಬಿಸಿಸಿಐ ಅಧಿಕಾರಿಗಳು ಎದುರು ನೋಡುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಬಿಸಿಸಿಐ ಮೂಲಗಳ ಪ್ರಕಾರ, "ಕಳೆದ ಎರಡು ಸೀಸನ್ನಿಂದ ಕೆಲವು ಫ್ರಾಂಚೈಸಿ ವಿದೇಶಿ ಆಟಗಾರರ ಸಂಖ್ಯೆಯನ್ನು ನಾಲ್ಕರಿಂದ ಐದಕ್ಕೆ ಏರಿಸುವ ಬಗ್ಗೆ ಕೇಳಿಕೊಂಡಿತ್ತು. ಸದ್ಯ ನಾವು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಅಧಿಕಾರಿಗಳೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಂಡು ಸದ್ಯದಲ್ಲೇ ಮಾಹಿತಿ ನೀಡುತ್ತೇವೆ" ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ.