• Home
  • »
  • News
  • »
  • ipl
  • »
  • IPL 2021: ಐಪಿಎಲ್ ನಡೆಯದಿದ್ರೆ ಆಟಗಾರರಿಗೆ ಯಾವುದೇ ನಷ್ಟವಿಲ್ಲ..!

IPL 2021: ಐಪಿಎಲ್ ನಡೆಯದಿದ್ರೆ ಆಟಗಾರರಿಗೆ ಯಾವುದೇ ನಷ್ಟವಿಲ್ಲ..!

IPL

IPL

ಈ ಬಾರಿ 60 ಪಂದ್ಯಗಳಲ್ಲಿ 29 ಪಂದ್ಯಗಳು ನಡೆದಿವೆ. ಅಂದರೆ, ಅರ್ಧದಷ್ಟು ಟೂರ್ನಿ ಮುಕ್ತಾಯವಾಗಿದೆ. ಇನ್ನು 31 ಪಂದ್ಯಗಳು ಉಳಿದಿದ್ದು, ಅದನ್ನು ಸೆಪ್ಟೆಂಬರ್ ಮತ್ತು ಅಕ್ಟೋಬರ್ ನಡುವೆ ನಡೆಸುವ ವಿಶ್ವಾಸದಲ್ಲಿದೆ ಬಿಸಿಸಿಐ.

  • Share this:

    ಕೋವಿಡ್ -19 ಕಾರಣದಿಂದ ಐಪಿಎಲ್ 2021 ಅನ್ನು ಮುಂದೂಡಲಾಗಿದೆ. ಪಂದ್ಯಾವಳಿ ಮುಂದೂಡಿದ್ದರಿಂದ ಬ್ರಾಡ್‌ಕಾಸ್ಟರ್ ಸೇರಿದಂತೆ ಬಿಸಿಸಿಐ ನಷ್ಟ ಅನುಭವಿಸುವ ಸಾಧ್ಯತೆಯಿದೆ. ಒಂದು ವೇಳೆ ಟೂರ್ನಿ ನಡೆಯದಿದ್ದರೆ ಬಿಸಿಸಿಐಗೆ ಸುಮಾರು 2 ಸಾವಿರ ಕೋಟಿ ನಷ್ಟವಾಗಲಿದೆ ಅಂದಾಜಿಸಲಾಗಿದೆ. ಹಾಗೆಯೇ ಆಟಗಾರರಿಗೆ ವೇತನವಾಗಿ ಈ ಬಾರಿ 483 ಕೋಟಿ ರೂ. ನಿಗದಿಯಾಗಿತ್ತು. ಇದೀಗ ಐಪಿಎಲ್ ಅರ್ಧದಲ್ಲೇ ಮೊಟಕುಗೊಳಿಸಲಾಗಿದೆ. ಇದಾಗ್ಯೂ ಆಟಗಾರರ ವೇತನಕ್ಕೆ ಯಾವುದೇ ಚ್ಯುತಿ ಬರಲ್ಲ.


    ಏಕೆಂದರೆ ಆಟಗಾರರ ವೇತನವನ್ನು ಫ್ರ್ಯಾಂಚೈಸಿಯ ವಿಮಾ ಪಾಲಿಸಿಯಲ್ಲಿ ಸೇರಿಸಲಾಗಿದೆ. ಆಟಗಾರರು ಗಾಯಗೊಂಡರೆ ಅಥವಾ ಬೇರೆ ಯಾವುದಾದರೂ ಕಾರಣದಿಂದ ಆಡದಿದ್ದರೆ, ಅವರಿಗೆ ಪೂರ್ಣ ಸಂಬಳ ಸಿಗಲಿದೆ. ಈ ವರ್ಷ 8 ಫ್ರಾಂಚೈಸಿ ಆಟಗಾರರಿಗೆ 483 ಕೋಟಿ ರೂ. ವೇತನ ನೀಡಬೇಕಾಗಿತ್ತು. ಇಲ್ಲಿ ಆಟಗಾರರಿಗೆ ಮೂರು ವಿಭಾಗವಾಗಿ ವೇತನ ನೀಡಲಾಗುತ್ತದೆ. ಐಪಿಎಲ್ ಆರಂಭದ ವೇಳೆ ಮೊದಲ ಭಾಗವನ್ನು ನೀಡಿದರೆ, ಉಳಿದ 2 ಭಾಗಗಳನ್ನು ಪಂದ್ಯಾವಳಿಯ ನಂತರ ನೀಡಲಾಗುತ್ತದೆ. ಅದರಂತೆ ಈ ಹಿಂದೆ ನಿಗದಿಯಾದಂತೆ ಟೂರ್ನಿ ನಡೆಯದಿದ್ದರೂ, ಇಡೀ ಪಂದ್ಯಾವಳಿಯ ವೇತನ ಒಪ್ಪಂದಂತೆ ಆಟಗಾರರು ಪಡೆಯಲಿದ್ದಾರೆ.


    ಇನ್ನು ಈ ಬಾರಿ 60 ಪಂದ್ಯಗಳಲ್ಲಿ 29 ಪಂದ್ಯಗಳು ನಡೆದಿವೆ. ಅಂದರೆ, ಅರ್ಧದಷ್ಟು ಟೂರ್ನಿ ಮುಕ್ತಾಯವಾಗಿದೆ. ಇನ್ನು 31 ಪಂದ್ಯಗಳು ಉಳಿದಿದ್ದು, ಅದನ್ನು ಸೆಪ್ಟೆಂಬರ್ ಮತ್ತು ಅಕ್ಟೋಬರ್ ನಡುವೆ ನಡೆಸುವ ವಿಶ್ವಾಸದಲ್ಲಿದೆ ಬಿಸಿಸಿಐ. ಒಂದು ವೇಳೆ ಟೂರ್ನಿ ನಡೆಯದಿದ್ದರೆ, ಬಿಸಿಸಿಐಗೆ ಸುಮಾರು 2500 ಕೋಟಿ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಹೀಗಾಗಿ ವಿದೇಶದಲ್ಲಾದರೂ ಐಪಿಎಲ್ ಆಯೋಜಿಸಿ ನಷ್ಟವನ್ನು ತಪ್ಪಿಸಲು ಬಿಸಿಸಿಐ ಯೋಜನೆ ರೂಪಿಸುತ್ತಿದೆ.

    Published by:zahir
    First published: