HOME » NEWS » Ipl » IPL 2021 MATCH 3 SRH V KKR HEAD TO HEAD RECORD HIGHEST RUN GETTERS TOP WICKET TAKERS ZP

IPL 2021, KKR vs SRH: ಕೊಲ್ಕತ್ತಾ vs ಹೈದರಾಬಾದ್: ಅಂಕಿ ಅಂಶಗಳ ಪ್ರಕಾರ ಯಾರು ಬಲಿಷ್ಠ?

ಬೌಲಿಂಗ್ ವಿಭಾಗವನ್ನು ನೋಡುವುದಾದರೆ ಎಸ್​ಆರ್​ಹೆಚ್ ಬಲಿಷ್ಠವಾಗಿದೆ ಎಂದೇ ಹೇಳಬಹುದು. ಏಕೆಂದರೆ ಕಳೆದ ಸೀಸನ್​ನಲ್ಲಿ ರಶೀದ್ ಖಾನ್ 20 ವಿಕೆಟ್ ಉರುಳಿಸಿದರೆ, ನಟರಾಜನ್ 16 ವಿಕೆಟ್ ಪಡೆದಿದ್ದರು.

news18-kannada
Updated:April 11, 2021, 5:41 PM IST
IPL 2021, KKR vs SRH: ಕೊಲ್ಕತ್ತಾ vs ಹೈದರಾಬಾದ್: ಅಂಕಿ ಅಂಶಗಳ ಪ್ರಕಾರ ಯಾರು ಬಲಿಷ್ಠ?
SRH vs KKR
  • Share this:
ಐಪಿಎಲ್ 2021ರ 3ನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ಮುಖಾಮುಖಿಯಾಗಲಿದೆ. ಎರಡೂ ತಂಡಗಳು ಬಲಿಷ್ಠ ಬ್ಯಾಟಿಂಗ್ ವಿಭಾಗವನ್ನು ಹೊಂದಿದ್ದು, ಹೀಗಾಗಿ ಇಂದಿನ ಪಂದ್ಯದಲ್ಲಿ ರೋಚಕ ಹೋರಾಟವನ್ನು ನಿರೀಕ್ಷಿಸಬಹುದಾಗಿದೆ. ಆದರೆ ಈ ಬಾರಿ ಎದುರುಗೊಳ್ಳುತ್ತಿರುವುದು ಚೆನ್ನೈನ ಚಿದಂಬರಂ ಮೈದಾನದಲ್ಲಿ ಎಂಬುದು ವಿಶೇಷ. ಈ ಹಿಂದಿನಂತೆ ಈ ಬಾರಿ ಐಪಿಎಲ್​ನಲ್ಲಿ ಯಾವುದೇ ತಂಡಗಳಿಗೆ ಹೋಮ್​ ಗ್ರೌಂಡ್ ಇಲ್ಲ. ಹಾಗಾಗಿ ತಟಸ್ಥ ಮೈದಾನದಲ್ಲಿ ಮೊದಲ ಗೆಲುವು ಯಾರಿಗೆ ದಕ್ಕಲಿದೆ ಎಂಬ ಕುತೂಹಲದಲ್ಲಿದ್ದಾರೆ ಎರಡೂ ತಂಡಗಳ ಅಭಿಮಾನಿಗಳು.

ಇನ್ನು ಎರಡು ತಂಡಗಳ ಅಂಕಿ ಅಂಶಗಳನ್ನು ನೋಡುವುದಾದರೆ, ಉಭಯ ಟೀಮ್ 19 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಅದರಲ್ಲಿ ಕೆಕೆಆರ್ 12 ಬಾರಿ ಜಯಗಳಿಸಿದ್ರೆ, ಸನ್​ರೈಸರ್ಸ್​ 7 ಬಾರಿ ವಿಜಯ ಸಾಧಿಸಿತ್ತು. ಇಲ್ಲಿ ಕೆಕೆಆರ್ ಮೇಲುಗೈ ಸಾಧಿಸಿರುವುದು ಸ್ಪಷ್ಟ. ಹಾಗೆಯೇ ಕಳೆದ ಸೀಸನ್​ ಐಪಿಎಲ್​ನಲ್ಲಿ ಕೆಕೆಆರ್ ಎರಡೂ ಪಂದ್ಯಗಳನ್ನು ಗೆದ್ದುಕೊಂಡಿತ್ತು ಎಂಬುದು ವಿಶೇಷ. ಹೀಗಾಗಿ ಅದೇ ಆತ್ಮ ವಿಶ್ವಾಸದಲ್ಲಿ ಇಂದು ಕೂಡ ಮೋರ್ಗನ್ ಪಡೆ ಕಣಕ್ಕಿಳಿಯಲಿದೆ.

ಇನ್ನು ಕೆಕೆಆರ್ ವಿರುದ್ಧ ಸನ್​ರೈಸರ್ಸ್ ಹೈದರಾಬಾದ್ ನಾಯಕ ಡೇವಿಡ್​ ವಾರ್ನರ್ ಉತ್ತಮ ಬ್ಯಾಟಿಂಗ್ ಸರಾಸರಿ ಹೊಂದಿದ್ದು, ಒಂದು ಭರ್ಜರಿ ಶತಕದೊಂದಿಗೆ 616 ರನ್​ ಕಲೆಹಾಕಿದ್ದಾರೆ. ಇನ್ನು ಎಸ್​ಆರ್​ಹೆಚ್ ವಿರುದ್ಧ ಕೆಕೆಆರ್​ ಪರ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದು ರಾಬಿನ್ ಉತ್ತಪ್ಪ. ಹೈದರಾಬಾದ್ ವಿರುದ್ಧದ ಪಂದ್ಯಗಳಿಂದ 426 ರನ್​ ಬಾರಿಸಿರುವ ಉತ್ತಪ್ಪ ಸದ್ಯ ಕೆಕೆಆರ್ ತಂಡದಲ್ಲಿಲ್ಲ. ಬದಲಾಗಿ ಚೆನ್ನೈ ಸೂಪರ್ ಕಿಂಗ್ಸ್​ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.

ಹಾಗೆಯೇ ಬೌಲಿಂಗ್ ವಿಭಾಗದಲ್ಲಿ ಭುವನೇಶ್ವರ್ ಕುಮಾರ್ ಕೆಕೆಆರ್​ ವಿರುದ್ಧ 19 ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಆದರೆ ಎಸ್​ಆರ್​ಹೆಚ್ ಪರ ಯಶಸ್ವಿಯಾದ ಬೌಲರ್ ಸದ್ಯ ಕೆಕೆಆರ್​ ತಂಡದಲ್ಲಿಲ್ಲ. ಈ ಹಿಂದೆ ಕೊಲ್ಕತ್ತಾ ತಂಡವನ್ನು ಪ್ರತಿನಿಧಿಸಿದ್ದ ಉಮೇಶ್ ಯಾದವ್, ಸನ್​ರೈಸರ್ಸ್ ವಿರುದ್ಧ 11 ವಿಕೆಟ್ ಪಡೆದಿದ್ದರು. ಹಾಗೆಯೇ ಎಸ್​ಆರ್​ಹೆಚ್ ವಿರುದ್ಧ 10 ವಿಕೆಟ್ ಪಡೆದಿರುವ ಕೆಕೆಆರ್​ ಸ್ಪಿನ್ನರ್ ಪ್ರಸ್ತುತ ತಂಡದಲ್ಲಿದ್ದಾರೆ.

ಯುಎಇನಲ್ಲಿ ನಡೆದ ಐಪಿಎಲ್​ನಲ್ಲಿ ಡೇವಿಡ್ ವಾರ್ನರ್ ಉತ್ತಮ ಪ್ರದರ್ಶನ ನೀಡಿದ್ದರು. 548 ರನ್​ ಕಲೆಹಾಕಿ ಎಸ್​ಆರ್​ಹೆಚ್​ ಪರ ಗರಿಷ್ಠ ರನ್​ಗಳಿಸಿದ ಬ್ಯಾಟ್ಸ್​ಮನ್ ಎನಿಸಿಕೊಂಡಿದ್ದರು. ಇತ್ತ ಕೆಕೆಆರ್​ ಪರ 440 ರನ್​ಗಳಿಸಿದ್ದ ಶುಭ್​ಮನ್ ಗಿಲ್ ಗರಿಷ್ಠ ರನ್ ಕಲೆಹಾಕಿದ ಬ್ಯಾಟ್ಸ್​ಮನ್ ಆಗಿ ಹೊರಹೊಮ್ಮಿದ್ದರು. ಹಾಗೆಯೇ ಮನೀಷ್ ಪಾಂಡೆ ಕೂಡ 425 ರನ್​ ಬಾರಿಸುವ ಮೂಲಕ ಕಳೆದ ಸೀಸನ್​ನಲ್ಲಿ ಮಿಂಚಿದ್ದರು. ಆದರೆ ಕೆಕೆಆರ್ ತಂಡದ ಬ್ಯಾಟ್ಸ್​ಮನ್​ಗಳು ಕಳೆದ ಸೀಸನ್​ನಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರು.

ಇನ್ನು ಬೌಲಿಂಗ್ ವಿಭಾಗವನ್ನು ನೋಡುವುದಾದರೆ ಎಸ್​ಆರ್​ಹೆಚ್ ಬಲಿಷ್ಠವಾಗಿದೆ ಎಂದೇ ಹೇಳಬಹುದು. ಏಕೆಂದರೆ ಕಳೆದ ಸೀಸನ್​ನಲ್ಲಿ ರಶೀದ್ ಖಾನ್ 20 ವಿಕೆಟ್ ಉರುಳಿಸಿದರೆ, ನಟರಾಜನ್ 16 ವಿಕೆಟ್ ಪಡೆದಿದ್ದರು. ಹಾಗೆಯೇ ಕಳೆದ ಸೀಸನ್​ನಲ್ಲಿ ಗಾಯಗೊಂಡಿದ್ದ ಭುವನೇಶ್ವರ್ ಕುಮಾರ್ ಈ ಬಾರಿ ತಂಡದಲ್ಲಿರುವುದು ಎಸ್​ಆರ್​ಹೆಚ್​ ತಂಡದ ಬೌಲಿಂಗ್ ವಿಭಾಗವನ್ನು ಮತ್ತಷ್ಟು ಬಲಗೊಳಿಸಿದೆ. ಆದರೆ ಅತ್ತ ಕೆಕೆಆರ್ ಪರ ಕಳೆದ ಸೀಸನ್​ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದಿರುವುದು ವರುಣ್ ಚಕ್ರವರ್ತಿ (17). ವರುಣ್ ಹೊರತಾಗಿ ಕೆಕೆಆರ್​ ಬೌಲರ್​ಗಳಿಂದ ಉತ್ತಮ ಪ್ರದರ್ಶನ ಮೂಡಿಬಂದಿರಲಿಲ್ಲ.
ಒಟ್ಟಾರೆ ಅಂಕಿ ಅಂಶಗಳನ್ನು ನೋಡುವುದಾದರೆ ಸನ್​ರೈಸರ್ಸ್ ಹೈದರಾಬಾದ್ ತಂಡವು ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕಿಂತ ಬಲಿಷ್ಠ ಎನ್ನಬಹುದು. ಆದರೆ ಉಭಯ ತಂಡಗಳು ಇದೇ ಮೊದಲ ಬಾರಿ ಚೆನ್ನೈ ಪಿಚ್​​ನಲ್ಲಿ ಐಪಿಎಲ್​ ಅಭಿಯಾನವನ್ನು ಆರಂಭಿಸುತ್ತಿದ್ದು, ಹೀಗಾಗಿ ಇದು ಕೂಡ ಪರಿಗಣನೆಗೆ ಬರಲಿದೆ.

ಕೆಕೆಆರ್ ಸಂಪೂರ್ಣ ಬಳಗ : ಇಯಾನ್ ಮೊರ್ಗನ್ (ನಾಯಕ), ದಿನೇಶ್ ಕಾರ್ತಿಕ್, ಶುಭ್‌ಮನ್ ಗಿಲ್, ನಿತೀಶ್ ರಾಣಾ, ಟಿಮ್ ಸೀಫರ್ಟ್, ರಿಂಕು ಸಿಂಗ್, ಆಯಂಡ್ರೆ ರಸ್ಸೆಲ್, ಸುನೀಲ್ ನರೈನ್, ಕುಲದೀಪ್ ಯಾದವ್, ಶಿವಂ ಮಾವಿ, ವರುಣ್ ಚಕ್ರವರ್ತಿ, ಶಕೀಬ್ ಅಲ್ ಹಸನ್, ಶೆಲ್ಡಾನ್ ಜಾಕ್ಸನ್, ವೈಭವ್ ಅರೋರಾ, ಹರ್ಭಜನ್ ಸಿಂಗ್, ಕರುಣ್ ನಾಯರ್, ಬೆನ್ ಕಟ್ಟಿಂಗ್, ವೆಂಕಟೇಶ್ ಅಯ್ಯರ್, ಪವನ್ ನೇಗಿ. ಲ್ಯುಕಿ ಫರ್ಗುಸನ್, ಪ್ಯಾಟ್ ಕಮಿನ್ಸ್, ಕಮಲೇಶ್ ನಾಗರಕೋಟಿ, ಸಂದೀಪ್ ವಾರಿಯರ್, ಪ್ರಸಿದ್ಧ ಕೃಷ್ಣ, ರಾಹುಲ್ ತ್ರಿಪಾಠಿ.

ಎಸ್‌ಆರ್‌ಎಚ್ ಸಂಪೂರ್ಣ ಬಳಗ : ಡೇವಿಡ್ ವಾರ್ನರ್ (ನಾಯಕ), ಕೇನ್ ವಿಲಿಯಮ್ಸನ್, ವಿರಾಟ್ ಸಿಂಗ್, ಮನೀಶ್ ಪಾಂಡೆ, ಪ್ರಿಯಮ್ ಗರ್ಗ್, ವೃದ್ಧಿಮಾನ್ ಸಾಹ, ಜಾನಿ ಬೈರ್‌ಸ್ಟೋವ್, ಜೇಸನ್ ರಾಯ್, ಜೆ .ಸುಚಿತ್, ಜೇಸನ್ ಹೋಲ್ಡರ್, ಅಭಿಷೇಕ್ ಶರ್ಮಾ, ಮುಜೀಬ್ ಉರ್ ರಹ್ಮಾನ್, ಅಬ್ದುಲ್ ಸಮದ್, ಭುವನೇಶ್ವರ್ ಕುಮಾರ್, ರಶೀದ್ ಖಾನ್, ಟಿ.ನಟರಾಜನ್, ಸಂದೀಪ್ ಶರ್ಮಾ, ಖಲೀಲ್ ಅಹ್ಮದ್, ಸಿದ್ಧಾರ್ಥ್ ಕೌಲ್, ಬಾಸಿಲ್ ಥಾಂಪಿ, ಶಹಬಾಝ್ ನದೀಮ್, ಶ್ರೀವತ್ಸ ಗೋಸ್ವಾಮಿ, ವಿಜಯ್ ಶಂಕರ್, ಮುಹಮ್ಮದ್ ನಬಿ, ಕೇದರ್ ಜಾಧವ್.
Published by: zahir
First published: April 11, 2021, 4:52 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories