Virat Kohli Retire from Captaincy| ಟಿ20 ಮಾದರಿ ಕ್ರಿಕೆಟ್ ನಾಯಕತ್ವಕ್ಕೆ ಕೊಹ್ಲಿ ರಾಜೀನಾಮೆ; ಅಭಿಮಾನಿಗಳ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ?

ಐಪಿಎಲ್ ಪ್ರಾರಂಭವಾದ 2008ರಿಂದಲೂ ವಿರಾಟ್ ಕೊಹ್ಲಿ ಅವರು ಆರ್​ಸಿಬಿ ಜೊತೆ ಇದ್ದಾರೆ. ಅನಿಲ್ ಕುಂಬ್ಳೆ ನಿವೃತ್ತಿ ಹೊಂದಿದ ಬಳಿಕ 2011ರಲ್ಲಿ ವಿರಾಟ್ ಕೊಹ್ಲಿ ಆರ್​ಸಿಬಿ ನಾಯಕರಾದರು. ಆದರೆ, ಅವರು ಒಮ್ಮೆಯೂ ಐಪಿಎಲ್ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿಲ್ಲ.

ವಿರಾಟ್ ಕೊಹ್ಲಿ.

ವಿರಾಟ್ ಕೊಹ್ಲಿ.

 • Share this:
  ಟಿ 20 ವಿಶ್ವಕಪ್ (T20 World Cup) ನಂತರ ತಾನು ಟ್ವೆಂಟಿ -20 ಮಾದರಿಯಲ್ಲಿ ನಾಯಕತ್ವ ಸ್ಥಾನದಿಂದ ಕೆಳಗಿಳಿಯುತ್ತೇನೆ ಎಂದು ವಿರಾಟ್​ ಕೊಹ್ಲಿ (Virat Kohli) ಘೋಷಿಸಿದ್ದರು. ಇದರ ಬೆನ್ನಿಗೆ ಭಾನುವಾರ ಮತ್ತೊಂದು ಬಾಂಬ್ ಸಿಡಿಸಿರುವ ಕೊಹ್ಲಿ 2021ರ ನಂತರ ತಾನು ರಾಯಲ್ ಚಾಲೆಂಜರ್ಸ್​ (Royal Challengers Banglore) ಬೆಂಗಳೂರು ತಂಡದ ನಾಯಕತ್ವದಿಂದಲೂ ಹಿಂದೆ ಸರಿಯುವುದಾಗಿ ಘೋಷಿಸಿದ್ದರು. ಅವರ ಭಾವನಾತ್ಮಕ ಸಂದೇಶದಲ್ಲಿ ತಾನು ಆರ್​ಸಿಬಿ (RCB) ತಂಡದಲ್ಲಿ ಕೇವಲ ಓರ್ವ ಆಟಗಾರನಾಗಿ ಮಾತ್ರ ಮುಂದುವರೆಯುತ್ತೇನೆ ಎಂದು ಸ್ಪಷ್ಟೀಕರಣ ನೀಡಿದ್ದರು. "ನಾನು ನನ್ನ ಕೊನೆಯ ಐಪಿಎಲ್ ಪಂದ್ಯವನ್ನು ಆಡುವವರೆಗೂ ಆರ್‌ಸಿಬಿ ಆಟಗಾರನಾಗಿಯೇ ಇರಲಿದ್ದೇನೆ" ಎಂದು ಕೊಹ್ಲಿ ಹೇಳಿದ್ದರು. ಆದರೆ, ಅವರ ಈ ನಾಯಕತ್ವದಿಂದ ಹಿಂದೆ ಸರಿಯುವ ಘೋಷಣೆಯು ಕ್ರಿಕೆಟ್ ಪ್ರಪಂಚದಾದ್ಯಂತ ಇದೀಗ ಆಘಾತವನ್ನು ಉಂಟುಮಾಡಿತು. ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಕೊಹ್ಲಿ ನಿರ್ಧಾರದ ಬಗ್ಗೆ ಅಸಮಾಧಾನ ಹೊರಹಾಕುತ್ತಿದ್ದಾರೆ.

  "ಐಪಿಎಲ್ 2021 ಟೂರ್ನಿ ಬಳಿಕ ವಿರಾಟ್ ಕೊಹ್ಲಿ ಅವರು ಆರ್​ಸಿಬಿ ನಾಯಕತ್ವದಿಂದ ಕೆಳಗಿಳಿಯಲಿದ್ಧಾರೆ" ಎಂದು ಆರ್​ಸಿಬಿ ಟ್ವೀಟ್ ಮಾಡಿದೆ. ಹಾಗೆಯೇ, "ಆರ್​ಸಿಬಿ ಕ್ಯಾಪ್ಟನ್ ಆಗಿ ಇದು ನನ್ನ ಕೊನೆಯ ಐಪಿಎಲ್ ಆಗಿರುತ್ತದೆ. ನನ್ನ ಕೊನೆಯ ಐಪಿಎಲ್ ಪಂದ್ಯದವರೆಗೂ ನಾನು ಆರ್​ಸಿಬಿ ಆಟಗಾರನಾಗಿಯೇ ಮುಂದುವರಿಯುತ್ತೇನೆ. ನನ್ನ ಮೇಲೆ ವಿಶ್ವಾಸ ಇಟ್ಟು ಬೆಂಬಲಿಸುತ್ತಾ ಬಂದ ಎಲ್ಲಾ ಆರ್​ಸಿಬಿ ಫ್ಯಾನ್ಸ್​ಗೂ ಧನ್ಯವಾದ ಅರ್ಪಿಸುತ್ತೇನೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ" ಎಂದು ಆರ್​ಸಿಬಿಯ ಈ ಟ್ವೀಟ್​ನಲ್ಲಿ ತಿಳಿಸಿತ್ತು. ಆದರೆ, ಇದಕ್ಕೆ ಪ್ರತಿಕ್ರಿಯೆ ನೀಡಿರುವ ಅಭಿಮಾನಿಗಳು ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ಭಾವುಕರಾಗಿದ್ದಾರೆ.

  ಅಭಿಮಾನಿಗಳ ಕೆಲವು ಪ್ರತಿಕ್ರಿಯೆಗಳು ಇಲ್ಲಿವೆ:  ಆರ್​ಸಿಬಿಯಿಂದ ಆದ ಟ್ವೀಟ್​ನಲ್ಲಿ ವಿಡಿಯೋ ಕೂಡ ಇದೆ. ವಿರಾಟ್ ಕೊಹ್ಲಿ ಅವರು ಈ ವಿಡಿಯೋದಲ್ಲಿ ಮಾತನಾಡಿದ್ದು, “..ಆರ್​ಸಿಬಿ ಮ್ಯಾನೇಜ್ಮೆಂಟ್ ಜೊತೆ ಇಂದು ಸಂಜೆ ಈ ವಿಚಾರವಾಗಿ ಮಾತನಾಡಿದೆ. ಸ್ವಲ್ಪ ಕಾಲದಿಂದ ಈ ವಿಚಾರ ನನ್ನ ಮನಸಿನಲ್ಲಿತ್ತು. ಆರ್​ಸಿಬಿ ಕ್ಯಾಪ್ಟನ್ ಆಗಿ ಇದು ನನ್ನ ಕೊನೆಯ ಐಪಿಎಲ್ ಟೂರ್ನಿಯಾಗಿರುತ್ತದೆ. ನನ್ನ ಕೊನೆಯ ಐಪಿಎಲ್ ಪಂದ್ಯದವರೆಗೂ ನಾನು ಆರ್​ಸಿಬಿ ಆಟಗಾರನಾಗಿರುತ್ತೇನೆ…. ನಾನು ಫ್ರೆಶ್ ಅಗಿರಲು ಸಮಯ ಬೇಕಾಗುತ್ತದೆ. ನಾನು ಹೇಗೆ ಮುಂದುವರಿಯಬೇಕೆಂದು ಸ್ಪಷ್ಟವಾಗಿ ಅರಿಯಲು ಸಮಯ ಬೇಕಾಗುತ್ತದೆ…. ಇದು ಒಂಬತ್ತು ವರ್ಷಗಳ ಒಳ್ಳೆಯ ಪ್ರಯಾಣವಾಗಿದೆ. ಖುಷಿ, ಹತಾಶೆ, ನಿರಾಸೆ ಭಾವನೆಗಳು ಈ ಹಾದಿಯಲ್ಲಿ ನನಗೆ ಸಿಕ್ಕಿವೆ” ಎಂದು ವಿರಾಟ್ ಕೊಹ್ಲಿ ಈ ವಿಡಿಯೋದಲ್ಲಿ ಹೇಳಿದ್ಧಾರೆ.

  ಈ ಬಗ್ಗೆ ಪತ್ರಿಕಾ ಹೇಳಿಕೆಯನ್ನೂ ಬಿಡುಗಡೆ ಮಾಡಿರುವ ವಿರಾಟ್ ಕೊಹ್ಲಿ, "ಇದು ಉತ್ತಮ ಮತ್ತು ಸ್ಪೂರ್ತಿದಾಯಕ ಪ್ರಯಾಣವಾಗಿದ್ದು, ಈ ಅವಧಿಯಲ್ಲಿ ನಾನು ಆರ್‌ಸಿಬಿ ತಂಡದಲ್ಲಿ ಪ್ರತಿಭಾವಂತ ಆಟಗಾರರ ನಾಯಕತ್ವ ವಹಿಸಿದ ಖಷಿ ಇದೆ. ಆರ್‌ಸಿಬಿ ನಿರ್ವಹಣೆ, ತರಬೇತುದಾರರು, ಸಹಾಯಕ ಸಿಬ್ಬಂದಿ, ಆಟಗಾರರು ಮತ್ತು ಇಡೀ ಆರ್‌ಸಿಬಿ ಕುಟುಂಬಕ್ಕೆ ಧನ್ಯವಾದ ಹೇಳಲು ನಾನು ಈ ಅವಕಾಶವನ್ನು ಬಳಸಿಕೊಳ್ಳುತ್ತೇನೆ. ಈ ಎಲ್ಲರೂ ಫ್ರಾಂಚೈಸಿ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ" ಎಂದು ವಿರಾಟ್ ಕೊಹ್ಲಿ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದಾರೆ.

  "ಇದು ಸುಲಭದ ನಿರ್ಧಾರವಲ್ಲ, ಆದರೆ ಈ ಅದ್ಭುತವಾದ ಫ್ರ್ಯಾಂಚೈಸ್‌ನ ಹಿತದೃಷ್ಟಿಯಿಂದ ಈ ನಿರ್ಧಾರವನ್ನು ಯೋಚಿಸಿ ತೆಗೆದುಕೊಳ್ಳಲಾಗಿದೆ. ನಾನು ಈ ಹಿಂದೆ ಹೇಳಿದಂತೆ ಕ್ರಿಕೆಟ್ ಆಟದಿಂದ ನಿವೃತ್ತಿಯಾಗುವವರೆಗೂ ಆರ್‌ಸಿಬಿಗೆ ಮಾತ್ರ ಆಡುತ್ತೇನೆ" ಎಂದು ಅವರು ತಿಳಿಸಿದ್ದಾರೆ.

  ಇದನ್ನೂ ಓದಿ: IPL 2021, MI vs CSK| 100ನೇ ಐಪಿಎಲ್ ಪಂದ್ಯ ಆಡುವ ಮೂಲಕ ಎಲೈಟ್ ಪಟ್ಟಿಯಲ್ಲಿ ಸ್ಥಾನ ಪಡೆದ ಜಸ್ಪ್ರೀತ್ ಬುಮ್ರಾ

  ಐಪಿಎಲ್ ಪ್ರಾರಂಭವಾದ 2008ರಿಂದಲೂ ವಿರಾಟ್ ಕೊಹ್ಲಿ ಅವರು ಆರ್​ಸಿಬಿ ಜೊತೆ ಇದ್ದಾರೆ. ಅನಿಲ್ ಕುಂಬ್ಳೆ ನಿವೃತ್ತಿ ಹೊಂದಿದ ಬಳಿಕ 2011ರಲ್ಲಿ ವಿರಾಟ್ ಕೊಹ್ಲಿ ಆರ್​ಸಿಬಿ ನಾಯಕರಾದರು. ಆದರೆ, ಅವರು ಒಮ್ಮೆಯೂ ಐಪಿಎಲ್ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿಲ್ಲ. 2016ರಲ್ಲಿ ಕೊಹ್ಲಿ ನೇತೃತ್ವದಲ್ಲಿ ಆರ್​ಸಿಬಿ ಫೈನಲ್ ಪ್ರವೇಶಿಸಿದ್ದರೂ ಸಹ ಸನ್​ ರೈಸರ್ಸ್​ ಹೈದ್ರಾಬಾದ್ ವಿರುದ್ಧ ವಿರೋಚಿತ ಸೋಲನ್ನು ಅನುಭವಿಸಿತ್ತು. ಈಗ ಅವರು ಕ್ಯಾಪ್ಟನ್ ಆಗಿ ಕೊನೆಯ ಐಪಿಎಲ್ ಟೂರ್ನಿ ಇದಾಗಿದ್ದು, ಇದರಲ್ಲಾದರೂ ಆರ್​ಸಿಬಿ ಗೆಲ್ಲುತ್ತಾ ಕಾದುನೋಡಬೇಕಿದೆ.

  ಇದನ್ನೂ ಓದಿ: IPL 2021 Broadcast Banned in Afghanistan| ಇಸ್ಲಾಂ ವಿರೋಧಿ ಎಂದು ಐಪಿಎಲ್ ಪ್ರಸಾರಕ್ಕೆ ನಿಷೇಧ ಹೇರಿದ ತಾಲಿಬಾನ್!

  ಕೆಲ ಮಾಧ್ಯಮ ವರದಿಗಳ ಪ್ರಕಾರ ವಿರಾಟ್ ಕೊಹ್ಲಿ ಅವರು ಏಕದಿನ ಕ್ರಿಕೆಟ್ ತಂಡದ ನಾಯಕ ಸ್ಥಾನದಿಂದಲೂ ಕೆಳಗಿಳಿಯುವ ಸಾಧ್ಯತೆ ಇದೆ. ಅವರು ಟೆಸ್ಟ್ ಕ್ರಿಕೆಟ್ ತಂಡದ ನಾಯಕನಾಗಿ ಮಾತ್ರ ಮುಂದುವರಿಯಬಹುದು ಎಂಬಂತಹ ಮಾತುಗಳು ಕೇಳಿಬರುತ್ತಿವೆ.
  Published by:MAshok Kumar
  First published: