HOME » NEWS » Ipl » IPL 2021 DANGEROUS PUNJAB KINGS TAKE ON RUSTY CHENNAI SUPER KINGS ZP

PBKS vs CSK: ದೀಪಕ್ ಚಹರ್ ಮಿಂಚಿನ ದಾಳಿ: ಸೂಪರ್​ ಕಿಂಗ್ಸ್​ಗೆ ಸುಲಭ ಸವಾಲು..!

ಉಭಯ ತಂಡಗಳು ತಂಡಗಳು ಇದುವರೆಗೆ 24 ಬಾರಿ ಮುಖಾಮುಖಿಯಾಗಿದ್ದು, ಅದರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 15 ಬಾರಿ ಗೆಲುವು ದಾಖಲಿಸುವ ಮೂಲಕ ಮೇಲುಗೈ ಹೊಂದಿದೆ. ಅತ್ತ 9 ಬಾರಿ ಮಾತ್ರ ಸಿಎಸ್​ಕೆ ವಿರುದ್ದ ಯಶಸ್ಸು ಸಾಧಿಸಿರುವ ಪಂಜಾಬ್ ಈ ಬಾರಿ ಗೆಲುವಿನ ಸಂಖ್ಯೆಯನ್ನು ಹತ್ತಕ್ಕೇರಿಸುವ ಇರಾದೆಯಲ್ಲಿದೆ.

news18-kannada
Updated:April 16, 2021, 9:00 PM IST
PBKS vs CSK: ದೀಪಕ್ ಚಹರ್ ಮಿಂಚಿನ ದಾಳಿ: ಸೂಪರ್​ ಕಿಂಗ್ಸ್​ಗೆ ಸುಲಭ ಸವಾಲು..!
CSK
  • Share this:
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್​ ಲೀಗ್​ನ 8ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್​ ತಂಡ ಚೆನ್ನೈ ಸೂಪರ್ ಕಿಂಗ್ಸ್​ಗೆ 107 ರನ್​ಗಳ ಟಾರ್ಗೆಟ್ ನೀಡಿದೆ. ಇದಕ್ಕೂ ಮುನ್ನ ಟಾಸ್ ಗೆದ್ದ  ಮಹೇಂದ್ರ ಸಿಂಗ್ ಧೋನಿ ಮೊದಲು ಬೌಲಿಂಗ್ ಆಯ್ದುಕೊಂಡರು.

ಅದರಂತೆ ಇನಿಂಗ್ಸ್​ ಆರಂಭಿಸಿದ ಪಂಜಾಬ್ ಕಿಂಗ್ಸ್​ ತಂಡಕ್ಕೆ ದೀಪಕ್ ಚಹರ್ ಮೊದಲ ಓವರ್​ನಲ್ಲೇ ಶಾಕ್ ನೀಡಿದರು. ಮೊದಲ ಓವರ್​ನ 4 ಎಸೆತದಲ್ಲಿ ಮಯಾಂಕ್ ಅಗರ್ವಾಲ್ (0) ರನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ ಸಿಎಸ್​ಕೆಗೆ ಮೊದಲ ಯಶಸ್ಸು ತಂದುಕೊಟ್ಟರು.

ತಂಡದ ಮೊತ್ತ 15 ಆಗಿದ್ದ ವೇಳೆ ರವೀಂದ್ರ ಜಡೇಜಾ ಮಾಡಿದ ಅತ್ಯುತ್ತಮ ಫೀಲ್ಡಿಂಗ್​ಗೆ ಕೆಎಲ್ ರಾಹುಲ್ (5) ರನೌಟ್ ಆಗಿ ಹೊರನಡೆದರು. ಇದರ ಬೆನ್ನಲ್ಲೇ ಕ್ರಿಸ್ ಗೇಲ್ ಬಾರಿಸಿದ ಚೆಂಡನ್ನು ಅತ್ಯಾದ್ಭುತವಾಗಿ ಡೈವ್ ಹೊಡೆದು ಕ್ಯಾಚ್ ಹಿಡಿಯುವ ಮೂಲಕ ಪಂಜಾಬ್ 3ನೇ ವಿಕೆಟ್ ಪತನಕ್ಕೆ ಜಡೇಜಾ ಕಾರಣರಾದರು. ಇನ್ನು ಬಂದ ವೇಗದಲ್ಲೇ ಕ್ಯಾಚ್ ನೀಡಿ ಶೂನ್ಯದೊಂದಿಗೆ ನಿಕೋಲಸ್ ಪೂರನ್ ನಿರ್ಗಮಿಸಿದರು.

ಪ್ರಮುಖ 4 ವಿಕೆಟ್​ ಕಳೆದುಕೊಂಡ ಪರಿಣಾಮ ಪಂಜಾಬ್ ಕಿಂಗ್ಸ್ ಪವರ್​ಪ್ಲೇನಲ್ಲಿ ಕೇವಲ 26 ರನ್​ಗಳಿಸಲಷ್ಟೇ ಶಕ್ತರಾದರು. ಇದಾದ ಬಳಿಕ 7ನೇ ಓವರ್​ ಎಸೆದ ದೀಪಕ್ ಚಹರ್ ದೀಪಕ್ ಹೂಡಾ (10) ವಿಕೆಟ್ ಪಡೆಯುವ ಮೂಲಕ ಮತ್ತೊಂದು ಆಘಾತ ನೀಡಿದರು.  4 ಓವರ್​ ಬೌಲಿಂಗ್ ಮಾಡಿದ ಚಹರ್ ಕೇವಲ 13 ರನ್​ ನೀಡಿದ 4 ವಿಕೆಟ್ ಉರುಳಿಸಿ ಮಿಂಚಿದರು.

6ನೇ ವಿಕೆಟ್​​ಗೆ ಜೊತೆಯಾದ ಶಾರುಖ್ ಖಾನ್ ಹಾಗೂ ಜೈ ರಿಚರ್ಡ್ಸನ್ ಎಚ್ಚರಿಕೆಯ ಆಟವಾಡಿದರು. ಪರಿಣಾಮ 10 ಓವರ್​ ಮುಕ್ತಾಯದ ವೇಳೆ ಪಂಜಾಬ್ ಮೊತ್ತ 48ಕ್ಕೆ ಬಂದು ನಿಂತಿತು. ಅಲ್ಲದೆ 11ನೇ ಓವರ್​ನಲ್ಲಿ ತಂಡದ ಮೊತ್ತವನ್ನು 50ರ ಗಡಿದಾಟಿಸಿದರು. ಇದೇ ವೇಳೆ ಮೊಯೀನ್ ಅಲಿ ಎಸೆತವನ್ನು ಗುರುತಿಸುವಲ್ಲಿ ಎಡವಿದ ಜೈ ರಿಚರ್ಡ್ಸನ್ (15) ಕ್ಲೀನ್ ಬೌಲ್ಡ್ ಆದರು.

ಈ ಹಂತದಲ್ಲಿ ಜೊತೆಯಾದ ಮುರುಗನ್ ಅಶ್ವಿನ್ ಶಾರುಖ್ ಖಾನ್​ಗೆ ಸಾಥ್ ನೀಡಿದರು. ಅದರಂತೆ ಒಂದೊಂದೇ ರನ್​ ಕಲೆಹಾಕುತ್ತಾ ಹೋದ ಈ ಜೋಡಿ 16 ಓವರ್ ಮುಕ್ತಾಯದ ವೇಳೆಗೆ ತಂಡದ ಮೊತ್ತವನ್ನು 81ಕ್ಕೆ ತಲುಪಿಸಿದರು. 7ನೇ ವಿಕೆಟ್​ಗೆ 30 ರನ್​ಗಳ ಜೊತೆಯಾಟವಾಡಿದ ಈ ಜೋಡಿ ತಂಡಕ್ಕೆ ಆಸರೆಯಾದರು. ಆದರೆ 17ನೇ ಓವರ್​ನಲ್ಲಿ ದಾಳಿಗಿಳಿದ ಡ್ವೇನ್ ಬ್ರಾವೊ ಮುರುಗನ್ ಅಶ್ವಿನ್ (6) ವಿಕೆಟ್ ಪಡೆಯುವ ಮೂಲಕ 7ನೇ ವಿಕೆಟ್ ಉರುಳಿಸಿದರು.

ಪಂಜಾಬ್ ಕಿಂಗ್ಸ್ 100 ರನ್​ ಪೂರೈಸಲು 19 ಓವರ್​ಗಳನ್ನು ತೆಗೆದುಕೊಂಡಿತು. ಅಂತಿಮ ಓವರ್​ನ ಮೊದಲ ಎಸೆತದಲ್ಲಿ ಸ್ಯಾಮ್ ಕರನ್​ಗೆ ವಿಕೆಟ್ ಒಪ್ಪಿಸಿ ಶಾರುಖ್ ಖಾನ್ (47) ತಮ್ಮ ಇನಿಂಗ್ಸ್ ಅಂತ್ಯಗೊಳಿಸಿದರು. 2ನೇ ಎಸೆತದಲ್ಲಿ ಯಾವುದೇ ರನ್​ ಇಲ್ಲ. ಮೂರನೇ ಎಸೆತದಲ್ಲಿ ಶಮಿ 2 ರನ್​ ಬಾರಿಸಿದರು. 4ನೇ ಎಸೆತದಲ್ಲಿ  ಮತ್ತೆ ರನ್. 5ನೇ ಎಸೆತದಲ್ಲಿ ಯಾವುದೇ ರನ್ ಇಲ್ಲ. ಕೊನೆಯ ಎಸೆತದಲ್ಲಿ 1 ರನ್​ಗಳಿಸುವುದರೊಂದಿಗೆ ಪಂಜಾಬ್ ಇನಿಂಗ್ಸ್​ 106 ರನ್​ಗಳೊಂದಿಗೆ ಅಂತ್ಯವಾಯಿತು. ಸಿಎಸ್​ಕೆ ಪರ ದೀಪಕ್ ಚಹರ್ 4 ವಿಕೆಟ್ ಉರುಳಿಸಿ ಮಿಂಚಿದರು.ಉಭಯ ತಂಡಗಳು ತಂಡಗಳು ಇದುವರೆಗೆ 24 ಬಾರಿ ಮುಖಾಮುಖಿಯಾಗಿದ್ದು, ಅದರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 15 ಬಾರಿ ಗೆಲುವು ದಾಖಲಿಸುವ ಮೂಲಕ ಮೇಲುಗೈ ಹೊಂದಿದೆ. ಅತ್ತ 9 ಬಾರಿ ಮಾತ್ರ ಸಿಎಸ್​ಕೆ ವಿರುದ್ದ ಯಶಸ್ಸು ಸಾಧಿಸಿರುವ ಪಂಜಾಬ್ ಈ ಬಾರಿ ಗೆಲುವಿನ ಸಂಖ್ಯೆಯನ್ನು ಹತ್ತಕ್ಕೇರಿಸುವ ಇರಾದೆಯಲ್ಲಿದೆ. ಹಾಗೆಯೇ ಕಳೆದ ಸೀಸನ್​ನಲ್ಲಿ ಸಿಎಸ್​ಕೆ ಹೀನಾಯ ಪ್ರದರ್ಶನ ನೀಡಿದರೂ, ಪಂಜಾಬ್ ವಿರುದ್ದದ ಎರಡು ಪಂದ್ಯಗಳಲ್ಲೂ ಜಯ ಸಾಧಿಸಿತ್ತು ಎಂಬುದು ವಿಶೇಷ.ಇದಾಗ್ಯೂ ರಾಜಸ್ಥಾನ್ ರಾಯಲ್ಸ್ ವಿರುದ್ದ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿರುವ ಪಂಜಾಬ್ ಕಿಂಗ್ಸ್​ ಚೆನ್ನೈ ಸೂಪರ್ ಕಿಂಗ್ಸ್ ಬೌಲರುಗಳ ಮೇಲೂ ಸವಾರಿ ಮಾಡುವ ವಿಶ್ವಾಸದಲ್ಲಿದ್ದಾರೆ. ಹಾಗೆಯೇ ಡೆಲ್ಲಿ ವಿರುದ್ದ ಸೋತಿರುವ ಸಿಎಸ್​ಕೆ ತಂಡವು ಮೊದಲ ಗೆಲುವಿಗೆ ಹಾತೊರೆಯುತ್ತಿದೆ. ಹೀಗಾಗಿ ಇಂದಿನ ಪಂದ್ಯದಲ್ಲೂ ಉಭಯ ತಂಡಗಳಿಂದ ಭರ್ಜರಿ ಪೈಪೋಟಿಯನ್ನು ನಿರೀಕ್ಷಿಸಬಹುದು.
Published by: zahir
First published: April 16, 2021, 8:57 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories