ಐಪಿಎಲ್ ಸೀಸನ್ 14 ಮಧ್ಯೆದಲ್ಲಿ ಪಂಜಾಬ್ ಕಿಂಗ್ಸ್ ನಾಯಕನ ಬದಲಾವಣೆಯಾಗಿತ್ತು. ತಂಡದ ನಾಯಕನಾಗಿದ್ದ ಕೆಎಲ್ ರಾಹುಲ್ ಅಪೆಂಡಿಕ್ಸ್ ಸಮಸ್ಯೆಯಿಂದ ಬಳಲುತ್ತಿದ್ದು, ಹೀಗಾಗಿ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಉಳಿದ ಪಂದ್ಯಗಳಿಗೆ ರಾಹುಲ್ ಅಲಭ್ಯರಾಗಿದ್ದರು. ಇದೇ ಕಾರಣದಿಂದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದದ ಪಂದ್ಯದ ವೇಳೆ ಹಂಗಾಮಿ ನಾಯಕನಾಗಿ ಮಯಾಂಕ್ ಅಗರ್ವಾಲ್ ಅವರನ್ನು ನೇಮಿಸಲಾಗಿತ್ತು. ಇದರೊಂದಿಗೆ ಐಪಿಎಲ್ನಲ್ಲಿ ಮತ್ತೋರ್ವ ಕನ್ನಡಿಗನಿಗೆ ನಾಯಕನ ಪಟ್ಟ ಒಲಿದಂತಾಗಿದೆ.
ಇದುವರೆಗೆ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ನಾಲ್ವರು ಕನ್ನಡಿಗರು ವಿವಿಧ ತಂಡಗಳನ್ನು ಮುನ್ನಡೆಸಿದ್ದರು. ಅದರಲ್ಲೂ ಆರ್ಸಿಬಿ ತಂಡಕ್ಕೆ ಈ ಹಿಂದೆ ಇಬ್ಬರು ಕನ್ನಡಿಗರು ಸಾರಥ್ಯವಹಿಸಿದ್ದರು. ರಾಹುಲ್ ದ್ರಾವಿಡ್ ಆರ್ಸಿಬಿ ತಂಡವನ್ನು ಚೊಚ್ಚಲ ಬಾರಿ ಮುನ್ನಡೆಸಿದರೆ, ಆ ಬಳಿಕ ಅನಿಲ್ ಕುಂಬ್ಳೆ ಸಾರಥಿಯಾಗಿದ್ದರು. ಇದಾದ ಬಳಿಕ ದ್ರಾವಿಡ್ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಕ್ಯಾಪ್ಟನ್ ಆಗಿದ್ದರು. ಅಷ್ಟೇ ಅಲ್ಲದೆ 2017 ರಲ್ಲಿ ಕರುಣ್ ನಾಯರ್ ಡೆಲ್ಲಿ ಡೇರ್ ಡೇವಿಲ್ಸ್ ತಂಡವನ್ನು ಮುನ್ನಡೆಸಿದ್ದರು. ಇದಾದ ಬಳಿಕ ಕೆಎಲ್ ರಾಹುಲ್ ಪಂಜಾಬ್ ತಂಡದ ನಾಯಕರಾಗಿ ಆಯ್ಕೆಯಾಗಿದ್ದರು.
Mayank Agarwal will be leading Punjab Kings in Rahul’s absence ❤️
Wishing you all the luck, @mayankcricket 🤞#SaddaPunjab #PunjabKings #IPL2021 @PunjabKingsIPL pic.twitter.com/MtYupha8HB
— Preity G Zinta (@realpreityzinta) May 2, 2021
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ