HOME » NEWS » Ipl » IPL 2021 MATCH 13 DC VS MI WHO WILL WIN TODAYS MATCH ZP

DC vs MI: ಮುಂಬೈ ಇಂಡಿಯನ್ಸ್​​ಗೆ ಸವಾಲೆಸೆಯಲು ಪಂತ್ ಪಡೆ ಸಜ್ಜು..!

ಅಂಕ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ 4ನೇ ಸ್ಥಾನದಲ್ಲಿರುವ ಮುಂಬೈಗೆ ಸೋಲುಣಿಸಿ 2ನೇ ಸ್ಥಾನಕ್ಕೇರುವ ತವಕದಲ್ಲಿದ್ದು, ಇತ್ತ ರೋಹಿತ್ ಪಡೆ ಗೆಲುವಿನ ನಾಗಾಲೋಟ ಮುಂದುವರೆಸುವ ಇರಾದೆಯಲ್ಲಿದೆ.

news18-kannada
Updated:April 20, 2021, 2:29 PM IST
DC vs MI: ಮುಂಬೈ ಇಂಡಿಯನ್ಸ್​​ಗೆ ಸವಾಲೆಸೆಯಲು ಪಂತ್ ಪಡೆ ಸಜ್ಜು..!
MI vs DC
  • Share this:
ಚೆನ್ನೈನ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್​ನ 13ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ಸೆಣಸಲಿದೆ. ಉಭಯ ತಂಡಗಳು ಈಗಾಗಲೇ 3 ಪಂದ್ಯಗಳನ್ನು ಆಡಿದ್ದು, ಅದರಲ್ಲಿ 2 ಜಯ ಸಾಧಿಸಿ ತಲಾ 4 ಅಂಕಗಳನ್ನು ಪಡೆದುಕೊಂಡಿದೆ. ಮುಂಬೈ ಇಂಡಿಯನ್ಸ್ ಕಳೆದ ಮೂರು ಪಂದ್ಯಗಳನ್ನು ಚೆನ್ನೈನಲ್ಲೇ ಆಡಿದರೆ, ಡೆಲ್ಲಿ ಕ್ಯಾಪಿಟಲ್ಸ್ ಈ ಸೀಸನ್​ನ ಮೊದಲ ಪಂದ್ಯವನ್ನು ಚೆನ್ನೈನಲ್ಲಿ ಆಡುತ್ತಿರುವುದು ವಿಶೇಷ.

ಅಂಕ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ 4ನೇ ಸ್ಥಾನದಲ್ಲಿರುವ ಮುಂಬೈಗೆ ಸೋಲುಣಿಸಿ 2ನೇ ಸ್ಥಾನಕ್ಕೇರುವ ತವಕದಲ್ಲಿದ್ದು, ಇತ್ತ ರೋಹಿತ್ ಪಡೆ ಗೆಲುವಿನ ನಾಗಾಲೋಟ ಮುಂದುವರೆಸುವ ಇರಾದೆಯಲ್ಲಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಉಭಯ ತಂಡಗಳಿಂದ ಭರ್ಜರಿ ಪೈಪೋಟಿ ನಿರೀಕ್ಷಿಸಬಹುದು.

ಹಾಗೆಯೇ ಕಳೆದ ಸೀಸನ್​ ಫೈನಲ್ ಬಳಿಕ ಮುಂಬೈ ಹಾಗೂ ಡೆಲ್ಲಿ ಕ್ಯಾಪಿಟಲ್ಸ್​ ಮುಖಾಮುಖಿಯಾಗುತ್ತಿದ್ದು, ಫೈನಲ್ ಸೋಲಿನ ಸೇಡು ತೀರಿಸಿಕೊಳ್ಳಲು ರಿಷಭ್ ಪಂತ್ ಪಡೆ ಸಜ್ಜಾಗಿ ನಿಂತಿದೆ. ಉಭಯ ತಂಡಗಳು 28 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಇದರಲ್ಲಿ ಮುಂಬೈ ಇಂಡಿಯನ್ಸ್ 16 ಪಂದ್ಯಗಳನ್ನು ಗೆದ್ದುಕೊಂಡಿದೆ. ಹಾಗೆಯೇ ಕಳೆದ ಎರಡು ಸೀಸನ್​ಗಳಿಂದ ಬಲಿಷ್ಠವಾಗಿ ರೂಪುಗೊಂಡಿರುವ ಡೆಲ್ಲಿ ಕ್ಯಾಪಿಟಲ್ಸ್ ಮುಂಬೈ ವಿರುದ್ದ 12 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಒಟ್ಟಿನಲ್ಲಿ ಕಳೆದ ಸೀಸನ್​ನ ವಿನ್ನರ್-ರನ್ನರ್ ಮುಖಾಮುಖಿಯಲ್ಲಿ ಜಯ ಯಾರ ಪಾಲಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಡೆಲ್ಲಿ ಕ್ಯಾಪಿಟಲ್ಸ್​: ಅಜಿಂಕ್ಯ ರಹಾನೆ, ಅಮಿತ್ ಮಿಶ್ರಾ, ಅವೇಶ್ ಖಾನ್, ಅಕ್ಸರ್ ಪಟೇಲ್, ಇಶಾಂತ್ ಶರ್ಮಾ, ಕಗಿಸೊ ರಬಾಡ, ಪೃಥ್ವಿ ಶಾ, ಆರ್ ಅಶ್ವಿನ್, ರಿಷಭ್ ಪಂತ್, ಶಿಖರ್ ಧವನ್, ಲಲಿತ್ ಯಾದವ್, ಮಾರ್ಕಸ್ ಸ್ಟೊಯಿನಿಸ್, ಶಿಮ್ರಾನ್ ಹೆಟ್ಮೆಯರ್, ಸ್ಟೀವ್ ಸ್ಮಿತ್, ಉಮೇಶ್ ಯಾದವ್ , ರಿಪಾಲ್ ಪಟೇಲ್, ಲುಕ್ಮನ್ ಹುಸೇನ್ ಮೆರಿವಾಲಾ, ಎಂ ಸಿದ್ಧಾರ್ಥ್, ಟಾಮ್ ಕುರ್ರನ್, ಸ್ಯಾಮ್ ಬಿಲ್ಲಿಂಗ್ಸ್

ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ, ಆದಿತ್ಯ ತಾರೆ, ಅನ್ಮೋಲ್ಪ್ರೀತ್ ಸಿಂಗ್, ಅಂಕುಲ್ ರಾಯ್, ಧವಲ್ ಕುಲಕರ್ಣಿ, ಹಾರ್ದಿಕ್ ಪಾಂಡ್ಯ, ಇಶಾನ್ ಕಿಶನ್, ಜಸ್ಪ್ರೀತ್ ಬುಮ್ರಾ, ಜಯಂತ್ ಯಾದವ್, ಕೀರನ್ ಪೊಲಾರ್ಡ್, ಕ್ರುನಾಲ್ ಪಾಂಡ್ಯ, ಕ್ವಿಂಟನ್ ಡಿ ಕಾಕ್, ರಾಹುಲ್ ಚಹರ್, ಸೂರ್ಯಕುಮಾರ್ ಯಾದವ್ ತಿವಾರಿ, ಟ್ರೆಂಟ್ ಬೌಲ್ಟ್, ಆಡಮ್ ಮಿಲ್ನೆ, ನಾಥನ್ ಕೌಲ್ಟರ್-ನೈಲ್, ಪಿಯೂಷ್ ಚಾವ್ಲಾ, ಜೇಮ್ಸ್ ನೀಶನ್, ಯುಧ್ವೀರ್ ಚರಕ್, ಮಾರ್ಕೊ ಜಾನ್ಸೆನ್, ಅರ್ಜುನ್ ತೆಂಡೂಲ್ಕರ್
Published by: zahir
First published: April 20, 2021, 2:26 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories