HOME » NEWS » Ipl » IPL 2021 CSK VS KKR LIVE SCORE CSK WON BY 18 RUNS ZP

CSK vs KKR: ಸಿಎಸ್​ಕೆ ವಿರುದ್ದ ಕೆಕೆಆರ್​ಗೆ ವಿರೋಚಿತ ಸೋಲು..!

ಅಜೇಯರಾಗಿ ಉಳಿದ ಡುಪ್ಲೆಸಿಸ್ 60 ಎಸೆತಗಳಲ್ಲಿ 4 ಸಿಕ್ಸ್, 9 ಬೌಂಡರಿಗಳನ್ನು ಒಳಗೊಂಡಂತೆ 95 ರನ್ ಬಾರಿಸಿದರು. ಪರಿಣಾಮ ಸಿಎಸ್​ಕೆ ಮೊತ್ತವು ನಿಗದಿತ 20 ಓವರ್​ನಲ್ಲಿ 3 ವಿಕೆಟ್ ನಷ್ಟಕ್ಕೆ 220 ಕ್ಕೆ ಬಂದು ನಿಂತಿತು.

news18-kannada
Updated:April 21, 2021, 11:28 PM IST
CSK vs KKR: ಸಿಎಸ್​ಕೆ ವಿರುದ್ದ ಕೆಕೆಆರ್​ಗೆ ವಿರೋಚಿತ ಸೋಲು..!
CSK
  • Share this:
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್​ನ 15ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ದ  ಕೊಲ್ಕತ್ತಾ ನೈಟ್ ರೈಡರ್ಸ್​ 18 ರನ್​ಗಳಿಂದ ವಿರೋಚಿತ ಸೋಲೊಪ್ಪಿಕೊಂಡಿದೆ. 31 ರನ್​ಗಳಿಗೆ 5 ವಿಕೆಟ್ ಕಳೆದುಕೊಂಡ ಕೆಕೆಆರ್  ಕಂಬ್ಯಾಕ್ ಮಾಡುವ ಮೂಲಕ ಅಂತಿಮವಾಗಿ 202 ರನ್​ಗಳಿಸಲಷ್ಟೇ ಶಕ್ತರಾದರು.

ಇದಕ್ಕೂ ಮುನ್ನ ಸಿಎಸ್​ಕೆ ನೀಡಿದ 221 ರನ್​ಗಳ ಬೃಹತ್ ಮೊತ್ತ ಬೆನ್ನತ್ತಿದ ಕೆಕೆಆರ್​ಗೆ ಮೊದಲ ಓವರ್​ನಲ್ಲೇ ದೀಪಕ್ ಚಹರ್ ಆಘಾತ ನೀಡಿದರು. 4ನೇ ಎಸೆತದಲ್ಲಿ ಶುಭ್​ಮನ್ ಗಿಲ್ (0) ವಿಕೆಟ್ ಪಡೆಯುವ ಮೂಲಕ ಮೊದಲ ಯಶಸ್ಸು ತಂದುಕೊಟ್ಟರು. ಬಳಿಕ ಮೂರನೇ ಓವರ್​ನಲ್ಲಿ ನಿತೀಶ್ ರಾಣಾ (9) ಗೆ ಪೆವಿಲಿಯನ್ ಹಾದಿ ತೋರಿಸಿದರು. ಇದರ ಬೆನ್ನಲ್ಲೇ ಇಯಾನ್ ಮೋರ್ಗನ್ (7) ವಿಕೆಟ್ ಪಡೆಯುವ ಮೂಲಕ ಚಹರ್ ಮೊದಲ ಮೂರು ವಿಕೆಟ್ ಉರುಳಿಸಿದರು.

5ನೇ ಓವರ್​ನಲ್ಲಿ ಸುನಿಲ್ ನರೈನ್ (4) ವಿಕೆಟ್ ಉರುಳಿಸಿ ಮತ್ತೊಂದು ಯಶಸ್ಸು ತಂದುಕೊಟ್ಟರು ದೀಪಕ್ ಚಹರ್. 6ನೇ ಓವರ್​ನಲ್ಲಿ ಲುಂಗಿ ಎನ್​ಗಿಡಿ ರಾಹುಲ್ ತ್ರಿಪಾಠಿ (8) ಪಡೆಯುವ ಮೂಲಕ ಪವರ್​ಪ್ಲೇನಲ್ಲಿ 5ನೇ ವಿಕೆಟ್​ ಉರುಳಿಸಿದರು.

ಇದಾಗ್ಯೂ 7ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರಸೆಲ್ 2 ಬೌಂಡರಿ 1 ಸಿಕ್ಸ್ ಬಾರಿಸಿ ಪವರ್​ಪ್ಲೇನಲ್ಲಿ ತಂಡದ ಮೊತ್ತವನ್ನು 45ಕ್ಕೆ ತಂದು ನಿಲ್ಲಿಸಿದರು. ಅಲ್ಲದೆ ಈ ಹಂತದಲ್ಲಿ ದಿನೇಶ್ ಕಾರ್ತಿಕ್ ಜೊತೆಗೂಡಿ ಅಬ್ಬರಿಲಾರಂಭಿಸಿದರು. 5 ಭರ್ಜರಿ ಸಿಕ್ಸರ್ ಹಾಗೂ 3 ಬೌಂಡರಿಗಳೊಂದಿಗೆ 10 ಓವರ್​ನಲ್ಲಿ ತಂಡದ ಮೊತ್ತವನ್ನು 97ಕ್ಕೆ ತಂದು ನಿಲ್ಲಿಸಿದರು.

ಈ ಅಬ್ಬರದೊಂದಿಗೆ ರಸೆಲ್ 21 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ಇದರ ಬೆನ್ನಲ್ಲೇ ಸ್ಯಾಮ್ ಕರನ್ ಎಸೆತವನ್ನು ಗುರುತಿಸುವಲ್ಲಿ ಎಡವಿದ ರಸೆಲ್ (54, 22ಎಸೆತ) ಕ್ಲೀನ್ ಬೌಲ್ಡ್ ಆದರು. ಇನ್ನು 24 ಎಸೆತಗಳಲ್ಲಿ 40 ಬಾರಿಸಿ ದಿನೇಶ್ ಕಾರ್ತಿಕ್ ಎಲ್​ಬಿಡಬ್ಲೂ ಆಗಿ ಹೊರನಡೆದರು. ಆದರೆ ಮತ್ತೊಂದೆಡೆ ಏಕಾಂಗಿಯಾಗಿ ಅಬ್ಬರಿಸಿದ ಪ್ಯಾಟ್ ಕಮ್ಮಿನ್ಸ್ ಸ್ಯಾಮ್ ಕರನ್ ಒಂದೇ ಓವರ್​ನಲ್ಲಿ 4 ಸಿಕ್ಸರ್​ನೊಂದಿಗೆ 30 ರನ್​ ಚಚ್ಚಿದರು. ಪರಿಣಾಮ 24 ಎಸೆತಗಳಲ್ಲಿ 45 ರನ್​ಗಳ ಅವಶ್ಯಕತೆಯಿತ್ತು. ಇದೇ ವೇಳೆ 23 ಎಸೆತಗಳಲ್ಲಿ ಕಮಿನ್ಸ್ ತಮ್ಮ ಅರ್ಧಶತಕ ಪೂರೈಸಿದರು.

ಕೊನೆಯ 2 ಓವರ್​ನಲ್ಲಿ ಕೆಕೆಆರ್​ಗೆ ಗೆಲ್ಲಲು 28 ರನ್​ಗಳ ಅವಶ್ಯಕತೆಯಿತ್ತು. ಈ ವೇಳೆ ಓವರ್​ ಎಸೆದ ಸ್ಯಾಮ್ ಕರನ್ ಕೇವಲ 8 ರನ್ ಮಾತ್ರ ನೀಡಿದರು. ಅದರಂತೆ ಅಂತಿಮ ಓವರ್​ನಲ್ಲಿ 20 ರನ್​ಗಳು ಬೇಕಿತ್ತು. ಶಾರ್ದುಲ್ ಠಾಕುರ್ ಎಸೆದ ಈ ಓವರ್​ನ ಮೊದಲ ಎಸೆತದಲ್ಲಿ 2 ರನ್ ಕಲೆಹಾಕಲು ಕಮಿನ್ಸ್ ಮುಂದಾದರು. ಆದರೆ ನಾನ್ ಸ್ಟ್ರೈಕ್​ನಲ್ಲಿದ್ದ ಪ್ರಸಿದ್ಧ್ ಕೃಷ್ಣ ಅವರ ನಿಧಾನಗತಿಯ ಓಟ ತಂಡಕ್ಕೆ ಮುಳುವಾಯಿತು. ಪ್ರಸಿದ್ಧ್ ಕೃಷ್ಣ ರನೌಟ್ ಆಗುವ ಮೂಲಕ ಕೆಕೆಆರ್ ಹೋರಾಟ 202 ರನ್​ಗಳಿಗೆ ಅಂತ್ಯವಾಯಿತು. ಮತ್ತೊಂದೆಡೆ 34 ಎಸೆತಗಳಲ್ಲಿ 6 ಸಿಕ್ಸರ್​ನೊಂದಿಗೆ 66 ರನ್​ ಬಾರಿಸಿದ ಪ್ಯಾಟ್ ಕಮಿನ್ಸ್​ ಅಜೇಯರಾಗಿ ಉಳಿದರು. ಇದರೊಂದಿಗೆ ಕೆಕೆಆರ್ 18 ರನ್​ಗಳಿಂದ ವಿರೋಚಿತ ಸೋಲೋಪ್ಪಿಕೊಂಡಿತು.

ಚೆನ್ನೈ ಸೂಪರ್ ಕಿಂಗ್ಸ್​ ಪರ ದೀಪಕ್ ಚಹರ್ 4 ಓವರ್​ನಲ್ಲಿ 29 ರನ್​ ನೀಡಿ 4 ಪ್ರಮುಖ ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿಕೊಂಡರು.ಇದಕ್ಕೂ ಮುನ್ನ ಟಾಸ್ ಗೆದ್ದ ಕೆಕೆಆರ್ ನಾಯಕ ಇಯಾನ್ ಮೋರ್ಗನ್ ಬೌಲಿಂಗ್ ಆಯ್ದುಕೊಂಡರು. ಸಿಎಸ್​ಕೆ ಪರ ಇನಿಂಗ್ಸ್​ ಆರಂಭಿಸಿದ ಫಾಫ್ ಡುಪ್ಲೆಸಿಸ್ ಹಾಗೂ ರುತುರಾಜ್ ಗಾಯಕ್ವಾಡ್ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ಆರಂಭದಿಂದಲೇ ಬಿರುಸಿನ ಆಟಕ್ಕೆ ಮುಂದಾದ ಡುಪ್ಲೆಸಿಸ್​ ಕೆಕೆಆರ್ ಬೌಲರುಗಳನ್ನು ಮನಸೋ ಇಚ್ಛೆ ದಂಡಿಸಿದರು. ಪರಿಣಾಮ 4 ಓವರ್​ನಲ್ಲಿ ಸಿಎಸ್​ಕೆ ಮೊತ್ತ 37ಕ್ಕೇರಿತು. ಅಲ್ಲದೆ ಪವರ್​ಪ್ಲೇನಲ್ಲಿ ತಂಡದ ಮೊತ್ತವನ್ನು 54ಕ್ಕೆ ತಂದು ನಿಲ್ಲಿಸಿದರು.

ಪವರ್​ಪ್ಲೇ ಬಳಿಕ ಬಿರುಸಿನ ಬ್ಯಾಟಿಂಗ್ ಮುಂದುವರೆಸಿದ ಚೆನ್ನೈ ಆರಂಭಿಕರು 12ನೇ ಓವರ್​ನಲ್ಲಿ 100 ರನ್​ಗಳ ಗಡಿದಾಟಿತು. ಈ ನಡುವೆ ರುತುರಾಜ್ ಗಾಯಕ್ವಾಡ್ 34 ಎಸೆತಗಳಲ್ಲಿ ಆಕರ್ಷಕ ಅರ್ಧಶತಕ ಬಾರಿಸಿ ಬ್ಯಾಟ್ ಮೇಲೆಕ್ಕೆತ್ತಿದರು.

ಮೊದಲ ವಿಕೆಟ್​ಗೆ 115 ರನ್​ಗಳ ಜೊತೆಯಾಟವಾಡಿದ ಸಿಎಸ್​ಕೆ ಆರಂಭಿಕರು ಕೆಕೆಆರ್ ಬೌಲರುಗಳ ವಿರುದ್ದ ಮೇಲುಗೈ ಸಾಧಿಸಿದರು. ಇದಾಗ್ಯೂ 42 ಎಸೆತಗಳಲ್ಲಿ 4 ಸಿಕ್ಸ್, 6 ಬೌಂಡರಿಗಳೊಂದಿಗೆ 64 ರನ್ ಬಾರಿಸಿದ ರುತುರಾಜ್ ಗಾಯಕ್ವಾಡ್ ವಿಕೆಟ್ ಪಡೆಯುವಲ್ಲಿ ಕೊನೆಗೂ ವರುಣ್ ಚಕ್ರವರ್ತಿ ಯಶಸ್ಸಿಯಾದರು. ಇದರ ಬೆನ್ನಲ್ಲೇ 35 ಎಸೆತದಲ್ಲಿ ಫಾಫ್ ಡುಪ್ಲೆಸಿಸ್ ಕೂಡ ತಮ್ಮ ಅರ್ಧಶತಕ ಪೂರೈಸಿದರು.

ಇನ್ನು ತಂಡದ ಮೊತ್ತ 165 ಆಗಿದ್ದ ವೇಳೆ ಮೊಯೀನ್ ಅಲಿ (25) ಸ್ಟಂಪ್ ಔಟ್ ಆಗಿ ಹೊರನಡೆದರು. 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಮಹೇಂದ್ರ ಸಿಂಗ್ ಧೋನಿ 8 ಎಸೆತಗಳಲ್ಲಿ 17 ರನ್ ಬಾರಿಸಿ 19ನೇ ಓವರ್​ನಲ್ಲಿ ರಸೆಲ್​ಗೆ ವಿಕೆಟ್ ನೀಡಿದರು. ಇದಾಗ್ಯೂ ಮತ್ತೊಂದೆಡೆ ಬಂಡೆಯಂತೆ ನೆಲೆಯೂರಿದ್ದ ಫಾಫ್ ಡುಪ್ಲೆಸಿಸ್ ಆರ್ಭಟ ಮುಂದುವರೆದಿತ್ತು.

ಅಂತಿಮವಾಗಿ ಅಜೇಯರಾಗಿ ಉಳಿದ ಡುಪ್ಲೆಸಿಸ್ 60 ಎಸೆತಗಳಲ್ಲಿ 4 ಸಿಕ್ಸ್, 9 ಬೌಂಡರಿಗಳನ್ನು ಒಳಗೊಂಡಂತೆ 95 ರನ್ ಬಾರಿಸಿದರು. ಪರಿಣಾಮ ಸಿಎಸ್​ಕೆ ಮೊತ್ತವು ನಿಗದಿತ 20 ಓವರ್​ನಲ್ಲಿ 3 ವಿಕೆಟ್ ನಷ್ಟಕ್ಕೆ 220 ಕ್ಕೆ ಬಂದು ನಿಂತಿತು.
Published by: zahir
First published: April 21, 2021, 9:28 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories