IPL 2021 Video: ಹೀಗೊಂದು ರನೌಟ್: ಕುತೂಹಲಕ್ಕೆ ಕಾರಣವಾಗಿದ್ದ ಅಂಪೈರ್ ತೀರ್ಪು..!

ಪಂದ್ಯದ 14ನೇ ಓವರ್​ನ ಮೂರನೇ ಎಸೆತದಲ್ಲಿ ಮಯಾಂಕ್ ಚೆಂಡನ್ನು ಮಿಡ್ ಆಫ್​ನತ್ತ ಬಾರಿಸಿದರು. ಅಲ್ಲದೆ ಒಂದು ರನ್ ಕದಿಯಲು ಮುಂದಾದರು. ಇತ್ತ ಕಡೆಯಿಂದ ದೀಪಕ್ ಹೂಡಾ ಕೂಡ ರನ್​ಗಾಗಿ ಓಡಲು ಮುಂದೆ ಬಂದರು. ಆದರೆ ತುಸು ದೂರದಲ್ಲೇ ಫೀಲ್ಡಿಂಗ್​ನಲ್ಲಿದ್ದ ಶಿಮ್ರಾನ್ ಹೆಟ್ಮೆಯರ್ ಅದ್ಭುತವಾಗಿ ಚೆಂಡನ್ನು ಹಿಡಿದು ಅಕ್ಷರ್ ಪಟೇಲ್​ಗೆ ಕೈ ಎಸೆದರು.

run out

run out

 • Share this:
  ಭಾನುವಾರ ನಡೆದ ಪಂಜಾಬ್ ಕಿಂಗ್ಸ್​ ಮತ್ತು ಡೆಲ್ಲಿ ಕ್ಯಾಪಿಟಲ್ಸ್​ ನಡುವಿನ ಪಂದ್ಯವು ರೋಚಕ ಕ್ಷಣಗಳಿಗೆ ಸಾಕ್ಷಿಯಾಗಿತ್ತು. ಅವುಗಳಲ್ಲಿ ಮಾಯಾಂಕ್ ಅಗರ್ವಾಲ್​ ಅವರ ಪ್ರಚಂಡ ಬ್ಯಾಟಿಂಗ್, ರಬಾಡ ಅವರ ಬಿರುಸಿನ ಎಸೆತಕ್ಕೆ ಗೇಲ್ ಬೌಲ್ಡ್​ ಆಗಿದ್ದು...ಹೀಗೆ ಹಲವು ಘಟನೆಗಳು ಕ್ರಿಕೆಟ್ ಪ್ರೇಮಿಗಳ ಗಮನ ಸೆಳೆದವು. ಇದರ ಜೊತೆಗೆ ದೀಪಕ್ ಹೂಡಾ ಅವರ ರನೌಟ್ ತುಸು ಗೊಂದಲಕ್ಕೆ ಕಾರಣವಾಗಿತ್ತು.

  ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಪಂಜಾಬ್ ಕಿಂಗ್ಸ್ ಮೊದಲ ಬ್ಯಾಟಿಂಗ್ ಮಾಡಿತು. ಅದರಂತೆ ಮಯಾಂಕ್ ಹಾಗೂ ಪ್ರಭ್ ಸಿಮ್ರಾನ್ ಸಿಂಗ್ ಇನಿಂಗ್ಸ್ ಆರಂಭಿಸಿದ್ದರು. ಪಂದ್ಯದ ನಾಲ್ಕನೇ ಓವರ್​ನಲ್ಲಿ ಸಿಮ್ರಾನ್ ಸಿಂಗ್ ಔಟಾದರೆ, ಅದರ ಬೆನ್ನಲ್ಲೇ ರಬಾಡ ಎಸೆತಕ್ಕೆ ಗೇಲ್ ಕ್ಲೀನ್ ಬೌಲ್ಡ್ ಆದರು.

  ಈ ಹಂತದಲ್ಲಿ ಕಣಕ್ಕಿಳಿದ ಟಿ20 ಕ್ರಿಕೆಟ್​ನ ನಂಬರ್​ 1 ಬ್ಯಾಟ್ಸ್​ಮನ್​ ಡೇವಿಡ್ ಮಲಾನ್ 26 ರನ್ ಬಾರಿಸಿ ಅಕ್ಷರ್ ಪಟೇಲ್ ಎಸೆತದಲ್ಲಿ ಬೌಲ್ಡ್ ಆದರು. ಈ ವೇಳೆ 5ನೇ ಕ್ರಮಾಂಕದಲ್ಲಿ ದೀಪಕ್ ಹೂಡಾ ಕಣಕ್ಕಿಳಿದಿದ್ದರು. ಮೊದಲ ಎಸೆತದಲ್ಲೇ 1 ರನ್ ಬಾರಿಸಿದ ಹೂಡಾ ಬಳಿಕ ಮಯಾಂಕ್​ಗೆ ಸ್ಟ್ರೈಕ್ ನೀಡಿದ್ದರು.

  ಪಂದ್ಯದ 14ನೇ ಓವರ್​ನ ಮೂರನೇ ಎಸೆತದಲ್ಲಿ ಮಯಾಂಕ್ ಚೆಂಡನ್ನು ಮಿಡ್ ಆಫ್​ನತ್ತ ಬಾರಿಸಿದರು. ಅಲ್ಲದೆ ಒಂದು ರನ್ ಕದಿಯಲು ಮುಂದಾದರು. ಇತ್ತ ಕಡೆಯಿಂದ ದೀಪಕ್ ಹೂಡಾ ಕೂಡ ರನ್​ಗಾಗಿ ಓಡಲು ಮುಂದೆ ಬಂದರು. ಆದರೆ ತುಸು ದೂರದಲ್ಲೇ ಫೀಲ್ಡಿಂಗ್​ನಲ್ಲಿದ್ದ ಶಿಮ್ರಾನ್ ಹೆಟ್ಮೆಯರ್ ಅದ್ಭುತವಾಗಿ ಚೆಂಡನ್ನು ಹಿಡಿದು ಅಕ್ಷರ್ ಪಟೇಲ್​ಗೆ ಕೈ ಎಸೆದರು. ಅದಾಗಲೇ ರನ್​ಗಾಗಿ ಓಡಿ ಬಂದಿದ್ದ ಮಯಾಂಕ್ ನಾನ್​ ಸ್ಟ್ರೈಕ್​ನತ್ತ ತಲುಪಿದರೆ, ಓಡಲು ಮುಂದಾಗಿದ್ದ ದೀಪಕ್ ಹೂಡಾ ಯು ಟರ್ನ್​ ಹೊಡೆದು ಹಿಂದಕ್ಕೆ ಓಡಿದರು.

  ಇಬ್ಬರು ಒಂದೇ ಕ್ರೀಸ್​ಗೆ ಆಗಮಿಸುವಷ್ಟರಲ್ಲಿ ಅಕ್ಷರ್ ಪಟೇಲ್ ಚೆಂಡನ್ನು ವಿಕೆಟ್​ಗೆ ತಾಗಿಸಿದರು. ಅಷ್ಟೇ ಅಲ್ಲದೆ ಬಾಲ್​ನ್ನು ಮತ್ತೆ ವಿಕೆಟ್ ಕೀಪರ್​ಗೆ ನೀಡಿದರು. ಅಂದರೆ ಎರಡು ಕಡೆ ಕೂಡ ರನೌಟ್ ಮಾಡಿದ್ದರು. ಇದರಿಂದ ಯಾರು ಔಟ್ ಎಂಬ ಗೊಂದಲ ಉಂಟಾಯಿತು. ಈ ಬಗ್ಗೆ ಪರಿಶೀಲಿಸಿದ ಮೂರನೇ ಅಂಪೈರ್ ದೀಪಕ್ ಹೂಡಾ ಅವರು ಔಟ್ ಎಂದು ತೀರ್ಪು ನೀಡಿದ್ದರು.  ನಾನ್​ ಸ್ಟ್ರೈಕ್​ನಲ್ಲಿನ ರನೌಟ್​ನ್ನು ಗಣನೆಗೆ ತೆಗೆದುಕೊಂಡ ಅಂಪೈರ್​ ಯಾರ ಬ್ಯಾಟ್ ಮೊದಲು ಕ್ರೀಸ್​ಗೆ ತಲುಪುತ್ತಿದೆ ಎಂದು ಪರಿಶೀಲಿಸಿದ್ದರು. ಅಕ್ಷರ್ ಪಟೇಲ್ ಚೆಂಡನ್ನು ವಿಕೆಟ್​​ಗೆ ತಾಗಿಸಿದ ಬಳಿಕ ದೀಪಕ್ ಹೂಡಾ ಬ್ಯಾಟನ್ನು ಕ್ರೀಸ್​ ಒಳಗಿಟ್ಟಿದ್ದರು. ಆ ಬಳಿಕ ಮಯಾಂಕ್ ಅಗರ್ವಾಲ್ ಅವರ ಬ್ಯಾಟ್ ಕ್ರೀಸ್ ಮುಟ್ಟಿತ್ತು. ಹೀಗಾಗಿ ರನೌಟ್ ಆಗುವ ವೇಳೆ ಯಾವ ಬ್ಯಾಟ್ಸ್​ಮನ್ ಕ್ರೀಸ್ ಸಮೀಪದಲ್ಲಿದ್ದಾರೆ ಎಂಬುದನ್ನು ಗಣನೆಗೆ ತೆಗೆದುಕೊಂಡು ಅವರನ್ನು ಔಟ್ ಎಂದು ಘೋಷಿಸಲಾಯಿತು. ಅದರಂತೆ ಯು ಟರ್ನ್ ಮಾಡಿ ಓಡಿ ಬಂದರೂ ದೀಪಕ್ ಹೂಡ ರನೌಟ್ ಆದರು.
  Published by:zahir
  First published: