HOME » NEWS » Ipl » IPL 2021 MATCH 10 RCB VS KKR MATCH PREDICTION WHO WILL WIN TODAYS MATCH ZP

RCB vs KKR: ಉಭಯ ತಂಡಗಳಲ್ಲೂ 1 ಬದಲಾವಣೆ ಸಾಧ್ಯತೆ: ಸಂಭಾವ್ಯ ಪ್ಲೇಯಿಂಗ್ 11 ಹೀಗಿರಲಿದೆ

rcb vs kkr predicted playing 11: ಉಭಯ ತಂಡಗಳು ಇದುವರೆಗೆ 26 ಬಾರಿ ಮುಖಾಮುಖಿಯಾಗಿದ್ದು, ಅದರಲ್ಲಿ ಕೆಕೆಆರ್​ 14 ಬಾರಿ ಜಯ ಸಾಧಿಸಿದೆ. ಇನ್ನು ಆರ್​ಸಿಬಿ 12 ಬಾರಿ ವಿಜಯದ ನಗೆ ಬೀರಿದೆ. ಕೊನೆಯ 10 ಪಂದ್ಯಗಳನ್ನು ಗಣನೆಗೆ ತೆಗೆದುಕೊಂಡರೆ ಆರ್​ಸಿಬಿ ಕೆಕೆಆರ್ ವಿರುದ್ದ ಕೇವಲ 3 ಬಾರಿ ಮಾತ್ರ ಗೆದ್ದಿದೆ.

news18-kannada
Updated:April 18, 2021, 2:23 PM IST
RCB vs KKR: ಉಭಯ ತಂಡಗಳಲ್ಲೂ 1 ಬದಲಾವಣೆ ಸಾಧ್ಯತೆ: ಸಂಭಾವ್ಯ ಪ್ಲೇಯಿಂಗ್ 11 ಹೀಗಿರಲಿದೆ
Rcb vs Kkr
  • Share this:
ಐಪಿಎಲ್ ಸೀಸನ್ 14ನಲ್ಲಿ ಮೊದಲೆರಡು ಪಂದ್ಯಗಳಲ್ಲಿ ಭರ್ಜರಿ ಜಯ ಸಾಧಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು 3ನೇ ಪಂದ್ಯಕ್ಕಾಗಿ ಸಜ್ಜಾಗುತ್ತಿದೆ. ಭಾನುವಾರ ಚೆನ್ನೈನಲ್ಲಿ ನಡೆಯಲಿರುವ 3ನೇ ಪಂದ್ಯದಲ್ಲಿ ಆರ್​ಸಿಬಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ದ ಸೆಣಸಲಿದೆ. ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ಹ್ಯಾಟ್ರಿಕ್ ಗೆಲುವು ದಾಖಲಿಸುವ ಇರಾದೆಯಲ್ಲಿದೆ ಕೊಹ್ಲಿ ಪಡೆ.

ಅತ್ತ ಹೈದರಾಬಾದ್ ವಿರುದ್ದ ಮೊದಲ ಪಂದ್ಯ ಗೆದ್ದು, ಮುಂಬೈ ವಿರುದ್ದ ಸೋತಿರುವ ಕೆಕೆಆರ್ ತಂಡವು ಆರ್​ಸಿಬಿ ವಿರುದ್ದ ಗೆಲ್ಲುವ ವಿಶ್ವಾಸದಲ್ಲಿದೆ. ಇದಾಗ್ಯೂ ಆರ್​ಸಿಬಿ ತಂಡವನ್ನು ಮಣಿಸುವುದು ಸುಲಭವಲ್ಲ. ಹೀಗಾಗಿ 3ನೇ ಪಂದ್ಯದ ವೇಳೆ ಕೆಕೆಆರ್ ತಂಡದಲ್ಲಿ ಬದಲಾವಣೆ ಕಾಣಿಸಿಕೊಳ್ಳಬಹುದು. ಇತ್ತ ಆರ್​ಸಿಬಿ ಕೂಡ ಒಂದು ಬದಲಾವಣೆಯೊಂದಿಗೆ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ.

ಚೆನ್ನೈ ಪಿಚ್​ನಲ್ಲಿ ನಿಧಾನಗತಿಯ ಬೌಲಿಂಗ್ ಫಲ ನೀಡುತ್ತಿದ್ದು, ಹೀಗಾಗಿ ಕೆಕೆಆರ್​ ಆರ್​ಸಿಬಿ ವಿರುದ್ದ ಸುನೀಲ್ ನರೈನ್ ಅವರನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ. ಒಂದು ವೇಳೆ ನರೈನ್ ಪ್ಲೇಯಿಂಗ್ ಇಲೆವೆನ್​ನಲ್ಲಿ ಸ್ಥಾನ ಪಡೆದರೆ ಶಕೀಬ್ ಅಲ್ ಹಸನ್ ಹೊರಗುಳಿಯಲ್ಲಿದ್ದಾರೆ. ಕಳೆದ ಎರಡು ಪಂದ್ಯಗಳಲ್ಲಿ ನರೈನ್ ಆಡುವ ಬಳಗದಲ್ಲಿ ಸ್ಥಾನ ಪಡೆದಿರಲಿಲ್ಲ. ಹೀಗಾಗಿ 3ನೇ ಪಂದ್ಯದಲ್ಲಿ ಅವರಿಗೆ ಚಾನ್ಸ್​ ನೀಡುವ ಸಾಧ್ಯತೆ ಹೆಚ್ಚಿದೆ.

ಇತ್ತ ಆರ್​ಸಿಬಿ ಕೂಡ ತಂಡದಲ್ಲಿ ಒಂದು ಬದಲಾವಣೆ ಮಾಡಿಕೊಳ್ಳಬಹುದು. ಏಕೆಂದರೆ ಮೊದಲೆರಡು ಪಂದ್ಯಗಳಲ್ಲಿ ಆಲ್​ರೌಂಡರ್​ ಆಗಿ ಸ್ಥಾನ ಪಡೆದ ಡೇನಿಯಲ್ ಕ್ರಿಶ್ಚಿಯನ್ ಕಡೆಯಿಂದ ನಿರೀಕ್ಷಿತ ಮಟ್ಟದ ಪ್ರದರ್ಶನ ಮೂಡಿ ಬಂದಿರಲಿಲ್ಲ. ಕಳೆದೆರಡು ಪಂದ್ಯಗಳಿಂದ ಕ್ರಿಶ್ಚಿಯನ್ ಕೇವಲ 3 ಓವರ್​ ಮಾತ್ರ ಎಸೆದಿದ್ದಾರೆ. ಹಾಗೆಯೇ ಬ್ಯಾಟಿಂಗ್​ನಲ್ಲಿ 2 ರನ್​ಗಳಿಸಿದರೆ, ಒಂದೇ ಒಂದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿರಲಿಲ್ಲ. ಹೀಗಾಗಿ 3ನೇ ಪಂದ್ಯದ ವೇಳೆ ಡೇನಿಯಲ್ ಕ್ರಿಶ್ಚಿಯನ್ ಅವರನ್ನು ಕೈ ಬಿಡುವ ಸಾಧ್ಯತೆಯಿದೆ.

ಅವರ ಬದಲಿಗೆ ಆ್ಯಡಂ ಝಂಪಾ ಅವರನ್ನು ಕಣಕ್ಕಿಳಿಸಬಹುದು. ಇನ್ನು ವೇಗದ ಬೌಲರ್​ನನ್ನು ಕಣಕ್ಕಿಳಿಸಲು ಬಯಸಿದರೆ ಕೇನ್ ರಿಚರ್ಡ್ಸನ್ ಸ್ಥಾನ ಪಡೆಯುವ ಸಾಧ್ಯತೆಯಿದೆ. ಹೀಗಾಗಿ ಮೂರನೇ ಪಂದ್ಯದಲ್ಲಿ ಉಭಯ ತಂಡಗಳಲ್ಲೂ ಒಂದೊಂದು ಬದಲಾವಣೆ ಕಂಡು ಬರುವ ಸಾಧ್ಯತೆ ಹೆಚ್ಚು.

ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ಹೀಗಿರಲಿದೆ:

ಕೊಲ್ಕತ್ತಾ ನೈಟ್ ರೈಡರ್ಸ್ ಸಂಭಾವ್ಯ ಪ್ಲೇಯಿಂಗ್ ಇಲೆವೆನ್: ನಿತೀಶ್ ರಾಣಾ , ಶುಭ್​ಮನ್ ಗಿಲ್ , ರಾಹುಲ್ ತ್ರಿಪಾಠಿ , ಇಯಾನ್ ಮೋರ್ಗನ್, ಆಂಡ್ರೆ ರಸ್ಸೆಲ್ , ದಿನೇಶ್ ಕಾರ್ತಿಕ್, ಸುನೀಲ್ ನರೈನ್ , ಪ್ಯಾಟ್ ಕಮ್ಮಿನ್ಸ್ , ಹರ್ಭಜನ್ ಸಿಂಗ್ , ಪ್ರಸಿದ್ಧ್ ಕೃಷ್ಣ , ವರುಣ್ ಚಕ್ರವರ್ತಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಂಭಾವ್ಯ ಪ್ಲೇಯಿಂಗ್ ಇಲೆವೆನ್: ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ಶಹಬಾಜ್ ಅಹ್ಮದ್, ಗ್ಲೆನ್ ಮ್ಯಾಕ್ಸ್​ವೆಲ್, ಎಬಿ ಡಿವಿಲಿಯರ್ಸ್​, ವಾಷಿಂಗ್ಟನ್ ಸುಂದರ್, ಕೈಲ್ ಜೇಮಿಸನ್, ಆ್ಯಡಂ ಝಂಪಾ, ಮೊಹಮ್ಮದ್ ಸಿರಾಜ್, ಹರ್ಷಲ್ ಪಟೇಲ್, ಯುಜುವೇಂದ್ರ ಚಹಲ್.

ಪಂದ್ಯದ ಸಮಯ: 3.30

ಸ್ಥಳ: ಚೆನ್ನೈನ ಚಿದಂಬರಂ ಸ್ಟೇಡಿಯಂ

ನೇರ ಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​, ಹಾಟ್​ ಸ್ಟಾರ್ಸ್​
Published by: zahir
First published: April 18, 2021, 2:23 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories