IPL 2021, MI vs KKR: ಕೆಕೆಆರ್ ಕೋಟೆ ಭೇದಿಸಲು ಮುಂಬೈ ಸಜ್ಜು..!

ರೋಹಿತ್ ಶರ್ಮಾ, ಆದಿತ್ಯ ತಾರೆ, ಅನ್ಮೋಲ್ಪ್ರೀತ್ ಸಿಂಗ್, ಅಂಕುಲ್ ರಾಯ್, ಧವಲ್ ಕುಲಕರ್ಣಿ, ಹಾರ್ದಿಕ್ ಪಾಂಡ್ಯ, ಇಶಾನ್ ಕಿಶನ್, ಜಸ್ಪ್ರೀತ್ ಬುಮ್ರಾ, ಜಯಂತ್ ಯಾದವ್, ಕೀರನ್ ಪೊಲಾರ್ಡ್,

MI vs KKR

MI vs KKR

 • Share this:
  ಚೆನ್ನೈನಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್​ನ 5ನೇ ಪಂದ್ಯದಲ್ಲಿ ಇಂದು ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಕೊಲ್ಕತ್ತಾ ನೈಟ್​ ರೈಡರ್ಸ್​ ತಂಡವನ್ನು ಎದುರಿಸಲಿದೆ. ಉಭಯ ತಂಡಗಳು ಈಗಾಗಲೇ ಎಂಎ ಚಿದಂಬರಂ ಕ್ರೀಡಾಗಣದಲ್ಲಿ ಒಂದೊಂದು ಪಂದ್ಯವನ್ನಾಡಿದ್ದು, ಕೆಕೆಆರ್​ ಎಸ್​ಆರ್​ಹೆಚ್​ ವಿರುದ್ಧ ಜಯ ಸಾಧಿಸಿದರೆ, ಆರ್​ಸಿಬಿ ವಿರುದ್ಧ ಸೋಲಿನೊಂದಿಗೆ ಮುಂಬೈ ಈ ಬಾರಿಯ ಐಪಿಎಲ್ ಅಭಿಯಾನ ಆರಂಭಿಸಿದೆ.

  ಇನ್ನು ಐಪಿಎಲ್ ಇತಿಹಾಸವನ್ನು ಗಮನಿಸಿದರೆ ಮುಂಬೈ ಇಂಡಿಯನ್ಸ್ ನಿಧಾನವಾಗಿ ಗೆಲುವಿನ ಲಯಕ್ಕೆ ಮರಳುವ ತಂಡ ಎಂಬ ಖ್ಯಾತಿ ಹೊಂದಿದೆ. ಹೀಗಾಗಿ ಕೆಕೆಆರ್​ ವಿರುದ್ಧ ಜಯ ಸಾಧಿಸುವ ಮೂಲಕ ಜಯದ ನಾಗಾಲೋಟ ಮುಂದುವರೆಸುವ ಇರಾದೆಯಲ್ಲಿದೆ ರೋಹಿತ್ ಪಡೆ. ಅತ್ತ ಸನ್​ರೈಸರ್ಸ್​ ಹೈದರಾಬಾದ್​ ತಂಡಕ್ಕೆ ಸೋಲುಣಿಸಿರುವ ಕೆಕೆಆರ್ ಆತ್ಮ ವಿಶ್ವಾಸದಿಂದ ಪುಟಿದೇಳುತ್ತಿದ್ದು, ಮುಂಬೈಗೆ ಕಠಿಣ ಸವಾಲೊಡ್ಡುವ ವಿಶ್ವಾಸದಲ್ಲಿದೆ.

  ಚೆನ್ನೈನಲ್ಲಿ ನಡೆದಿರುವ 2 ಪಂದ್ಯಗಳಲ್ಲಿ ಆರ್​ಸಿಬಿ ಚೇಸಿಂಗ್​ನಲ್ಲಿ ಜಯ ಸಾಧಿಸಿದರೆ, ಕೆಕೆಆರ್​ ಬೌಲಿಂಗ್​ನಲ್ಲಿ ಗೆಲುವು ದಾಖಲಿಸಿತ್ತು. ಹೀಗಾಗಿ ಎಂಎ ಚಿದಂಬರಂ ಕ್ರೀಡಾಂಗಣದ ಪಿಚ್‌ ಬ್ಯಾಟಿಂಗ್‌ ಮತ್ತು ಬೌಲಿಂಗ್‌ ಎರಡರಲ್ಲೂ ಸಮಯೋಜಿತವಾಗಿದೆ ಎಂದೇ ಹೇಳಬಹುದು. ಮೊದಲು ಬ್ಯಾಟ್ ಮಾಡಿದ ತಂಡವು 180ಕ್ಕಿಂತ ಹೆಚ್ಚು ರನ್ ಬಾರಿಸಿದರೆ ಮಾತ್ರ ಬೌಲಿಂಗ್​ನಲ್ಲಿ ವಿಜಯ ಸಾಧಿಸಬಹುದು. ಇದಾಗ್ಯೂ ಆರ್​ಸಿಬಿ ವಿರುದ್ಧ 160 ರನ್ ಬಾರಿಸಿ ಭರ್ಜರಿ ಬೌಲಿಂಗ್ ಪ್ರದರ್ಶನ ನೀಡಿದ್ದ ಮುಂಬೈ ಈ ಬಾರಿ ಗೆಲುವು ದಕ್ಕಿಸಿಕೊಳ್ಳಲು ಸಕಲ ಪ್ರಯತ್ನ ನಡೆಸಲಿದೆ.

  ಹಾಗೆಯೇ 187 ರನ್‌ ಬಾರಿಸಿ ಕೇವಲ 10 ರನ್​ಗಳಿಂದ ಜಯ ಸಾಧಿಸಿದ್ದ ಕೆಕೆಆರ್​ ಇಂದಿನ ಪಂದ್ಯದಲ್ಲಿ ತನ್ನ ಬೌಲಿಂಗ್ ವಿಭಾಗವನ್ನು ಮತ್ತಷ್ಟು ಹುರುಪುಗೊಳಿಸಬೇಕಾದ ಅನಿವಾರ್ಯತೆಯಿದೆ. ಏಕೆಂದರೆ ಮುಂಬೈ ಇಂಡಿಯನ್ಸ್​ ತಂಡದಲ್ಲಿ ದಾಂಡಿಗರ ದಂಡೇ ಇದ್ದು, ರೋಹಿತ್ ಪಡೆಯನ್ನು ಕಟ್ಟಿಹಾಕುವುದು ಸುಲಭದ ಮಾತಲ್ಲ. ಒಟ್ಟಿನಲ್ಲಿ ಜಯದೊಂದಿಗೆ ಶುಭಾರಂಭ ಮಾಡಿರುವ ಕೆಕೆಆರ್​ ಗೆಲುವಿನ ಲಯವನ್ನು ಮುಂದುವರೆಸುವ ಇರಾದೆಯಲ್ಲಿದ್ದರೆ, ಜಯದ ಲಯಕ್ಕೆ ಮರಳಲು ಮುಂಬೈ ಇಂಡಿಯನ್ಸ್ ಇಂದು ಕಠಿಣ ಪೈಪೋಟಿ ನೀಡುವುದನ್ನು ನಿರೀಕ್ಷಿಸಬಹುದು.

  ಕೋಲ್ಕತಾ ನೈಟ್ ರೈಡರ್ಸ್: ದಿನೇಶ್ ಕಾರ್ತಿಕ್, ಆಂಡ್ರೆ ರಸ್ಸೆಲ್, ಕಮಲೇಶ್ ನಾಗರ್ಕೋಟಿ, ಕುಲದೀಪ್ ಯಾದವ್, ಲಾಕಿ ಫರ್ಗುಸನ್, ನಿತೀಶ್ ರಾಣಾ, ಪ್ರಸಿದ್ ಕೃಷ್ಣ, ಗುರ್ಕೀರತ್​ ಸಿಂಗ್, ಸಂದೀಪ್ ವಾರಿಯರ್, ಶಿವಂ ಮಾವಿ, ಶುಬ್ಮನ್ ಗಿಲ್, ಸುನೀಲ್ ನರೀನ್, ಇಯಾನ್ ಮೋರ್ಗಾನ್, ಪ್ಯಾಟ್ ಕುಮಿನ್ಸ್, ರಾಹುಲ್ ತ್ರಿಪಾಠಿ , ಟಿಮ್ ಸೀಫರ್ಟ್, ಶಕೀಬ್ ಅಲ್ ಹಸನ್, ಶೆಲ್ಡನ್ ಜಾಕ್ಸನ್, ವೈಭವ್ ಅರೋರಾ, ಕರುಣ್ ನಾಯರ್, ಹರ್ಭಜನ್ ಸಿಂಗ್, ಬೆನ್ ಕಟಿಂಗ್, ವೆಂಕಟೇಶ್ ಅಯ್ಯರ್

  ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ, ಆದಿತ್ಯ ತಾರೆ, ಅನ್ಮೋಲ್ಪ್ರೀತ್ ಸಿಂಗ್, ಅಂಕುಲ್ ರಾಯ್, ಧವಲ್ ಕುಲಕರ್ಣಿ, ಹಾರ್ದಿಕ್ ಪಾಂಡ್ಯ, ಇಶಾನ್ ಕಿಶನ್, ಜಸ್ಪ್ರೀತ್ ಬುಮ್ರಾ, ಜಯಂತ್ ಯಾದವ್, ಕೀರನ್ ಪೊಲಾರ್ಡ್, ಕ್ರುನಾಲ್ ಪಾಂಡ್ಯ, ಕ್ವಿಂಟನ್ ಡಿ ಕಾಕ್, ರಾಹುಲ್ ಚಹರ್, ಸೂರ್ಯಕುಮಾರ್ ಯಾದವ್ ತಿವಾರಿ, ಟ್ರೆಂಟ್ ಬೌಲ್ಟ್, ಆಡಮ್ ಮಿಲ್ನೆ, ನಾಥನ್ ಕೌಲ್ಟರ್-ನೈಲ್, ಪಿಯೂಷ್ ಚಾವ್ಲಾ, ಜೇಮ್ಸ್ ನೀಶನ್, ಯುಧ್ವೀರ್ ಚರಕ್, ಮಾರ್ಕೊ ಜಾನ್ಸೆನ್, ಅರ್ಜುನ್ ತೆಂಡೂಲ್ಕರ್
  Published by:zahir
  First published: