IPL 2021 Auction: ಐಪಿಎಲ್ 2021 ಹರಾಜು ಪ್ರಕ್ರಿಯೆ ಹೇಗೆ ನಡೆಯಲಿದೆ?: ಬಿಸಿಸಿಐಯಿಂದ ಹೊರಬಿತ್ತು ಶಾಕಿಂಗ್ ಮಾಹಿತಿ
IPL Auction 2021: ಈ ಬಾರಿ ಅತಿ ದೊಡ್ಡ ಐಪಿಎಲ್ ಹರಾಜು ಪ್ರಕ್ರಿಯೆ ನಡೆಸುವ ಬಗ್ಗೆ ಬಿಸಿಸಿಐ ಡಿಸೆಂಬರ್ನಲ್ಲಿ ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಿದೆ. ಈ ಬಗ್ಗೆ ಫ್ರಾಂಚೈಸಿಗಳಿಗೆ ಬಿಸಿಸಿಐ ಮಾಹಿತಿ ನೀಡಿದೆ.
news18-kannada Updated:November 16, 2020, 11:12 AM IST

IPL 2021
- News18 Kannada
- Last Updated: November 16, 2020, 11:12 AM IST
13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ತೆರೆ ಬಿದ್ದ ಬೆನ್ನಲ್ಲೆ ಐಪಿಎಲ್ 2021ರ ಸುದ್ದಿ ಗರಿಗೆದರಿದೆ. ಬಿಸಿಸಿಐ ಕೂಡ 14ನೇ ಆವೃತ್ತಿ ಐಪಿಎಲ್ನ ಸಿದ್ಧತೆಯಲ್ಲಿದ್ದು ಕೆಲ ಮಾಹಿತಿಯನ್ನು ಹೊರಹಾಕಿದೆ. ಈಗಾಗಲೇ ಮುಂದಿನ ಐಪಿಎಲ್ನಲ್ಲಿ ಒಟ್ಟು 9 ತಂಡಗಳನ್ನು ಕಣಕ್ಕಿಳಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಇದರ ಜೊತೆಗೆ ತಂಡದ ಆಡುವ ಬಳಗದಲ್ಲಿ ವಿದೇಶಿ ಕ್ರಿಕೆಟಿಗರ ಸಂಖ್ಯೆಯನ್ನು ಹೆಚ್ಚಿಸುವ ಬಗ್ಗೆ ಬಿಸಿಸಿಐ ಚಿಂತನೆ ನಡೆಸುತ್ತಿದೆ. ಇದರ ಜೊತೆಗೆ ಈ ಬಾರಿಯ ಐಪಿಎಲ್ ಹರಾಜು ಪ್ರಕ್ರಿಯೆ ದೊಡ್ಡ ಮಟ್ಟದಲ್ಲಿ(Mega Auction) ನಡೆಸಲು ಬಿಸಿಸಿಐ ಚಿಂತನೆ ನಡೆಸಿದೆಯಂತೆ.
ಐಪಿಎಲ್ 2020 ಆರಂಭವಾಗುವ ಹೊತ್ತಲ್ಲಿ 14ನೇ ಅವೃತ್ತಿಯ ಹರಾಜು ಪ್ರಕ್ರಿಯೆ ನಡೆಯುವುದಿಲ್ಲ ಎಂದು ಹೇಳಲಾಗಿತ್ತು. ಯಾಕಂದ್ರೆ ಐಪಿಎಲ್ 2020 ಮುಗಿಯುವುದೇ ನ. 10ಕ್ಕೆ ಅದಾದ ಒಂದು ತಿಂಗಳಲ್ಲಿ ಮುಂದಿನ ಆವೃತ್ತಿಯ ಹರಾಜು ಪ್ರಕ್ರಿಯೆ ನಡೆಸುವುದು ಸುಲಭವಲ್ಲ ಎಂಬ ಮಾತುಗಳು ಕೇಳಿಬಂದಿದ್ದವು. ಅಲ್ಲದೆ ಐಪಿಎಲ್ ನಡೆದರೂ ಬಾರತದಲ್ಲಿ ಆಯೋಜನೆ ಅನುಮಾನ ಎನ್ನಲಾಗಿತ್ತು. IPL 2020 ಭರ್ಜರಿ ಯಶಸ್ವಿ: ಬಿಸಿಸಿಐ ಯುಎಇ ಕ್ರಿಕೆಟ್ ಬೋರ್ಡ್ಗೆ ಕೊಟ್ಟ ಹಣ ಕೇಳದ್ರೆ ಶಾಕ್ ಆಗ್ತೀರಾ!
ಆದರೆ, ಸದ್ಯದ ಮಾಹಿತಿ ಪ್ರಕಾರ ಭಾರತದಲ್ಲೇ ಐಪಿಎಲ್ 2021 ಆವೃತ್ತಿ ಟೂರ್ನಿ ನಡೆಸಲು ಬಿಸಿಸಿಐ ಪ್ಲಾನ್ ಹಾಕಿಕೊಂಡಿದ್ದು, ಅದಕ್ಕೂ ಆಟಗಾರರ ಹರಾಜು ಪ್ರಕ್ರಿಯೆ ನಡೆಸಲಿದೆ. ಅಲ್ಲದೆ ಈ ಬಾರಿ ಅತಿ ದೊಡ್ಡ ಹರಾಜು ಪ್ರಕ್ರಿಯೆ ನಡೆಸುವ ಬಗ್ಗೆ ಬಿಸಿಸಿಐ ಡಿಸೆಂಬರ್ನಲ್ಲಿ ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಿದೆ. ಈ ಬಗ್ಗೆ ಫ್ರಾಂಚೈಸಿಗಳಿಗೆ ಬಿಸಿಸಿಐ ಮಾಹಿತಿ ನೀಡಿದೆ.
ಇದೇವೇಳೆ ಹೊಸ ಐಪಿಎಲ್ ಫ್ರಾಂಚೈಸಿಯಂತವಕ್ಕೆ ಟೆಂಡರ್ ಕರೆಯಲು ದೀಪಾವಳಿ ಬಳಿಕ ಬಿಸಿಸಿಐ ಅಧಿಕಾರಿಗಳು ಎದುರು ನೋಡುತ್ತಿದ್ದಾರೆ ಎಂದು ತಿಳಿದು ಬಂದಿದೆ. ಬಳಿಕ ಡಿಸೆಂಬರ್ನಲ್ಲಿ ವಾರ್ಷಿಕ ಸಭೆ ನಡೆಸಿ ಮಹತ್ವದ ತೀರ್ಮಾನ ಕೈಗೊಳ್ಳಲಿದೆ.
ಮುಂದಿನ ಐಪಿಎಲ್ಗೆ ಈಗಿರುವ 8 ತಂಡಗಳ ಜತೆಗೆ ಒಂದು ಹೊಸ ತಂಡಗಳನ್ನು ಸೇರಿಸಲು ಬಿಸಿಸಿಐ ಬಯಸಿದೆ. ಆದರೆ, ಇದಕ್ಕೆ ಈಗಿರುವ ತಂಡಗಳಿಂದ ವಿರೋಧ ವ್ಯಕ್ತವಾಗಬಹುದು ಎಂಬ ಭೀತಿ ಉಂಟಾದ ಹಿನ್ನಲೆಯಲ್ಲಿ ಈಗಿರುವ ತಂಡಗಳ ಮನವೊಲಿಸಲು ಆಡುವ ಬಳಗದಲ್ಲಿ ಐವರು ವಿದೇಶಿ ಆಟಗಾರರನ್ನು ಕಣಕ್ಕಿಳಿಸುವತ್ತ ಚಿತ್ತ ನೆಟ್ಟಿದೆ.
ಅಲ್ಲದೆ ಇದರಿಂದ ವಿದೇಶಿ ಕ್ರಿಕೆಟಿಗರು ಬೆಂಚ್ ಬಿಸಿ ಮಾಡುವುದು ತಪ್ಪುತ್ತದೆ. ಜೊತೆಗೆ ತಂಡ ಹಾಗೂ ಪಂದ್ಯದ ಗುಣಮಟ್ಟ ಕೂಡ ಉತ್ತಮ ಉತ್ತಮಗೊಳ್ಳುತ್ತದೆ ಎಂಬುದು ಬಿಸಿಸಿಐ ಅಧಿಕಾರಿಯೊಬ್ಬರ ಅಭಿಪ್ರಾಯವಾಗಿದೆ.IPL 2020: ಅಚ್ಚರಿಯ ಆಯ್ಕೆ: ಇದು ಇರ್ಫಾನ್ ಪಠಾಣ್ ಹೆಸರಿಸಿದ ಬೆಸ್ಟ್ ಐಪಿಎಲ್ ತಂಡ..!
ಈಗಿರುವ ಐಪಿಎಲ್ನ ತಂಡಗಳಲ್ಲಿ ಸುಮಾರು 18ರಿಂದ 25 ಆಟಗಾರರು ಇರುತ್ತಾರೆ. ಈ ಪೈಕಿ ಗರಿಷ್ಠ 8 ವಿದೇಶಿ ಆಟಗಾರರು ಇದ್ದರೆ, ಕಣಕ್ಕಿಳಿಯುವವರು 4 ಜನ ಮಾತ್ರ. ಉಳಿದಂತೆ 7 ಭಾರತೀಯರೇ ಇರಬೇಕು. ಇದರಿಂದಾಗಿ ಕೆಲ ತಂಡಗಳು ಹೆಚ್ಚಿನ ಸ್ಪರ್ಧಾತ್ಮಕತೆ ಕಾಣಲು ಪರದಾಡುತ್ತಿವೆ.
ಹೀಗಾಗಿ 5 ವಿದೇಶಿ ಆಟಗಾರರಿದ್ದರೆ ಉತ್ತಮ. ಅಲ್ಲದೆ ಇವರು ಬಹುತೇಕ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಮಿಂಚಿದ ಅನುಭವಿ ಆಟಗಾರರೇ ಆಗಿರುತ್ತಾರೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ವಿವರಿಸಿದ್ದಾರೆ.
ಐಪಿಎಲ್ 2020 ಆರಂಭವಾಗುವ ಹೊತ್ತಲ್ಲಿ 14ನೇ ಅವೃತ್ತಿಯ ಹರಾಜು ಪ್ರಕ್ರಿಯೆ ನಡೆಯುವುದಿಲ್ಲ ಎಂದು ಹೇಳಲಾಗಿತ್ತು. ಯಾಕಂದ್ರೆ ಐಪಿಎಲ್ 2020 ಮುಗಿಯುವುದೇ ನ. 10ಕ್ಕೆ ಅದಾದ ಒಂದು ತಿಂಗಳಲ್ಲಿ ಮುಂದಿನ ಆವೃತ್ತಿಯ ಹರಾಜು ಪ್ರಕ್ರಿಯೆ ನಡೆಸುವುದು ಸುಲಭವಲ್ಲ ಎಂಬ ಮಾತುಗಳು ಕೇಳಿಬಂದಿದ್ದವು. ಅಲ್ಲದೆ ಐಪಿಎಲ್ ನಡೆದರೂ ಬಾರತದಲ್ಲಿ ಆಯೋಜನೆ ಅನುಮಾನ ಎನ್ನಲಾಗಿತ್ತು.