• Home
 • »
 • News
 • »
 • ipl
 • »
 • IPL 2021: SRH ತಂಡದ ನಾಯಕನ ಬದಲಾವಣೆ..!

IPL 2021: SRH ತಂಡದ ನಾಯಕನ ಬದಲಾವಣೆ..!

david warner

david warner

ಈ ಬಾರಿಯ ಐಪಿಎಲ್​ನಲ್ಲಿ ಸನ್​ರೈಸರ್ಸ್​ ಹೈದರಾಬಾದ್ ತಂಡ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಆಡಿರುವ 6 ಪಂದ್ಯಗಳಲ್ಲಿ ಕೇವಲ ಒಂದರಲ್ಲಿ ಜಯ ಸಾಧಿಸಿದೆ.

 • Share this:

  ಐಪಿಎಲ್ ಮೊದಲಾರ್ಧ ಮುಕ್ತಾಯದ ಹಂತಕ್ಕೆ ತಲುಪಿದೆ. ಇದರ ಬೆನ್ನಲ್ಲೇ ಸನ್ ರೈಸರ್ಸ್ ಹೈದರಾಬಾದ್ ತಂಡ ಪ್ರಮುಖ ಬದಲಾವಣೆ ಮಾಡಿಕೊಂಡಿದೆ. SRH ತಂಡದ ಕ್ಯಾಪ್ಟನ್ ಡೇವಿಡ್ ವಾರ್ನರ್ ಅವರನ್ನು ನಾಯಕತ್ವ ಸ್ಥಾನದಿಂದ ಕೆಳಗಿಳಿಸಿದೆ. ಅವರ ಬದಲಿಗೆ ಕೇನ್ ವಿಲಿಯಮ್ಸನ್ ಅವರನ್ನು ಈ ವರ್ಷದ ಐಪಿಎಲ್​ನ ಉಳಿದ ಅವಧಿಗೆ ನಾಯಕರನ್ನಾಗಿ ನೇಮಿಸಿದೆ.  ಈ ಬಾರಿಯ ಐಪಿಎಲ್​ನಲ್ಲಿ ಸನ್​ರೈಸರ್ಸ್​ ಹೈದರಾಬಾದ್ ತಂಡ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಆಡಿರುವ 6 ಪಂದ್ಯಗಳಲ್ಲಿ ಕೇವಲ ಒಂದರಲ್ಲಿ ಜಯ ಸಾಧಿಸಿದೆ. ಹೀಗಾಗಿ ವಾರ್ನರ್ ಅವರನ್ನು ನಾಯಕನ ಸ್ಥಾನದಿಂದ ಕೆಳಗಿಳಿಸಿದ್ದು, ವಿಲಿಯಮ್ಸನ್'ಗೆ ಪಟ್ಟ ನೀಡಲಾಗಿದೆ.


  ಈ ಹಿಂದೆ 2019 ರಲ್ಲಿ ವಾರ್ನರ್ ಅನುಪಸ್ಥಿತಿಯಲ್ಲಿ ವಿಲಿಯಮ್ಸನ್ SRH ತಂಡವನ್ನು ಮುನ್ನಡೆಸಿದ್ದರು. ಅಲ್ಲದೆ ತಂಡವನ್ನು ಪ್ಲೇ ಆಫ್​ ​ಗೇರಿಸಿದ್ದರು. ಇದೀಗ ಮತ್ತೊಮ್ಮೆ ನಾಯಕನ ಸ್ಥಾನ ಒಲಿದಿದೆ. ಅದರಂತೆ ರಾಜಸ್ಥಾನ್ ರಾಯಲ್ಸ್​ ವಿರುದ್ದದ ಪಂದ್ಯದಲ್ಲಿ ಕೇನ್ ವಿಲಿಯಮ್ಸನ್ ಟಾಸ್​​ಗೆ ಆಗಮಿಸಿದ್ದು, ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿದ್ದಾರೆ. ಈ ಪಂದ್ಯದ ಮೂಲಕ ಐಪಿಎಲ್​ ಸೀಸನ್ 14ನ ದ್ವಿತಿಯಾರ್ಧ ಶುರುವಾಗಲಿದೆ.

  Published by:zahir
  First published: