IPL 2021, MI vs CSK| 100ನೇ ಐಪಿಎಲ್ ಪಂದ್ಯ ಆಡುವ ಮೂಲಕ ಎಲೈಟ್ ಪಟ್ಟಿಯಲ್ಲಿ ಸ್ಥಾನ ಪಡೆದ ಜಸ್ಪ್ರೀತ್ ಬುಮ್ರಾ

2021ರಲ್ಲಿ ಆರಂಭವಾಗಿದ್ದ ಐಪಿಎಲ್​ನಲ್ಲಿ ಬುಮ್ರಾ 99 ಪಂದ್ಯಗಳನ್ನು ಮುಂಬೈ ಇಂಡಿಯನ್ಸ್​ ಪರ ಆಡಿದ್ದರು. ಆದರೆ, ನೂರನೇ ಪಂದ್ಯ ಆಡುವ ವೇಳೆಗೆ ಕೊರೋನಾ ಎರಡನೇ ಅಲೆ ಕಾರಣಕ್ಕೆ ಟೂರ್ನಿಯನ್ನೇ ಮುಂದೂಡಲಾಗಿತ್ತು.

ಜಸ್ಪ್ರೀತ್​ ಬುಮ್ರಾಗೆ ನೆನಪಿನ ಟೀ ಶರ್ಟ್​ ನೀಡಿದ ಜಹೀರ್ ಖಾನ್.

ಜಸ್ಪ್ರೀತ್​ ಬುಮ್ರಾಗೆ ನೆನಪಿನ ಟೀ ಶರ್ಟ್​ ನೀಡಿದ ಜಹೀರ್ ಖಾನ್.

 • Share this:
  ಚೆನ್ನೈ ಸೂಪರ್​ ಕಿಂಗ್ಸ್​ (Chennai Super Kings) ವಿರುದ್ಧ ಕಣಕ್ಕಿಳಿಯುವ ಮೂಲಕ ಮುಂಬೈ ಇಂಡಿಯನ್ಸ್ (Mumbai Indians)​ ತಂಡದ ಪ್ರಮುಖ ಮತ್ತು ಟಿ20 ಕ್ರಿಕೆಟ್​ನ ಅಗ್ರ ಬೌಲರ್​ ಜಸ್ಪ್ರೀತ್​ ಬುಮ್ರಾ (Jasprit Bumrah) ಭಾನುವಾರ ವಿಶೇಷ ಸಾಧನೆ ಮಾಡಿದ್ದಾರೆ. ಇದು ಮುಂಬೈ ಪರವಾಗಿ ಐಪಿಎಲ್ ನಲ್ಲಿ ಜಸ್ಪ್ರೀತ್​ ಬುಮ್ರಾ ಅವರ ನೂರನೇ ಪಂದ್ಯವಾಗಿದ್ದು, 100ನೇ ಪಂದ್ಯವಾಡಿದ ಮುಂಬೈ ಇಂಡಿಯನ್ಸ್ ಜರ್ಸಿಯನ್ನು ಧರಿಸಿದ ಆಟಗಾರರ ಗಣ್ಯರ ಪಟ್ಟಿಗೆ ಸೇರಿಕೊಂಡಿದ್ದಾರೆ. ಜಸ್ಪ್ರೀತ್ ಬುಮ್ರಾ ಮುಂಬೈ ಇಂಡಿಯನ್ಸ್​ ತಂಡದ ಪರ ಈ ಸಾಧನೆ ಮಾಡಿದ 6ನೇ ಆಟಗಾರನಾಗಿದ್ದು, ವೇಗದ ಬೌಲರ್​ಗೆ ಮುಂಬೈ ಇಂಡಿಯನ್ಸ್​ ಕ್ರಿಕೆಟ್ ಕಾರ್ಯಾಚರಣೆಗಳ ನಿರ್ದೇಶಕ ಹಾಗೂ ಮಾಜಿ ಆಟಗಾರರಾದ ಜಹೀರ್ ಖಾನ್ (Zaheer Khan) ಅವರು ನಿನ್ನೆ ವಿಶೇಷ ಸಂಖ್ಯೆಯ ಜರ್ಸಿಯನ್ನು ನೀಡಿ ಗೌರವಿಸಿದ್ದಾರೆ.  2013 ರಲ್ಲಿ ಮುಂಬೈ ಇಂಡಿಯನ್ಸ್​ ತಂಡದ ಭಾಗವಾದ ಜಸ್ಪ್ರೀತ್ ಬುಮ್ರಾ ನಂತರ ತನ್ನ ಅಮೋಘ ಪ್ರದರ್ಶನದ ನೀಡುವ ಮೂಲಕ ಭಾರತ ಅಂತಾರಾಷ್ಟ್ರೀಯ ತಂಡಕ್ಕೂ ಆಯ್ಕೆ ಆದದ್ದು ಇತಿಹಾಸ. 2021ರಲ್ಲಿ ಆರಂಭವಾಗಿದ್ದ ಐಪಿಎಲ್​ನಲ್ಲಿ ಬುಮ್ರಾ 99 ಪಂದ್ಯಗಳನ್ನು ಮುಂಬೈ ಇಂಡಿಯನ್ಸ್​ ಪರ ಆಡಿದ್ದರು. ಆದರೆ, ನೂರನೇ ಪಂದ್ಯ ಆಡುವ ವೇಳೆಗೆ ಕೊರೋನಾ ಎರಡನೇ ಅಲೆ ಕಾರಣಕ್ಕೆ ಟೂರ್ನಿಯನ್ನೇ ಮುಂದೂಡಲಾಗಿತ್ತು. ಆದರೆ, ಇದೀಗ ಚೆನ್ನೈ ವಿರುದ್ಧ ಕಣಕ್ಕಿಳಿಯುವ ಮೂಲಕ ಜಸ್ಪ್ರೀತ್ ಬುಮ್ರಾ ಕೊನೆಗೂ ಮುಂಬೈ ಪರ100 ಪಂದ್ಯಗಳನ್ನು ಆಡುವ ಸಾಧನೆ ಮಾಡಿದ್ದಾರೆ. 100 ಪಂದ್ಯಗಳಲ್ಲಿ ಬುಮ್ರಾ 115 ವಿಕೆಟ್​ಗಳನ್ನು ಪಡೆದಿದ್ದಾರೆ.

  ಇದನ್ನೂ ಓದಿ: IPL 2021 | ಚುಟುಕು ಸಮರದಲ್ಲಿ ಇಂದು ಹೈವೋಲ್ಟೇಜ್ ಕದನ : RCB V/S KKR ರೋಚಕ ಪಂದ್ಯದಲ್ಲಿ ಗೆಲ್ಲೋದ್ಯಾರು?

  ಐಪಿಎಲ್​ನಲ್ಲಿ ಮುಂಬೈ ಪರ ಜಸ್ಪ್ರೀತ್ ಬುಮ್ರಾ ಉತ್ತಮ ಸಾಧನೆ ಮಾಡಿದ್ದಾರೆ. ಆದರೆ, ಈ ವರ್ಷದ ಆರಂಭದ ಋತುವಿನ ಏಪ್ರಿಲ್​ನಿಂದ ಬುಮ್ರಾ ಫಾರ್ಮ್​ನಲ್ಲಿ ಇಲ್ಲ. ಕೋವಿಡ್​ 19 ಕಾರಣಕ್ಕೆ ಎಲ್ಲಾ ಆಟಗಾರರನ್ನು ಮುನ್ನೆಚ್ಚರಿಕಾ ಕ್ರಮವಾಗಿ ಬಯೋ ಬಬಲ್ ನಲ್ಲಿ ಇರಿಸಲಾಗುತ್ತಿದೆ. ಇದು ಬುಮ್ರಾ ಅವರ ಫಾರ್ಮ್​ ಮೇಲೆ ಪರಿಣಾಮ ಬೀರಿದೆ ಎನ್ನಲಾಗಿದೆ. ಈ ವರ್ಷದ ಐಪಿಎಲ್​ನಲ್ಲಿ ಬುಮ್ರಾ 7 ಪಂದ್ಯಗಳಿಂದ ಕೇವಲ 6 ವಿಕೆಟ್​ಗಳನ್ನು ಮಾತ್ರ ಕಬಳಿಸುವಲ್ಲಿ ಯಶಸ್ವಿಯಾಗಿದ್ದಾರೆ
  Published by:MAshok Kumar
  First published: