• ಹೋಂ
  • »
  • ನ್ಯೂಸ್
  • »
  • IPL
  • »
  • IPL 2021: ಐಪಿಎಲ್ ಉಳಿದ ಪಂದ್ಯಗಳನ್ನು ಆಯೋಜಿಸಲು ಬಿಸಿಸಿಐ ಬಿಗ್ ಪ್ಲ್ಯಾನ್..!

IPL 2021: ಐಪಿಎಲ್ ಉಳಿದ ಪಂದ್ಯಗಳನ್ನು ಆಯೋಜಿಸಲು ಬಿಸಿಸಿಐ ಬಿಗ್ ಪ್ಲ್ಯಾನ್..!

Ipl 2021

Ipl 2021

ಟಿ20 ವಿಶ್ವಕಪ್ ಟೂರ್ನಿಗಾಗಿ ಸಿದ್ದತೆಗಳು ಆರಂಭವಾಗಲಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಅಕ್ಟೋಬರ್​ 18 ರಿಂದ ಭಾರತದಲ್ಲಿ ಟಿ20 ವಿಶ್ವಕಪ್ ನಡೆಯಲಿದೆ.

  • Share this:

ಐಪಿಎಲ್ ಸೀಸನ್​ 14ನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಟೂರ್ನಿಯಲ್ಲಿ ಪಾಲ್ಗೊಂಡಿದ್ದ ಹಲವು ಆಟಗಾರರಲ್ಲಿ ಸೋಂಕು ಪತ್ತೆಯಾಗಿರುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸದ್ಯ ಐಪಿಎಲ್​ನ್ನು ಮುಂದೂಡಲಾಗಿದ್ದರೂ, ಮತ್ತೆ ಯಾವಾಗ ಪ್ರಾರಂಭವಾಗಲಿದೆ ಎಂಬ ಬಗ್ಗೆ ಬಿಸಿಸಿಐ ಯಾವುದೇ ಅಧಿಕೃತ  ಮಾಹಿತಿ ನೀಡಿಲ್ಲ. ಹೀಗಾಗಿ ಶೀಘ್ರದಲ್ಲೇ ಮತ್ತೆ ಐಪಿಎಲ್ ಶುರುವಾಗುವ ಸಾಧ್ಯತೆ ಇಲ್ಲ.


ಏಕೆಂದರೆ ಮುಂದಿನ ತಿಂಗಳು, ಟೀಮ್ ಇಂಡಿಯಾ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಆಡಲಿದೆ. ಇದರ ನಂತರ, ಟೀಮ್ ಇಂಡಿಯಾ ಆಗಸ್ಟ್‌ನಲ್ಲಿ ಇಂಗ್ಲೆಂಡ್ ವಿರುದ್ದ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಸಹ ಆಡಬೇಕಾಗಿದೆ. ಟೆಸ್ಟ್ ಸರಣಿಯು ಆಗಸ್ಟ್ 12 ರಂದು ಪ್ರಾರಂಭವಾಗಲಿದೆ. ಪ್ರೋಟೋಕಾಲ್ ಅಡಿಯಲ್ಲಿ, ಆಟಗಾರರು 14 ದಿನಗಳ ಕಾಲ ಕ್ಯಾರೆಂಟೈನ್‌ನಲ್ಲಿ ಇರಬೇಕಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಟೆಸ್ಟ್ ಸರಣಿಯ ಐಪಿಎಲ್​ನ್ನು ಆಯೋಜಿಸುವುದು ಕಷ್ಟಕರ. ಇನ್ನು ಈ ಟೆಸ್ಟ್ ಸರಣಿಯು ಸೆಪ್ಟೆಂಬರ್ 14 ಕ್ಕೆ ಕೊನೆಗೊಳ್ಳಲಿದೆ.


ಆ ಬಳಿಕ ಟಿ20 ವಿಶ್ವಕಪ್ ಟೂರ್ನಿಗಾಗಿ ಸಿದ್ದತೆಗಳು ಆರಂಭವಾಗಲಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಅಕ್ಟೋಬರ್​ 18 ರಿಂದ ಭಾರತದಲ್ಲಿ ಟಿ20 ವಿಶ್ವಕಪ್ ನಡೆಯಲಿದೆ. ಇದಾಗ್ಯೂ ಕೊರೋನಾ ಕಾರಣದಿಂದ ಭಾರತದಲ್ಲಿ ನಡೆಸಲು ಸಾಧ್ಯವಾಗದಿದ್ದರೆ, ಯುಎಇನಲ್ಲಿ ಟಿ20 ವಿಶ್ವಕಪ್​ನ್ನು ಬಿಸಿಸಿಐ ಆಯೋಜಿಸಲಿದೆ.


ಅಂದರೆ ಸೆಪ್ಟೆಂಬರ್ 15 ರಿಂದ ಅಕ್ಟೋಬರ್ 15 ರೊಳಗೆ ಬಿಸಿಸಿಐಗೆ ಒಂದು ತಿಂಗಳ ಅವಧಿ ಸಿಗಲಿದೆ. ಈ ಸಮಯದೊಳಗೆ ಬಿಸಿಸಿಐ 31 ಪಂದ್ಯಗಳನ್ನು ಪೂರ್ಣಗೊಳಿಸುವ ಲೆಕ್ಕಚಾರದಲ್ಲಿದೆ ಬಿಸಿಸಿಐ. ಟಿ20 ವಿಶ್ವಕಪ್​ಗಾಗಿ ಎಲ್ಲಾ ವಿದೇಶಿ ಆಟಗಾರರು ಭಾರತಕ್ಕೆ ಆಗಮಿಸಬೇಕಾಗಿ ಇರುವುದರಿಂದ, ಇದೇ ಸಮಯದಲ್ಲಿ ಟೂರ್ನಿಯನ್ನು ಆಯೋಜಿಸುವುದು ಸುಲಭ. ಒಂದು ವೇಳೆ ಭಾರತದಲ್ಲಿ ಟಿ20 ವಿಶ್ವಕಪ್ ನಡೆಸಲು ಸಾಧ್ಯವಾಗದಿದ್ದರೆ, ಬಿಸಿಸಿಐ ಯುಎಇನಲ್ಲಿ ಆಯೋಜಿಸುವುದು ಖಚಿತ ಎನ್ನಲಾಗಿದೆ.


ಈ ಹಿಂದೆ ಯುಎಇನಲ್ಲೂ ಬಿಸಿಸಿಐ ಐಪಿಎಲ್ ಆಯೋಜಿಸಿದ್ದರಿಂದ ಅಲ್ಲೇ ಉಳಿದ ಪಂದ್ಯಗಳನ್ನು ಆಯೋಜಿಸುವ ಆಯ್ಕೆ ಇರಲಿದೆ. ಹೀಗಾಗಿ ಸೆಪ್ಟೆಂಬರ್-ಅಕ್ಟೋಬರ್ ನಡುವೆ ಐಪಿಎಲ್​ನ ಉಳಿದ ಪಂದ್ಯಗಳು ನಡೆಯಲಿದೆ. ಅದು ಭಾರತದಲ್ಲೇ ನಡೆಯಲಿದೆಯಾ ಅಥವಾ ಯುಎಇನಲ್ಲಿ ಆಯೋಜನೆಯಾಗಲಿದೆಯಾ ಕಾದು ನೋಡಬೇಕಿದೆ.

top videos
    First published: