• ಹೋಂ
  • »
  • ನ್ಯೂಸ್
  • »
  • IPL
  • »
  • IPL 2021: 12 ವರ್ಷಗಳ ಹಿಂದಿನ ರೋಹಿತ್ ಶರ್ಮಾ ದಾಖಲೆ ಅಳಿಸಿ, ಹೊಸ ಇತಿಹಾಸ ಬರೆದ ಹರ್ಷಲ್ ಪಟೇಲ್..!

IPL 2021: 12 ವರ್ಷಗಳ ಹಿಂದಿನ ರೋಹಿತ್ ಶರ್ಮಾ ದಾಖಲೆ ಅಳಿಸಿ, ಹೊಸ ಇತಿಹಾಸ ಬರೆದ ಹರ್ಷಲ್ ಪಟೇಲ್..!

harshal patel

harshal patel

ಮುಂಬೈ ತಂಡದ ಮಧ್ಯಮ ಕ್ರಮಾಂಕದ ಬಲಿಷ್ಠ ಬ್ಯಾಟ್ಸ್​ಮನ್​ಗಳಾದ ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ಪೊಲಾರ್ಡ್, ಕೃನಾಲ್ ಪಾಂಡ್ಯ ಅವರ ವಿಕೆಟ್ ಉರುಳಿಸಿದರು.

  • Share this:

ಐಪಿಎಲ್​ ಸೀಸನ್​ 14ನಲ್ಲಿ ಆರ್​ಸಿಬಿ ಶುಭಾರಂಭ ಮಾಡಿದೆ. ಈ ಶುಭಾರಂಭದಲ್ಲಿ ಪ್ರಮುಖ ಪಾತ್ರವಹಿಸಿದ್ದು ವೇಗಿ ಹರ್ಷಲ್ ಪಟೇಲ್ ಹಾಗೂ ಹೊಡಿಬಡಿ ದಾಂಡಿಗ ಎಬಿ ಡಿವಿಲಿಯರ್ಸ್​. ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಆರ್​ಸಿಬಿ ಉತ್ತಮ ಆರಂಭವನ್ನೇ ಪಡೆದುಕೊಂಡಿತ್ತು. ಮೊದಲ ಓವರ್​ನಲ್ಲಿ ಸಿರಾಜ್ ಕೇವಲ 5 ರನ್ ನೀಡಿದರೆ, ಇನ್ನು ಚೊಚ್ಚಲ ಐಪಿಎಲ್ ಪಂದ್ಯವಾಡುತ್ತಿರುವ ಕೈಲ್ ಜೇಮಿಸನ್ ತಮ್ಮ ಮೊದಲ ಓವರ್​ನಲ್ಲಿ ಕೇವಲ 1 ರನ್​ ನೀಡಿ ಗಮನ ಸೆಳೆದರು. ಹಾಗೆಯೇ ಮೂರನೇ ಓವರ್​ನಲ್ಲಿ ಸಿರಾಜ್ 6 ರನ್​ ನೀಡಿದರು. ಮೊದಲ ಮೂರುವ ಓವರ್​ನಲ್ಲಿ ಆರ್​ಸಿಬಿ ಸಂಪೂರ್ಣ ಹಿಡಿತ ಸಾಧಿಸಿತ್ತು.


ಆ ಬಳಿಕ ದಾಳಿಗಿಳಿದ ಹರ್ಷಲ್ ಪಟೇಲ್ ತಮ್ಮ ಮೊದಲ ಓವರ್​ನಲ್ಲಿ ನೀಡಿದ್ದು ಬರೋಬ್ಬರಿ 15 ರನ್​ಗಳು. ಆದರೆ ನಂತರ ಅದ್ಭುತವಾಗಿ ಕಂಬ್ಯಾಕ್ ಮಾಡಿದ ಹರ್ಷಲ್ ಉಳಿದ 3 ಓವರ್​ನಲ್ಲಿ ನೀಡಿದ್ದು ಕೇವಲ 12 ರನ್​ ಮಾತ್ರ. ಅಷ್ಟೇ ಅಲ್ಲ, ಮುಂಬೈ ಬ್ಯಾಟಿಂಗ್​ ಬೆನ್ನೆಲುಬನ್ನೇ ಮುರಿದರು.


ಮುಂಬೈ ತಂಡದ ಮಧ್ಯಮ ಕ್ರಮಾಂಕದ ಬಲಿಷ್ಠ ಬ್ಯಾಟ್ಸ್​ಮನ್​ಗಳಾದ ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ಪೊಲಾರ್ಡ್, ಕೃನಾಲ್ ಪಾಂಡ್ಯ ಅವರ ವಿಕೆಟ್ ಉರುಳಿಸಿದರು. ಅಲ್ಲದೆ ಜಾನ್ಸೆನ್ ಅವರನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ ಹರ್ಷಲ್ 5 ವಿಕೆಟ್​ಗಳನ್ನು ತಮ್ಮದಾಗಿಸಿಕೊಂಡರು. ಇದರೊಂದಿಗೆ ಐಪಿಎಲ್ ಅಂಗಳದ ಬಲಿಷ್ಠ ಪಡೆ ಎಂದು ಗುರುತಿಸಿಕೊಂಡಿರುವ ಮುಂಬೈ ವಿರುದ್ಧ ಹೊಸ ದಾಖಲೆ ಬರೆದರು.


ಹೌದು, ಕಳೆದ 13 ಸೀಸನ್​ಗಳಲ್ಲಿ ಮುಂಬೈ ಇಂಡಿಯನ್ಸ್​ ವಿರುದ್ಧ ಯಾವೊಬ್ಬ ಬೌಲರ್​ ಐದು ವಿಕೆಟ್ ಉರುಳಿಸಿಲ್ಲ. ಇದೀಗ ಆರ್​ಸಿಬಿ ವೇಗಿ ಮೊದಲ ಪಂದ್ಯದಲ್ಲೇ ಮುಂಬೈನ ಐದು ಬ್ಯಾಟ್ಸ್​ಮನ್​ಗಳಿಗೆ ಪೆವಿಲಿಯನ್ ಹಾದಿ ತೋರಿಸುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಇದರೊಂದಿಗೆ ಮುಂಬೈ ಇಂಡಿಯನ್ಸ್ ಬ್ಯಾಟ್ಸ್​ಮನ್​ಗಳ ವಿರುದ್ಧ ಬೌಲರುಗಳು ಮೇಲುಗೈ ಸಾಧಿಸಲಾಗುವುದಿಲ್ಲ ಎಂಬ ಕ್ರಿಕೆಟ್ ಪಂಡಿತರ ಲೆಕ್ಕಚಾರಗಳನ್ನು ಆರ್​ಸಿಬಿ ವೇಗಿ ಅಳಿಸಿ ಹಾಕಿದ್ದಾರೆ.


ಇದಕ್ಕೂ ಮುನ್ನ ಈ ದಾಖಲೆ ರೋಹಿತ್ ಶರ್ಮಾ ಹೆಸರಿನಲ್ಲಿತ್ತು ಎಂಬುದು ವಿಶೇಷ. 2009ರಲ್ಲಿ ಡೆಕ್ಕನ್ ಚಾರ್ಜರ್ಸ್ ಹೈದರಾಬಾದ್ (ಸನ್​ರೈಸರ್ಸ್​ ಹೈದರಾಬಾದ್) ಪರ ಆಡಿದ್ದ ರೋಹಿತ್ ಶರ್ಮಾ ಮುಂಬೈ ವಿರುದ್ಧ 6 ರನ್ ನೀಡಿ 4 ವಿಕೆಟ್​ ಕಬಳಿಸಿದ್ದು ಮುಂಬೈ ಇಂಡಿಯನ್ಸ್​ ವಿರುದ್ಧದ ಅತ್ಯುತ್ತಮ ಬೌಲಿಂಗ್ ದಾಖಲೆಯಾಗಿತ್ತು. ಇದೀಗ ಈ ದಾಖಲೆಯನ್ನು ಆರ್​ಸಿಬಿ ವೇಗಿ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.


ಒಟ್ಟಿನಲ್ಲಿ ಹರ್ಷಲ್ ಪಟೇಲ್ ಅವರ ಕರಾರುವಾಕ್ ದಾಳಿ ಹಾಗೂ ಎಬಿಡಿ ಅವರ ಸಿಡಿಲಬ್ಬರದ ಕಾರಣದಿಂದ ಆರ್​ಸಿಬಿ ರೋಚಕ ಜಯ ಸಾಧಿಸಿದೆ. ಅಲ್ಲದೆ ಬೌಲಿಂಗ್ ಮೂಲಕ ಪರಾಕ್ರಮ ಮೆರೆದ ಹರ್ಷಲ್ ಪಟೇಲ್  ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿಗೆ ಭಾಜನರಾದರು.

First published: