RR vs SRH- ರಾಯಲ್ಸ್​ಗೆ ಶಾಕ್ ಕೊಟ್ಟ ಸನ್​ರೈಸರ್ಸ್; 7 ವಿಕೆಟ್​ಗಳಿಂದ ಜಯಭೇರಿ

IPL 2021, 40th Match, RR vs SRH- ರಾಯಲ್ಸ್ ವಿರುದ್ಧ ಗೆಲ್ಲಲು 165 ರನ್ ಗುರಿ ಪಡೆದ ಸನ್ ರೈಸರ್ಸ್ ಹೈದರಾಬಾದ್ ಇನ್ನೂ ಒಂದೂವರೆ ಓವರ್ ಬಾಕಿ ಇರುವಂತೆ 7 ವಿಕೆಟ್​ಗಳಿಂದ ಜಯಭೇರಿ ಭಾರಿಸಿತು. ಈ ಐಪಿಎಲ್ನಲ್ಲಿ ಇದು ಹೈದರಾಬಾದ್​ಗೆ ಸಿಕ್ಕ ಎರಡನೇ ಗೆಲುವಾಯಿತು.

ಜೇಸನ್ ರಾಯ್

ಜೇಸನ್ ರಾಯ್

 • Cricketnext
 • Last Updated :
 • Share this:
  ದುಬೈ, ಸೆ. 27: ಗೆಲ್ಲಲು ರಾಜಸ್ಥಾನ್ ರಾಯಲ್ಸ್ ಒಡ್ಡಿದ 165 ರನ್​ಗಳ ಸವಾಲನ್ನು ಸನ್ ರೈಸರ್ಸ್ ಹೈದರಾಬಾದ್ ಯಶಸ್ವಿಯಾಗಿ ಬೆನ್ನತ್ತಿದೆ. ಜೇಸನ್ ರಾಯ್ ಮತ್ತು ನಾಯಕ ಕೇನ್ ವಿಲಿಯಮ್ಸನ್ ಅವರು ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿ ಹೈದರಾಬಾದ್​ಗೆ ಬಹಳ ಪಂದ್ಯಗಳ ನಂತರ ಗೆಲುವಿನ ರುಚಿ ತೋರಿಸಿದ್ದಾರೆ. 12 ಮತ್ತು 13ನೇ ಓವರ್​ನಲ್ಲಿ ಡಬಲ್ ವಿಕೆಟ್ ಪತನವಾದರೂ ಹೈದರಾಬಾದ್ ಗೆಲುವಿನ ಹಾದಿ ಸುಗಮವಾಗಿಯೇ ಸಾಗಿತು. ಜೇಸನ್ ರಾಯ್ ಅಮೋಘ 60 ರನ್ ಗಳಿಸಿ ಹೈದರಾಬಾದ್ ಚೇಸಿಂಗ್​ಗೆ ಬುನಾದಿ ಹಾಕಿದರು. ಬಳಿಕ ಕೇನ್ ವಿಲಿಯಮ್ಸನ್, ವೃದ್ಧಿಮಾನ್ ಸಾಹ ಮತ್ತು ಅಭಿಷೇಕ್ ಶರ್ಮಾ ತಂಡವನ್ನು ಗೆಲುವಿನ ದಡಕ್ಕೆ ಕೊಂಡೊಯ್ಯುವಲ್ಲಿ ಯಶಸ್ವಿಯಾಗಿದ್ದಾರೆ. ನಾಯಕ ಕೇನ್ ವಿಲಿಯಮ್ಸನ್ ಅಜೇಯ 51 ರನ್ ಗಳಿಸಿದರು. ಸನ್ ರೈಸರ್ಸ್ ತಂಡಕ್ಕೆ ಇದು ಈ ಬಾರಿಯ ಐಪಿಎಲ್​ನಲ್ಲಿ ಎರಡನೇ ಗೆಲುವಾಗಿದೆ. ಪ್ಲೇ ಆಫ್ ಪ್ರವೇಶದ ಸಾಧ್ಯತೆ ಇಲ್ಲದಿದ್ದರೂ ಹೈದರಾಬಾದ್​ಗೆ ಇದು ಮಾನ ಉಳಿಸಿಕೊಳ್ಳುವ ಅವಕಾಶವಾಗಿದೆ.

  ಇದಕ್ಕೂ ಮುನ್ನ ನಾಯಕ ಸಂಜು ಸ್ಯಾಮ್ಸನ್ ಅವರ ಅಮೋಘ ಬ್ಯಾಟಿಂಗ್ ಪ್ರದರ್ಶನದ ನೆರವಿನಿಂದ ರಾಜಸ್ಥಾನ್ ರಾಯಲ್ಸ್ ತಂಡ ಸನ್​ರೈಸರ್ಸ್ ಹೈದರಾಬಾದ್ ವಿರುದ್ದದ ಮಹತ್ವದ ಪಂದ್ಯದಲ್ಲಿ ಉತ್ತಮ ಮೊತ್ತ ಕಲೆಹಾಕುವಲ್ಲಿ ಯಶಸ್ವಿಯಾಗಿದೆ. ಹೈದರಾಬಾದ್ ತಂಡಕ್ಕೆ ಗೆಲ್ಲಲು ರಾಯಲ್ಸ್ 165 ರನ್​ಗಳ ಟಾರ್ಗೆಟ್ ನೀಡಿದೆ. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡ ಆರಂಭಿಕ ಆಘಾತ ಅನುಭವಿಸಿದರೂ ನಾಯಕ ಸಂಜು ಸ್ಯಾಮ್ಸನ್ ಮತ್ತು ಯಶಸ್ವಿ ಜೈಸ್ವಾಲ್ ಇಬ್ಬರೂ ಎರಡನೇ ವಿಕೆಟ್​ಗೆ 56 ರನ್ ಜೊತೆಯಾಟ ಆಡಿದರು. 2ನೇ ಓವರ್​​ನಲ್ಲಿದ್ದಾಗ ಕ್ರೀಸ್​ಗೆ ಬಂದ ಸಂಜು ಸ್ಯಾಮ್ಸನ್ 19 ಓವರ್ ಮುಗಿಯುವವರೆಗೂ ಇದ್ದು ತಂಡಕ್ಕೆ ಹೆಚ್ಚಿನ ಅಪಾಯವಾಗದಂತೆ ನೋಡಿಕೊಂಡರು. ಕೇವಲ 57 ಬಾಲ್​ನಲ್ಲಿ 82 ರನ್ ಗಳಿಸಿದ ಅವರ ಆಟದಿಂದಾಗಿ ರಾಯಲ್ಸ್ ತಂಡ 164 ರನ್ ಗಳಿಸಲು ಸಾಧ್ಯವಾಯಿತು.

  ಪ್ಲೇ ಆಫ್ ಪೈಪೋಟಿ ಕುತೂಹಲಕಾರಿ:

  ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಈ ಸೋಲು ಅದರ ಪ್ಲೇ ಆಫ್ ಕನಸಿಗೆ ಸ್ವಲ್ಪ ಹಿನ್ನಡೆ ತಂದಿದೆ. ರಾಯಲ್ಸ್ ತಂಡ ಇದೀಗ 10 ಪಂದ್ಯಗಳಿಂದ 8 ಅಂಕಗಳನ್ನ ಹೊಂದಿದೆ. ಇದೀಗ ಕೆಕೆಆರ್, ಪಂಜಾಬ್, ಮುಂಬೈ ಮತ್ತು ರಾಜಸ್ಥಾನ್ ತಂಡಗಳು ಸಮಾನ ಸ್ಥಿತಿಯಲ್ಲಿವೆ. ಚೆನ್ನೈ ಮತ್ತು ಡೆಲ್ಲಿ ತಂಡಗಳ ಪ್ಲೇ ಆಫ್ ಪ್ರವೇಶ ಬಹುತೇಕ ಖಚಿತಗೊಂಡಿದೆ. ಆರ್​​ಸಿಬಿ ತಂಡ 12 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿ ಭದ್ರವಾಗಿ ಕೂತಿದೆ. ಈಗ ನಾಲ್ಕು ತಂಡಗಳು ತಲಾ 8 ಅಂಕಗಳನ್ನ ಹೊಂದಿರುವುದು ಮುಂದಿನ ಪ್ರತಿಯೊಂದು ಪಂದ್ಯವೂ ನಿರ್ಣಾಯಕವಾಗುವಂತೆ ಮಾಡಿವೆ.

  ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಬಹಳ ಮಹತ್ವದ್ದಾದ ಇವತ್ತಿನ 40ನೇ ಐಪಿಎಲ್ ಪಮದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಸವಾಲೊಡ್ಡಿದೆ. ಎರಡೂ ತಂಡಗಳಲ್ಲಿ ಇವತ್ತಿ ಪಂದ್ಯಕ್ಕೆ ದೊಡ್ಡ ಬದಲಾವಣೆಗಳನ್ನ ಮಾಡಲಾಗಿದೆ. ಪಂಜಾಬ್ ಪಂದ್ಯದ ಹೀರೋ ಆಗಿದ್ದ ರಾಯಲ್ಸ್ ಬೌಲರ್ ಕಾರ್ತಿಕ್ ತ್ಯಾಗಿ ಅವರು ಗಾಯದ ಕಾರಣ ಅಲಭ್ಯರಿದ್ಧಾರೆ. ಅವರೂ ಸೇರಿ ರಾಯಲ್ಸ್ ತಂಡದಲ್ಲಿ ಮೂರು ಬದಲಾವಣೆಗಳಾಗಿವೆ. ಸನ್ ರೈಸರ್ಸ್ ಹೈದರಾಬಾದ್ ತಂಡದಲ್ಲಿ ಮನೀಶ್ ಪಾಂಡೆ, ಡೇವಿಡ್ ವಾರ್ನರ್, ಕೇದಾರ್ ಜಾಧವ್ ಮತ್ತು ಖಲೀಲ್ ಅಹ್ಮದ್ ಅವರಿಗೆ ಇವತ್ತು ಅವಕಾಶ ನಿರಾಕರಿಸಲಾಗಿದೆ.

  ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಆದ ಬದಲಾವಣೆ: ಕಾರ್ತಿಕ್ ತ್ಯಾಗಿ, ತಬ್ರೇಜ್ ಶಮ್ಸಿ ಮತ್ತು ಡೇವಿಡ್ ಮಿಲ್ಲರ್ ಬದಲು ಕ್ರಿಸ್ ಮಾರಿಸ್, ಜೈದೇವ್ ಉನಾದ್ಕತ್, ಎವಿನ್ ಲೆವಿಸ್ ಆಗಮನ.

  ಸನ್ ರೈಸರ್ಸ್ ಹೈದರಾಬಾದ್ ತಂಡದಲ್ಲಿ ಆದ ಬದಲಾವಣೆ: ಡೇವಿಡ್ ವಾರ್ನರ್, ಮನೀಶ್ ಪಾಂಡೆ, ಕೇದಾರ್ ಜಾಧವ್, ಖಲೀಲ್ ಅಹ್ಮದ್ ಬದಲು ಜೇಸನ್ ರಾಯ್, ಅಭಿಷೇಕ್ ಶರ್ಮಾ, ಪ್ರಿಯಂ ಗರ್ಗ್ ಮತ್ತು ಸಿದ್ಧಾರ್ಥ್ ಕೌಲ್​ಗೆ ಅವಕಾಶ.
  POINTS TABLE:
  ರಾಜಸ್ಥಾನ್ ರಾಯಲ್ಸ್ ತಂಡ: ಎವಿನ್ ಲೆವಿಸ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್, ಲಿಯಾಮ್ ಲಿವಿಂಗ್​ಸ್ಟೋನ್, ಮಹಿಪಾಲ್ ಲಮ್ರೋರ್, ರಿಯಾನ್ ಪರಾಗ್, ರಾಹುಲ್ ತೆವಾಟಿಯಾ, ಕ್ರಿಸ್ ಮಾರಿಸ್, ಚೇತನ್ ಸಕಾರಿಯಾ, ಜಯದೇವ್ ಉನಾದ್ಕಟ್, ಮುಸ್ತಾಫಿಜುರ್ ರಹಮಾನ್.

  ಸನ್​ರೈಸರ್ಸ್ ಹೈದರಾಬಾದ್ ತಂಡ: ಜೇಸನ್ ರಾಯ್, ವೃದ್ಧಿಮಾನ್ ಸಾಹ, ಕೇನ್ ವಿಲಿಯಮ್ಸನ್, ಪ್ರಿಯಂ ಗರ್ಗ್, ಅಭಿಷೇಕ್ ಶರ್ಮಾ, ಅಬ್ದುಲ್ ಸಮದ್, ಜೇಸನ್ ಹೋಲ್ಡರ್, ರಷೀದ್ ಖಾನ್, ಭುವನೇಶ್ವರ್ ಕುಮಾರ್, ಸಿದ್ಧಾರ್ಥ್ ಕೌಲ್, ಸಂದೀಪ್ ಶರ್ಮಾ.

  ಇದನ್ನೂ ಓದಿ: ಕ್ರಿಕೆಟ್​ಗೆ ವಿದಾಯ ಹೇಳುವ ಮುನ್ನ ಕೊನೆ ಆಸೆ ತೋಡಿಕೊಂಡ ದೈತ್ಯ ವೇಗಿ ಝೂಲನ್ ಗೋಸ್ವಾಮಿ

  ಸ್ಕೋರು ವಿವರ:

  ರಾಜಸ್ಥಾನ್ ರಾಯಲ್ಸ್ ತಂಡ 20 ಓವರ್ 164/5
  (ಸಂಜು ಸ್ಯಾಮ್ಸನ್ 82, ಯಶಸ್ವಿ ಜೈಸ್ವಾಲ್ 36, ಮಹಿಪಾಲ್ ಲೊಮ್ರೋರ್ ಅಜೇಯ 29 ರನ್- ಸಿದ್ಧಾರ್ಥ್ ಕೌಲ್ 36/2)

  ಸನ್​ರೈಸರ್ಸ್ ಹೈದರಾಬಾದ್ 16 ಓವರ್ 140/3
  (ಜೇಸನ್ ರಾಯ್ 60, ಕೇನ್ ವಿಲಿಯಮ್ಸನ್ ಅಜೇಯ 36, ವೃದ್ದಿಮಾನ್ ಸಾಹ 18 ರನ್)
  Published by:Vijayasarthy SN
  First published: