2021ರ ಇಂಡಿಯನ್ ಪ್ರೀಮಿಯರ್ ಲೀಗ್ ಪ್ರಾರಂಭವಾಗಿದ್ದು, ಇಂದು ಮುಂಬೈನ ವಾಂಖೆಡೆ ಮೈದಾನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ ನಡುವೆ ಪಂದ್ಯ ನಡೆಯುತ್ತಿದೆ. ಮೊದಲು ಟಾಸ್ ಗೆದ್ದ ಕ್ಯಾಪಿಟಲ್ ತಂಡ ಬೌಲಿಂಗ್ ಆಯ್ಕೆ ಮಾಡಿದೆ.
ಇತ್ತ ಸಿಎಸ್ಕೆ ತಂಡ ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ಫಾಫ್ ಡು ಪ್ಲೇಸಿಸ್ ಮತ್ತು ರುತುರಾಜ್ ಗಾಯಕವಾಡ್ ಮೇಲೆ ಭಾರೀ ನಿರೀಕ್ಷೆ ಇತ್ತಾದರು. ಕ್ರಿಸ್ ಮೋಕ್ಸ್ ಎಸೆದ ಮೊದಲ ಓವರ್ನಲ್ಲೇ ಸೊನ್ನೆ ಮೊತ್ತಕ್ಕೆ ಡು ಪ್ಲೇಸಿಸ್ ವಿಕೆಟ್ ಒಪ್ಪಿಸಿದರು. ನಂತರ ಅವೇಶ್ ಖಾನ್ ಎಸೆದ 3ನೇ ಎಸೆತಕ್ಕೆ ರುತುರಾಜ್ ಗಾಯಕವಾಡ್ (5) ಅವರು ಶಿಖರ್ ಧವನ್ಗೆ ಕ್ಯಾಚ್ ನೀಡಿ ಪೆವಿಲಿಯನತ್ತ ನಡೆದರು.
ನಂತರ ಇವರಿಬ್ಬರ ಜಾಗ ತುಂಬಲು ಮೊಯಿನ್ ಆಲಿ ಮತ್ತು ಸುರೇಶ್ ರೈನಾ ಕ್ರೀಸ್ಗೆ ಬಂದರು. ತಂಡಕ್ಕೆ ರನ್ಗಳ ಮೊತ್ತ ಏರಿಸುವಲ್ಲಿ ಇಬ್ಬರು ಮುಂದಾದರು. ಅಶ್ವಿನ್ ಸ್ವಿನ್ ಮೋಡಿಯ ಮೂಲಕ ವಿಕೆಟ್ ಕಬಳಿಸುವ ತಂತ್ರ ನಡೆಸಿದರಾದರೆ ಮೊಯಿನ್ ಆಲಿ ಅವರ ಎಸೆತವನ್ನು ಗಮನಿಸಿ ಎರಡು ಸಿಕ್ಸ್ ಬಾರಿಸಿದರು. ಆದರೆ ಮೂರನೇ ಸಿಕ್ಸ್ ಬಾರಿಸುವ ಸಮಯಕ್ಕೆ ಶಿಖರ್ಗೆ ಕ್ಯಾಚ್ ನೀಡಿ ಮೊಯಿನ್ (36) ಔಟ್ ಆದರು.
ಮೊಯಿನ್ ಆಲಿ ನಂತರ ಅಂಬಟಿ ರಾಯುಡು ಕಣಕ್ಕಿಳಿದರು. ಆದರೆ ಒಂದೆಡೆ ತಂಡಕ್ಕೆ ಆರಂಭಿಕ ಆಘಾತ ಮತ್ತೊಂದೆಡೆ ತಂಡಕ್ಕೆ ಹೆಚ್ಚಿನ ರನ್ಗಳ ಅವಶ್ಯಕತೆ ಇದ್ದ ಕಾರಣ ಸುರೇಶ್ ರೈನಾ ಅವರು ತಂಡದ ಮೊತ್ತವನ್ನು ಸೇರಿಸಲು ಮುಂದಾದರು. ಅವರಿಗೆ ಸರಿಯಾಗಿ ರಾಯುಡು ಸಾಥ್ ನೀಡಿದರು. ಕ್ರೀಸ್ನಲ್ಲಿ ಹೆಚ್ಚು ಹೊತ್ತು ನಿಲ್ಲಲಿಲ್ಲ. ಕಾರಣ ಟಾಮ್ ಕುರ್ರನ್ ಎಸೆದ ಎಸೆತಕ್ಕೆ ಶಿಖರ್ಗೆ ಕ್ಯಾಚ್ ನೀಡುವ ಮೂಲಕ ರಾಯುಡು (23) ಔಟ್ ಆದರು. ಇದರ ಮಧ್ಯದಲ್ಲಿ. ರೈನಾ 3 ಬೌಂಡರಿ, 4 ಸಿಕ್ಸ್ ಬಾರಿಸುವ ಮೂಲಕ ಅರ್ಧ ಶತಕ ಪೂರೈಸಿದರು. ಆ ಬಳಿಕ ರೈನಾ (54) ರನ್ ಔಟ್ ಆಗುವ ಮೂಲಕ ಕ್ರಿಸ್ವೋಕ್ಸ್ಗೆ ವಿಕೆಟ್ ಒಪ್ಪಿಸಿದರು.
ರೈನಾ ಬಳಿಕ ಬಂದ ನಾಯಕ ಧೋನಿ ಮೇಲೆ ಭಾರಿ ನೀರಿಕ್ಷೆಯಿತ್ತಾದರು. ಅವೇಶ್ ಖಾನ್ರ ಅವೇಶಭರಿತ ಎಸೆತಕ್ಕೆ ಮಾಹಿ ಸೊನ್ನೆಗೆ ಔಟ್ ಆದರು. ನಂತರ ಜಡೇಜಾಗೆ ಜೊತೆಯಾಗಿ ನಿಲ್ಲಲು ಸ್ಯಾಮ್ ಕುರ್ರಾನ್ ಕ್ರೀಸ್ಗೆ ಬಂದರು. ಅತ್ತ ಸಹೋದರ ಟಾಮ್ ಕುರ್ರಾನ್ ಎಸೆದ ಎಸೆತವನ್ನು ಒಂದೊಂದರಂತೆ ಪೆವಿಲಿಯನತ್ತ ಅಟ್ಟಿದರು. ಹೀಗೆ 4 ಬೌಂಡರಿ, 2 ಸಿಕ್ಸ್ ಬಾರಿಸುವ ಮೂಲಕ ಸ್ಯಾಮ್ (34) ಔಟ್ ಆದರೆ. ಜಡೇಜಾ(26) ಮೂರು ಬೌಂಡರಿ ಬಾರಿಸುವ ಮೂಲಕ ಡೆಲ್ಲಿ ತಂಡಕ್ಕೆ 188 ರನ್ಗಳ ಟಾರ್ಗೆಟ್ ನೀಡಿದರು......(ಮುಂದುವರಿಯುತ್ತದೆ)
CSK Run: 188/7
ಚೆನ್ನೈ ತಂಡದಲ್ಲಿ ಆಡಲಿರುವ ಸಂಭಾವ್ಯ ಆಟಗಾರರು;
ರುತುರಾಜ್ ಗಾಯಕವಾಡ್, ಅಂಬಾಟಿ ರಾಯುಡು, ಫಾಫ್ ಡು ಪ್ಲೆಸಿಸ್, ಸುರೇಶ್ ರೈನಾ, ಎಂ.ಎಸ್.ಧೋನಿ (ನಾಯಕ), ಮೊಯೀನ್ ಅಲಿ, ರವೀಂದ್ರ ಜಡೇಜಾ, ಸ್ಯಾಮ್ ಕುರ್ರನ್, ಡ್ವೇನ್ ಬ್ರಾವೋ, ಶಾರ್ದುಲ್ ಠಾಕೂರ್, ದೀಪಕ್ ಚಹರ್
ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಆಡಲಿರುವ ಸಂಭಾವ್ಯ ಆಟಗಾರರು;
ಶಿಖರ್ ಧವನ್, ಪೃಥ್ವಿ ಶಾ, ಅಜಿಂಕ್ಯ ರಹಾನೆ, ರಿಷಭ್ ಪಂತ್ (ನಾಯಕ), ಮಾರ್ಕಸ್ ಸ್ಟೋಯಿನಿಸ್, ಶಿಮ್ರಾನ್ ಹೆಟ್ಮಿಯರ್, ಕ್ರಿಸ್ ವೋಕ್ಸ್, ರವಿಚಂದ್ರನ್ ಅಶ್ವಿನ್, ಟಾಮ್ ಕುರ್ರನ್, ಅಮಿತ್ ಮಿಶ್ರಾ, ಅವೇಶ್ ಖಾನ್
ಪಿಚ್ ಹೇಗಿದೆ?
ಮುಂಬೈನ ವಾಂಖೆಡೆ ಮೈದಾನವು ಬ್ಯಾಟಿಂಗ್ ಮಾಡಲು ಯೋಗ್ಯವಾಗಿದ್ದರು, 200ಕ್ಕಿಂತ ಹೆಚ್ಚಿನ ರನ್ ನಿರೀಕ್ಷಿಸುವು ಕಷ್ಟಕರ. ಮತ್ತೊಂದೆಡೆ ಸ್ಪಿನ್ ಬೌಲಿಂಗ್ ಮಾಡಲು ಅಷ್ಟೇನು ಯೋಗ್ಯವಾಗಿಲ್ಲ. 30 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಆಟಗಾರರ ಪರಿಸ್ಥಿತಿ ಹೇಗೆಂದು ಪಂದ್ಯದ ವೇಳೆ ಗೊತ್ತಾಗಲಿದೆ.
ಎರಡು ತಂಡಗಳು ಬಲಿಷ್ಠ ಆಟಗಾರರನ್ನು ಹೊಂದಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬ್ರಾಂಡ್ ವ್ಯಾಲ್ಯೂ ಗಮನಿಸಿದಾಗ ಸಿಎಸ್ಕೆ ತಂಡ ಶೇ 59.8ರಷ್ಟನ್ನು ಹೊಂದಿದೆ. ಅಂತೆಯೇ ರಿಷಭ್ ಪಂತ್ ತಂಡ ಶೇ.52.2 ರಷ್ಟನ್ನು ಹೊಂದಿದೆ.
2009ರಿಂದ 2020ರವರೆಗೆ ಈ ಎರಡು ತಂಡಗಳ ಬೆಳವಣೆಗೆಯನ್ನು ಗಮನಿಸುದಾದರೆ ಚೆನ್ನೈ ತಂಡ ಶೇ 53 ರಷ್ಟು ಬೆಳವಣಿಗೆ ಕಂಡು ಮುನ್ನುಗ್ಗುತ್ತಿದೆ. ಡೆಲ್ಲಿ ತಂಡ ಶೇ 33 ರಷ್ಟಿದ್ದು ಸಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ