HOME » NEWS » Ipl » IPL 2021 CSK VS KKR LIVE SCORE DHONIS SUPER KINGS DOWN ZP

IPL 2021, CSK vs KKR: ಡುಪ್ಲೆಸಿಸ್​ ಸಿಡಿಲಬ್ಬರ: ಕೆಕೆಆರ್​ಗೆ ಕಠಿಣ ಟಾರ್ಗೆಟ್ ನೀಡಿದ ಸಿಎಸ್​ಕೆ

ಉಭಯ ತಂಡಗಳು ಇದುವೆರೆಗೆ 25 ಬಾರಿ ಮುಖಾಮುಖಿಯಾಗಿದ್ದು, ಅದರಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ 15 ಬಾರಿ ಗೆಲುವು ದಾಖಲಿಸಿದೆ. ಹಾಗೆಯೇ ಕೊಲ್ಕತ್ತಾ ನೈಟ್ ರೈಡರ್ಸ್ ಸಿಎಸ್​ಕೆ ವಿರುದ್ದ 9 ಬಾರಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ.

news18-kannada
Updated:April 21, 2021, 9:24 PM IST
IPL 2021, CSK vs KKR: ಡುಪ್ಲೆಸಿಸ್​ ಸಿಡಿಲಬ್ಬರ: ಕೆಕೆಆರ್​ಗೆ ಕಠಿಣ ಟಾರ್ಗೆಟ್ ನೀಡಿದ ಸಿಎಸ್​ಕೆ
KKR vs Csk.
  • Share this:
ಇಂಡಿಯನ್ ಪ್ರೀಮಿಯರ್ ಲೀಗ್​ನ 15ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ಮುಖಾಮುಖಿಯಾಗಿದೆ. ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಕೆಕೆಆರ್ ನಾಯಕ ಇಯಾನ್ ಮೋರ್ಗನ್ ಬೌಲಿಂಗ್ ಆಯ್ದುಕೊಂಡಿದ್ದಾರೆ.

ಸಿಎಸ್​ಕೆ ಪರ ಇನಿಂಗ್ಸ್​ ಆರಂಭಿಸಿದ ಫಾಫ್ ಡುಪ್ಲೆಸಿಸ್ ಹಾಗೂ ರುತುರಾಜ್ ಗಾಯಕ್ವಾಡ್ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ಆರಂಭದಿಂದಲೇ ಬಿರುಸಿನ ಆಟಕ್ಕೆ ಮುಂದಾದ ಡುಪ್ಲೆಸಿಸ್​ ಕೆಕೆಆರ್ ಬೌಲರುಗಳನ್ನು ಮನಸೋ ಇಚ್ಛೆ ದಂಡಿಸಿದರು. ಪರಿಣಾಮ 4 ಓವರ್​ನಲ್ಲಿ ಸಿಎಸ್​ಕೆ ಮೊತ್ತ 37ಕ್ಕೇರಿತು. ಅಲ್ಲದೆ ಪವರ್​ಪ್ಲೇನಲ್ಲಿ ತಂಡದ ಮೊತ್ತವನ್ನು 54ಕ್ಕೆ ತಂದು ನಿಲ್ಲಿಸಿದರು.

ಪವರ್​ಪ್ಲೇ ಬಳಿಕ ಬಿರುಸಿನ ಬ್ಯಾಟಿಂಗ್ ಮುಂದುವರೆಸಿದ ಚೆನ್ನೈ ಆರಂಭಿಕರು 12ನೇ ಓವರ್​ನಲ್ಲಿ 100 ರನ್​ಗಳ ಗಡಿದಾಟಿತು. ಈ ನಡುವೆ ರುತುರಾಜ್ ಗಾಯಕ್ವಾಡ್ 34 ಎಸೆತಗಳಲ್ಲಿ ಆಕರ್ಷಕ ಅರ್ಧಶತಕ ಬಾರಿಸಿ ಬ್ಯಾಟ್ ಮೇಲೆಕ್ಕೆತ್ತಿದರು.

ಮೊದಲ ವಿಕೆಟ್​ಗೆ 115 ರನ್​ಗಳ ಜೊತೆಯಾಟವಾಡಿದ ಸಿಎಸ್​ಕೆ ಆರಂಭಿಕರು ಕೆಕೆಆರ್ ಬೌಲರುಗಳ ವಿರುದ್ದ ಮೇಲುಗೈ ಸಾಧಿಸಿದರು. ಇದಾಗ್ಯೂ 42 ಎಸೆತಗಳಲ್ಲಿ 4 ಸಿಕ್ಸ್, 6 ಬೌಂಡರಿಗಳೊಂದಿಗೆ 64 ರನ್ ಬಾರಿಸಿದ ರುತುರಾಜ್ ಗಾಯಕ್ವಾಡ್ ವಿಕೆಟ್ ಪಡೆಯುವಲ್ಲಿ ಕೊನೆಗೂ ವರುಣ್ ಚಕ್ರವರ್ತಿ ಯಶಸ್ಸಿಯಾದರು. ಇದರ ಬೆನ್ನಲ್ಲೇ 35 ಎಸೆತದಲ್ಲಿ ಫಾಫ್ ಡುಪ್ಲೆಸಿಸ್ ಕೂಡ ತಮ್ಮ ಅರ್ಧಶತಕ ಪೂರೈಸಿದರು.

ಇನ್ನು ತಂಡದ ಮೊತ್ತ 165 ಆಗಿದ್ದ ವೇಳೆ ಮೊಯೀನ್ ಅಲಿ (25) ಸ್ಟಂಪ್ ಔಟ್ ಆಗಿ ಹೊರನಡೆದರು. 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಮಹೇಂದ್ರ ಸಿಂಗ್ ಧೋನಿ 8 ಎಸೆತಗಳಲ್ಲಿ 17 ರನ್ ಬಾರಿಸಿ 19ನೇ ಓವರ್​ನಲ್ಲಿ ರಸೆಲ್​ಗೆ ವಿಕೆಟ್ ನೀಡಿದರು. ಇದಾಗ್ಯೂ ಮತ್ತೊಂದೆಡೆ ಬಂಡೆಯಂತೆ ನೆಲೆಯೂರಿದ್ದ ಫಾಫ್ ಡುಪ್ಲೆಸಿಸ್ ಆರ್ಭಟ ಮುಂದುವರೆದಿತ್ತು.

ಅಂತಿಮವಾಗಿ ಅಜೇಯರಾಗಿ ಉಳಿದ ಡುಪ್ಲೆಸಿಸ್ 60 ಎಸೆತಗಳಲ್ಲಿ 4 ಸಿಕ್ಸ್, 9 ಬೌಂಡರಿಗಳನ್ನು ಒಳಗೊಂಡಂತೆ 95 ರನ್ ಬಾರಿಸಿದರು. ಪರಿಣಾಮ ಸಿಎಸ್​ಕೆ ಮೊತ್ತವು ನಿಗದಿತ 20 ಓವರ್​ನಲ್ಲಿ 3 ವಿಕೆಟ್ ನಷ್ಟಕ್ಕೆ 220 ಕ್ಕೆ ಬಂದು ನಿಂತಿತು.

ಸ್ಕೋರ್: 220/3ಓವರ್: 20

ಉಭಯ ತಂಡಗಳು ಈಗಾಗಲೇ ಮೂರು ಪಂದ್ಯಗಳನ್ನು ಆಡಿದ್ದು, ಅದರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 2 ಜಯ 1 ಸೋಲನುಭವಿಸಿದೆ. ಹಾಗೆಯೇ ಇಯಾನ್ ಮೋರ್ಗನ್ ಮುನ್ನಡೆಸುತ್ತಿರುವ ಕೆಕೆಆರ್ ತಂಡವು ಮೊದಲ ಪಂದ್ಯವನ್ನು ಹೊರತುಪಡಿಸಿ ಸತತ 2 ಸೋಲನುಭವಿಸಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಗೆಲುವಿನ ಲಯಕ್ಕೆ ಮರಳಲು ಕೊಲ್ಕತ್ತಾ ಕಠಿಣ ಪೈಪೋಟಿ ನೀಡಲಿದೆ.

ಐಪಿಎಲ್​ನಲ್ಲಿ ಉಭಯ ತಂಡಗಳು ಇದುವೆರೆಗೆ 25 ಬಾರಿ ಮುಖಾಮುಖಿಯಾಗಿದ್ದು, ಅದರಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ 15 ಬಾರಿ ಗೆಲುವು ದಾಖಲಿಸಿದೆ. ಹಾಗೆಯೇ ಕೊಲ್ಕತ್ತಾ ನೈಟ್ ರೈಡರ್ಸ್ ಸಿಎಸ್​ಕೆ ವಿರುದ್ದ 9 ಬಾರಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಒಂದು ಪಂದ್ಯವು ರದ್ದಾಗಿತ್ತು. ಇನ್ನು ಕಳೆದ ಸೀಸನ್​ನಲ್ಲಿ ಎರಡು ಪಂದ್ಯಗಳಲ್ಲಿ ಉಭಯ ತಂಡಗಳು ತಲಾ ಒಂದೊಂದು ಜಯ ಸಾಧಿಸಿದೆ.
Published by: zahir
First published: April 21, 2021, 7:02 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories