IPL 2021, KKR vs MI: ಮುಂಬೈ ಬೌಲರುಗಳ ಪರಾಕ್ರಮ: ಕೆಕೆಆರ್ಗೆ ಸೋಲು..!
ಹಾಫ್ ಸೆಂಚುರಿ ಬೆನ್ನಲ್ಲೇ ಶಕೀಬ್ ಅಲ್ ಹಸನ್ಗೆ ವಿಕೆಟ್ ಒಪ್ಪಿಸಿ ಸೂರ್ಯಕುಮಾರ್ ಯಾದವ್ (56) ಹೊರ ನಡೆದರು. ಈ ವೇಳೆ ಕ್ರೀಸ್ಗೆ ಆಗಮಿಸಿದ ಇಶಾನ್ ಕಿಶನ್ (1) ಪ್ಯಾಟ್ ಕಮಿನ್ಸ್ ಎಸೆತದಲ್ಲಿ ಔಟಾಗಿ ನಿರ್ಗಮಿಸಿದರು.
ಚೆನ್ನೈನಲ್ಲಿ ನಡೆದ ಐಪಿಎಲ್ನ 5ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ದ 10 ರನ್ಗಳ ರೋಚಕ ಜಯ ಸಾಧಿಸಿದೆ. ಮುಂಬೈ ನೀಡಿದ 153 ರನ್ಗಳ ಸಾಧಾರಣ ಗುರಿ ಬೆನ್ನತ್ತಿದ ಕೊಲ್ಕತ್ತಾ ನೈಟ್ ರೈಡರ್ಸ್ 142 ರನ್ಗಳಿಸಲಷ್ಟೇ ಶಕ್ತರಾದರು.
ಇದಕ್ಕೂ ಮುನ್ನ ಮುಂಬೈ ನೀಡಿದ 153 ರನ್ಗಳ ಸಾಧಾರಣ ಗುರಿ ಬೆನ್ನತ್ತಲು ಆರಂಭಿಕರಾಗಿ ಕಣಕ್ಕಿಳಿದ ನಿತೀಶ್ ರಾಣಾ ಹಾಗೂ ಶುಭ್ಮನ್ ಗಿಲ್ ಉತ್ತಮ ಆರಂಭ ಒದಗಿಸಿದರು. ಎಚ್ಚರಿಕೆಯ ಆಟದೊಂದಿಗೆ ರನ್ಗಳಿಸುತ್ತಾ ಹೋದ ಈ ಜೋಡಿ ಪವರ್ಪ್ಲೇ ಮುಕ್ತಾಯದ ವೇಳೆಗೆ ತಂಡದ ಮೊತವನ್ನು 45ಕ್ಕೆ ತಂದು ನಿಲ್ಲಿಸಿದರು.
ಆ ಬಳಿಕ ಬಿರುಸಿನ ಆಟಕ್ಕೆ ಮುಂದಾದ ಶುಭ್ಮನ್ ಗಿಲ್ (33) ರಾಹುಲ್ ಚಹರ್ ಎಸೆತದಲ್ಲಿ ವಿಕೆಟ್ ಒಪ್ಪಿಸಿ ಪೆವಿಲಿಯನ್ ಕಡೆ ಮುಖ ಮಾಡಿದರು. ಇದರ ಬೆನ್ನಲ್ಲೇ ರಾಹುಲ್ ತ್ರಿಪಾಠಿ (5) ಕೀಪರ್ಗೆ ಕ್ಯಾಚ್ ನೀಡಿ ಹೊರನಡೆದರು.
ಆದರೆ ಮತ್ತೊಂದೆಡೆ ಎಚ್ಚರಿಕೆಯ ಆಟವಾಡಿದ ನಿತೀಶ್ ರಾಣಾ 40 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸಿದರು. ಅಲ್ಲದೆ ತಂಡದ ಮೊತ್ತವನ್ನು 100ರ ಗಡಿದಾಟಿಸಿದರು. ಇದೇ ವೇಳೆ ಮತ್ತೊಂದು ತುದಿಯಲ್ಲಿದ್ದ ನಾಯಕ ಇಯಾನ್ ಮೋರ್ಗನ್ (7) ರಾಹುಲ್ ಚಹರ್ಗೆ ವಿಕೆಟ್ ಒಪ್ಪಿಸಿದರು. ಇನ್ನು ತಂಡದ ಮೊತ್ತ 122 ರನ್ ಆಗಿದ್ದ ವೇಳೆ ನಿತೀಶ್ ರಾಣಾ (57) ಸ್ಟಂಪ್ ಔಟ್ ಆಗುವ ಮೂಲಕ ಇನಿಂಗ್ಸ್ ಅಂತ್ಯಗೊಳಿಸಿದರು. ಇದರ ಬೆನ್ನಲ್ಲೇ ಶಕೀಬ್ ಅಲ್ ಹಸನ್ (9) ಕೂಡ ನಿರ್ಗಮಿಸಿದರು.
ಕೊನೆಯ 2 ಓವರ್ನಲ್ಲಿ ಕೆಕೆಆರ್ಗೆ ಗೆಲ್ಲಲು 19 ರನ್ಗಳ ಅವಶ್ಯಕತೆಯಿತ್ತು. 19ನೇ ಓವರ್ನಲ್ಲಿ ಜಸ್ಪ್ರೀತ್ ಬುಮ್ರಾ ಕೇವಲ 4 ರನ್ ನೀಡಿದರು. ಈ ಓವರ್ನಲ್ಲಿ ರನ್ಗಳಿಸಲು ಆಂಡ್ರೆ ರಸೆಲ್ ಹಾಗೂ ದಿನೇಶ್ ಕಾರ್ತಿಕ್ ಪರದಾಡಿದರು. ಅದರಂತೆ ಅಂತಿಮ ಓವರ್ನಲ್ಲಿ ಗೆಲ್ಲಲು 15 ರನ್ಗಳ ಅಗತ್ಯವಿತ್ತು.
ಟ್ರೆಂಟ್ ಬೌಲ್ಟ್ ಎಸೆದ ಕೊನೆಯ ಓವರ್ನ ಮೊದಲ ಎಸೆತದಲ್ಲಿ 1 ರನ್. 2ನೇ ಎಸೆತದಲ್ಲಿ 1 ರನ್, 3ನೇ ಎಸೆತದಲ್ಲಿ ಆಂಡ್ರೆ ರಸೆಲ್ (8) ಔಟ್. 4ನೇ ಎಸೆತದಲ್ಲಿ ಪ್ಯಾಟ್ ಕಮಿನ್ಸ್ ಕ್ಲೀನ್ ಬೌಲ್ಡ್. 5ನೇ ಎಸೆತದಲ್ಲಿ 2 ರನ್. ಅಂತಿಮ ಎಸೆತದಲ್ಲಿ ಯಾವುದೇ ರನ್ ನೀಡದ ಬೌಲ್ಟ್ ಕೆಕೆಆರ್ ತಂಡವನ್ನು 7 ವಿಕೆಟ್ ನಷ್ಟಕ್ಕೆ 142ಕ್ಕೆ ನಿಯಂತ್ರಿಸಿದರು. ಇದರೊಂದಿಗೆ ಮುಂಬೈ ಇಂಡಿಯನ್ಸ್ 10 ರನ್ಗಳ ಜಯದೊಂದಿಗೆ ಐಪಿಎಲ್ ಸೀಸನ್ 14ನಲ್ಲಿ ಗೆಲುವಿನ ಖಾತೆ ತೆರೆದರು. ಮುಂಬೈ ಪರ ರಾಹುಲ್ ಚಹರ್ 4 ಓವರ್ನಲ್ಲಿ 27 ರನ್ ನೀಡಿ 4 ವಿಕೆಟ್ ಉರುಳಿಸಿದರೆ, ಬೌಲ್ಟ್ 2 ವಿಕೆಟ್ ಪಡೆದು ಗಮನ ಸೆಳೆದರು.
Rahul Chahar is on a roll here. Four wickets for the leg-spinner.
ಇದಕ್ಕೂ ಮುನ್ನ ಟಾಸ್ ಗೆದ್ದ ಕೆಕೆಆರ್ ನಾಯಕ ಇಯಾನ್ ಮೋರ್ಗನ್ ಬೌಲಿಂಗ್ ಆಯ್ದುಕೊಂಡರು. ಅದರಂತೆ ಇನಿಂಗ್ಸ್ ಆರಂಭಿಸಿದ ಮುಂಬೈ ಇಂಡಿಯನ್ಸ್ಗೆ 2ನೇ ಓವರ್ನಲ್ಲೇ ಸ್ಪಿನ್ನರ್ ವರುಣ್ ಚಕ್ರವರ್ತಿ ಆಘಾತ ನೀಡಿದರು. 2 ರನ್ಗಳಿಸಿದ್ದ ಕ್ವಿಂಟನ್ ಡಿಕಾಕ್ ವಿಕೆಟ್ ಪಡೆಯುವ ಮೂಲಕ ಕೆಕೆಆರ್ಗೆ ಮೊದಲ ಯಶಸ್ಸು ತಂದುಕೊಟ್ಟರು. ಈ ಹಂತದಲ್ಲಿ ಕ್ರೀಸ್ಗೆ ಆಗಮಿಸಿದ ಸೂರ್ಯಕುಮಾರ್ ಯಾದವ್ ನಾಯಕ ರೋಹಿತ್ ಶರ್ಮಾ ಜೊತೆಗೂಡಿ ಉತ್ತಮ ಬ್ಯಾಟಿಂಗ್ ನಡೆಸಿದರು. ಪರಿಣಾಮ ಪವರ್ಪ್ಲೇ ಮುಕ್ತಾಯದ ವೇಳೆ ಮುಂಬೈ ಮೊತ್ತವು 42ಕ್ಕೆ ಬಂದು ನಿಂತಿತು.
6 ಓವರ್ಗಳ ಬಳಿಕ ಬಿರುಸಿನ ಬ್ಯಾಟಿಂಗ್ಗೆ ಒತ್ತು ನೀಡಿದ ಈ ಜೋಡಿ ಕೇವಲ 37 ಎಸೆತಗಳಲ್ಲಿ ಅರ್ಧಶತಕಗಳ ಜೊತೆಯಾಟ ಪೂರೈಸಿದರು. ಇದರ ಬಳಿಕ ಅಬ್ಬರಿಸಲಾರಂಭಿಸಿದ ಸೂರ್ಯಕುಮಾರ್ ಯಾದವ್ 33 ಎಸೆತಗಳಲ್ಲಿ ಅರ್ಧಶತಕ ಪೂರೈಸಿ ಬ್ಯಾಟ್ ಮೇಲೆಕ್ಕೆತ್ತಿದರು. ಅಲ್ಲದೆ ಮೊದಲ 10 ಓವರ್ನಲ್ಲಿ ತಂಡದ ಮೊತ್ತವನ್ನು 81ಕ್ಕೆ ತಂದು ನಿಲ್ಲಿಸಿದರು.
ಹಾಫ್ ಸೆಂಚುರಿ ಬೆನ್ನಲ್ಲೇ ಶಕೀಬ್ ಅಲ್ ಹಸನ್ಗೆ ವಿಕೆಟ್ ಒಪ್ಪಿಸಿ ಸೂರ್ಯಕುಮಾರ್ ಯಾದವ್ (56) ಹೊರ ನಡೆದರು. ಈ ವೇಳೆ ಕ್ರೀಸ್ಗೆ ಆಗಮಿಸಿದ ಇಶಾನ್ ಕಿಶನ್ (1) ಪ್ಯಾಟ್ ಕಮಿನ್ಸ್ ಎಸೆತದಲ್ಲಿ ಔಟಾಗಿ ನಿರ್ಗಮಿಸಿದರು. ಈ ಹಂತದಲ್ಲಿ ರೋಹಿತ್ ಶರ್ಮಾ ಜೊತೆಗೂಡಿದ ಹಾರ್ದಿಕ್ ಪಾಂಡ್ಯ ಇನಿಂಗ್ಸ್ ಕಟ್ಟುವ ಜವಾಬ್ದಾರಿವಹಿಸಿಕೊಂಡರು. ಅದರಂತೆ 14ನೇ ಓವರ್ ವೇಳೆಗೆ ತಂಡದ ಮೊತ್ತವನ್ನು 100ರ ಗಡಿದಾಟಿಸಿದರು. ಆದರೆ ಪ್ಯಾಟ್ ಕಮಿನ್ಸ್ ಎಸೆದ 15ನೇ ಓವರ್ನ ಮೊದಲ ಎಸೆತದಲ್ಲೇ ರೋಹಿತ್ ಶರ್ಮಾ (43) ಕ್ಲೀನ್ ಬೌಲ್ಡ್ ಆದರು. ಹಾಗೆಯೇ 17ನೇ ಓವರ್ನಲ್ಲಿ ಹಾರ್ದಿಕ್ ಪಾಂಡ್ಯ (15) ಕೂಡ ವಿಕೆಟ್ ಒಪ್ಪಿಸಿದರು.
17 ಓವರ್ ಮುಕ್ತಾಯದ ವೇಳೆಗೆ ಮುಂಬೈ ಇಂಡಿಯನ್ಸ್ ಮೊತ್ತವು 5 ವಿಕೆಟ್ ನಷ್ಟಕ್ಕೆ 125 ಆಗಿತ್ತು. ರಸೆಲ್ ಎಸೆದ 18ನೇ ಓವರ್ನಲ್ಲಿ ಕೀರನ್ ಪೊಲಾರ್ಡ್ (5) ಕೂಡ ಕೀಪರ್ ಕ್ಯಾಚ್ ನೀಡಿ ನಿರ್ಗಮಿಸಿದರು. ಈ ವೇಳೆ ಮೈದಾನಕ್ಕಿಳಿದ ಮಾರ್ಕೊ ಜಾನ್ಸನ್ ಬಂದ ವೇಗದಲ್ಲೇ ಶೂನ್ಯದೊಂದಿಗೆ ಮರಳಿದರು.
ಕೊನೆಯ ಓವರ್ನಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ಕೃನಾಲ್ ಪಾಂಡ್ಯ (24) ಮೂರನೇ ಎಸೆತದಲ್ಲಿ ಕ್ಯಾಚ್ ನೀಡಿದರು. 4ನೇ ಎಸೆತದಲ್ಲಿ ಬುಮ್ರಾ ಕೂಡ ವಿಕೆಟ್ ಒಪ್ಪಿಸಿದರು. ಅಂತಿಮ ಎಸೆತದಲ್ಲಿ ರಾಹುಲ್ ಚಹರ್ ವಿಕೆಟ್ ಪಡೆಯುವುದರೊಂದಿಗೆ ಆ್ಯಂಡ್ರೆ ರಸೆಲ್ 5 ವಿಕೆಟ್ಗಳನ್ನು ಕಬಳಿಸಿದರು. ಅಲ್ಲದೆ ಮುಂಬೈ ಇಂಡಿಯನ್ಸ್ ತಂಡವನ್ನು 152 ರನ್ಗಳಿಗೆ ಆಲೌಟ್ ಮಾಡಿದರು. ಕೇವಲ ಎರಡು ಓವರ್ ಎಸೆದ ರಸೆಲ್ 15 ರನ್ ನೀಡಿ 5 ವಿಕೆಟ್ ಕಬಳಿಸುವ ಮೂಲಕ ಕೆಕೆಆರ್ ಪರ ಯಶಸ್ವಿ ಬೌಲರ್ ಎನಿಸಿಕೊಂಡರು.
Published by:zahir
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ