IPL 2021: ಐಪಿಎಲ್​ನಲ್ಲಿಂದು ಡಬಲ್ ಧಮಾಕಾ: ಯಾರಿಗೆ ಸಿಗಲಿದೆ ಜಯ..?

ಐಪಿಎಲ್ ಸೀಸನ್​ 14ನ ಮೊದಲಾರ್ಧದ ಮುಕ್ತಾಯದ ಹಂತದಲ್ಲಿ ಭರ್ಜರಿ ಗೆಲುವುಗಳನ್ನು ದಾಖಲಿಸಿ ಎಲ್ಲಾ ತಂಡಗಳು ಪಾಯಿಂಟ್ ಟೇಬಲ್​ನಲ್ಲಿ ಟಾಪ್ 4 ನಲ್ಲಿ ಸ್ಥಾನ ಪಡೆಯುವ ಪೈಪೋಟಿಯಲ್ಲಿದೆ.

IPL 2021

IPL 2021

 • Share this:
  ಇಂಡಿಯನ್ ಪ್ರೀಮಿಯರ್ ಲೀಗ್ ಅಂಗಳದಲ್ಲಿಂದು ಡಬಲ್ ಧಮಾಕಾ. ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ ತಂಡವು ರಾಜಸ್ಥಾನ್ ರಾಯಲ್ಸ್​ ತಂಡವನ್ನು ಎದುರಿಸಿದರೆ, 2ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ದ ಕೊಲ್ಕತ್ತಾ ನೈಟ್ ರೈಡರ್ಸ್ ಸೆಣಸಲಿದೆ. ರಾಜಸ್ಥಾನ್ ಮುಂಬೈ ಪಂದ್ಯವು ದೆಹಲಿ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆಯಲಿದ್ದು, ಹಾಗೆಯೇ ಕೆಕೆಆರ್​-ಡೆಲ್ಲಿ ಪಂದ್ಯಕ್ಕೆ ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂ ಆತಿಥ್ಯವಹಿಸಲಿದೆ.

  ಐದು ಪಂದ್ಯಗಳನ್ನಾಡಿರುವ ರಾಜಸ್ಥಾನ್ ರಾಯಲ್ಸ್​ 3 ಸೋಲು ಕಂಡಿದ್ದು, ಇಂದಿನ ಪಂದ್ಯದ ಮೂಲಕ ಗೆಲುವಿನ ಲಯಕ್ಕೆ ಮರಳಲು ಆರ್​ಆರ್​ ತಂಡ ಕಠಿಣ ಪೈಪೋಟಿ ನೀಡಲಿದೆ. ಅತ್ತ 5 ಪಂದ್ಯಗಳಲ್ಲಿ 3 ಗೆಲುವು ದಾಖಲಿಸಿರುವ ಮುಂಬೈ ಇಂಡಿಯನ್ಸ್ ಆರ್​ಆರ್​ ವಿರುದ್ದ ಭರ್ಜರಿ ಗೆಲುವು ದಾಖಲಿಸಿ ಅಂಕಪಟ್ಟಿಯಲ್ಲಿ 4ನೇ ಸ್ಥಾನದಿಂದ 3ನೇ ಸ್ಥಾನಕ್ಕೇರುವ ವಿಶ್ವಾಸದಲ್ಲಿದೆ.

  ಇನ್ನೊಂದೆಡೆ 6 ಪಂದ್ಯಗಳಲ್ಲಿ ಕೇವಲ 2 ಜಯ ಸಾಧಿಸಿರುವ ಕೆಕೆಆರ್​ಗೆ ಪಾಯಿಂಟ್ ಟೇಬಲ್​ನಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್​ ಸವಾಲಾಗಲಿದೆ. ಕಳೆದ ಪಂದ್ಯದಲ್ಲಿ ಆರ್​ಸಿಬಿ ವಿರುದ್ದ ಕೇವಲ 1 ರನ್​ನಿಂದ ಸೋತಿರುವ ಡೆಲ್ಲಿ ಕೆಕೆಆರ್​ ವಿರುದ್ದ ಗೆದ್ದು ಮತ್ತೆ ಅಂಕಪಟ್ಟಿಯಲ್ಲಿ ಮೇಲೆರುವ ತವಕದಲ್ಲಿದೆ. ಅತ್ತ ಅಹಮದಾಬಾದ್​ ಪಿಚ್​ ನಲ್ಲಿ ಪಂಜಾಬ್ ಕಿಂಗ್ಸ್​ ವಿರುದ್ದ ಗೆದ್ದು ಬೀಗಿರುವ ಕೊಲ್ಕತ್ತಾ ನೈಟ್ ರೈಡರ್ಸ್​ ಡೆಲ್ಲಿಗೆ ಕಠಿಣ ಪೈಪೋಟಿಯೊಡ್ಡುವ ನಿರೀಕ್ಷೆಯಿದೆ.

  ಒಟ್ಟಿನಲ್ಲಿ ಐಪಿಎಲ್ ಸೀಸನ್​ 14ನ ಮೊದಲಾರ್ಧದ ಮುಕ್ತಾಯದ ಹಂತದಲ್ಲಿ ಭರ್ಜರಿ ಗೆಲುವುಗಳನ್ನು ದಾಖಲಿಸಿ ಎಲ್ಲಾ ತಂಡಗಳು ಪಾಯಿಂಟ್ ಟೇಬಲ್​ನಲ್ಲಿ ಟಾಪ್ 4 ನಲ್ಲಿ ಸ್ಥಾನ ಪಡೆಯುವ ಪೈಪೋಟಿಯಲ್ಲಿದೆ. ಹೀಗಾಗಿ ಇಂದಿನ ಪಂದ್ಯಗಳಲ್ಲಿ ಉಭಯ ತಂಡಗಳಿಂದ ರೋಚಕ ಹೋರಾಟವನ್ನು ನಿರೀಕ್ಷಿಸಬಹುದು.

  ಮುಂಬೈ ಇಂಡಿಯನ್ಸ್ ಸಂಭಾವ್ಯ ಪ್ಲೇಯಿಂಗ್ ಇಲೆವೆನ್: ಕ್ವಿಂಟನ್ ಡಿ ಕಾಕ್, ರೋಹಿತ್ ಶರ್ಮಾ (ನಾಯಕ), ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಕಿರಾನ್ ಪೊಲಾರ್ಡ್, ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ, ಜಯಂತ್ ಯಾದವ್, ರಾಹುಲ್ ಚಹರ್, ಟ್ರೆಂಟ್ ಬೋಲ್ಟ್, ಜಸ್ಪ್ರೀತ್ ಬುಮ್ರಾ.

  ರಾಜಸ್ಥಾನ್ ರಾಯಲ್ಸ್ ಸಂಭಾವ್ಯ ಪ್ಲೇಯಿಂಗ್ ಇಲೆವೆನ್: ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್ (ನಾಯಕ), ಡೇವಿಡ್ ಮಿಲ್ಲರ್, ಶಿವಂ ದುಬೆ, ರಾಹುಲ್ ತೆವಾಠಿಯಾ, ರಿಯಾನ್ ಪರಾಗ್, ಕ್ರಿಸ್ ಮೋರಿಸ್, ಜಯದೇವ್ ಉನಾದ್ಕಟ್, ಮುಸ್ತಾಫಿಜುರ್ ರಹಮಾನ್, ಚೇತನ್ ಸಕರಿಯಾ.

  ಡೆಲ್ಲಿ ಕ್ಯಾಪಿಟಲ್ಸ್ ಸಂಭಾವ್ಯ ಪ್ಲೇಯಿಂಗ್ ಇಲೆವೆನ್:​ ಶಿಖರ್ ಧವನ್, ಪೃಥ್ವಿ ಶಾ, ಸ್ಟೀವ್ ಸ್ಮಿತ್, ರಿಷಭ್ ಪಂತ್ (ನಾಯಕ), ಶಿಮ್ರಾನ್ ಹೆಟ್ಮಿಯರ್, ಮಾರ್ಕಸ್ ಸ್ಟೋಯಿನಿಸ್, ಅಕ್ಷರ್ ಪಟೇಲ್, ಅಮಿತ್ ಮಿಶ್ರಾ, ಕಗಿಸೊ ರಬಾಡ, ಅವೇಶ್ ಖಾನ್ ಮತ್ತು ಇಶಾಂತ್ ಶರ್ಮಾ

  ಕೋಲ್ಕತಾ ನೈಟ್ ರೈಡರ್ಸ್ ಸಂಭಾವ್ಯ ಪ್ಲೇಯಿಂಗ್ ಇಲೆವೆನ್: ಶುಭ್​ಮನ್ ಗಿಲ್, ನಿತೀಶ್ ರಾಣಾ, ರಾಹುಲ್ ತ್ರಿಪಾಠಿ, ಇಯಾನ್ ಮೋರ್ಗನ್ (ನಾಯಕ), ಸುನಿಲ್ ನರೈನ್, ದಿನೇಶ್ ಕಾರ್ತಿಕ್, ಆಂಡ್ರೆ ರಸ್ಸೆಲ್, ಪ್ಯಾಟ್ ಕಮ್ಮಿನ್ಸ್, ಪ್ರಸಿದ್ಧ್ ಕೃಷ್ಣ, ವರುಣ್ ಚಕ್ರವರ್ತಿ ಮತ್ತು ಶಿವಂ ಮಾವಿ  ಪಂದ್ಯದ ವಿವರಗಳು:
  ಮೊದಲ ಪಂದ್ಯ: ಮುಂಬೈ ಇಂಡಿಯನ್ಸ್​ - ರಾಜಸ್ಥಾನ್ ರಾಯಲ್ಸ್
  ಸಮಯ: 29 ಏಪ್ರಿಲ್ 2021, ಸಾಯಂಕಾಲ 3: 30
  ಸ್ಥಳ: ಅರುಣ್ ಜೇಟ್ಲಿ ಕ್ರೀಡಾಂಗಣ, ದೆಹಲಿ

  ಎರಡನೇ ಪಂದ್ಯ: ದೆಹಲಿ ಕ್ಯಾಪಿಟಲ್ಸ್ - ಕೋಲ್ಕತಾ ನೈಟ್ ರೈಡರ್ಸ್
  ಸಮಯ: ಸಂಜೆ 7 : 30 ಕ್ಕೆ
  ಸ್ಥಳ: ನರೇಂದ್ರ ಮೋದಿ ಕ್ರೀಡಾಂಗಣ, ಅಹಮದಾಬಾದ್
  ನೇರ ಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​, ಹಾಟ್ ಸ್ಟಾರ್
  Published by:zahir
  First published: