HOME » NEWS » Ipl » IPL 2021 MATCH 15 KKR VS CSK PLAYING 11 ZP

KKR vs CSK Playing 11: ಉಭಯ ತಂಡಗಳಲ್ಲೂ ಕೆಲ ಬದಲಾವಣೆ: 2 ಟೀಮ್ ಹೀಗಿದೆ

ಉಭಯ ತಂಡಗಳು ಇದುವರೆಗೆ 16 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಸನ್​ರೈಸರ್ಸ್​ ಹೈದರಾಬಾದ್ 11 ಬಾರಿ ಗೆಲುವು ದಾಖಲಿಸಿದರೆ, ಪಂಜಾಬ್ 5 ಬಾರಿ ಮಾತ್ರ ಗೆಲ್ಲುವಲ್ಲಿ ಯಶಸ್ವಿಯಾಗಿದೆ.

news18-kannada
Updated:April 21, 2021, 7:15 PM IST
KKR vs CSK Playing 11: ಉಭಯ ತಂಡಗಳಲ್ಲೂ ಕೆಲ ಬದಲಾವಣೆ: 2 ಟೀಮ್ ಹೀಗಿದೆ
CSK vs KKR
  • Share this:
ಇಂಡಿಯನ್ ಪ್ರೀಮಿಯರ್ ಲೀಗ್​ನ 15ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ಮುಖಾಮುಖಿಯಾಗಿದೆ. ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಭರ್ಜರಿ ಪೈಪೋಟಿ ನಿರೀಕ್ಷಿಸಬಹುದು. ಏಕೆಂದರೆ ಉಭಯ ತಂಡಗಳು ಈಗಾಗಲೇ ಮೂರು ಪಂದ್ಯಗಳನ್ನು ಆಡಿದ್ದು, ಅದರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 2 ಜಯ 1 ಸೋಲನುಭವಿಸಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಗೆಲ್ಲುವ ಮೂಲಕ ಜಯ ಲಯ ಮುಂದುವರೆಸುವ ಇರಾದೆಯಲ್ಲಿದ್ದಾರೆ ಧೋನಿ ಪಡೆ. ಹಾಗೆಯೇ ಇಯಾನ್ ಮೋರ್ಗನ್ ಮುನ್ನಡೆಸುತ್ತಿರುವ ಕೆಕೆಆರ್ ತಂಡವು ಮೊದಲ ಪಂದ್ಯವನ್ನು ಹೊರತುಪಡಿಸಿ ಸತತ 2 ಸೋಲನುಭವಿಸಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಗೆಲುವಿನ ಲಯಕ್ಕೆ ಮರಳಲು ಕೊಲ್ಕತ್ತಾ ಕಠಿಣ ಪೈಪೋಟಿ ನೀಡಲಿದೆ.

ಐಪಿಎಲ್​ನಲ್ಲಿ ಉಭಯ ತಂಡಗಳು ಇದುವೆರೆಗೆ 25 ಬಾರಿ ಮುಖಾಮುಖಿಯಾಗಿದ್ದು, ಅದರಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ 15 ಬಾರಿ ಗೆಲುವು ದಾಖಲಿಸಿದೆ. ಹಾಗೆಯೇ ಕೊಲ್ಕತ್ತಾ ನೈಟ್ ರೈಡರ್ಸ್ ಸಿಎಸ್​ಕೆ ವಿರುದ್ದ 9 ಬಾರಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಒಂದು ಪಂದ್ಯವು ರದ್ದಾಗಿತ್ತು. ಇನ್ನು ಕಳೆದ ಸೀಸನ್​ನಲ್ಲಿ ಎರಡು ಪಂದ್ಯಗಳಲ್ಲಿ ಉಭಯ ತಂಡಗಳು ತಲಾ ಒಂದೊಂದು ಜಯ ಸಾಧಿಸಿದೆ. ಹಾಗೆಯೇ ಕೊನೆಯ 6 ಪಂದ್ಯಗಳ ಫಲಿತಾಂಶವನ್ನು ಗಣನೆಗೆ ತೆಗೆದುಕೊಂಡರೆ ಕೊಲ್ಕತ್ತಾ ನೈಟ್ ರೈಡರ್ಸ್ ಕೇವಲ 2 ಬಾರಿ ಮಾತ್ರ ಜಯ ಸಾಧಿಸಿದೆ. ಹೀಗಾಗಿ ಈ ಅಂಕಿ ಅಂಶಗಳ ಪ್ರಕಾರ ಚೆನ್ನೈ ಸೂಪರ್ ಕಿಂಗ್ಸ್​ ಬಲಿಷ್ಠವಾಗಿದೆ ಎಂದೇ ಹೇಳಬಹುದು.

ಇನ್ನು ಸಿಎಸ್​ಕೆ-ಕೆಕೆಆರ್ ಕದನದಲ್ಲಿ ಮಿಂಚಿದ ಆಟಗಾರರು ಯಾರು ಎಂದು ನೋಡುವುದಾದರೆ, ಸುರೇಶ್ ರೈನಾ ಅಗ್ರಸ್ಥಾನದಲ್ಲಿದ್ದಾರೆ. ರೈನಾ ಕೊಲ್ಕತ್ತಾ ವಿರುದ್ದ 736 ರನ್ ಬಾರಿಸಿದ್ದಾರೆ. ನಂತರದ ಸ್ಥಾನದಲ್ಲಿರುವುದು ಮಹೇಂದ್ರ ಸಿಂಗ್ ಧೋನಿ. ಸಿಎಸ್​ಕೆ ನಾಯಕ ಕೆಕೆಆರ್ ವಿರುದ್ದ 482 ರನ್ ಕಲೆಹಾಕಿದ್ದಾರೆ. ಇದಾಗ್ಯೂ ಕೆಕೆಆರ್ ತಂಡದ ಯಾವುದೇ ಬ್ಯಾಟ್ಸ್​ಮನ್ ಇದುವರೆಗೆ ಸಿಎಸ್​ಕೆ ವಿರುದ್ದ 400 ರನ್​ ಕಲೆಹಾಕಿಲ್ಲ ಎಂಬುದು ವಿಶೇಷ.

ಅದೇ ರೀತಿ ಪ್ರಸ್ತುತ ತಂಡದಲ್ಲಿರುವ ಬೌಲರುಗಳ ಪ್ರದರ್ಶನ ನೋಡುವುದಾದರೆ, ಸುನೀಲ್ ನರೈನ್ ಸಿಎಸ್​ಕೆ ವಿರುದ್ದ 15 ವಿಕೆಟ್ ಕಬಳಿಸಿದ್ದಾರೆ. ಅತ್ತ ಕೆಕೆಆರ್ ವಿರುದ್ದ 15 ವಿಕೆಟ್ ಪಡೆಯುವ ಮೂಲಕ ರವೀಂದ್ರ ಜಡೇಜಾ ಕೂಡ ಮಿಂಚಿದ್ದಾರೆ.

ಇನ್ನು ಇಂದಿನ ಪಂದ್ಯದಲ್ಲಿ ಸಿಎಸ್​ಕೆ ಪರ ಡ್ವೇನ್ ಬ್ರಾವೊ ಸ್ಥಾನದಲ್ಲಿ ವೇಗಿ ಲುಂಗಿ ಎನ್​ಗಿಡಿ ಸ್ಥಾನ ಪಡೆದಿದ್ದು, ಹಾಗೆಯೇ ಕೆಕೆಆರ್ ತಂಡದಲ್ಲಿ ಶಕೀಬ್ ಅಲ್ ಹಸನ್ ಬದಲು ಸುನಿಲ್ ನರೈನ್ ಕಣಕ್ಕಿಳಿಯಲಿದ್ದಾರೆ. ಹಾಗೆಯೇ ಇಂದಿನ ಪಂದ್ಯದಲ್ಲಿ ಹರ್ಭಜನ್ ಸಿಂಗ್ ಬದಲು ಕೆಕೆಆರ್ ತಂಡದಲ್ಲಿ ಕಮಲೇಶ್ ನಾಗರ್ಕೋಟಿ ಸ್ಥಾನ ಪಡೆದಿದ್ದಾರೆ.

ಉಭಯ ತಂಡಗಳು ಹೀಗಿವೆ:

ಕೋಲ್ಕತಾ ನೈಟ್ ರೈಡರ್ಸ್: ನಿತೀಶ್ ರಾಣಾ, ಶುಭ್​ಮನ್ ಗಿಲ್, ರಾಹುಲ್ ತ್ರಿಪಾಠಿ, ಇಯಾನ್ ಮೋರ್ಗನ್ (ನಾಯಕ), ದಿನೇಶ್ ಕಾರ್ತಿಕ್, ಆಂಡ್ರೆ ರಸ್ಸೆಲ್, ಪ್ಯಾಟ್ ಕಮ್ಮಿನ್ಸ್, ಕಮಲೇಶ್ ನಾಗರ್ಕೋಟಿ, ಸುನಿಲ್ ನರೈನ್, ವರುಣ್ ಚಕ್ರವರ್ತಿ, ಪ್ರಸಿದ್ಧ್ ಕೃಷ್ಣಚೆನ್ನೈ ಸೂಪರ್ ಕಿಂಗ್ಸ್: ರುತುರಾಜ್ ಗಾಯಕ್ವಾಡ್, ಫಾಫ್ ಡು ಪ್ಲೆಸಿಸ್, ಮೊಯೀನ್ ಅಲಿ, ಸುರೇಶ್ ರೈನಾ, ಅಂಬಾಟಿ ರಾಯುಡು, ರವೀಂದ್ರ ಜಡೇಜಾ, ಎಂ.ಎಸ್.ಧೋನಿ (ನಾಯಕ), ಸ್ಯಾಮ್ ಕರ್ರನ್, ಶಾರ್ದುಲ್ ಠಾಕೂರ್, ಲುಂಗಿ ಎನ್‌ಗಿಡಿ, ದೀಪಕ್ ಚಹರ್
Published by: zahir
First published: April 21, 2021, 7:09 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories