IPL 2021, Kolkata Knight Riders vs Delhi Capitals: ಚೆನ್ನೈ ವಿರುದ್ಧ ಯಾರಾಗಲಿದ್ದಾರೆ ಫೈನಲಿಸ್ಟ್​?

IPL 2021 Qualifier; ಕ್ವಾಲಿಫೈಯರ್ 1 ರಲ್ಲಿ ಸಿಎಸ್‌ಕೆ ವಿರುದ್ಧ ಸೋತ ನಂತರ ಡಿಸಿ ಇಂದಿನ ಎರಡನೇ ಕ್ವಾಲಿಫೈಯರ್​ಗೆ ಸಿದ್ದತೆ ನಡೆಸಿದ್ದರೆ, ಕೆಕೆಆರ್ ದಿ ಎಲಿಮಿನೇಟರ್‌ನಲ್ಲಿ ಆರ್‌ಸಿಬಿ ವಿರುದ್ಧ 4 ವಿಕೆಟ್ ಜಯದ ನಂತರ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ.

ರಿಷಭ್ ಪಂತ್​-ಇಯಾನ್ ಮಾರ್ಗನ್.

ರಿಷಭ್ ಪಂತ್​-ಇಯಾನ್ ಮಾರ್ಗನ್.

 • Share this:
  ಶಾರ್ಜಾ (ಅಕ್ಟೋಬರ್​ 13) ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಗೆಲುವಿನ ಬೆನ್ನಿಗೆ ಎರಡು ಬಾರಿಯ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ (Kolkata Knight Riders) ಬುಧವಾರ ಇಲ್ಲಿ ನಡೆಯಲಿರುವ ಐಪಿಎಲ್ 2021 ರ ಕ್ವಾಲಿಫೈಯರ್ 2 ರಲ್ಲಿ ದೆಹಲಿ ಕ್ಯಾಪಿಟಲ್ಸ್‌ನೊಂದಿಗೆ (Delhi Capitals) ಹೋರಾಡಲಿದೆ. ಶಾರ್ಜಾ (Sharja) ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಐಪಿಎಲ್ 2021 ರಲ್ಲಿ (IPL 2021) ಬುಧವಾರದ ಕ್ವಾಲಿಫೈಯರ್ 2 ಪಂದ್ಯಾವಳಿಯಲ್ಲಿ ಡೆಲ್ಲಿ ಮತ್ತು ಕೆಕೆಆರ್​ ಫೈನಲ್‌ ಸ್ಥಾನಕ್ಕಾಗಿ ಪೈಪೋಟಿ ನಡೆಸಲಿವೆ. ಆದರೆ, ಈ ಎರಡೂ ತಂಡಗಳೂ ಉತ್ತಮ ಗುಣಮಟ್ಟದ ಕ್ರಿಕೆಟ್ ಆಡುತ್ತಿದ್ದು, ಯಾರು ಗೆಲ್ಲಲಿದ್ದಾರೆ? ಎಂದು ಸ್ಪಷ್ಟವಾಗಿ ಹೇಳುವುದು ಕಷ್ಟವಾಗಿದೆ. ಆದರೆ, ಸಮೀಕರಣ ಮಾತ್ರ ಸರಳವಾಗಿದ್ದು, ಈ ಪಂದ್ಯದಲ್ಲಿ ಗೆಲ್ಲುವ ತಂಡ ಶುಕ್ರವಾರ ನಡೆಯಲಿರುವ ಫೈನಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ಸೋತ ತಂಡ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಲಿದೆ.

  ಕ್ವಾಲಿಫೈಯರ್ 1 ರಲ್ಲಿ ಸಿಎಸ್‌ಕೆ ವಿರುದ್ಧ ಸೋತ ನಂತರ ಡಿಸಿ ಇಂದಿನ ಎರಡನೇ ಕ್ವಾಲಿಫೈಯರ್​ಗೆ ಸಿದ್ದತೆ ನಡೆಸಿದ್ದರೆ, ಕೆಕೆಆರ್ ದಿ ಎಲಿಮಿನೇಟರ್‌ನಲ್ಲಿ ಆರ್‌ಸಿಬಿ ವಿರುದ್ಧ 4 ವಿಕೆಟ್ ಜಯದ ನಂತರ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ. ಈ ಋರುವಿನಲ್ಲಿ ಈ ಎರಡೂ ತಂಡಗಳು ಎರಡು ಬಾರಿ ಮುಖಾಮುಖಿಯಾಗಿದ್ದು ಇತ್ತಂಡಗಳೂ ತಲಾ ಎರಡು ಬಾರಿ ಗೆಲುವು ಸಾಧಿಸಿವೆ ಎಂಬುದು ಗಮನಾರ್ಹ.

  ಐಪಿಎಲ್ ಪ್ರಸ್ತುತ ಆವೃತ್ತಿಯ ಮೊದಲಾರ್ಧದಲ್ಲಿ ಕೆಕೆಆರ್​ ಸೋಲಿನ ಸುಳಿಯಲ್ಲಿ ಸಿಲುಕಿತ್ತು. ಇಡೀ ತಂಡ ಕಳಪೆ ಪಾರ್ಮ್​ನಿಂದ ಕಂಗೆಟ್ಟಿತ್ತು. ಆದರೆ, ಯುಎಇಯಲ್ಲಿ ಆರಂಭವಾದ ದ್ವಿತಿಯಾರ್ಧದಲ್ಲಿ 8 ಪಂದ್ಯಗಳ ಪೈಕಿ 6 ರಲ್ಲಿ ಗೆಲುವು ಸಾಧಿಸುವ ಮೂಲಕ ತಂಡ ಕ್ವಾಲಿಫೈಯರ್​ ಪ್ರವೇಶಿಸಿದೆ. ಆರಂಭಿಕರಾದ ಶುಭಮನ್ ಗಿಲ್ ಮತ್ತು ವೆಂಕಟೇಶ್ ಅಯ್ಯರ್ ತಂಡಕ್ಕೆ ಅದ್ಭುತ ಆರಂಭ ನೀಡುತ್ತಿದ್ದಾರೆ.

  ಅಯ್ಯರ್ ಅವರ ಪ್ರಭಾವಶಾಲಿ ಮತ್ತು ಗಿಲ್ ಅವರ ತಾಳ್ಮೆಯ ಇನ್ನಿಂಗ್ಸ್​ ಕಟ್ಟುವ ಆಟ ಮತ್ತು ಮಧ್ಯಮ ಕ್ರಮಾಂಕದಲ್ಲಿ ತ್ರಿಪಾಠಿ, ನಿತೀಶ್ ರಾಣಾ ಅವರ ಪ್ರದರ್ಶನ ನಾಯಕ ಇಯಾನ್ ಮಾರ್ಗನ್ ರನ್‌ಗಳ ಕೊರತೆಯ ಹೊರತಾಗಿಯೂ ತಂಡದ ಗೆಲುವಿಗೆ ಕಾರಣವಾಗಿದೆ.

  ಕೆಕೆಆರ್​ ವೇಗಿಗಳಾದ ಲೂಕಿ ಫರ್ಗ್ಯೂಸನ್, ಶಿವಂ ಮಾವಿ ನಿಯಮಿತ ಅವಧಿಯಲ್ಲಿ ವಿಕೆಟ್ ಪಡೆದರೆ, ಸ್ಪಿನ್ನರ್ ಗಳಾದ ವರುಣ್ ಚಕ್ರವರ್ತಿ ಮತ್ತು ಸುನಿಲ್ ನರೈನ್ ಬ್ಯಾಟ್ಸ್‌ಮನ್‌ಗಳನ್ನು ಇನ್ನಿಲ್ಲದಂತೆ ಕಾಡುತ್ತಿದ್ದಾರೆ.

  ಮತ್ತೊಂದೆಡೆ, ದೆಹಲಿ ಕ್ಯಾಪಿಟಲ್ಸ್ ಭಾರತದಿಂದ ಯುಎಇಗೆ ತಮ್ಮ ಅದೇ ಆಕರ್ಷಕ ಪ್ರದರ್ಶನವನ್ನು ಮುಂದುವರೆಸಿತ್ತು. ಲೀಗ್ ಹಂತದಲ್ಲಿ 20 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಆದರೆ ಕ್ವಾಲಿಫೈಯರ್ 1 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋತ ನಂತರ ತಂಡದಲ್ಲಿ ಸಣ್ಣ ಮಟ್ಟದ ಕಂಪನ ಕಾಣಿಸುತ್ತಿದೆ.

  ಮಾರ್ಕಸ್ ಸ್ಟೋಯ್ನಿಸ್ ಅನುಪಸ್ಥಿತಿಯಲ್ಲಿ ತಂಡದ ಸಮತೋಲನ ಹದಗೆಟ್ಟಂತಿದೆ. ಈ ನಡುವೆ ಆರ್ ಅಶ್ವಿನ್ ಮತ್ತು ರಬಾಡ ಅವರ ಬೌಲಿಂಗ್ ಫಾರ್ಮ್ ಅವರಿಗೆ ಕಳವಳಕಾರಿಯಾಗಿದೆ. ಕ್ವಾಲಿಫೈಯರ್ 1 ರಲ್ಲಿ ರಿಪಾಲ್ ಪಟೇಲ್ ಬದಲಿಗೆ ಡಿಸಿ ಟಾಮ್ ಕುರ್ರನ್ ಅನ್ನು ಆಡಿಸಿದ್ದರು. ಇಂದಿನ ಪಂದ್ಯಕ್ಕೆ ಸ್ಟೊಯ್ನಿಸ್ ಲಭ್ಯವಿದ್ದರೆ ಅವರೇ ಸ್ಥಾನ ಪಡೆಯುವ ನಿರೀಕ್ಷೆ ಇದೆ.

  ಅವರ ಆರಂಭಿಕರಾದ ಪೃಥ್ವಿ ಶಾ ಮತ್ತು ಶಿಖರ್ ಧವನ್ ತಮ್ಮ ಉತ್ತಮ ಬ್ಯಾಟಿಂಗ್ ಫಾರ್ಮ್ ಅನ್ನು ಮುಂದುವರಿತ್ತಿದ್ದಾರೆ. ಆದರೆ ಶ್ರೇಯಸ್ ಅಯ್ಯರ್ ನಿರ್ಣಾಯಕ ಪಂದ್ಯದಲ್ಲಿ ರನ್ ಸಿಡಿಸುವ ಅಗತ್ಯ ಇದೆ. ಅಯ್ಯರ್ ಸ್ಪಿನ್ನರ್‌ಗಳ ಮೇಲೆ ದಾಳಿ ಮಾಡಲು ಹೆಸರುವಾಸಿಯಾಗಿದ್ದು, ನರೈನ್ ಮತ್ತು ಚಕ್ರವರ್ತಿ ವಿರುದ್ಧ ಹೇಗೆ ಪ್ರದರ್ಶನ ನೀಡಲಿದ್ದಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

  ಐಪಿಎಲ್ 2021 ರಲ್ಲಿ ಶಾರ್ಜಾದಲ್ಲಿ ಚೇಸಿಂಗ್ ತಂಡಗಳು ಏಳು ಪಂದ್ಯಗಳಲ್ಲಿ ಐದು ಪಂದ್ಯಗಳನ್ನು ಗೆದ್ದಿವೆ. ಮೇಲಾಗಿ, ಈ ಋತುವಿನಲ್ಲಿ ಕ್ಯಾಪಿಟಲ್ಸ್‌ ಮೊದಲು ಬ್ಯಾಟ್​ ಮಾಡಿದ ನಾಲ್ಕು ಪಂದ್ಯಗಳಲ್ಲೂ ಸೋಲನುಭವಿಸಿದ್ದಾರೆ. ಆದರೆ ಯುಎಇ ಟೂರ್ನಿಯಲ್ಲಿ ಚೇಸಿಂಗ್ ಮಾಡುವಾಗ ಎಲ್ಲಾ ಐದು ಪಂದ್ಯಗಳಲ್ಲೂ ನೈಟ್ ರೈಡರ್ಸ್ ಗೆದ್ದಿದೆ. ಹಾಗಾಗಿ ಎರಡೂ ತಂಡಗಳು ಮೊದಲು ಬೌಲಿಂಗ್ ಮಾಡಲು ಬಯಸಿದರೆ ಆಶ್ಚರ್ಯವಿಲ್ಲ.

  ದೆಹಲಿ ತಂಡ: ರಿಷಬ್ ಪಂತ್ (ನಾಯಕ), ಅಜಿಂಕ್ಯ ರಹಾನೆ, ಅಮಿತ್ ಮಿಶ್ರಾ, ಅನ್ರಿಚ್ ನಾರ್ಟ್ಜೆ, ಅವೇಶ್ ಖಾನ್, ಅಕ್ಸರ್ ಪಟೇಲ್, ಕ್ರಿಸ್ ವೋಕ್ಸ್, ಇಶಾಂತ್ ಶರ್ಮಾ, ಕಗಿಸೊ ರಬಾಡಾ, ಲಲಿತ್ ಯಾದವ್, ಮಾರ್ಕಸ್ ಸ್ಟೊಯಿನಿಸ್, ಪ್ರವಿನ್ ದುಬೆ, ಪೃಥ್ವಿ ಶಾ, ರವಿಚಂದ್ರನ್ ಅಶ್ವಿನ್ , ಶಿಖರ್ ಧವನ್, ಶಿಮ್ರಾನ್ ಹೆಟ್ಮೀರ್, ಶ್ರೇಯಸ್ ಅಯ್ಯರ್, ಸ್ಟೀವ್ ಸ್ಮಿತ್.

  ಇದನ್ನೂ ಓದಿ: MS Dhoni: T20 ವಿಶ್ವಕಪ್​ನಲ್ಲಿ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸಲು ಗೌರವ ಧನ ನಿರಾಕರಿಸಿದ ಎಂ.ಎಸ್. ಧೋನಿ

  ಕೋಲ್ಕತ್ತಾ ನೈಟ್ ರೈಡರ್ಸ್: ಇಯಾನ್ ಮಾರ್ಗನ್ (ನಾಯಕ), ಆಂಡ್ರೆ ರಸೆಲ್, ದಿನೇಶ್ ಕಾರ್ತಿಕ್ (ಕೀಪರ್), ಕುಲದೀಪ್ ಯಾದವ್, ಲೂಕಿ ಫರ್ಗುಸನ್, ನಿತೀಶ್ ರಾಣಾ, ಪ್ಯಾಟ್ ಕಮಿನ್ಸ್, ಪ್ರಸಿದ್ ಕೃಷ್ಣ, ರಾಹುಲ್ ತ್ರಿಪಾಠಿ, ಸಂದೀಪ್ ವಾರಿಯರ್, ಶಿವಂ ಮಾವಿ, ಶುಭಮನ್ ಗಿಲ್, ಸುನಿಲ್ ನರೈನ್, ಟಿಮ್ ಸೀಫರ್ಟ್, ವರುಣ್ ಚಕ್ರವರ್ತಿ, ಶಕೀಬ್ ಅಲ್ ಹಸನ್, ವೆಂಕಟೇಶ್ ಅಯ್ಯರ್.
  Published by:MAshok Kumar
  First published: