CSK vs KKR| ಅಗ್ರಸ್ಥಾನಕ್ಕೇರುವ ನಿರೀಕ್ಷೆಯಲ್ಲಿ ಚೆನ್ನೈ ಕಿಂಗ್ಸ್​, ಮತ್ತೊಂದು ಗೆಲುವಿಗಾಗಿ ಕೆಕೆಆರ್ ಕಾದಾಟ

ಎರಡು ಬಲಿಷ್ಠ ತಂಡಗಳು ಮುಖಾಮುಖಿಯಾಗುತ್ತಿದ್ದು, ಇಂದಿನ ಪಂದ್ಯದಲ್ಲಿ ಗೆಲುವು ಯಾರ ಪಾಲಾಗಲಿದೆ ಎಂಬ ಪ್ರಶ್ನೆಗೆ ಉತ್ತರಿಸುವುದು ಅಷ್ಟು ಸುಲಭವಲ್ಲ. ಇದೇ ಕಾರಣಕ್ಕೆ ಇಂದಿನ ಪಂದ್ಯ ಸಾಕಷ್ಟು ಕುತೂಹಲ ಮೂಡಿಸಿರುವುದೂ ಸಳ್ಳಲ್ಲ.

ಚೆನ್ನೈ ಸೂಪರ್ ಕಿಂಗ್ಸ್​-ಇಯಾನ್ ಮಾರ್ಗನ್.

ಚೆನ್ನೈ ಸೂಪರ್ ಕಿಂಗ್ಸ್​-ಇಯಾನ್ ಮಾರ್ಗನ್.

 • Share this:
  ಆರಂಭದಿಂದಲೂ ಗೆಲುವಿನ ಲಯದಲ್ಲಿರುವ ಚೆನ್ನೈ ಸೂಪರ್​ ಕಿಂಗ್ಸ್​ (Chennai Super Kings) ಮತ್ತು ಐಪಿಎಲ್​ ದ್ವಿತಿಯಾರ್ಧದಲ್ಲಿ ಗೆಲುವಿನ ದಾರಿ ಹಿಡಿದಿರುವ ಕೋಲ್ಕತ್ತಾ ನೈಟ್​ ರೈಡರ್ಸ್ (Kolkata Night Riders)​ ವಿರುದ್ಧ ಇಂದು ಅಬುಧಾಬಿಯಲ್ಲಿ ಮಹತ್ವದ ಪಂದ್ಯ ನಡೆಯಲಿದೆ. 9 ಪಂದ್ಯಗಳಲ್ಲಿ 7 ಗೆಲುವಿನೊಂದಿಗೆ 14 ಅಂಕಗಳನ್ನು ಗಳಿಸಿರುವ ಚೆನ್ನೈ ಎರಡನೇ ಸ್ಥಾನದಲ್ಲಿದ್ದರೆ, 9 ಪಂದ್ಯಗಳಲ್ಲಿ 4 ಗೆಲುವುಗಳೊಂದಿಗೆ 8 ಅಂಗಳನ್ನು ಪಡೆದು ನಾಲ್ಕನೇ ಸ್ಥಾನದಲ್ಲಿದೆ. ಈ ಪಂದ್ಯದಲ್ಲಿ ಗೆದ್ದರೆ ಚೆನ್ನೈ ಅಗ್ರಸ್ಥಾನಕ್ಕೆ ಏರುವ ಸಾಧ್ಯತೆ ಇದೆ. ಆದರೆ, ಪ್ಲೇ ಆಫ್​ನಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿಕೊಳ್ಳಲು ಕೋಲ್ಕತ್ತಾ ನೈಟ್​ ರೈಡರ್ಸ್​ಗೆ ಈ ಪಂದ್ಯದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಅಲ್ಲದೆ, ಎರಡೂ ತಂಡಗಳ ಬ್ಯಾಟಿಂಗ್ ಮತ್ತು ಬೌಲಿಂಗ್ ಬಲಿಷ್ಠವಾಗಿದ್ದು, ಯಾವ ತಂಡ ಗೆಲುವು ಸಾಧಿಸಲಿದೆ? ಎಂದು ಊಹಿಸುವುದೂ ಸಹ ಕಷ್ಟವಾಗಿದೆ. ಹೀಗಾಗಿ ಇಂದಿನ ಪಂದ್ಯ ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ರಸದೌತಣ ಎಂದರೆ ತಪ್ಪಾಗಲಾರದು.

  ಆತ್ಮವಿಶ್ವಾಸದಲ್ಲಿ ಧೋನಿ ಪಡೆ:

  ಸತತ ಗೆಲುವಿನ ನಾಗಾಲೋಟದಲ್ಲಿರುವ ಮಹೇಂದ್ರ ಸಿಂಗ್ ಧೋನಿ ಪಡೆ ಇಂದಿನ ಪಂದ್ಯವನ್ನೂ ಗೆಲ್ಲುವ ಆತ್ಮವಿಶ್ವಾಸದಲ್ಲಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗದಲ್ಲಿ ತಂಡ ಬಲಿಷ್ಠವಾಗಿದೆ. ಆರಂಭಿಕರಾಗಿ ರಿತುರಾಜ್ ಗಾಯಕ್ವಾಡ್ ಮತ್ತು ಪಾಫ್ ಡುಪ್ಲೆಸಿ ಭರ್ಜರಿ ಆರಂಭ ನೀಡುತ್ತಿದ್ದರೆ, ಮಧ್ಯಮ ಕ್ರಮಾಂಕದಲ್ಲಿ ಅಂಬಟಿ ರಾಯುಡು, ಸುರೇಶ್ ರೈನಾ, ಎಂಎಸ್ ಧೋನಿ, ರವೀಂದ್ರ ಜಡೇಜಾ, ಡ್ವೇನ್ ಬ್ರಾವೋ ಸೇರಿದಂತೆ ಬಲಿಷ್ಠ ಬ್ಯಾಟಿಂಗ್ ಲೈನಪ್ ಅನ್ನು ಸಿಎಸ್​ಕೆ ಹೊಂದಿದೆ.

  ಬೌಲಿಂಗ್ ವಿಭಾಗದಲ್ಲಿ ದೀಪಕ್ ಚಾಹರ್, ಶರ್ದೂಲ್ ಠಾಕೂರ್, ಡ್ವೇನ್ ಬ್ರಾವೋ, ಜೋಸ್ ಹೇಜಲ್​ವುಡ್, ರವೀಂದ್ರ ಜಡೇಜ ಸೇರಿದಂತೆ ಅತ್ಯತ್ತಮ ಬೌಲಿಂಗ್ ಆಯ್ಕೆಯನ್ನೂ ಸಿಎಸ್​ಕೆ ಹೊಂದಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಸಿಎಸ್​ಕೆ ತಂಡವೇ ಫೇವರಿಟ್ ಎನ್ನಲಾಗುತ್ತಿದೆ.

  ಗೆಲ್ಲಲೇಬೇಕಾದ ಒತ್ತಡದಲ್ಲಿ ಕೆಕೆಆರ್​; 

  ಕೆಕೆಆರ್ ಪಾಲಿಗೆ ಇಂದಿನ ಪಂದ್ಯ ಮಹತ್ವವಾದದ್ದು. ಪ್ಲೇ ಆಫ್​ನಲ್ಲಿ ತನ್ನ ಸ್ಥಾನವನ್ನು ಭದ್ರ ಪಡಿಸಿಕೊಳ್ಳಲು ಕೆಕೆಆರ್​ಗೆ ಈ ಗೆಲುವು ಅಗತ್ಯವಾಗಿದೆ. ಅಲ್ಲದೆ, ತಂಡವೂ ಬಲಿಷ್ಠವಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಆರಂಭಿಕರಾದ ವೆಂಕಟೇಶ್ ಅಯ್ಯರ್ ಮತ್ತು ಶುಭ್ಮನ್ ಗಿಲ್ ತಂಡಕ್ಕೆ ಅಗತ್ಯವಾದ ಆರಂಭವನ್ನು ಒದಗಿಸುವಲ್ಲಿ ಇತ್ತೀಚೆಗೆ ಸಫಲರಾಗಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ, ತ್ರಿಪಾಠಿ, ಇಯಾನ್ ಮಾರ್ಗನ್, ದಿನೇಶ್ ಕಾರ್ತಿಕ್, ಆ್ಯಂಡ್ರೆ ರಸೆಲ್ ಸೇರಿದಂತೆ ಹೊಡಿ ಬಡಿ ಆಟಗಾರರ ದೊಡ್ಡ ದಂಡೆ ಕೆಕೆಆರ್​ ತಂಡದಲ್ಲಿದೆ.

  ಇದನ್ನೂ ಓದಿ: RCB vs Mumbai| ವಿರಾಟ್ ಕೊಹ್ಲಿ- ರೋಹಿತ್ ಶರ್ಮಾ ಗೆಲುವಿಗಾಗಿ ಕಾದಾಟ; ಯಾರ ಪಾಲಾಗಲಿದೆ ವಿಜಯ?

  ಇನ್ನೂ ಬೌಲಿಂಗ್ ವಿಭಾಗದಲ್ಲಿರುವ ವರುಣ್ ಚಕ್ರವರ್ತಿ ಮತ್ತು ಸುನೀಲ್ ನಾರಾಯಣ್ ಮಿಸ್ಟ್ರಿ ಬೌಲಿಂಗ್ ತಂಡಕ್ಕಿರುವ ದೊಡ್ಡ ಪ್ಲಸ್ ಪಾಯಿಂಟ್. ಲೂಕಿ ಫರ್ಗ್ಯೂಸನ್ ವೇಗ ಎದುರಾಳಿ ಬ್ಯಾಟ್ಸ್​ಮನ್​ಗಳನ್ನು ತಬ್ಬಿಬ್ಬುಗೊಳಿಸಿದರೂ ಅಚ್ಚರಿ ಇಲ್ಲ. ಹೀಗಾಗಿ ಎರಡು ಬಲಿಷ್ಠ ತಂಡಗಳು ಮುಖಾಮುಖಿಯಾಗುತ್ತಿದ್ದು, ಇಂದಿನ ಪಂದ್ಯದಲ್ಲಿ ಗೆಲುವು ಯಾರ ಪಾಲಾಗಲಿದೆ ಎಂಬ ಪ್ರಶ್ನೆಗೆ ಉತ್ತರಿಸುವುದು ಅಷ್ಟು ಸುಲಭವಲ್ಲ. ಇದೇ ಕಾರಣಕ್ಕೆ ಇಂದಿನ ಪಂದ್ಯ ಸಾಕಷ್ಟು ಕುತೂಹಲ ಮೂಡಿಸಿರುವುದೂ ಸಳ್ಳಲ್ಲ.
  Published by:MAshok Kumar
  First published: