HOME » NEWS » Ipl » IPL 2021 MATCH 17 PBKS VS MI HEAD TO HEAD RECORD ZP

PBKS vs MI: ಪಂಜಾಬ್ vs ಮುಂಬೈ: ಅಂಕಿ ಅಂಶಗಳ ಪ್ರಕಾರ ಯಾರು ಬಲಿಷ್ಠ?

ಉಭಯ ತಂಡಗಳ ಕದನದಲ್ಲಿ ಟಾಪ್ ರನ್ ಸರದಾರ ಯಾರು ಎಂದು ನೋಡುವುದಾದರೆ, ಮುಂಬೈ ಇಂಡಿಯನ್ಸ್ ಬ್ಯಾಟ್ಸ್​ಮನ್​ಗಳೇ ಅಗ್ರಸ್ಥಾನದಲ್ಲಿದ್ದಾರೆ. ಕೀರನ್ ಪೊಲಾರ್ಡ್​ ಪಂಜಾಬ್ ವಿರುದ್ದ ಇದುವರೆಗೆ 498 ರನ್​ಗಳಿಸಿದರೆ, ರೋಹಿತ್ ಶರ್ಮಾ 423 ರನ್ ಕಲೆಹಾಕಿದ್ದಾರೆ.

news18-kannada
Updated:April 23, 2021, 5:07 PM IST
PBKS vs MI: ಪಂಜಾಬ್ vs ಮುಂಬೈ: ಅಂಕಿ ಅಂಶಗಳ ಪ್ರಕಾರ ಯಾರು ಬಲಿಷ್ಠ?
PBKS vs MI
  • Share this:
ಇಂಡಿಯನ್ ಪ್ರೀಮಿಯರ್ ಲೀಗ್​ನ 17ನೇ ಪಂದ್ಯದಲ್ಲಿ ಕೆಎಲ್ ರಾಹುಲ್ ನೇತೃತ್ವದ ಪಂಜಾಬ್ ಕಿಂಗ್ಸ್​, ರೋಹಿತ್ ಶರ್ಮಾರ ಮುಂಬೈ ಇಂಡಿಯನ್ಸ್​ ತಂಡವನ್ನು ಎದುರಿಸಲಿದೆ. ಚೆನ್ನೈನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ಸೋಲಿನ ಸರಪಳಿಯಿಂದ ಹೊರಬರುವ ವಿಶ್ವಾಸದಲ್ಲಿದೆ ಪಂಜಾಬ್ ಕಿಂಗ್ಸ್​. ಪಂಜಾಬ್ ಇದುವರೆಗೆ 4 ಪಂದ್ಯಗಳನ್ನು ಆಡಿದ್ದು, ಅದರಲ್ಲಿ ಮೂರು ಸತತ ಸೋಲನುಭವಿಸಿದೆ. ಅತ್ತ ಸೋಲಿನೊಂದಿಗೆ ಐಪಿಎಲ್ ಅಭಿಯಾನ ಆರಂಭಿಸಿದ ಮುಂಬೈ ಇಂಡಿಯನ್ಸ್ 4 ರಲ್ಲಿ 2 ಗೆಲುವು ದಾಖಲಿಸಿದೆ. ಅದರಲ್ಲೂ ಕಳೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ಗೆ ಶರಣಾಗಿರುವ ರೋಹಿತ್ ಪಡೆ ಇಂದಿನ ಪಂದ್ಯದಲ್ಲಿ ಗೆಲ್ಲುವ ಮೂಲಕ ಗೆಲುವಿನ ಲಯಕ್ಕೆ ಮರಳುವ ಇರಾದೆಯಲ್ಲಿದೆ.

ಉಭಯ ತಂಡಗಳು ಐಪಿಎಲ್​ನಲ್ಲಿ 26 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಅದರಲ್ಲಿ ಮುಂಬೈ ಇಂಡಿಯನ್ಸ್​ 14 ಬಾರಿ ಗೆಲುವು ದಾಖಲಿಸಿದೆ. ಆದರೆ ಬಲಿಷ್ಠ ಮುಂಬೈಗೆ ಪೈಪೋಟಿ ನೀಡಿರುವ ಪಂಜಾಬ್ 12 ಬಾರಿ ಜಯ ದಾಖಲಿಸುವಲ್ಲಿ ಯಶಸ್ವಿಯಾಗಿದೆ. ಇನ್ನು ಕಳೆದ ಸೀಸನ್​ನ 2 ಪಂದ್ಯಗಳಲ್ಲಿ ತಲಾ ಒಂದೊಂದು ಜಯ ಸಾಧಿಸಿರುವುದು ವಿಶೇಷ. ಹಾಗೆಯೇ ಕೊನೆಯ 5 ಮುಖಾಮುಖಿಯಲ್ಲಿ ಪಂಜಾಬ್ ಮುಂಬೈ ವಿರುದ್ದ 2 ಬಾರಿ ಗೆಲುವು ದಾಖಲಿಸಿದೆ. ಈ ಅಂಕಿ ಅಂಶಗಳನ್ನು ಗಮನಿಸಿದರೆ ಮುಂಬೈಗೆ ಪಂಜಾಬ್ ಕಡೆಯಿಂದ ಕಠಿಣ ಪೈಪೋಟಿ ಎದುರಾಗಲಿದೆ ಎಂದೇ ಹೇಳಬಹುದು.

ಇನ್ನು ಉಭಯ ತಂಡಗಳ ಕದನದಲ್ಲಿ ಟಾಪ್ ರನ್ ಸರದಾರ ಯಾರು ಎಂದು ನೋಡುವುದಾದರೆ, ಮುಂಬೈ ಇಂಡಿಯನ್ಸ್ ಬ್ಯಾಟ್ಸ್​ಮನ್​ಗಳೇ ಅಗ್ರಸ್ಥಾನದಲ್ಲಿದ್ದಾರೆ. ಕೀರನ್ ಪೊಲಾರ್ಡ್​ ಪಂಜಾಬ್ ವಿರುದ್ದ ಇದುವರೆಗೆ 498 ರನ್​ಗಳಿಸಿದರೆ, ರೋಹಿತ್ ಶರ್ಮಾ 423 ರನ್ ಕಲೆಹಾಕಿದ್ದಾರೆ. ಇನ್ನು ಬೌಲಿಂಗ್ ವಿಭಾಗದಲ್ಲಿ ಜಸ್​ಪ್ರೀತ್ ಬುಮ್ರಾ ಪಂಜಾಬ್ ವಿರುದ್ದ 17 ವಿಕೆಟ್ ಉರುಳಿಸಿ ಉಭಯ ತಂಡಗಳಲ್ಲಿ ಯಶಸ್ವಿ ಬೌಲರುಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಒಟ್ಟಾರೆ ಅಂಕಿ ಅಂಶಗಳ ಪ್ರಕಾರ ಪಂಜಾಬ್ ಕಿಂಗ್ಸ್​ ವಿರುದ್ದ ಮುಂಬೈ ಇಂಡಿಯನ್ಸ್​ ಒಂದು ಹೆಜ್ಜೆ ಮುಂದಿದೆ ಎಂದೇ ಹೇಳಬಹುದು. ಇದಾಗ್ಯೂ ಸತತ ಸೋಲಿನಿಂದ ಕಂಗೆಟ್ಟಿರುವ ಪಂಜಾಬ್ ಗೆಲುವಿನ ಲಯಕ್ಕೆ ಮರಳಲು ಕಠಿಣ ಪೈಪೋಟಿಯೊಡ್ಡುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.



ಪಂಜಾಬ್ ಕಿಂಗ್ಸ್​: ಕೆ.ಎಲ್. ರಾಹುಲ್, ಕ್ರಿಸ್ ಗೇಲ್, ಮಾಯಾಂಕ್ ಅಗರ್ವಾಲ್, ನಿಕೋಲಸ್ ಪೂರನ್, ಮಂದೀಪ್ ಸಿಂಗ್, ಸರ್ಫರಾಜ್ ಖಾನ್, ದೀಪಕ್ ಹೂಡಾ,  ಸಿಮ್ರಾನ್ ಸಿಂಗ್, ಮೊಹಮ್ಮದ್ ಶಮಿ, ಕ್ರಿಸ್ ಜೋರ್ಡಾನ್, ದರ್ಶನ್ ನಲ್ಕಂಡೆ, ರವಿ ಬಿಷ್ಣೋಯ್, ಮುರುಗನ್ ಅಶ್ವಿನ್, ಅರ್ಷ್​ದೀಪ್ ಸಿಂಗ್ , ಡೇವಿಡ್ ಮಲಾನ್, ಜೇ ರಿಚರ್ಡ್ಸನ್, ಶಾರುಖ್ ಖಾನ್, ರಿಲೆ ಮೆರೆಡಿತ್,  ಮೊಯಿಸಸ್ ಹೆನ್ರಿಕ್ಸ್,  ಜಲಜ್ ಸಕ್ಸೇನಾ, ಉತ್ಕರ್ಶ್ ಸಿಂಗ್, ಫ್ಯಾಬಿಯನ್ ಅಲೆನ್, ಸುಮಿತ್ ಕುಮಾರ್.


ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ, ಆದಿತ್ಯ ತಾರೆ, ಅನ್ಮೋಲ್ಪ್ರೀತ್ ಸಿಂಗ್, ಅಂಕುಲ್ ರಾಯ್, ಧವಲ್ ಕುಲಕರ್ಣಿ, ಹಾರ್ದಿಕ್ ಪಾಂಡ್ಯ, ಇಶಾನ್ ಕಿಶನ್, ಜಸ್ಪ್ರೀತ್ ಬುಮ್ರಾ, ಜಯಂತ್ ಯಾದವ್, ಕೀರನ್ ಪೊಲಾರ್ಡ್, ಕ್ರುನಾಲ್ ಪಾಂಡ್ಯ, ಕ್ವಿಂಟನ್ ಡಿ ಕಾಕ್, ರಾಹುಲ್ ಚಹರ್,  ಸೂರ್ಯಕುಮಾರ್ ಯಾದವ್ ತಿವಾರಿ, ಟ್ರೆಂಟ್ ಬೌಲ್ಟ್, ಆಡಮ್ ಮಿಲ್ನೆ, ನಾಥನ್ ಕೌಲ್ಟರ್-ನೈಲ್, ಪಿಯೂಷ್ ಚಾವ್ಲಾ, ಜೇಮ್ಸ್ ನೀಶನ್, ಯುಧ್ವೀರ್ ಚರಕ್, ಮಾರ್ಕೊ ಜಾನ್ಸೆನ್, ಅರ್ಜುನ್ ತೆಂಡೂಲ್ಕರ್
Published by: zahir
First published: April 23, 2021, 5:06 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories