IPL 2021 Eliminator KKR vs DC; ಡೆಲ್ಲಿ ಕ್ಯಾಪಿಟಲ್ ವಿರುದ್ಧ ಗೆಲ್ಲುವ ಭರವಸೆ ಇದೆ; ಶುಭಮನ್ ಗಿಲ್ ವಿಶ್ವಾಸ

Shubman Gill; ಡೆಲ್ಲಿ ಕ್ಯಾಪಿಟಲ್​ ಒಂದು ಸಮತೋಲಿತ ತಂಡ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಅವರು ಅಪಾಯಕಾರಿ. ಅದರಲ್ಲೂ ಅಪಾಯಕಾರಿ ಡೆಲ್ಲಿ ಬೌಲಿಂಗ್ ಪಡೆಯನ್ನು ಎದುರಿಸುವುದು ಅಷ್ಟು ಸುಲಭದ ಮಾತಲ್ಲ ಎಂದು ಶುಭಮನ್ ಗಿಲ್ ಅಭಿಪ್ರಾಯಪಟ್ಟಿದ್ದಾರೆ.

ಶುಭಮನ್ ಗಿಲ್.

ಶುಭಮನ್ ಗಿಲ್.

  • Share this:
    ರಾಯಲ್ ಚಾಲೆಂಜರ್ಸ್​ ಬೆಂಗಳೂರು (Royal Challengers Bangalore) ಮತ್ತು ಕೋಲ್ಕತ್ತಾ ನೈಟ್​ ರೈಡರ್ಸ್​ () ನಡುವೆ ನಡೆದ ಮೊದಲ ಎಲಿಮಿನೇಟರ್​ ಪಂದ್ಯದಲ್ಲಿ ಕೆಕೆಆರ್​ 4 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಮುಂದಿನ 2ನೇ ಎಲಿಮಿನೇಟರ್​ (IPL 2021 Eliminator) ಪಂದ್ಯದಲ್ಲಿ ಬುಧವಾರ ಬಲಿಷ್ಠ ಡೆಲ್ಲಿ ಕ್ಯಾಪಿಟಲ್ಸ್​ (Delhi Capitals) ವಿರುದ್ಧ ಗೆಲುವಿಗಾಗಿ ಸೆಣಸಲಿದೆ. ಈ ಪಂದ್ಯದಲ್ಲಿ ಕೋಲ್ಕತ್ತಾ ನೈಟ್​ ರೈಡರ್ಸ್​ಗೆ (Kolkatta Night Riders) ಗೆಲುವು ಅಷ್ಟು ಸುಲಭವಲ್ಲ ಎಂಬ ವಿಚಾರ ತಿಳಿದಿದೆ. ಆದರೆ, ಆರ್​ಸಿಬಿ ಪಂದ್ಯದ ನಂತರ ಮಾತನಾಡಿರುವ ಕೆಕೆಆರ್​ (KKR) ತಂಡದ ಆರಂಭಿಕ ಬ್ಯಾಟ್ಸ್​ಮನ್ ಶುಭಮನ್ ಗಿಲ್ (Shubman Gill), "ಡೆಲ್ಲಿ ಕ್ಯಾಪಿಟಲ್ಸ್​ ತಂಡ ಬಲಿಷ್ಠವಾಗಿದೆ. ಈ ವರ್ಷ ಉತ್ತಮ ಪ್ರದರ್ಶನ ನೀಡಿದ್ದಾರೆ. ಆದರೆ, ಕೆಕೆಆರ್​ ಸಹ ಗೆಲುವಿನ ಟ್ರ್ಯಾಕ್​ನಲ್ಲಿದ್ದು, ಮುಂದಿನ ಪಂದ್ಯದಲ್ಲಿ ಗೆಲ್ಲುವ ವಿಶ್ವಾಸ ಇದೆ ಎಂದು" ಎಂದು ಅವರು ಭರವಸೆ ನೀಡಿದ್ದಾರೆ.

    ಎರಡನೇ ಎಲಿಮಿನೇಟರ್​ ಪಂದ್ಯದ ಬಗ್ಗೆ ಮಾತನಾಡಿರುವ ಶುಭಮನ್ ಗಿಲ್, "ಈ ಋತುವಿನ ಆರಂಭದಲ್ಲಿ ಕೆಕೆಆರ್​ ಅಷ್ಟೇನು ಉತ್ತಮ ಪ್ರದರ್ಶನವನ್ನು ನೀಡಿರಲಿಲ್ಲ. ಹೀಗಾಗಿ ನಮ್ಮ ತಂಡ ಪ್ಲೇ ಆಫ್ ಪ್ರವೇಶಿಸಲಿದೆ ಎಂದು ಸಹ ಅನೇಕರು ಭಾವಿಸಿರಲಿಲ್ಲ. ಆದರೆ, ದ್ವಿತಿಯಾರ್ಧದಲ್ಲಿ ನಾವು ನಿಜಕ್ಕೂ ಅದ್ಭುತವಾದಂತಹ ಪ್ರದರ್ಶನವನ್ನು ನೀಡಿದ್ದೇವೆ. ಮತ್ತೆ ಗೆಲುವಿನ ಟ್ರ್ಯಾಕ್​ಗೆ ಮರಳಿದ್ದೇವೆ.

    ಪ್ರಸ್ತುತ ತಂಡ ಉತ್ತಮವಾದ ಫಾರ್ಮ್​ನಲ್ಲಿದೆ. ದೊಡ್ಡ ದೊಡ್ಡ ಗೆಲುವುಗಳನ್ನು ದಾಖಲಿಸಿರುವ ಆತ್ಮವಿಶ್ವಾಸದಿಂದಿದೆ. ಈ ಉತ್ತಮ ಫಾರ್ಮ್​ ಅನ್ನು ಹೀಗೆ ಮುಂದುವರೆಸುವ ಯೋಜನೆ ತಂಡದ ಮುಂದಿದೆ. ನಾನೂ ಸಹ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದು, ರನ್ ಕಲೆಹಾಕುತ್ತಿದ್ದೇನೆ. ತಂಡದ ಕೋಚ್​ ಬ್ರೆಂಡನ್ ಮೆಕಲಂ ಅವರಿಂದ ಸಾಕಷ್ಟು ಸಲಹೆಗಳನ್ನು ಪಡೆದಿದ್ದೇನೆ. ಮುಂದಿನ ಪಂದ್ಯದಲ್ಲೂ ಇದೇ ರೀತಿಯ ಪ್ರದರ್ಶನ ನೀಡಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ನಿರ್ವಹಿಸುವುದು ನನ್ನ ಗುರಿ" ಎಂದು ಶುಭಮನ್ ಗಿಲ್ ತಿಳಿಸಿದ್ದಾರೆ.

    ಇದೇ ಸಂದರ್ಭದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬಗ್ಗೆಯೂ ಮಾತನಾಡಿರುವ ಗಿಲ್, "ಡೆಲ್ಲಿ ಕ್ಯಾಪಿಟಲ್​ ಒಂದು ಸಮತೋಲಿತ ತಂಡ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಅವರು ಅಪಾಯಕಾರಿ. ಅದರಲ್ಲೂ ಅಪಾಯಕಾರಿ ಡೆಲ್ಲಿ ಕ್ಯಾಪಿಟಲ್ಸ್ ಬೌಲಿಂಗ್ ಪಡೆಯನ್ನು ಎದುರಿಸುವುದು ಅಷ್ಟು ಸುಲಭದ ಮಾತಲ್ಲ. ಹೀಗಾಗಿ ಮುಂದಿನ ಪಂದ್ಯಕ್ಕೆ ತಂಡದ ಯೋಜನೆಗಳಲ್ಲಿ ಅಲ್ಪ ಬದಲಾವಣೆಗಳನ್ನು ತರುವ ಸಾಧ್ಯತೆ ಇದೆ.

    ಅಲ್ಲದೆ, ನಾವು ಇಲ್ಲಿನ ಶಾರ್ಜಾ ಅಂಗಳದಲ್ಲಿ ಈಗಾಗಲೇ ಸತತವಾಗಿ ಎರಡು ಪಂದ್ಯಗಳನ್ನು ಆಡಿದ್ದೇವೆ. ಈ ಅಂಗಳ ಯಾವ ಸಂದರ್ಭದಲ್ಲಿ ಹೇಗೆ ವರ್ತಿಸುತ್ತದೆ? ಈ ವಿಕೆಟ್​ನಿಂದ ನಾವು ಏನನ್ನು ನಿರೀಕ್ಷಿಸಬಹುದು?ಎಂಬ ಅಂದಾಜು ನಮಗಿದೆ. ಅಲ್ಲದೆ, ತಂಡದಲ್ಲಿರುವ ಎಲ್ಲಾ ಆಟಗಾರರು ಈ ಅಂಗಳಕ್ಕೆ ಈಗಾಗಲೇ ಹೊಂದಿಕೊಂಡಿದ್ದಾರೆ. ಹೀಗಾಗಿ ಮುಂದಿನ ಪಂದ್ಯದಲ್ಲಿ ನಾವು ಡೆಲ್ಲಿ ಕ್ಯಾಪಿಟಲ್ಸ್​ಗಿಂತ ಒಂದು ಹೆಜ್ಜೆ ಮುಂದೆ ಇದ್ದೇವೆ" ಎಂದು ಶುಭಮನ್ ಗಿಲ್ ಅಭಿಪ್ರಾಯಪಟ್ಟಿದ್ದಾರೆ.

    ಇದನ್ನೂ ಓದಿ: KKR beat RCB- ಸುನೀಲ್ ಆದ್ಭುತ ಆಟ; ಇಲಿಮಿನೇಟರ್​ನಲ್ಲಿ ಕೆಕೆಆರ್​ಗೆ ಗೆಲುವು; ಆರ್​ಸಿಬಿ ಔಟ್



    ನಿನ್ನೆ ನಡೆದ ಮೊದಲ ಎಲಿಮಿನೇಟರ್​ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಆರ್​ಸಿಬಿ ತಂಡ ನಿಗದಿತ 20 ಓವರ್​ಗಳಲ್ಲಿ 136 ರನ್​ಗಳನ್ನು ಗಳಿಸಿತ್ತು. ಆದರೆ, ಕೆಕೆಆರ್​ ತಂಡ ಇನ್ನೂ2 ಚೆಂಡು ಬಾಕಿ ಇರುವಂತೆಯೇ ಪಂದ್ಯದಲ್ಲಿ ಗೆಲುವು ಸಾಧಿಸಿತ್ತು. ಇನ್ನೂ ಮೊದಲ ಕ್ಯಾಲಿಫೈಯರ್​ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಎದುರು ರೋಚಕ ಸೋಲನುಭವಿಸಿದ ಡೆಲ್ಲಿ ಕ್ಯಾಪಿಟಲ್ಸ್​ ಇದೇ ಶಾರ್ಜಾ ಅಂಗಳದಲ್ಲಿ ಬುಧವಾರ ನಡೆಯಲಿರುವ ಪಂದ್ಯದಲ್ಲಿ ಕೆಕೆಆರ್​ ತಂಡವನ್ನು ಎದುರಿಸಲಿದೆ.
    Published by:MAshok Kumar
    First published: