HOME » NEWS » Ipl » IPL 2021 KOLKATA KNIGHT RIDERS VS MUMBAI INDIANS HEAD TO HEAD RECORD ZP

IPL 2021, MI vs KKR: ಅಂಕಿ ಅಂಶಗಳ ಪ್ರಕಾರ ಯಾರುದ್ದು ಮೇಲುಗೈ..?

ಉಭಯ ತಂಡಗಳ ನಡುವಣ ಕದನದ ಅಂಕಿ ಅಂಶಗಳನ್ನು ಗಮನಿಸಿದರೆ ಮುಂಬೈ ಇಂಡಿಯನ್ಸ್ ತಂಡ ಬಲಿಷ್ಠವಾಗಿದೆ. ಏಕೆಂದರೆ ಇದುವರೆಗೆ ಈ ತಂಡಗಳು 27 ಬಾರಿ ಮುಖಾಮುಖಿಯಾಗಿದೆ. ಅದರಲ್ಲಿ ಕೊಲ್ಕತ್ತಾ ನೈಟ್​ ರೈಡರ್ಸ್​ ಗೆಲುವು ದಾಖಲಿಸಿರುವುದು ಕೇವಲ 6 ಬಾರಿ ಮಾತ್ರ. ಹಾಗೆಯೇ ಮುಂಬೈ ಇಂಡಿಯನ್ಸ್ 21 ಬಾರಿ ಜಯಗಳಿಸಿ ಕೆಕೆಆರ್​ ವಿರುದ್ದ ಪಾರುಪತ್ಯ ಸಾಧಿಸಿದೆ.

news18-kannada
Updated:April 13, 2021, 4:53 PM IST
IPL 2021, MI vs KKR: ಅಂಕಿ ಅಂಶಗಳ ಪ್ರಕಾರ ಯಾರುದ್ದು ಮೇಲುಗೈ..?
MI vs KKR
  • Share this:
ಐಪಿಎಲ್​ನ 5ನೇ ಪಂದ್ಯದಲ್ಲಿ ಇಂದು ಮುಂಬೈ ಇಂಡಿಯನ್ಸ್​​ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ಮುಖಾಮುಖಿಯಾಗಲಿದೆ . ಉಭಯ ತಂಡಗಳು ಈಗಾಗಲೇ ತಲಾ ಒಂದು ಪಂದ್ಯವನ್ನಾಡಿದ್ದು, ಮೊದಲ ಪಂದ್ಯದಲ್ಲಿ ಕೆಕೆಆರ್ ತಂಡ ಎಸ್​ಆರ್​ಹೆಚ್​ ವಿರುದ್ದ​ ಗೆಲುವು ದಾಖಲಿಸಿದರೆ, ಮುಂಬೈ ಇಂಡಿಯನ್ಸ್​ ಆರ್​ಸಿಬಿ ವಿರುದ್ದ ಉದ್ಘಾಟನಾ ಪಂದ್ಯದಲ್ಲಿ ಸೋಲುಂಡಿತ್ತು. ಹೀಗಾಗಿ ಇಂದಿನ ಪಂದ್ಯದ ಮೂಲಕ ಗೆಲುವಿನ ಖಾತೆ ತೆರೆಯಲು ರೋಹಿತ್ ಶರ್ಮಾ ಪಡೆ ಸಕಲ ಸಿದ್ದತೆಯಲ್ಲಿದೆ.

ಉಭಯ ತಂಡಗಳ ನಡುವಣ ಕದನದ ಅಂಕಿ ಅಂಶಗಳನ್ನು ಗಮನಿಸಿದರೆ ಮುಂಬೈ ಇಂಡಿಯನ್ಸ್ ತಂಡ ಬಲಿಷ್ಠವಾಗಿದೆ. ಏಕೆಂದರೆ ಇದುವರೆಗೆ ಈ ತಂಡಗಳು 27 ಬಾರಿ ಮುಖಾಮುಖಿಯಾಗಿದೆ. ಅದರಲ್ಲಿ ಕೊಲ್ಕತ್ತಾ ನೈಟ್​ ರೈಡರ್ಸ್​ ಗೆಲುವು ದಾಖಲಿಸಿರುವುದು ಕೇವಲ 6 ಬಾರಿ ಮಾತ್ರ. ಹಾಗೆಯೇ ಮುಂಬೈ ಇಂಡಿಯನ್ಸ್ 21 ಬಾರಿ ಜಯಗಳಿಸಿ ಕೆಕೆಆರ್​ ವಿರುದ್ದ ಪಾರುಪತ್ಯ ಸಾಧಿಸಿದೆ. ಇನ್ನು ಕಳೆದ ಸೀಸನ್​ ಐಪಿಎಲ್​ನ ಎರಡೂ ಪಂದ್ಯಗಳಲ್ಲೂ ಮುಂಬೈ ಇಯಾನ್ ಮೋರ್ಗನ್ ಪಡೆಯನ್ನು ಬಗ್ಗು ಬಡಿದಿದೆ. ಅಲ್ಲದೆ ಕೊನೆಯ 10 ಪಂದ್ಯಗಳನ್ನು ಗಣನೆಗೆ ತೆಗೆದುಕೊಂಡರೆ ಕೆಕೆಆರ್​ ಕೇವಲ ಒಂದರಲ್ಲಿ ಮಾತ್ರ ಜಯ ಸಾಧಿಸಿದೆ.

ಇನ್ನು ಬ್ಯಾಟ್ಸ್​ಮನ್​ಗಳ ಪ್ರದರ್ಶನವನ್ನು ನೋಡಿದರೆ, ಕೆಕೆಆರ್​ ವಿರುದ್ದ ಮುಂಬೈ ನಾಯಕ ರೋಹಿತ್ ಶರ್ಮಾ ಉತ್ತಮ ಫಾರ್ಮ್ ಪ್ರದರ್ಶಿಸಿದ್ದಾರೆ. ಹಿಟ್​ಮ್ಯಾನ್ ಕಳೆದ ಹತ್ತು ಸೀಸನ್​ಗಳಲ್ಲಿ ಕೆಕೆಆರ್ ವಿರುದ್ದ 823 ರನ್ ಬಾರಿಸಿರುವುದು ಇದಕ್ಕೆ ಸಾಕ್ಷಿ. ಇನ್ನು ಕೊಲ್ಕತ್ತಾ ಪರ ಮುಂಬೈ ವಿರುದ್ದ ಯಶಸ್ವಿ ಬ್ಯಾಟ್ಸ್​ಮನ್ ಎನಿಸಿಕೊಂಡಿದ್ದು ಗೌತಮ್ ಗಂಭೀರ್. 8 ಸೀಸನ್​ಗಳಲ್ಲಿ ಮುಂಬೈ ಇಂಡಿಯನ್ಸ್ ವಿರುದ್ದ 349 ರನ್ ಕಲೆಹಾಕಿರುವ ಗೌತಿ ಪ್ರಸ್ತುತ ತಂಡದಲ್ಲಿಲ್ಲ ಎಂಬುದು ವಿಶೇಷ.

ಹಾಗೆಯೇ ಬೌಲರುಗಳ ವಿಭಾಗದಲ್ಲಿ ಕೆಕೆಆರ್ ತಂಡದ ಸುನೀಲ್ ನರೈನ್ ಅಗ್ರಸ್ಥಾನದಲ್ಲಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ದ ನರೈನ್ ಇದುವರೆಗೆ 22 ವಿಕೆಟ್ ಕಬಳಿಸಿದ್ದಾರೆ. ಇನ್ನು ಕೆಕೆಆರ್​ ವಿರುದ್ದ ಮುಂಬೈ ಬೌಲರ್​ ಆಗಿದ್ದ ಲಸಿತ್ ಮಾಲಿಂಗ 20 ವಿಕೆಟ್ ಪಡೆದು ಯಶಸ್ವಿ ಎನಿಸಿಕೊಂಡಿದ್ದರು. ಅದೇ ರೀತಿ ಪ್ರಸ್ತುತ ತಂಡದಲ್ಲಿರುವ ಬುಮ್ರಾ ಕೆಕೆಆರ್ ವಿರುದ್ದ 12 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನು ಕಳೆದ ಸೀಸನ್​ನಲ್ಲಿನ ಬ್ಯಾಟ್ಸ್​ಮನ್​ ಫಾರ್ಮ್​ ಗಮಿಸಿದರೆ, ಇಶಾನ್ ಕಿಶನ್ (516), ಕ್ವಿಂಟನ್ ಡಿಕಾಕ್ (503) ಹಾಗೂ ಸೂರ್ಯಕುಮಾರ್ ಯಾದವ್ (480) ಟಾಪ್ ತ್ರಿ ಬ್ಯಾಟ್ಸ್​ಮನ್​ಗಳೆನಿಸಿಕೊಂಡಿದ್ದಾರೆ. ಹಾಗೆಯೇ ಬೌಲರುಗಳ ಪಟ್ಟಿಯಲ್ಲಿ ಜಸ್​ಪ್ರೀತ್ ಬುಮ್ರಾ (27), ಟ್ರೆಂಟ್ ಬೌಲ್ಟ್ (25) ಹಾಗೂ ಕೆಕೆಆರ್ ತಂಡದ ವರುಣ್ ಚಕ್ರವರ್ತಿ (17) ಟಾಪ್ 3 ಬೌಲರುಗಳಾಗಿದ್ದಾರೆ.

ಇಲ್ಲಿ ಆಟಗಾರರ ಕಳೆದ ಸೀಸನ್​ನಲ್ಲಿನ ಪ್ರದರ್ಶನ ಹಾಗೂ ಒಟ್ಟಾರೆ ಪ್ರದರ್ಶನವನ್ನು ಗಣನೆಗೆ ತೆಗೆದುಕೊಂಡರೆ ಮುಂಬೈ ಇಂಡಿಯನ್ಸ್ ಬಲಿಷ್ಠವಾಗಿರುವುದು ಸ್ಪಷ್ಟ. ಆದರೆ ಅತ್ತ ಎಸ್​ಆರ್​ಹೆಚ್ ವಿರುದ್ಧ ಗೆಲ್ಲುವ ಮೂಲಕ ಅಭಿಯಾನ ಆರಂಭಿಸಿರುವ ಕೆಕೆಆರ್​ ಮುಂಬೈಗೆ ಹೇಗೆ ಸವಾಲಾಗಲಿದೆ ಕಾದು ನೋಡಬೇಕಿದೆ.

ಕೋಲ್ಕತಾ ನೈಟ್ ರೈಡರ್ಸ್: ದಿನೇಶ್ ಕಾರ್ತಿಕ್, ಆಂಡ್ರೆ ರಸ್ಸೆಲ್, ಕಮಲೇಶ್ ನಾಗರ್ಕೋಟಿ, ಕುಲದೀಪ್ ಯಾದವ್, ಲಾಕಿ ಫರ್ಗುಸನ್, ನಿತೀಶ್ ರಾಣಾ, ಪ್ರಸಿದ್ ಕೃಷ್ಣ, ಗುರ್ಕೀರತ್​ ಸಿಂಗ್, ಸಂದೀಪ್ ವಾರಿಯರ್, ಶಿವಂ ಮಾವಿ, ಶುಬ್ಮನ್ ಗಿಲ್, ಸುನೀಲ್ ನರೀನ್, ಇಯಾನ್ ಮೋರ್ಗಾನ್, ಪ್ಯಾಟ್ ಕುಮಿನ್ಸ್, ರಾಹುಲ್ ತ್ರಿಪಾಠಿ , ಟಿಮ್ ಸೀಫರ್ಟ್, ಶಕೀಬ್ ಅಲ್ ಹಸನ್, ಶೆಲ್ಡನ್ ಜಾಕ್ಸನ್, ವೈಭವ್ ಅರೋರಾ, ಕರುಣ್ ನಾಯರ್, ಹರ್ಭಜನ್ ಸಿಂಗ್, ಬೆನ್ ಕಟಿಂಗ್, ವೆಂಕಟೇಶ್ ಅಯ್ಯರ್

ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ, ಆದಿತ್ಯ ತಾರೆ, ಅನ್ಮೋಲ್ಪ್ರೀತ್ ಸಿಂಗ್, ಅಂಕುಲ್ ರಾಯ್, ಧವಲ್ ಕುಲಕರ್ಣಿ, ಹಾರ್ದಿಕ್ ಪಾಂಡ್ಯ, ಇಶಾನ್ ಕಿಶನ್, ಜಸ್ಪ್ರೀತ್ ಬುಮ್ರಾ, ಜಯಂತ್ ಯಾದವ್, ಕೀರನ್ ಪೊಲಾರ್ಡ್, ಕ್ರುನಾಲ್ ಪಾಂಡ್ಯ, ಕ್ವಿಂಟನ್ ಡಿ ಕಾಕ್, ರಾಹುಲ್ ಚಹರ್, ಸೂರ್ಯಕುಮಾರ್ ಯಾದವ್ ತಿವಾರಿ, ಟ್ರೆಂಟ್ ಬೌಲ್ಟ್, ಆಡಮ್ ಮಿಲ್ನೆ, ನಾಥನ್ ಕೌಲ್ಟರ್-ನೈಲ್, ಪಿಯೂಷ್ ಚಾವ್ಲಾ, ಜೇಮ್ಸ್ ನೀಶನ್, ಯುಧ್ವೀರ್ ಚರಕ್, ಮಾರ್ಕೊ ಜಾನ್ಸೆನ್, ಅರ್ಜುನ್ ತೆಂಡೂಲ್ಕರ್
Published by: zahir
First published: April 13, 2021, 4:53 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories