• Home
 • »
 • News
 • »
 • ipl
 • »
 • PBKS vs RCB: ಅಂಕಿ ಅಂಶಗಳ ಪ್ರಕಾರ ಆರ್​ಸಿಬಿಗಿಂತ ಪಂಜಾಬ್ ಕಿಂಗ್ಸ್​ ತಂಡವೇ ಬಲಿಷ್ಠ..!

PBKS vs RCB: ಅಂಕಿ ಅಂಶಗಳ ಪ್ರಕಾರ ಆರ್​ಸಿಬಿಗಿಂತ ಪಂಜಾಬ್ ಕಿಂಗ್ಸ್​ ತಂಡವೇ ಬಲಿಷ್ಠ..!

PBKS vs RCB

PBKS vs RCB

ಎಬಿಡಿ ಪಂಜಾಬ್ ಕಿಂಗ್ಸ್ ವಿರುದ್ಧ ಇದುವರೆಗೆ 23 ಪಂದ್ಯಗಳಿಂದ 159.19 ಸ್ಟ್ರೈಕ್ ರೇಟ್​ನಲ್ಲಿ710 ರನ್ ಗಳಿಸಿದ್ದಾರೆ. ಅತ್ತ ಆರ್​ಸಿಬಿ ವಿರುದ್ದ ಬೆಸ್ಟ್ ಪರ್ಫಾಮೆನ್ಸ್ ನೀಡಿದ್ದು ಕೆಎಲ್ ರಾಹುಲ್. ರಾಹುಲ್ ಆರ್​ಸಿಬಿ ವಿರುದ್ದ ಇದುವರೆಗೆ 74.20 ಸ್ಟ್ರೈಕ್ ರೇಟ್​ನಲ್ಲಿ 371 ರನ್ ಗಳಿಸಿದ್ದಾರೆ.

ಮುಂದೆ ಓದಿ ...
 • Share this:

  ಪಂಜಾಬ್ ಕಿಂಗ್ಸ್ ವರ್ಸಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕದನಕ್ಕೆ ಅಹಮದಾಬಾದ್ ಮೈದಾನ ಸಜ್ಜಾಗಿ ನಿಂತಿದೆ. ಐಪಿಎಲ್​ನಲ್ಲಿ ಬಹುತೇಕ ಆರ್​ಸಿಬಿ ಅಭಿಮಾನಿಗಳ ಎರಡನೇ ಫೇವರೇಟ್ ತಂಡವೆಂದರೆ ಅದು ಪಂಜಾಬ್. ಹೀಗಾಗಿಯೇ ಗೆದ್ದರೂ ಸೋತರೂ ನಮ್ಮವರೇ ಎಂಬ ಭಾವನೆ ಎಲ್ಲರಲ್ಲಿದೆ. ಇಲ್ಲಿ ಆರ್​ಸಿಬಿ ಕರ್ನಾಟಕವನ್ನು ಪ್ರತಿನಿಧಿಸುತ್ತಿದ್ದರೆ, ಪಂಜಾಬ್ ತಂಡವನ್ನು ಕನ್ನಡಿಗ ಕೆಎಲ್ ರಾಹುಲ್ ಮುನ್ನಡೆಸುತ್ತಿದ್ದಾನೆ. ಇದಾಗ್ಯೂ ಅಂಕಪಟ್ಟಿಯಲ್ಲಿ ಲೆಕ್ಕಚಾರದಲ್ಲಿ ಆರ್​ಸಿಬಿ ಈ ಬಾರಿ ಗೆಲ್ಲಲೇಬೇಕು. ಏಕೆಂದರೆ ಪಂಜಾಬ್ ವಿರುದ್ದದ ಪಂದ್ಯದೊಂದಿಗೆ ಆರ್​ಸಿಬಿ ತಂಡದ ಐಪಿಎಲ್​ನ ಮೊದಲಾರ್ಧ ಮುಕ್ತಾಯವಾಗಲಿದೆ. ಹೀಗಾಗಿ ಪಾಯಿಂಟ್ ಟೇಬಲ್​ನಲ್ಲಿ ಅಗ್ರಸ್ಥಾನಕ್ಕೇರಲು ಪಂಜಾಬ್ ವಿರುದ್ದ ಗೆಲ್ಲಬೇಕು.


  ಆದರೆ ಆರ್​ಸಿಬಿಗೆ ಪಂಜಾಬ್ ವಿರುದ್ದ ಗೆಲುವು ಸುಲಭವಲ್ಲ ಎಂಬುದಕ್ಕೆ ಈ ಹಿಂದಿನ ಅಂಕಿ ಅಂಶಗಳೇ ಸಾಕ್ಷಿ. ಏಕೆಂದರೆ ಉಭಯ ತಂಡಗಳು ಇದುವರೆಗೆ 26 ಬಾರಿ ಮುಖಾಮುಖಿಯಾಗಿದೆ. ಅದರಲ್ಲಿ ಆರ್​ಸಿಬಿ ಗೆದ್ದಿರುವುದು ಕೇವಲ 12 ಬಾರಿ ಮಾತ್ರ. ಅಂದರೆ ಪಂಜಾಬ್ ಇತರೆ ತಂಡಗಳ ವಿರುದ್ದ ಸೋತರೂ ಆರ್​ಸಿಬಿ ವಿರುದ್ದ ಮಾತ್ರ ಗೆಲುವು ಸಾಧಿಸುತ್ತೆ. ಹೀಗಾಗಿಯೇ 26 ರಲ್ಲಿ ಆರ್​ಸಿಬಿ ವಿರುದ್ದ ಪಂಜಾಬ್ 14 ಬಾರಿ ಜಯ ಸಾಧಿಸಿದೆ.


  ಇನ್ನು ಕಳೆದ ಸೀಸನ್​ನಲ್ಲೂ ಪಂಜಾಬ್ ಆರ್​ಸಿಬಿಗೆ ಎರಡು ಪಂದ್ಯಗಳಲ್ಲೂ ಸೋಲುಣಿಸಿತ್ತು. ಮೊದಲ ಪಂದ್ಯದಲ್ಲಿ 97 ರನ್​ಗಳಿಂದ ಜಯ ಸಾಧಿಸಿದರೆ, 2ನೇ ಪಂದ್ಯದಲ್ಲಿ 8 ವಿಕೆಟ್​ಗಳಿಂದ ಆರ್​ಸಿಬಿ ವಿರುದ್ದ ಪಂಜಾಬ್ ಭರ್ಜರಿ ಗೆಲುವು ದಾಖಲಿಸಿತ್ತು. ಹೀಗಾಗಿ ಇದೇ ಆತ್ಮ ವಿಶ್ವಾಸದಲ್ಲಿ ರಾಹುಲ್ ಪಡೆ ಕಣಕ್ಕಿಳಿಯಲಿದೆ. ಆದರೆ ಇಲ್ಲಿ ಗಮನಿಸಿಬೇಕಾದ ಮತ್ತೊಂದು ಅಂಶವೆಂದರೆ ಕೊನೆಯ ಐದು ಮುಖಾಮುಖಿಯಲ್ಲಿ ಪಂಜಾಬ್ ವಿರುದ್ದ ಆರ್​ಸಿಬಿ 3 ಗೆಲುವು ದಾಖಲಿಸಿರುವುದು. ಹೀಗಾಗಿ ಈ ಬಾರಿ ಕಳೆದ ಸೀಸನ್​ನಲ್ಲಿನ ಸೋಲಿನ ಸೇಡನ್ನು ತೀರಿಸಿಕೊಳ್ಳುವ ತವಕದಲ್ಲಿ ಕೊಹ್ಲಿ ಪಡೆ.


  ಉಭಯ ತಂಡಗಳ ಕದನದಲ್ಲಿ ಟಾಪ್ ಪರ್ಫಾಮರ್ ಯಾರು ಎಂದು ನೋಡುವುದಾರರೆ, ಎಬಿ ಡಿವಿಲಿಯರ್ಸ್​ ಅಗ್ರಸ್ಥಾನದಲ್ಲಿದ್ದಾರೆ. ಎಬಿಡಿ ಪಂಜಾಬ್ ಕಿಂಗ್ಸ್ ವಿರುದ್ಧ ಇದುವರೆಗೆ 23 ಪಂದ್ಯಗಳಿಂದ 159.19 ಸ್ಟ್ರೈಕ್ ರೇಟ್​ನಲ್ಲಿ710 ರನ್ ಗಳಿಸಿದ್ದಾರೆ. ಅತ್ತ ಆರ್​ಸಿಬಿ ವಿರುದ್ದ ಬೆಸ್ಟ್ ಪರ್ಫಾಮೆನ್ಸ್ ನೀಡಿದ್ದು ಕೆಎಲ್ ರಾಹುಲ್. ರಾಹುಲ್ ಆರ್​ಸಿಬಿ ವಿರುದ್ದ ಇದುವರೆಗೆ 74.20 ಸ್ಟ್ರೈಕ್ ರೇಟ್​ನಲ್ಲಿ 371 ರನ್ ಗಳಿಸಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಯುಜ್ವೇಂದ್ರ ಚಾಹಲ್ ಪಂಜಾಬ್ ವಿರುದ್ದ ಈವರೆಗೆ 21 ವಿಕೆಟ್​ ಕಬಳಿಸಿದ್ದಾರೆ. ಹಾಗೆಯೇ ಮೊಹಮ್ಮದ್ ಶಮಿ ಆರ್​ಸಿಬಿ ವಿರುದ್ದ ಒಟ್ಟು 9 ವಿಕೆಟ್ ಪಡೆದಿರುವುದೇ ಪಂಜಾಬ್ ಬೌಲರ್​ನ ಶ್ರೇಷ್ಠ ಸಾಧನೆಯಾಗಿದೆ.


  ಇನ್ನು ಉಭಯ ತಂಡಗಳಲ್ಲೂ ಬಲಿಷ್ಠ ಬ್ಯಾಟ್ಸ್​ಮನ್​ಗಳಿರುವುದು ವಿಶೇಷ. ಇತ್ತ ದೇವದತ್ ಪಡಿಕ್ಕಲ್-ಕೊಹ್ಲಿ ಆರಂಭಿಕರಾಗಿದ್ರೆ, ಅತ್ತ ಕೆಎಲ್ ರಾಹುಲ್-ಮಯಾಂಕ್ ಪಂಜಾಬ್ ಪರ ಕಿಂಗ್ಸ್​ ಎನಿಸಿಕೊಂಡಿದ್ದಾರೆ. ಇನ್ನು ಮೂರನೇ ಕ್ರಮಾಂಕದಲ್ಲಿರುವುದು ಯುನಿವರ್ಸ್​ ಬಾಸ್ ಕ್ರಿಸ್ ಗೇಲ್. ಆದರೆ ಗೇಲ್​ಗೆ ಸವಾಲಾಗಬಲ್ಲ ಗ್ಲೆನ್ ಮ್ಯಾಕ್ಸ್​ವೆಲ್ ಆರ್​ಸಿಬಿ ತಂಡದಲ್ಲಿದ್ದಾರೆ. ಇನ್ನು ಡೇವಿಡ್ ಮಲಾನ್ ಅಥವಾ ಪೂರನ್​ಗಿಂತ ಎಬಿ ಡಿವಿಲಿಯರ್ಸ್​ ಒಂದು ಹೆಜ್ಜೆ ಮುಂದಿದ್ದಾರೆ ಎನ್ನಬಹುದು. ಇದಾಗ್ಯೂ ದೀಪಕ್ ಹೂಡಾ, ಶಾರುಖ್ ಖಾನ್​ರಂತಹ ಯುವ ದಾಂಡಿಗರು ಪಂಜಾಬ್ ತಂಡ ಪ್ಲಸ್ ಪಾಯಿಂಟ್. ಹೀಗಾಗಿ ಉಭಯ ತಂಡಗಳಿಂದ ಬೃಹತ್ ಮೊತ್ತವನ್ನು ನಿರೀಕ್ಷಿಸಬಹುದು.


  ಇನ್ನು ಬೌಲಿಂಗ್ ವಿಭಾಗವು ಸಮಬಲದಿಂದ ಕೂಡಿದೆ ಎಂದೇ ಹೇಳಬಹುದು. ಮೊಹಮ್ಮದ್ ಸಿರಾಜ್, ಕೈಲ್ ಜೇಮಿಸನ್ ಹಾಗೂ ಹರ್ಷಲ್ ಪಟೇಲ್​ಗೆ ಸರಿಸಾಟಿಯಾಗಿ ಪಂಜಾಬ್ ತಂಡದಲ್ಲಿ ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್ ಹಾಗೂ ಕ್ರಿಸ್ ಜೋರ್ಡನ್ ಇದ್ದಾರೆ. ಆದರೆ ಆರ್​ಸಿಬಿ ತಂಡದಲ್ಲಿ ಹೆಚ್ಚಿನ ಆಲ್​ರೌಂಡರ್​ಗಳು ಇರುವುದರಿಂದ ಬೌಲಿಂಗ್ ವಿಭಾಗವು ತುಸು ಬಲಿಷ್ಠವಾಗಿದೆ ಎಂದೇ ಹೇಳಬಹುದು. ಹಾಗೆಯೇ ಆರ್​ಸಿಬಿ ಬೌಲಿಂಗ್ ಲೈನಪ್ ಉತ್ತಮ ಲಯದಲ್ಲಿದ್ದರೆ, ಪಂಜಾಬ್ ಸೋಲಿಗೆ ಬೌಲರುಗಳೇ ಪ್ರಮುಖ ಕಾರಣರಾಗುತ್ತಿದ್ದಾರೆ.


  ಒಟ್ಟಾರೆ ಅಂಕಿ ಅಂಶ ಮತ್ತು ಪ್ರಸ್ತುತ ಫಾರ್ಮ್​ ನೋಡುವುದಾದರೆ ಆರ್​ಸಿಬಿ-ಪಂಜಾಬ್ ಕಿಂಗ್ಸ್​ ಸಮಬಲ ಹೊಂದಿದೆ ಎನ್ನಬಹುದು. ಇದಾಗ್ಯೂ ಈ ಹಿಂದಿನ ಫಲಿತಾಂಶಗಳನ್ನು ಮಾತ್ರ ಗಣನೆಗೆ ತೆಗೆದುಕೊಂಡೆ ಪಂಜಾಬ್ ಕಿಂಗ್ಸ್​ ಬಲಿಷ್ಠವಾಗಿದೆ ಎಂದೇ ಹೇಳಬಹುದು.

  Published by:zahir
  First published: