CSK vs RCB: ರಾಯಲ್ ಚಾಲೆಂಜರ್ಸ್​ ಮುಂದೆ ಚೆನ್ನೈ "ಸೂಪರ್ ಕಿಂಗ್ಸ್"

ಆರ್​ಸಿಬಿ-ಸಿಎಸ್​ಕೆ 26 ಬಾರಿ ಮುಖಾಮುಖಿಯಾಗಿದೆ. ಅದರಲ್ಲಿ 16 ಬಾರಿ ಗೆಲ್ಲುವ ಮೂಲಕ ಸಿಎಸ್​ಕೆ-ಆರ್​ಸಿಬಿ ವಿರುದ್ದ ಪಾರುಪತ್ಯ ಸಾಧಿಸಿದೆ. ಇದಾಗ್ಯೂ ಆರ್​ಸಿಬಿ ಚೆನ್ನೈ ವಿರುದ್ದ 9 ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿದೆ.

CSK

CSK

 • Share this:
  ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್​ನ 19ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ವಿರುದ್ದ ಚೆನ್ನೈ ಸೂಪರ್ ಕಿಂಗ್ಸ್ ಭರ್ಜರಿ ಜಯ ಸಾಧಿಸಿದೆ. ಸಿಎಸ್​ಕೆ ನೀಡಿದ 192 ರನ್​ಗಳ ಟಾರ್ಗೆಟ್ ಬೆನ್ನತ್ತಿದ ಆರ್​ಸಿಬಿ 122 ರನ್​ಗಳಿಸಲಷ್ಟೇ ಶಕ್ತರಾದರು. ಈ ಮೂಲಕ 69 ರನ್​ಗಳಿಂದ ಹೀನಾಯವಾಗಿ ಸೋಲನುಭವಿದೆ.

  ಇದಕ್ಕೂ ಮುನ್ನ ಬೃಹತ್ ಗುರಿ ಬೆನ್ನತ್ತಿದ ಆರ್​ಸಿಬಿಗೆ ವಿರಾಟ್ ಕೊಹ್ಲಿ ಹಾಗೂ ದೇವದತ್ ಪಡಿಕ್ಕಲ್ ಸಿಡಿಲಬ್ಬರದ ಆರಂಭ ಒದಗಿಸಿದರು. ಮೊದಲ ಮೂರು ಓವರ್​ನಲ್ಲಿ ಈ ಜೋಡಿ 44 ರನ್ ಬಾರಿಸಿದರು. ಆದರೆ ಸ್ಯಾಮ್ ಕರನ್ ಎಸೆದ 4ನೇ ಓವರ್​ನ ಮೊದಲ ಎಸೆತದಲ್ಲೇ ಕೊಹ್ಲಿ ಕೀಪರ್​ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಇದಾಗ್ಯೂ ಆರ್​ಸಿಬಿ ಸ್ಕೋರ್ 5ನೇ ಓವರ್​ನಲ್ಲಿ 50ರ ಗಡಿದಾಟಿತು.

  ಇತ್ತ ಕೇವಲ 15 ಎಸೆತಗಳಲ್ಲಿ 2 ಸಿಕ್ಸ್, 4 ಬೌಂಡರಿಗಳೊಂದಿಗೆ 34 ರನ್ ಬಾರಿಸಿ ಅಪಾಕಾರಿಯಾಗಿದ್ದ ದೇವದತ್ ಪಡಿಕ್ಕಲ್ ಅವರ  ವಿಕೆಟ್ ಪಡೆಯುವಲ್ಲಿ ಶಾರ್ದುಲ್ ಠಾಕೂರ್ ಯಶಸ್ವಿಯಾದರು. ಇನ್ನು ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಗ್ಲೆನ್ ಮ್ಯಾಕ್ಸ್​ವೆಲ್ 6ನೇ ಓವರ್​ನಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸುವ ಮೂಲಕ ಪವರ್​ಪ್ಲೇನಲ್ಲಿ ತಂಡದ ಮೊತ್ತವನ್ನು 65 ಕ್ಕೆ ತಂದು ನಿಲ್ಲಿಸಿದರು.

  ಪವರ್​ಪ್ಲೇ ಮುಕ್ತಾಯದ ಬೆನ್ನಲ್ಲೇ ಜಡೇಜಾಗೆ ವಿಕೆಟ್ ಒಪ್ಪಿಸಿದ ವಾಷಿಂಗ್ಟನ್ ಸುಂದರ್ (7) ಹೊರನಡೆದರು. 9ನೇ ಓವರ್​ನಲ್ಲಿ ಗ್ಲೆನ್ ಮ್ಯಾಕ್ಸ್​ವೆಲ್ (22) ಅವರನ್ನು ಕ್ಲೀನ್ ಬೌಲ್ಡ್ ಮಾಡಿ ಜಡೇಜಾ ಮತ್ತೊಂದು ಯಶಸ್ಸು ತಂದುಕೊಟ್ಟರು. ಇದರ ಬೆನ್ನಲ್ಲೇ ಡೇನಿಯಲ್ ಕ್ರಿಶ್ಚಿಯನ್ (1) ರನೌಟ್ ಆದರು. 10ನೇ ಓವರ್​ನಲ್ಲಿ ಮತ್ತೆ ದಾಳಿಗಿಳಿದ ಜಡೇಜಾ ಎಬಿ ಡಿವಿಲಿಯರ್ಸ್ (4) ಅವರನ್ನೂ ಕ್ಲೀನ್ ಬೌಲ್ಡ್ ಮಾಡಿದರು. ಇನ್ನು ಹರ್ಷಲ್ ಪಟೇಲ್ ಇಮ್ರಾನ್ ತಾಹಿರ್​ಗೆ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ  ಸೈನಿ  ಹಾಗೂ ಕೈಲ್ ಜೇಮಸಿನ್​ಗೆ ತಾಹಿರ್ ಪೆವಿಲಿಯನ್ ಹಾದಿ ತೋರಿಸಿದರು. ಅಂತಿಮವಾಗಿ ಆರ್​ಸಿಬಿ ನಿಗದಿತ 20 ಓವರ್​ನಲ್ಲಿ 9 ವಿಕೆಟ್ ಕಳೆದುಕೊಂಡು 122 ರನ್​ಗಳಿಸಲಷ್ಟೇ ಶಕ್ತರಾದರು. ಇದರೊಂದಿಗೆ 69 ರನ್​ಗಳ ಅಂತರದಿಂದ ಜಯ ಸಾಧಿಸಿದ ಸಿಎಸ್​ಕೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

  ಸಿಎಸ್​ಕೆ ಪರ ರವೀಂದ್ರ ಜಡೇಜಾ 4 ಓವರ್​ನಲ್ಲಿ 14 ರನ್ ನೀಡಿ 3 ವಿಕೆಟ್ ಕಬಳಿಸಿ ಮಿಂಚಿದರು. ಜಡೇಜಾಗೆ ಉತ್ತಮ ಸಾಥ್ ನೀಡಿದ ಇಮ್ರಾನ್ ತಾಹಿರ್ 2 ವಿಕೆಟ್ ಕಬಳಿಸಿದರು.

  ಇದಕ್ಕೂ ಮುನ್ನ ಟಾಸ್ ಗೆದ್ದ ಸಿಎಸ್​ಕೆ ನಾಯಕ ಮಹೇಂದ್ರ ಸಿಂಗ್ ಧೋನಿ ಬ್ಯಾಟಿಂಗ್ ಆಯ್ದುಕೊಂಡರು. ಅದರಂತೆ ಇನಿಂಗ್ಸ್ ಆರಂಭಿಸಿದ ಫಾಫ್ ಡುಪ್ಲೆಸಿಸ್​ ಹಾಗೂ ರುತುರಾಜ್ ಗಾಯಕ್ವಾಡ್ ಸಿಎಸ್​ಕೆ ತಂಡಕ್ಕೆ ಬಿರುಸಿನ ಆರಂಭ ಒದಗಿಸಿದರು. ಆರಂಭದಿಂದಲೇ ಅಬ್ಬರಿಸಲಾರಂಭಿಸಿದ ಡುಪ್ಲೆಸಿಸ್​ ಪವರ್​ಪ್ಲೇನಲ್ಲಿ 3 ಬೌಂಡರಿ 1 ಸಿಕ್ಸರ್ ಸಿಡಿಸಿದರೆ, ಗಾಯಕ್ವಾಡ್ 4 ಆಕರ್ಷಕ ಫೋರ್ ಬಾರಿಸಿದರು. ಪರಿಣಾಮ ಪವರ್​ಪ್ಲೇ ಮುಕ್ತಾಯದ ವೇಳೆಗೆ ಚೆನ್ನೈ ಸೂಪರ್ ಕಿಂಗ್ಸ್​ ಮೊತ್ತ 51ಕ್ಕೇರಿತು.

  9 ಓವರ್​ನಲ್ಲಿ 74 ರನ್​ಗಳ ಜೊತೆಯಾಟವಾಡಿದ ಆರಂಭಿಕ ಜೋಡಿಯನ್ನು ವೇರ್ಪಡಿಸುವಲ್ಲಿ ಕೊನೆಗೂ ಸ್ಪಿನ್ನರ್ ಚಹಲ್ ಯಶಸ್ವಿಯಾದರು. ಚಹಲ್ ಎಸೆತದಲ್ಲಿ ಬಿಗ್ ಹಿಟ್​ಗೆ ಮುಂದಾದ ರುತುರಾಜ್ ಗಾಯಕ್ವಾಡ್ (33) ಜೇಮಿಸನ್​ಗೆ ವಿಕೆಟ್ ಒಪ್ಪಿಸಿ ಹೊರನಡೆದರು.

  ಈ ಹಂತದಲ್ಲಿ ಜೊತೆಗೂಡಿದ ಡುಪ್ಲೆಸಿಸ್-ರೈನಾ 13ನೇ ಓವರ್​ನಲ್ಲಿ ತಂಡದ ಮೊತ್ತವನ್ನು ನೂರರ ಗಡಿದಾಟಿಸಿದರು. ಅಲ್ಲದೆ 40 ಎಸೆತಗಳಲ್ಲಿ ಫಾಫ್ ಡುಪ್ಲೆಸಿಸ್ ತಮ್ಮ ಅರ್ಧಶತಕವನ್ನು ಪೂರೈಸಿದರು. ಇದರ ಬೆನ್ನಲ್ಲೇ ಹರ್ಷಲ್ ಪಟೇಲ್ ಎಸೆತದಲ್ಲಿ ಬೌಂಡರಿ ಲೈನ್​ನಲ್ಲಿ ಕ್ಯಾಚ್ ನೀಡಿ ರೈನಾ (24) ನಿರ್ಗಮಿಸಿದರು. ಮರು ಎಸೆತದಲ್ಲೇ ಡುಪ್ಲೆಸಿಸ್ (50) ಕೂಡ ಡೇನಿಯಲ್ ಕ್ರಿಶ್ಚಿಯನ್​ಗೆ ಕ್ಯಾಚ್ ನೀಡಿ ಔಟಾದರು.

  ಈ ವೇಳೆ ಕ್ರೀಸ್​ಗೆ ಆಗಮಿಸಿದ ರವೀಂದ್ರ ಜಡೇಜಾ ನೀಡಿದ ಕ್ಯಾಚ್​​ನ್ನು ಡೇನಿಯಲ್ ಕ್ರಿಶ್ಚಿಯನ್ ಕೈಚೆಲ್ಲಿದರು. ಆ ಬಳಿಕ ಜೊತೆಗೂಡಿದ ಅಂಬಾಟಿ ರಾಯುಡು ಹಾಗೂ ಜಡ್ಡು ಸಿಎಸ್​ಕೆ ಮೊತ್ತವನ್ನು ಹೆಚ್ಚಿಸುತ್ತಾ ಹೋದರು. ಆದರೆ 17ನೇ ಓವರ್​ನಲ್ಲಿ ಬಿರುಸಿನ ಹೊಡೆತಕ್ಕೆ ಮುಂದಾದ ಅಂಬಾಟಿ ರಾಯುಡು (14) ಹರ್ಷಲ್ ಪಟೇಲ್​ಗೆ ವಿಕೆಟ್ ಒಪ್ಪಿಸಿದರು.

  ಹರ್ಷಲ್ ಪಟೇಲ್ ಎಸೆದ ಕೊನೆಯ ಓವರ್​ನ ಮೊದಲೆರಡು ಎಸೆತಗಳಲ್ಲಿ ಜಡೇಜಾ ಬ್ಯಾಕ್ ಟು ಬ್ಯಾಕ್ ಸಿಕ್ಸರ್​ ಸಿಡಿಸಿದರು. 3ನೇ ಎಸೆತ ನೋಬಾಲ್+ಸಿಕ್ಸರ್.  ಮತ್ತೆ 3ನೇ ಎಸೆತದಲ್ಲಿ ಭರ್ಜರಿ ಸಿಕ್ಸರ್ ಸಿಡಿಸುವ ಮೂಲಕ ಜಡೇಜಾ 25 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. 4ನೇ ಎಸೆತದಲ್ಲಿ 2 ರನ್. 5ನೇ ಎಸೆತದಲ್ಲಿ ಸಿಕ್ಸರ್. ಕೊನೆಯ ಎಸೆತದಲ್ಲಿ ಫೋರ್ ಬಾರಿಸುವ ಮೂಲಕ ಜಡೇಜಾ ಒಂದೇ ಓವರ್​ನಲ್ಲಿ 37 ರನ್​ ಕಲೆಹಾಕಿದರು. ಇದರೊಂದಿಗೆ ಸಿಎಸ್​ಕೆ ಮೊತ್ತ 4 ವಿಕೆಟ್ ನಷ್ಟಕ್ಕೆ 191ಕ್ಕೆ ಬಂದು ನಿಂತಿತು.

  ಉಭಯ ತಂಡಗಳು ಈಗಾಗಲೇ 4 ಪಂದ್ಯಗಳನ್ನು ಆಡಿದ್ದು, ನಾಲ್ಕರಲ್ಲಿ ಜಯಗಳಿಸುವ ಮೂಲಕ ಆರ್​ಸಿಬಿ ಪಾಯಿಂಟ್​ ಟೇಬಲ್​ನಲ್ಲಿ ಅಗ್ರಸ್ಥಾನದಲ್ಲಿದೆ. ಇನ್ನು ಮೊದಲು ಸೋಲಿನ ಬಳಿಕ ಬಲಿಷ್ಠವಾಗಿ ಕಂಬ್ಯಾಕ್ ಮಾಡಿರುವ ಸಿಎಸ್​ಕೆ ಸತತ ಮೂರು ಗೆಲುವಿನೊಂದಿಗೆ 2ನೇ ಸ್ಥಾನದಲ್ಲಿದೆ. ಹೀಗಾಗಿ ಭಾನುವಾರದ ಪಂದ್ಯದಲ್ಲಿ ಸಿಎಸ್​ಕೆ ಗೆದ್ದರೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲಿದೆ. ಆದರೆ ಉಭಯ ತಂಡಗಳು ಬಲಿಷ್ಠವಾಗಿರುವುದರಿಂದ ರೋಚಕ ಹೋರಾಟವನ್ನು ನಿರೀಕ್ಷಿಸಬಹುದು.

  CSK vs RCB Playing 11: ಆರ್​ಸಿಬಿ ತಂಡದಲ್ಲಿ 2 ಪ್ರಮುಖ ಬದಲಾವಣೆ: ಉಭಯ ತಂಡಗಳು ಹೀಗಿವೆ

  ಈ ಹಿಂದಿನ ಅಂಕಿ ಅಂಶಗಳನ್ನು ನೋಡುವುದಾದರೆ ಆರ್​ಸಿಬಿ-ಸಿಎಸ್​ಕೆ 26 ಬಾರಿ ಮುಖಾಮುಖಿಯಾಗಿದೆ. ಅದರಲ್ಲಿ 16 ಬಾರಿ ಗೆಲ್ಲುವ ಮೂಲಕ ಸಿಎಸ್​ಕೆ-ಆರ್​ಸಿಬಿ ವಿರುದ್ದ ಪಾರುಪತ್ಯ ಸಾಧಿಸಿದೆ. ಇದಾಗ್ಯೂ ಆರ್​ಸಿಬಿ ಚೆನ್ನೈ ವಿರುದ್ದ 9 ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿದೆ. ಇನ್ನು ಕಳೆದ ಸೀಸನ್​ನಲ್ಲಿ ಆರ್​ಸಿಬಿ-ಸಿಎಸ್​ಕೆ ತಲಾ ಒಂದೊಂದು ಪಂದ್ಯಗಳನ್ನು ಗೆದ್ದುಕೊಂಡಿತ್ತು. ಹಾಗೆಯೇ ಕೊನೆಯ 5 ಮುಖಾಮುಖಿಗಳನ್ನು ನೋಡುವುದಾದರೆ ಸಿಎಸ್​ಕೆ ಆರ್​ಸಿಬಿ ವಿರುದ್ದ 3 ರಲ್ಲಿ ಜಯ ಸಾಧಿಸಿದೆ. ಇನ್ನು ತಟಸ್ಥ ಸ್ಥಳಗಳಲ್ಲಿ ಆಡಲಾದ 10 ಪಂದ್ಯಗಳಲ್ಲಿ ಸಿಎಸ್​ಕೆ 6 ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿದೆ.
  Published by:zahir
  First published: