DC vs PBKS Playing 11: ಪಂಜಾಬ್ ತಂಡದಲ್ಲಿ 1 ಬದಲಾವಣೆ: ಉಭಯ ತಂಡಗಳು ಹೀಗಿವೆ

ಉಭಯ ತಂಡಗಳು ಐಪಿಎಲ್​ನಲ್ಲಿ 26 ಬಾರಿ ಮುಖಾಮುಖಿಯಾಗಿದ್ದು, ಅದರಲ್ಲಿ ಪಂಜಾಬ್ 15 ಬಾರಿ ವಿಜಯ ಸಾಧಿಸಿದೆ. ಇನ್ನು ಡೆಲ್ಲಿ ಕ್ಯಾಪಿಟಲ್ಸ್ 11 ಗೆಲುವು ದಾಖಲಿಸಲು ಮಾತ್ರ ಯಶಸ್ವಿಯಾಗಿದೆ.

dc vs pbks

dc vs pbks

 • Share this:
  ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್​ನ 11ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ಮುಖಾಮುಖಿಯಾಗಿದೆ. ಈ ಮೈದಾನದಲ್ಲಿ ಉಭಯ ತಂಡಗಳು ಈಗಾಗಲೇ ಒಂದು ಸೋಲು, ಒಂದು ಗೆಲುವು ದಾಖಲಿಸಿದೆ. ಸಿಎಸ್​ಕೆ ವಿರುದ್ದ ಹೀನಾಯವಾಗಿ ಸೋತಿರುವ ರಾಹುಲ್ ಪಡೆ ಇಂದಿನ ಪಂದ್ಯದ ಮೂಲಕ ಜಯದ ಲಯಕ್ಕೆ ಮರಳುವ ಇರಾದೆಯಲ್ಲಿದ್ದರೆ, ಅತ್ತ ರಾಜಸ್ಥಾನ್ ರಾಯಲ್ಸ್ ವಿರುದ್ದ ಪರಾಜಯಗೊಂಡಿರುವ ರಿಷಭ್ ಪಂತ್ ಇಂದು ಜಯ ಸಾಧಿಸುವ ವಿಶ್ವಾಸದಲ್ಲಿದೆ.

  ಉಭಯ ತಂಡಗಳು ಐಪಿಎಲ್​ನಲ್ಲಿ 26 ಬಾರಿ ಮುಖಾಮುಖಿಯಾಗಿದ್ದು, ಅದರಲ್ಲಿ ಪಂಜಾಬ್ 15 ಬಾರಿ ವಿಜಯ ಸಾಧಿಸಿದೆ. ಇನ್ನು ಡೆಲ್ಲಿ ಕ್ಯಾಪಿಟಲ್ಸ್ 11 ಗೆಲುವು ದಾಖಲಿಸಲು ಮಾತ್ರ ಯಶಸ್ವಿಯಾಗಿದೆ. ಕಳೆದ ಸೀಸನ್​ಲ್ಲಿನ ಎರಡು ಪಂದ್ಯಗಳಲ್ಲಿ ಉಭಯ ತಂಡಗಳು ಒಂದೊಂದು ಜಯ ಸಾಧಿಸಿದೆ. ಕೊನೆಯ 10 ಪಂದ್ಯಗಳ ಅಂಕಿ ಅಂಶಗಳನ್ನು ಗಮನಿಸಿದರೆ ಪಂಜಾಬ್ ತಂಡವು ಮೇಲುಗೈ ಹೊಂದಿದ್ದು, ಡೆಲ್ಲಿ ವಿರುದ್ದ 6 ಜಯ ಸಾಧಿಸಿದೆ.

  ಇನ್ನು ಉಭಯ ತಂಡಗಳ ಮುಖಾಮುಖಿಯಲ್ಲಿ ಮಿಂಚಿರುವ ಆಟಗಾರರನ್ನು ಗಮನಿಸಿದರೆ, ವಿರೇಂದ್ರ ಸೆಹ್ವಾಗ್ ಅಗ್ರಸ್ಥಾನದಲ್ಲಿದ್ದಾರೆ. ಡೆಲ್ಲಿ ಪರ ಆಡಿದ್ದ ವೀರು ಪಂಜಾಬ್ ವಿರುದ್ದ 330 ರನ್ ಕಲೆಹಾಕಿದ್ದಾರೆ. ಹಾಗೆಯೇ ಪಂಜಾಬ್ ಪರ ಡೇವಿಡ್ ಮಿಲ್ಲರ್ 322 ರನ್ ಬಾರಿಸಿದರೆ, ಡೆಲ್ಲಿ ಆಟಗಾರ ಶ್ರೇಯಸ್ ಅಯ್ಯರ್ ಪಂಜಾಬ್ ವಿರುದ್ದ 298 ರನ್​ಗಳಿಸಿದ್ದಾರೆ. ಆದರೆ ಈ ಮೂವರು ಆಟಗಾರರು ಪ್ರಸ್ತುತ ತಂಡಗಳಿಲ್ಲ ಎಂಬುದು ವಿಶೇಷ.

  ಹಾಗೆಯೇ ಬೌಲರುಗಳ ವಿಭಾಗದಲ್ಲಿ ಡೆಲ್ಲಿ ವಿರುದ್ದ ಸಂದೀಪ್ ಶರ್ಮಾ(14), ಇರ್ಫಾನ್ ಪಠಾಣ್ (14) ಪಂಜಾಬ್ ಪರ ಮಿಂಚಿದರೆ, ಡೆಲ್ಲಿ ಪರ ಅಕ್ಷರ್ ಪಟೇಲ್ 13 ವಿಕೆಟ್ ಕಬಳಿಸಿದ್ದಾರೆ. ಇವರಲ್ಲಿ ಅಕ್ಷರ್ ಪಟೇಲ್ ಮಾತ್ರ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಇದಾಗ್ಯೂ ಕೊರೋನಾ ಸೋಂಕಿಗೆ ಒಳಗಾಗಿರುವ ಅಕ್ಷರ್ ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯುವುದಿಲ್ಲ. ಇದಾಗ್ಯೂ ಉಭಯ ತಂಡಗಳಲ್ಲೂ ಸ್ಟಾರ್ ಆಟಗಾರರ ದಂಡೇ ಇದ್ದು, ಹೀಗಾಗಿ ಮುಂಬೈ ಮೈದಾನದಲ್ಲಿ ಇಂದು ರನ್​ ಮಳೆ ಸುರಿಯುವ ಸಾಧ್ಯತೆಯಿದೆ.

  ಇಂದಿನ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್​ ಮುರುಗನ್ ಅಶ್ವಿನ್ ಬದಲು ಯುವ ಆಟಗಾರ ಜಲಜ್ ಸಕ್ಸೇನಾಗೆ ಅವಕಾಶ ನೀಡಿದೆ. ಹಾಗೆಯೇ ಡೆಲ್ಲಿ ಪರ ಸ್ಟೀವ್ ಸ್ಮಿತ್ ಕಣಕ್ಕಿಳಿಯುತ್ತಿದ್ದಾರೆ.

  ಪಂಜಾಬ್ ಕಿಂಗ್ಸ್​ ಪ್ಲೇಯಿಂಗ್ ಇಲೆವೆನ್

  1) ಕೆ.ಎಲ್ ರಾಹುಲ್ (ನಾಯಕ)

  2) ಮಾಯಾಂಕ್ ಅಗರ್ವಾಲ್

  3) ಕ್ರಿಸ್ ಗೇಲ್

  4) ದೀಪಕ್ ಹೂಡಾ

  5) ನಿಕೋಲಸ್ ಪೂರನ್

  6) ಶಾರುಖ್ ಖಾನ್

  7) ಜೈ ರಿಚರ್ಡ್ಸನ್

  8) ಜಲಜ್ ಸಕ್ಸೇನಾ

  9) ರಿಲೆ ಮೆರೆಡಿತ್

  10) ಮೊಹಮ್ಮದ್ ಶಮಿ

  11) ಅರ್ಷ್‌ದೀಪ್ ಸಿಂಗ್

  ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಯಿಂಗ್ ಇಲೆವೆನ್

  1) ಶಿಖರ್ ಧವನ್

  2) ಪೃಥ್ವಿ ಶಾ

  3) ಲಲಿತ್ ಯಾದವ್

  4) ರಿಷಭ್ ಪಂತ್ (ನಾಯಕ)

  5) ಮಾರ್ಕಸ್ ಸ್ಟೋನಿಸ್

  6) ಸ್ಟೀವ್ ಸ್ಮಿತ್

  7) ಕ್ರಿಸ್ ವೋಕ್ಸ್

  8) ರವಿಚಂದ್ರನ್ ಅಶ್ವಿನ್

  9) ಕಗಿಸೊ ರಬಡಾ

  10) ಲುಕ್ಮಾನ್ ಮೆರಿವಾಲ

  11) ಅವೇಶ್ ಖಾನ್
  Published by:zahir
  First published: