IPL 2021 CSK vs DC| ಬಲಿಷ್ಠ ತಂಡಗಳ ಕಾದಾಟ; ಅಗ್ರಸ್ಥಾನಕ್ಕಾಗಿ ಸಿಎಸ್​ಕೆ vs ಡಿಸಿ ನಡುವೆ ಹಣಾಹಣಿ!

ಇಂದಿನ ಪಂದ್ಯದಲ್ಲಿ ಒಂದು ವೇಳೆ ಡೆಲ್ಲಿ ಕ್ಯಾಪಿಟಲ್ ಗೆದ್ದರೆ ಅಗ್ರ ಸ್ಥಾನಕ್ಕೆ ಏರಲಿದೆ ಎಂಬುದನ್ನು ಬಿಟ್ಟರೆ ಈ ಪಂದ್ಯದಲ್ಲಿ ಬೇರೇನೂ ವಿಶೇಷವಿಲ್ಲ. ಹೀಗಾಗಿ ಈ ಪಂದ್ಯದಲ್ಲಿ ಎರಡೂ ತಂಡಗಳು ತಮ್ಮ ಬೆಂಚ್​ ಸ್ಟ್ರೆಂತ್​ ಅನ್ನು ಪರೀಕ್ಷಿಸಲು ಕೆಲವು ಪ್ರಯೋಗಗಳಿಗೆ ಮುಂದಾದರೂ ಅಚ್ಚರಿ ಇಲ್ಲ.

ಚೆನ್ನೈ ಸೂಪರ್​ ಕಿಂಗ್ಸ್​ vs ಡೆಲ್ಲಿ ಕ್ಯಾಪಿಟಲ್ಸ್

ಚೆನ್ನೈ ಸೂಪರ್​ ಕಿಂಗ್ಸ್​ vs ಡೆಲ್ಲಿ ಕ್ಯಾಪಿಟಲ್ಸ್

 • Share this:
  ಅಂಕಪಟ್ಟಿಯಲ್ಲಿ ಯಾವುದೇ ಬದಲಾವಣೆ ತರದ ಅಷ್ಟೇನು ಮಹತ್ವವಲ್ಲದ ಇಂದಿನ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್ (CSK) ಮತ್ತು ಡೆಲ್ಲಿ ಕ್ಯಾಪಿಟಲ್ಸ್ (DC)​ ಮುಖಾಮುಖಿಯಾಗುತ್ತಿವೆ. ಈ ಪಂದ್ಯದ ಫಲಿತಾಂಶದಿಂದ ಯಾರಿಗೂ ಯಾವುದೇ ಆಘಾತವಿಲ್ಲ. ಏಕೆಂದರೆ ಈಗಾಲೇ ಎರಡೂ ತಂಡಗಳು ಪ್ಲೇ ಆಫ್​ಗೆ ತಮ್ಮ ಸ್ಥಾನವನ್ನು ಖಚಿತಪಡಿಸಿಕೊಂಡಿವೆ. 9 ಗೆಲುವುಗಳೊಂದಿಗೆ 18 ಅಂಕ ಪಡೆದು ಚೆನ್ನೈ ಸೂಪರ್​ ಕಿಂಗ್ಸ್​ ಅಗ್ರಸ್ಥಾನದಲ್ಲಿದ್ದರೆ, ಅಷ್ಟೇ ಗೆಲುವಿನೊಂದಿಗೆ ಡೆಲ್ಲಿ ಕ್ಯಾಪಿಟಲ್ ಎರಡನೇ ಸ್ಥಾನದಲ್ಲಿದೆ. ನೆಟ್​ ರನ್​ ರೇಟ್​ನಲ್ಲಿ (Net Run Rate) ಮಾತ್ರ ಚೆನ್ನೈ ತುಸು ಮುಂದಿದೆ. ಆದರೆ, ಇಂದಿನ ಪಂದ್ಯದಲ್ಲಿ ಒಂದು ವೇಳೆ ಡೆಲ್ಲಿ ಕ್ಯಾಪಿಟಲ್ ಗೆದ್ದರೆ ಅಗ್ರ ಸ್ಥಾನಕ್ಕೆ ಏರಲಿದೆ ಎಂಬುದನ್ನು ಬಿಟ್ಟರೆ ಈ ಪಂದ್ಯದಲ್ಲಿ ಬೇರೇನೂ ವಿಶೇಷವಿಲ್ಲ. ಹೀಗಾಗಿ ಈ ಪಂದ್ಯದಲ್ಲಿ ಎರಡೂ ತಂಡಗಳು ತಮ್ಮ ಬೆಂಚ್​ ಸ್ಟ್ರೆಂತ್​ ಅನ್ನು ಪರೀಕ್ಷಿಸಲು ಕೆಲವು ಪ್ರಯೋಗಗಳಿಗೆ ಮುಂದಾದರೂ ಅಚ್ಚರಿ ಇಲ್ಲ.

  ಚೆನ್ನೈ ಬೌಲಿಂಗ್​ಗೆ ಇಂದು ಪರೀಕ್ಷೆ;

  ಮೂರು ಬಾರಿ ಐಪಿಎಲ್ ಪ್ರಶಸ್ತಿ ಗೆದ್ದಿರುವ ಚೆನ್ನೈ ಅತ್ಯಂತ ಬಲಿಷ್ಠ ತಂಡ. ಈ ವರ್ಷದ ಟೂರ್ನಿಯಲ್ಲೂ ಸಹ ಚೆನ್ನೈ ಗೆಲುವಿನ ನಾಗಾಲೋಟವನ್ನು ಮುಂದುವರೆಸಿದೆ. ಆರಂಭಿಕರಾಗಿ ಫಾಪ್ ಡುಪ್ಲೆಸಿಸ್ ಮತ್ತು ರಿತುರಾಜ್ ಗಾಯಕ್ವಾಡ್ ಅದ್ಬುತ ಪ್ರದರ್ಶ ನೀಡುತ್ತಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಮೋಯಿನ್ ಅಲಿ, ಸುರೇಶ್ ರೈನಾ, ರವೀಂದ್ರ ಜಡೇಜಾ ಮತ್ತು ನಾಯಕ ಎಂಎಸ್ ಧೋನಿ ತಂಡದ ಆಸ್ತಿ.

  ಆದರೆ, ಬೌಲಿಂಗ್ ವಿಭಾಗ ಆಗಾಗ್ಗೆ ವಿಫಲವಾಗುತ್ತಿದೆ.  ಡ್ವೇನ್ ಬ್ರಾವೋ ಹೊರತು ಪಡಿಸಿ ಉಳಿದ ಬೌಲರ್​ಗಳು ದುಬಾರಿಯಾಗುತ್ತಿದ್ದಾರೆ. ಶಾರ್ದೂಲ್ ಠಾಕೂರ್​, ರಾಹುಲ್ ಚಾಹರ್​ ಸಹ ಕೆಲವು ಪಂದ್ಯಗಳಲ್ಲಿ ಭಾರೀ ದುಬಾರಿಯಾಗಿದ್ದಾರೆ. ಇನ್ನೂ ಸ್ಯಾಮ್ ಕರನ್ ಫಾರ್ಮ್ ಚೆನ್ನೈ ತಂಡಕ್ಕೆ ತಲೆ ಕೆಡಿಸಿರುವುದು ಸುಳ್ಳಲ್ಲ. ಇದೇ ಕಾರಣಕ್ಕೆ ಕಳೆದ ಪಂದ್ಯದಲ್ಲಿ ಚೆನ್ನೈ ರಾಯಲ್ಸ್ ವಿರುದ್ಧ ಹೀನಾಯ ಸೋಲನುಭವಿಸಿತ್ತು.

  ಹೀಗಾಗಿ ಬೌಲಿಂಗ್ ವಿಭಾಗವನ್ನು ಮತ್ತಷ್ಟು ಬಲಿಷ್ಠಪಡಿಸುವ ಹೊಣೆ ತಂಡದ ಮೇಲಿದೆ. ಅಲ್ಲದೆ, ಇಂದಿನ ಪಂದ್ಯದಲ್ಲಿ ಚೆನ್ನೈ ಬೌಲಿಂಗ್ ಪಡೆ ಬಲಿಷ್ಠ ಬ್ಯಾಟಿಂಗ್ ಲೈನಪ್ ಹೊಂದಿರುವ ಡೆಲ್ಲಿಯನ್ನು ಮುಖಾಮುಖಿಯಾಗುತ್ತಿದ್ದು, ಮತ್ತೊಮ್ಮೆ ಪರೀಕ್ಷೆಗೆ ಒಳಪಡಲಿದೆ.

  ಇದನ್ನೂ ಓದಿ: Glenn Maxwell| ಟಿ20 ವಿಶ್ವಕಪ್​ಗೆ ತನ್ನ ಫೇವರಿಟ್​ ಟಾಪ್​-5 ಆಟಗಾರರನ್ನು ಆಯ್ಕೆ ಮಾಡಿದ ಮ್ಯಾಕ್ಸ್​ವೆಲ್

  ಫೈನ್ ಟ್ಯೂನ್​ ಮಾಡಲು ಡೆಲ್ಲಿಗೆ ಉತ್ತಮ ಅವಕಾಶ:

  ಡೆಲ್ಲಿ ಕ್ಯಾಪಿಟಲ್ಸ್ ತಂಡ 18 ಅಂಕಗಳನ್ನ ಪಡೆದು ಈಗಾಗಲೇ ಪ್ಲೇ ಆಫ್ ಪ್ರವೇಶವನ್ನು ಖಚಿತಪಡಿಸಿಕೊಂಡಿದೆ. ಇನ್ನೂ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡೂ ವಿಭಾಗದಲ್ಲಿ ಡೆಲ್ಲಿ ಬಲಿಷ್ಠವಾಗಿದೆ. ಆದರೆ, ಮಹತ್ವದ ಪಂದ್ಯಗಳಲ್ಲಿ ಡೆಲ್ಲಿ ಬ್ಯಾಟ್ಸ್​ಮನ್​ಗಳು ಕೈಕೊಡುವುದು ಸಾಮಾನ್ಯದ ಸಂಗತಿ ಎಂಬಂತಾಗಿದೆ. ಕಳೆದ ಪಂದ್ಯದಲ್ಲೂ ಸಹ ಡೆಲ್ಲಿ ಸುಲಭವಾಗಿ ಗೆಲ್ಲಬಹುದಾದ ಪಂದ್ಯದಲ್ಲಿ ನೀರಸ ಗೆಲುವು ಸಾಧಿಸಿತ್ತು. ಹೀಗಾಗಿ ಇಂದಿನ ಪಂದ್ಯದಲ್ಲಿ ತಮ್ಮ ತಂಡವನ್ನು ಪ್ಲೇ ಆಫ್​ಗೆ ಮುನ್ನ ಫೈನ್ ಟ್ಯೂನ್ ಮಾಡಲು ಡೆಲ್ಲಿ ಬಳಸಿಕೊಳ್ಳಲು ಅವಕಾಶ ಲಭಿಸಿದೆ. ಅಲ್ಲದೆ, ಕೆಲವು ಪ್ರಯೋಗಗಳಿಗೂ ಮುಂದಾಗುವ ಸಾಧ್ಯತೆ ಇದೆ.
  Published by:MAshok Kumar
  First published: