CSK vs SRH: ಸೋಲಿನಿಂದ ಕಂಗೆಟ್ಟಿರುವ ಸನ್​ರೈಸರ್ಸ್​​ಗೆ ಬಲಿಷ್ಠ ಸೂಪರ್ ಕಿಂಗ್ಸ್ ಸವಾಲು..!

ಐಪಿಎಲ್​ನಲ್ಲಿ ಉಭಯ ತಂಡಗಳು ಇದುವರೆಗೆ 15 ಬಾರಿ ಮುಖಾಮುಖಿಯಾಗಿದ್ದು, ಅದರಲ್ಲಿ 11 ಬಾರಿ ಚೆನ್ನೈ ಸೂಪರ್ ಕಿಂಗ್ಸ್​ ಗೆಲುವು ದಾಖಲಿಸಿ ಎಸ್​ಆರ್​ಹೆಚ್​ ವಿರುದ್ದ ಪಾರುಪತ್ಯ ಸ್ಥಾಪಿಸಿದೆ.

CSK vs SRH

CSK vs SRH

 • Share this:
  ದೆಹಲಿಯಲ್ಲಿ ನಡೆಯಲಿರುವ ಐಪಿಎಲ್​​ನ 23ನೇ ಪಂದ್ಯದಲ್ಲಿ ಸನ್​ರೈಸರ್ಸ್​ ಹೈದರಾಬಾದ್​ ಹಾಗೂ ಚೆನ್ನೈ ಸೂಪರ್ ಕಿಂಗ್ಸ್​ ಮುಖಾಮುಖಿಯಾಗಲಿದೆ. ಉಭಯ ತಂಡಗಳು ಈಗಾಗಲೇ 5 ಪಂದ್ಯಗಳನ್ನು ಆಡಿದ್ದು, ಅದರಲ್ಲಿ 4 ಗೆಲುವು ದಾಖಲಿಸುವ ಮೂಲಕ ಸಿಎಸ್​ಕೆ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದೆ. ಆದರೆ ಸತತ ಸೋಲಿನಿಂದ ಕಂಗೆಟ್ಟಿರುವ ಸನ್​ರೈಸರ್ಸ್​ ಹೈದರಾಬಾದ್ ಕೇವಲ 1 ಜಯ ಸಾಧಿಸಿ ಪಾಯಿಂಟ್ ಟೇಬಲ್​ನಲ್ಲಿ ಕೊನೆಯ ಸ್ಥಾನದಲ್ಲಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಗೆಲುವು ದಾಖಲಿಸಬೇಕಾದ ಅನಿವಾರ್ಯತೆ ಎಸ್​ಆರ್​ಹೆಚ್​ ಮುಂದಿದೆ.

  ಐಪಿಎಲ್​ನಲ್ಲಿ ಉಭಯ ತಂಡಗಳು ಇದುವರೆಗೆ 15 ಬಾರಿ ಮುಖಾಮುಖಿಯಾಗಿದ್ದು, ಅದರಲ್ಲಿ 11 ಬಾರಿ ಚೆನ್ನೈ ಸೂಪರ್ ಕಿಂಗ್ಸ್​ ಗೆಲುವು ದಾಖಲಿಸಿ ಎಸ್​ಆರ್​ಹೆಚ್​ ವಿರುದ್ದ ಪಾರುಪತ್ಯ ಸ್ಥಾಪಿಸಿದೆ. ಇದಾಗ್ಯೂ 4 ಗೆಲುವು ದಾಖಲಿಸಿರುವ ಸನ್​ರೈಸರ್ಸ್​​ ಇಂದು ಗೆಲ್ಲುವ ವಿಶ್ವಾಸದಲ್ಲಿದೆ. ಇನ್ನು ಕಳೆದ ಸೀಸನ್​ ಐಪಿಎಲ್​ ಮುಖಾಮುಖಿಯಲ್ಲಿ ಎರಡೂ ತಂಡಗಳು ತಲಾ ಒಂದೊಂದು ಜಯ ಸಾಧಿಸಿತ್ತು ಎಂಬುದು ವಿಶೇಷ. ಅಂದರೆ ತಟಸ್ಥ ಮೈದಾನದಲ್ಲಿ ಸನ್​ರೈಸರ್ಸ್​ ಬಲಿಷ್ಠ ಸಿಎಸ್​ಕೆಗೆ ಸೋಲುಣಿಸುವಲ್ಲಿ ಯಶಸ್ವಿಯಾಗಿತ್ತು. ಹೀಗಾಗಿ ಇಂದು ಕೂಡ ಭರ್ಜರಿ ಪೈಪೋಟಿ ನಿರೀಕ್ಷಿಸಬಹುದು.

  ಇನ್ನು ಉಭಯ ತಂಡಗಳ ಮುಖಾಮುಖಿಯಲ್ಲಿ ಸುರೇಶ್ ರೈನಾ ಅತ್ಯುತ್ತಮ ಫಾರ್ಮ್​ ಪ್ರದರ್ಶಿಸಿದ್ದು, ಇದುವರೆಗೆ ಸನ್​ರೈಸರ್ಸ್​ ಹೈದರಾಬಾದ್ ವಿರುದ್ದ ರೈನಾ 415 ರನ್ ಬಾರಿಸಿದ್ದಾರೆ. ಹಾಗೆಯೇ ಸಿಎಸ್​ಕೆ ನಾಯಕ ಧೋನಿ 399 ರನ್ ಕಲೆಹಾಕಿದ್ದಾರೆ. ಇನ್ನು ಬೌಲಿಂಗ್​ನಲ್ಲಿ ಕೂಡ ಸಿಎಸ್​ಕೆ ಆಟಗಾರರೇ ಮುಂದಿದ್ದು, ಎಸ್​ಆರ್​ಹೆಚ್ ವಿರುದ್ದ ಡ್ವೇನ್ ಬ್ರಾವೊ 17 ವಿಕೆಟ್ ಕಬಳಿಸಿದ್ದಾರೆ. ಹಾಗೆಯೇ ದೀಪಕ್ ಚಹರ್ 9 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಒಟ್ಟಾರೆ ಅಂಕಿ ಅಂಶಗಳ ಪ್ರಕಾರ ಎಸ್​ಆರ್​ಹೆಚ್ ವಿರುದ್ದ ಸಿಎಸ್​ಕೆ ಬಲಿಷ್ಠತೆ ವಿಷಯದಲ್ಲಿ ಒಂದು ಹೆಜ್ಜೆ ಮುಂದಿದೆ ಎಂದೇ ಹೇಳಬಹುದು.

  ಇಂದು ಕಣಕ್ಕಿಳಿಯಲಿರುವ ಸಂಭಾವ್ಯ ಪ್ಲೇಯಿಂಗ್ ಹೀಗಿರಲಿದೆ.

  ಚೆನ್ನೈ ಸೂಪರ್ ಕಿಂಗ್ಸ್ ಸಂಭಾವ್ಯ ಪ್ಲೇಯಿಂಗ್ ಇಲೆವೆನ್: ರುತುರಾಜ್ ಗಾಯಕ್ವಾಡ್, ಫಾಫ್ ಡು ಪ್ಲೆಸಿಸ್, ಸುರೇಶ್ ರೈನಾ, ಅಂಬಾಟಿ ರಾಯುಡು, ಎಂ.ಎಸ್.ಧೋನಿ (ನಾಯಕ), ರವೀಂದ್ರ ಜಡೇಜಾ, ಸ್ಯಾಮ್ ಕರನ್, ಡ್ವೇನ್ ಬ್ರಾವೋ, ಮೊಯೀನ್ ಅಲಿ, ಶಾರ್ದುಲ್ ಠಾಕೂರ್ ಮತ್ತು ದೀಪಕ್ ಚಹರ್.

  ಸನ್​ರೈಸರ್ಸ್ ಹೈದರಾಬಾದ್ ಸಂಭಾವ್ಯ ಪ್ಲೇಯಿಂಗ್ ಇಲೆವೆನ್: ಜಾನಿ ಬೈರ್‌ಸ್ಟೋವ್, ಡೇವಿಡ್ ವಾರ್ನರ್ (ನಾಯಕ), ಮನೀಶ್ ಪಾಂಡೆ, ಕೇನ್ ವಿಲಿಯಮ್ಸನ್, ವಿಜಯ್ ಶಂಕರ್, ಕೇದರ್ ಜಾಧವ್, ಅಭಿಷೇಕ್ ಶರ್ಮಾ, ರಶೀದ್ ಖಾನ್, ಜಗದೀಶ್ ಸುಚಿತ್, ಖಲೀಲ್ ಅಹ್ಮದ್ ಮತ್ತು ಸಂದೀಪ್ ಶರ್ಮಾ.

  ಸ್ಥಳ: ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂ
  ಸಮಯ: ಸಂಜೆ 7.30
  ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್​, ಹಾಟ್ ಸ್ಟಾರ್
  Published by:zahir
  First published: