HOME » NEWS » Ipl » IPL 2021 DC VS MI PREDICTED PLAYING 11 ZP

DC vs MI: ರಿಷಭ್ vs ರೋಹಿತ್: ಇಂದು ಕಣಕ್ಕಿಳಿಯಲಿರುವ ಸಂಭಾವ್ಯ ಪ್ಲೇಯಿಂಗ್ 11 ಹೀಗಿರಲಿದೆ

ಇದರ ಹೊರತಾಗಿ ಉಭಯ ತಂಡಗಳ ಬ್ಯಾಟ್ಸ್​ಮನ್​ಗಳಲ್ಲಿ ಬದಲಾವಣೆ ಕಂಡು ಬರುವ ಸಾಧ್ಯತೆಯಿಲ್ಲ. ಹೀಗಾಗಿ ಪಂಜಾಬ್ ವಿರುದ್ದ ಆಡಿದ ಬಹುತೇಕ ಆಟಗಾರರೇ ಇಂದು ಕೂಡ ಡೆಲ್ಲಿ ಪರ ಆಡಲಿದ್ದಾರೆ.

news18-kannada
Updated:April 20, 2021, 4:30 PM IST
DC vs MI: ರಿಷಭ್ vs ರೋಹಿತ್: ಇಂದು ಕಣಕ್ಕಿಳಿಯಲಿರುವ ಸಂಭಾವ್ಯ ಪ್ಲೇಯಿಂಗ್ 11 ಹೀಗಿರಲಿದೆ
Dc vs MI
  • Share this:
ಇಂಡಿಯನ್ ಪ್ರೀಮಿಯರ್ ಲೀಗ್​ನ 13ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್​ ಹಾಗೂ ಕಳೆದ ಸೀಸನ್​ನ ರನ್ನರ್ ಅಪ್ ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗಲಿದೆ. ಚೆನ್ನೈನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ಉಭಯ ತಂಡಗಳು ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರುವ ಇರಾದೆಯಲ್ಲಿದೆ.

ಎರಡೂ ತಂಡಗಳು ಈಗಾಗಲೇ 3 ಪಂದ್ಯಗಳನ್ನಾಡಿದ್ದು, ಅದರಲ್ಲಿ 2 ಗೆಲುವು ಹಾಗೂ 1 ಸೋಲು ಕಂಡಿದೆ. ಅಲ್ಲದೆ ಕಳೆದ ಪಂದ್ಯದಲ್ಲಿ ಉಭಯ ತಂಡಗಳು ಜಯ ಸಾಧಿಸಿದ್ದು, ಹೀಗಾಗಿ ಗೆಲುವಿನ ಲಯ ಮುಂದುವರೆಸುವ ಇರಾದೆಯಲ್ಲಿ ಎರಡೂ ತಂಡಗಳಿವೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಎರಡು ತಂಡಗಳಲ್ಲಿ ಬದಲಾವಣೆ ಕಾಣಿಸಿಕೊಳ್ಳುವ ಸಾಧ್ಯತೆ ಕಡಿಮೆ.

ಏಕೆಂದರೆ ಮುಂಬೈ ಇಂಡಿಯನ್ಸ್ ತಂಡವು ಸಾಂಘಿಕ ಪ್ರದರ್ಶನ ಮುಂದುವರೆಸಿದ್ದು, ಹಾಗೆಯೇ ಡೆಲ್ಲಿ ಕ್ಯಾಪಿಟಲ್ಸ್ ತಂಡ ಪಂಜಾಬ್ ವಿರುದ್ದ ಭರ್ಜರಿ ಜಯ ಸಾಧಿಸಿದೆ. ಈ ಕಾರಣದಿಂದ ಗೆದ್ದ ತಂಡದಲ್ಲಿ ಬದಲಾವಣೆ ಮಾಡಿಕೊಳ್ಳುವ ಸಾಹಸಕ್ಕೆ ಎರಡು ತಂಡಗಳು ಮುಂದಾಗುವುದಿಲ್ಲ ಎನ್ನಬಹುದು. ಇದಾಗ್ಯೂ ಡೆಲ್ಲಿ ಕ್ಯಾಪಿಟಲ್ಸ್ ತಂಡ 1 ಬದಲಾವಣೆ ಮಾಡುವುದಾದರೆ, ಎಡಗೈ ವೇಗಿ ಲುಕ್ಮಾನ್ ಮೆರಿವಾಲ ಸ್ಥಾನದಲ್ಲಿ ಇಶಾಂತ್ ಶರ್ಮಾ ಅಥವಾ ಅಮಿತ್ ಮಿಶ್ರಾ ಅವರನ್ನು ಕಣಕ್ಕಿಳಿಸಬಹುದು. ಇತ್ತ ಮುಂಬೈ ಇಂಡಿಯನ್ಸ್ ಬದಲಾವಣೆ ಮಾಡಿದರೆ, ಆ್ಯಡಂ ಮಿಲ್ನೆ ಅವರ ಸ್ಥಾನದಲ್ಲಿ ಆಲ್​ರೌಂಡರ್ ಜಿಮ್ಮಿ ನೀಶಮ್​ಗೆ ಅವಕಾಶ ನೀಡಬಹುದು.

ಇದರ ಹೊರತಾಗಿ ಉಭಯ ತಂಡಗಳ ಬ್ಯಾಟ್ಸ್​ಮನ್​ಗಳಲ್ಲಿ ಬದಲಾವಣೆ ಕಂಡು ಬರುವ ಸಾಧ್ಯತೆಯಿಲ್ಲ. ಹೀಗಾಗಿ ಪಂಜಾಬ್ ವಿರುದ್ದ ಆಡಿದ ಬಹುತೇಕ ಆಟಗಾರರೇ ಇಂದು ಕೂಡ ಡೆಲ್ಲಿ ಪರ ಆಡಲಿದ್ದಾರೆ. ಹಾಗೆಯೇ ಸನ್​ರೈಸರ್ಸ್ ಹೈದರಾಬಾದ್ ವಿರುದ್ದ ಕಣಕ್ಕಿಳಿದ ಆಟಗಾರರನ್ನೇ ಮುಂಬೈ ಇಂಡಿಯನ್ಸ್ ಕೂಡ ಕಣಕ್ಕಿಳಿಸಲಿದೆ. ಅದರಂತೆ ಉಭಯ ತಂಡಗಳು ಬಲಿಷ್ಠ ಆಟಗಾರರನ್ನು ಕಣಕ್ಕಿಳಿಸಲಿದ್ದು, ಹೀಗಾಗಿ ಇಂದಿನ ಪಂದ್ಯದಲ್ಲಿ ಭರ್ಜರಿ ಪೈಪೋಟಿ ನಿರೀಕ್ಷಿಸಬಹುದು.

ಡೆಲ್ಲಿ ಕ್ಯಾಪಿಟಲ್ಸ್ ಸಂಭಾವ್ಯ 11​: ಪೃಥ್ವಿ ಶಾ , ಶಿಖರ್ ಧವನ್ , ಸ್ಟೀವ್ ಸ್ಮಿತ್ , ರಿಷಭ್ ಪಂತ್ (ನಾಯಕ), ಮಾರ್ಕಸ್ ಸ್ಟೋನಿಸ್ , ಲಲಿತ್ ಯಾದವ್, ರವಿ ಅಶ್ವಿನ್, ಕ್ರಿಸ್ ವೋಕ್ಸ್ , ಕಗಿಸೊ ರಬಾಡ , ಅವೇಶ್ ಖಾನ್, ಲುಕ್ಮಾನ್ ಮೆರಿವಾಲ

ಮುಂಬೈ ಇಂಡಿಯನ್ಸ್ ಸಂಭಾವ್ಯ 11: ಕ್ವಿಂಟನ್ ಡಿ ಕಾಕ್, ರೋಹಿತ್ ಶರ್ಮಾ (ನಾಯಕ), ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಕೀರನ್ ಪೊಲಾರ್ಡ್, ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ, ರಾಹುಲ್ ಚಹರ್, ಆಡಮ್ ಮಿಲ್ನೆ, ಜಸ್ಪ್ರೀತ್ ಬುಮ್ರಾ ಮತ್ತು ಟ್ರೆಂಟ್ ಬೌಲ್ಟ್.
Published by: zahir
First published: April 20, 2021, 4:30 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories