HOME » NEWS » Ipl » IPL 2021 MUMBAI INDIANS VS SUNRISERS HYDERABAD MATCH IN CHENNAI TODAY HG

IPL 2021: MI vs SRH: ಇಂದು ಮುಂಬೈ-ಹೈದರಾಬಾದ್​ ಜಿದ್ದಾಜಿದ್ದಿ; ರೈಸ್ ಆಗುತ್ತಾ ಸನ್..?

ಇಂದು ಚೆನ್ನೈನಲ್ಲಿ ನಡೆಯುತ್ತಿರುವ ಈ ಜಿದ್ದಾ ಜಿದ್ದಿ ಪಂದ್ಯವು ಚಾಂಪಿಯನ್ ಮುಂಬೈ ತಂಡಕ್ಕೆ ತನ್ನ ಪಾಯಿಂಟ್​ ಪಟ್ಟಿಯಲ್ಲಿ ಗುರುತಿಸಿಕೊಳ್ಳಲು ಬಹಳ ಮುಖ್ಯವಾದರೆ. ಸನ್​ ರೈಸರ್ಸ್​ ತಂಡಕ್ಕೆ ಗೆಲುವಿನ ಖಾತೆ ತೆರಯಲು ಈ ಪಂದ್ಯ ಮುಖ್ಯವಾಗಲಿದೆ. ಹಾಗಾಗಿ ಇವೆರಡಲ್ಲಿ ಯಾವ ತಂಡ ಜಯಗಳಿಸಲಿದೆ ಎಂದು ಕಾದು ನೋಡಬೇಕಿದೆ.

news18-kannada
Updated:April 17, 2021, 5:28 PM IST
IPL 2021: MI vs SRH: ಇಂದು ಮುಂಬೈ-ಹೈದರಾಬಾದ್​ ಜಿದ್ದಾಜಿದ್ದಿ; ರೈಸ್ ಆಗುತ್ತಾ ಸನ್..?
SunRisers Hyderabad
  • Share this:
ಇಂದು ಇಂಡಿಯನ್​ ಪ್ರೀಮಿಯರ್​ ಲೀಗ್​ನ ಒಂಭತ್ತನೇ ಪಂದ್ಯಾಟ ನಡೆಯುತ್ತಿದೆ. ಬಲಿಷ್ಟ ತಂಡಗಳಾದ ಮುಂಬೈ ಇಂಡಿಯನ್ಸ್​ ಮತ್ತು ಸನ್​ರೈಸರ್ಸ್ ಹೈದರಾಬಾದ್​​ ತಂಡ ಇಂದು ಮುಖಾಮುಖಿಯಾಗುತ್ತಿದೆ.  ಈ ವರ್ಷದ ಐಪಿಎಲ್ ಪ್ರಾರಂಭವಾಗಿನಿಂದ ಇವೆರಡು ತಂಡ ಎರಡು ಪಂದ್ಯವನ್ನು ಎದುರಿಸಿದೆ. ಅದರಲ್ಲಿ ರೋಹಿತ್​ ಶರ್ಮಾ ನಾಯಕತ್ವದ ಮುಂಬೈ ತಂಡ ಒಂದು ಪಂದ್ಯ ಜಯಿಸಿದರೆ ಇನ್ನೊಂದು ಪಂದ್ಯ ಸೋಲೊಪ್ಪಿಕೊಂಡಿತ್ತು. ಅಂತೆಯೇ ಡೇವಿಡ್​​ ವಾರ್ನರ್​ ನಾಯಕತ್ವದ ಹೈದರಾಬಾದ್​ ತಂಡ ಎದುರಿಸಿದ ಎರಡು ಪಂದ್ಯದಲ್ಲೂ ಸೋತಿದೆ. ಹಾಗಾಗಿ ಇಂದಿನ ಪಂದ್ಯ ಹೈದರಾಬಾದ್ ತಂಡ ಬಹುಮುಖ್ಯವಾಗಿದೆ.

ಐಪಿಎಲ್​ 2021 ಪಾಯಿಂಟ್​ ಟೇಬಲ್​ ಗಮನಿಸಿದಾಗ ರಾಯಲ್ಸ್​ ಚಾಲೆಂಜರ್ಸ್​ ಬೆಂಗಳೂರು ತಂಡ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದು, 4 ಪಾಯಿಂಟ್​ ಪಡೆದುಕೊಂಡಿದೆ. ಅದರಂತೆ ಎರಡನೇ ಸ್ಥಾನ ಧೋನಿ ನಾಯಕತ್ವದ ಚೆನ್ನೈ ತಂಡವಿದೆ. ಮೂರನೇ ಸ್ಥಾನದಲ್ಲಿ ಮುಂಬೈ ಇಂಡಿಯನ್ಸ್​ ಹೆಸರು ಕಾಣಿಸಿಕೊಂಡಿದ್ದು, ಇವೆರಡು ತಂಡ  2 ಪಾಯಿಂಟ್​ ಪಡೆದುಕೊಂಡಿದೆ.  ಇನ್ನು ಸನ್​​ರೈಸರ್ಸ್​​ ತಂಡ ಕೊನೆಯ 8ನೇ ಸ್ಥಾನದಲ್ಲಿದ್ದು, ಸೊನ್ನೆ ಪಾಯಿಂಟ್​ ಪಡೆದುಕೊಂಡಿದೆ.

ಇಂದು ಚೆನ್ನೈನಲ್ಲಿ ನಡೆಯುತ್ತಿರುವ ಈ ಜಿದ್ದಾ ಜಿದ್ದಿ ಪಂದ್ಯವು ಚಾಂಪಿಯನ್ ಮುಂಬೈ ತಂಡಕ್ಕೆ ತನ್ನ ಪಾಯಿಂಟ್​ ಪಟ್ಟಿಯಲ್ಲಿ ಗುರುತಿಸಿಕೊಳ್ಳಲು ಬಹಳ ಮುಖ್ಯವಾದರೆ. ಸನ್​ ರೈಸರ್ಸ್​ ತಂಡಕ್ಕೆ ಗೆಲುವಿನ ಖಾತೆ ತೆರಯಲು ಈ ಪಂದ್ಯ ಮುಖ್ಯವಾಗಲಿದೆ. ಹಾಗಾಗಿ ಇವೆರಡಲ್ಲಿ ಯಾವ ತಂಡ ಜಯಗಳಿಸಲಿದೆ ಎಂದು ಕಾದು ನೋಡಬೇಕಿದೆ.

ಪಂದ್ಯ ಪ್ರಾರಂಭದ ಸಮಯ: 7:30 PM IST

ಮೈದಾನ:  ಚೆನ್ನೈ, ಚಿದಂಬರಂ ಸ್ಟೇಡಿಯಂ

ಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​​

ಮುಂಬೈ ಇಂಡಿಯನ್ಸ್​ ಸಂಭಾವ್ಯ ಪ್ಲೇಯಿಂಗ್ 11: ರೋಹಿತ್ ಶರ್ಮಾ, ಕ್ವಿಂಟನ್ ಡಿ ಕಾಕ್,  ಸೂರ್ಯಕುಮಾರ್ ಯಾದವ್,  ಹಾರ್ದಿಕ್ ಪಾಂಡ್ಯ,  ಇಶಾನ್ ಕಿಶನ್, ಕೀರನ್ ಪೊಲಾರ್ಡ್,  ಕ್ರುನಾಲ್ ಪಾಂಡ್ಯ,  ಮಾರ್ಕೊ ಜಾನ್ಸೆನ್,  ರಾಹುಲ್ ಚಹರ್,  ಟ್ರೆಂಟ್ ಬೌಲ್ಟ್, ಜಸ್ಪ್ರಿತ್ ಬುಮ್ರಾಸನ್​ರೈಸರ್ಸ್​ ಹೈದರಾಬಾದ್​ ಸಂಭಾವ್ಯ ಪ್ಲೇಯಿಂಗ್ 11:  ಡೇವಿಡ್ ವಾರ್ನರ್,  ವೃದ್ಧಿಮಾನ್ ಸಹಾ, ಮನೀಶ್ ಪಾಂಡೆ,  ಜಾನಿ ಬೈರ್‌ಸ್ಟೋ / ಕೇನ್ ವಿಲಿಯಮ್ಸನ್, ಅಬ್ದುಲ್ ಸಮದ್,  ವಿಜಯ್ ಶಂಕರ್,  ರಶೀದ್ ಖಾನ್,  ಜೇಸನ್ ಹೋಲ್ಡರ್,  ಭುವನೇಶ್ವರ್ ಕುಮಾರ್,  ಶಹಬಾಜ್ ನದೀಮ್,  ಟಿ ನಟರಾಜನ್
Published by: Harshith AS
First published: April 17, 2021, 2:31 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories