DC vs SRH- ಹೈದರಾಬಾದ್​ಗೆ ಕೋವಿಡ್ ಭೀತಿ; ಡೆಲ್ಲಿಯ ಸ್ಮಿತ್​ಗೆ ಅವಕಾಶ ಕೈತಪ್ಪುವ ಸಾಧ್ಯತೆ

IPL today’s match- ಕೇವಲ ಒಂದು ಗೆಲುವಿನಿಂದ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಸನ್​ರೈಸರ್ಸ್ ಹೈದರಾಬಾದ್ ತಂಡಕ್ಕೆ ಪಂತ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ಪ್ರಬಲ ಸವಾಲೊಡ್ಡಿದೆ. ನಟರಾಜನ್​ಗೆ ಕೋವಿಡ್ ಹೊರತಾಗಿಯೂ ಪಂದ್ಯ ನಡೆಯಲಿದೆ.

ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರರಿಂದ ಅಭ್ಯಾಸ

ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರರಿಂದ ಅಭ್ಯಾಸ

 • Cricketnext
 • Last Updated :
 • Share this:
  ದುಬೈ, ಸೆ. 22: ಇಂಡಿಯನ್ ಪ್ರೀಮಿಯರ್ ಲೀಗ್ 2021ನ 33ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಸನ್​ರೈಸರ್ಸ್ ಹೈದರಾಬಾದ್ (Delhi Capitals vs Sunrisers Hyderabad) ತಂಡಗಳು ಮುಖಾಮುಖಿಯಾಗಲಿವೆ. ದುಬೈ ಇಂಟರ್​ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಸಂಜೆ 7:30ಕ್ಕೆ ಆರಂಭವಾಗುವ ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಫೇವರಿಟ್ ಎನಿಸಿದೆ. ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಡೆಲ್ಲಿ ತಂಡ 8 ಪಂದ್ಯಗಳಿಂದ 12 ಅಂಕಗಳನ್ನ ಹೊಂದಿದ್ದು, ಈ ಪಂದ್ಯ ಗೆದ್ದು ಮತ್ತೆ ಅಗ್ರಸ್ಥಾನಕ್ಕೇರುವ ತವಕದಲ್ಲಿದೆ. ಇನ್ನೊಂದೆಡೆ, ಕೇನ್ ವಿಲಿಯಮ್ಸನ್ ನೇತೃತ್ವದ ಹೈದರಾಬಾದ್ ತಂಡ ಅಂಕಪಟ್ಟಿಯಲ್ಲಿ ತಳದಲ್ಲಿದ್ದು, ನಾಕೌಟ್ ಆಸೆ ಜೀವಂತವಾಗಿರಬೇಕಾದರೆ ಈ ಪಂದ್ಯ ಗೆಲ್ಲುವುದು ಬಹಳ ಮುಖ್ಯ. ಈ ತಂಡ 7 ಪಂದ್ಯಗಳಿಂದ ಗಳಿಸಿರುವುದು ಎರಡೇ ಅಂಕ. ಅದರ ಜೊತೆಗೆ ತಂಡದ ಪ್ರಮುಖ ಬೌಲರ್ ಟಿ ನಟರಾಜನ್ ಅವರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಅವರು ಕೆಲ ಪಂದ್ಯಗಳನ್ನ ಆಡುವುದಿಲ್ಲ. ಇದು ತಂಡದ ಹುಮ್ಮಸ್ಸನ್ನ ಇನ್ನಷ್ಟು ಹಾಳು ಮಾಡಬಹುದು.

  ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗ ಬಲಿಷ್ಠವಾಗಿ ತೋರುತ್ತಿದೆ. ಟಾಪ್ ಬ್ಯಾಟಿಂಗ್ ಆರ್ಡರ್​ನಲ್ಲಿ ಪೃಥ್ವಿ ಶಾ, ಶಿಖರ್ ಧವನ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ ಅವರಿದ್ದಾರೆ. ಇಂಗ್ಲೆಂಡ್ ಸರಣಿಯಲ್ಲಿ ರನ್ ಗಳಿಸಲು ಪರದಾಡಿದ್ದ ರಿಷಭ್ ಪಂತ್ ದುಬೈನಲ್ಲಿ ಫಾರ್ಮ್ ಮರಳಿ ಗಳಿಸುವ ನಿರೀಕ್ಷೆಯಲ್ಲಿದ್ದಾರೆ. ಅದು ಬಿಟ್ಟರೆ ಡೆಲ್ಲಿ ಕ್ಯಾಪಿಟಲ್ಸ್​ನ ಬ್ಯಾಟಿಂಗ್​ನಲ್ಲಿ ಯಾವ ಸಮಸ್ಯೆಯೂ ಕಾಣುತ್ತಿಲ್ಲ. ಶ್ರೇಯಸ್ ಅಯ್ಯರ್ ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡ ತಂಡಕ್ಕೆ ಮರಳಿದ್ದಾರೆ. ಹೀಗಾಗಿ, ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಸ್ಟೀವ್ ಸ್ಮಿತ್ ಅವರಂಥ ಬ್ಯಾಟ್ಸ್​ಮನ್ ಈಗ ತಂಡದಿಂದ ಹೊರಗುಳಿಯುವ ಸ್ಥಿತಿ ಬಂದಿದೆ.

  ಮಾರ್ಕಸ್ ಸ್ಟಾಯ್ನಿಸ್, ಶಿಮ್ರೋನ್ ಹೆಟ್ಮೆಯರ್, ಅಕ್ಷರ್ ಪಟೇಲ್ ಅವರು ಮಿಡಲ್ ಆರ್ಡರ್​ಗೆ ಶಕ್ತಿ ತುಂಬಿದ್ಧಾರೆ. ಡೆಲ್ಲಿ ತಂಡಕ್ಕೆ ಸಾಕಷ್ಟು ಬೌಲಿಂಗ್ ಆಯ್ಕೆಗಳೂ ಇವೆ. ಕಗಿಸೋ ರಬಡ ಮತ್ತು ಅವೇಶ್ ಖಾನ್ ಜೊತೆ ಮತ್ತೊಬ್ಬ ಫಾಸ್ಟ್ ಬೌಲರ್ ಆನ್ರಿಕ್ ನೋರ್ಜೆ ಅವರೂ ಕಣಕ್ಕಿಳಿಯುವ ಸಾಧ್ಯತೆ ಇದೆ. ಸ್ಪಿನ್ ವಿಭಾಗದಲ್ಲಿ ಆರ್ ಅಶ್ವಿನ್, ಅಕ್ಷರ್ ಪಟೇಲ್, ಲಲಿತ್ ಯಾದವ್, ಅಮಿತ್ ಮಿಶ್ರಾ ಅವರಿದ್ದಾರೆ.

  ಇದನ್ನೂ ಓದಿ: RCB captain? ಮುಂದಿನ ಆರ್​ಸಿಬಿ ಕ್ಯಾಪ್ಟನ್ ಯಾರಾಗಬಹುದು? ಸಂಭಾವ್ಯರು ಇವರು

  ಇನ್ನು, ಸನ್​ರೈಸರ್ಸ್ ಹೈದರಾಬಾದ್ ತಂಡಕ್ಕೆ ಜಾನಿ ಬೇರ್​ಸ್ಟೋ ಅವರ ಅನುಪಸ್ಥಿತಿ ಕಾಡಲಿದೆ. ಮೊದಲ ಲೆಗ್​ನಲ್ಲಿ ಭರ್ಜರಿಯಾಗಿ ಆರ್ಭಟಿಸಿದ್ದ ಬೇರ್​ಸ್ಟೋ ಅವರು ಆಡದೇ ಇರುವುದು ಹೈದರಾಬಾದ್​ಗೆ ದೊಡ್ಡ ಹಿನ್ನಡೆ ಎನಿಸಬಹುದು. ಡೇವಿಡ್ ವಾರ್ನರ್ ಅವರು ಫಾರ್ಮ್​ಗೆ ಮರಳುವುದು ಹೈದರಾಬಾದ್​ಗೆ ಬಹಳ ಮುಖ್ಯ. ನಾಯಕ ಕೇನ್ ವಿಲಿಯಮ್ಸನ್, ಮನೀಶ್ ಪಾಂಡೆ, ಕೇದಾರ್ ಜಾದವ್ ಅವರು ಸಿಡಿದರೆ ಹೈದರಾಬಾದ್ ತಂಡವನ್ನು ಕಟ್ಟಿಹಾಕುವುದು ಕಷ್ಟ. ಬೌಲಿಂಗ್​ನಲ್ಲಿ ಭುವನೇಶ್ವರ್ ಕುಮಾರ್ ಜೊತೆ ಫಾಸ್ಟ್ ಬೌಲರ್ಸ್ ಸಂದೀಪ್ ಶರ್ಮ ಅವರಿದ್ದಾರೆ. ಸಿದ್ಧಾರ್ಥ್ ಕೌಲ್, ಖಲೀಲ್ ಅಹ್ಮದ್, ಶಹಬಾಜ್ ನದೀಮ್ ಅವರಲ್ಲೊಬ್ಬ ಫಾಸ್ಟ್ ಬೌಲರ್​ಗೆ ಅವಕಾಶ ಸಿಗಬಹುದು. ರಷೀದ್ ಖಾನ್ ಮತ್ತು ಮೊಹಮ್ಮದ್ ನಬಿ ಸ್ಪಿನ್ ಬೌಲರ್​ಗಳಾಗಿ ಎದುರಾಳಿಗಳನ್ನ ಕಟ್ಟಿಹಾಕಬಲ್ಲರು.

  POINTS TABLE:

  ಸಂಭಾವ್ಯ ತಂಡಗಳು:

  ಡೆಲ್ಲಿ ಕ್ಯಾಪಿಟ,ಲ್ಸ್ ತಂಡ: ರಿಷಭ್ ಪಂತ್ (ನಾಯಕ), ಪೃಥ್ವಿ ಶಾ, ಶಿಖರ್ ಧವನ್, ಶ್ರೇಯಸ್ ಅಯ್ಯರ್, ಮಾರ್ಕಸ್ ಸ್ಟಾಯ್ನಿಸ್, ಶಿಮ್ರಾನ್ ಹೆಟ್​ಮಯರ್, ಅಕ್ಷರ್ ಪಟೇಲ್, ಆರ್. ಅಶ್ವಿನ್, ಕಗಿಸೋ ರಬಡ, ಆನ್ರಿಕ್ ನಾರ್ಜೆ, ಅವೇಶ್ ಖಾನ್.
  ಇತರ ಆಟಗಾರರು: ಅಜಿಂಕ್ಯ ರಹಾನೆ, ರಿಪಾಲ್ ಪಟೇಲ್, ಸ್ಟೀವ್ ಸ್ಮಿತ್, ಅಮಿತ್ ಮಿಶ್ರಾ, ಬೆನ್ ದ್ರಾರ್ಶುಯ್ಸ್, ಇಶಾಂತ್ ಶರ್ಮಾ, ಕುಲವಂತ್ ಖೇಜ್ರೋಲಿಯಾ, ಲೂಕ್​ಮನ್ ಮೆರಿವಾಲ, ಪ್ರವೀಣ್ ದುಬೇ, ಟಾಮ್ ಕುರನ್, ಉಮೇಶ್ ಯಾದವ್, ಲಲಿತ್ ಯಾದವ್, ಸ್ಯಾಮ್ ಬಿಲಿಂಗ್ಸ್, ವಿಷ್ಣು ವಿನೋದ್.

  ಸನ್​ರೈಸರ್ಸ್ ಹೈದರಾಬಾದ್ ತಂಡ: ಕೇನ್ ವಿಲಿಯಮ್ಸನ್ (ನಾಯಕ), ಡೇವಿಡ್ ವಾರ್ನರ್, ವೃದ್ಧಿಮಾನ್ ಸಾಹ, ಮನೀಶ್ ಪಾಂಡೆ, ಕೇದಾರ್ ಜಾಧವ್, ಅಬ್ದುಲ್ ಸಮದ್, ಜೇಸನ್ ಹೋಲ್ಡರ್/ಮೊಹಮ್ಮದ್ ನಬಿ, ರಷೀದ್ ಖಾನ್, ಭುನವೇಶ್ವರ್ ಕುಮಾರ್, ಟಿ ನಟರಾಜನ್, ಸಂದೀಪ್ ಶರ್ಮಾ
  ಇತರ ಆಟಗಾರರು: ಶೆರ್ಫಾನೆ ರುದರ್​ಫೋರ್ಡ್, ಶ್ರೀವತ್ಸ್ ಗೋಸ್ವಾಮಿ, ವಿಜಯ್ ಶಂಕರ್, ಅಭಿಷೇಕ್ ಶರ್ಮಾ, ಸಿದ್ಧಾರ್ಥ್ ಕೌಲ್, ಖಲೀಲ್ ಅಹ್ಮದ್, ಬಾಸಿಲ್ ಥಂಪಿ, ಶಹಬಾಜ್ ನದೀಮ್, ಜೆ ಸುಚಿತ್, ವಿರಾಟ್ ಸಿಮಗ್, ಪ್ರಿಯಂ ಗರ್ಗ್, ಮುಜೀಬ್-ಉರ್-ರಹಮಾನ್, ಜೇಸನ್ ರಾಯ್, ಟಿ ನಟರಾಜನ್
  Published by:Vijayasarthy SN
  First published: