• ಹೋಂ
 • »
 • ನ್ಯೂಸ್
 • »
 • IPL
 • »
 • ಐಪಿಎಲ್ 2021 ಉಳಿದ ಪಂದ್ಯಗಳ ಆರಂಭ ಯಾವಾಗ..? ಮುಂದಿನ ವಾರ ದಿನಾಂಕ ಘೋಷಣೆ ಸಾಧ್ಯತೆ

ಐಪಿಎಲ್ 2021 ಉಳಿದ ಪಂದ್ಯಗಳ ಆರಂಭ ಯಾವಾಗ..? ಮುಂದಿನ ವಾರ ದಿನಾಂಕ ಘೋಷಣೆ ಸಾಧ್ಯತೆ

IPL 2021.

IPL 2021.

ಬಿಸಿಸಿಐ ತನ್ನ ದಿನಾಂಕಗಳನ್ನು 7-10 ದಿನಗಳ ಕಾಲ ಮುಂಚೆಯೇ ಮಾಡಬೇಕೆಂದು ಬಯಸಿದೆ. ಇದರಿಂದಾಗಿ ಲೀಗ್‌ನ ಎಲ್ಲಾ ಆಟಗಾರರು ಐಪಿಎಲ್‌ನಲ್ಲಿ ಭಾಗವಹಿಸಬಹುದು. ವರದಿಯ ಪ್ರಕಾರ ಬಿಸಿಸಿಐ ಸಿಪಿಎಲ್ ದಿನಾಂಕ ಬದಲಾವಣೆ ಕುರಿತಂತೆ ಕೆರಿಬಿಯನ್ ಮಂಡಳಿಗೆ ಮನವಿ ಸಲ್ಲಿಸಲಿದೆ.

 • Share this:

ಐಪಿಎಲ್ 2021 ಯುಎಇಯಲ್ಲಿ ಸೆಪ್ಟೆಂಬರ್-ಅಕ್ಟೋಬರ್ ತಿಂಗಳಿನಲ್ಲಿ ನಡೆಯಲಿದೆ ಎಂದು ಬಿಸಿಸಿಐನ ಹಿರಿಯ ಜನರಲ್ ಮ್ಯಾನೇಜರ್ ಘೋಷಣೆ ಮಾಡಿದ್ದರು. ಆದರೆ ಪಂದ್ಯಾವಳಿಯ ದಿನಾಂಕಗಳ ಬಗ್ಗೆ ಗೊಂದಲ ಇನ್ನು ಮುಂದುವರಿದಿದ್ದು, ದಿನಾಂಕ ಘೋಷಣೆ ಇನ್ನಷ್ಟೇ ಆಗಬೇಕಿದೆ. ಆದರೆ InsideSport.com ವರದಿಯ ಪ್ರಕಾರ, ಸೆಪ್ಟೆಂಬರ್ 17 ರಂದು ಐಪಿಎಲ್ ಪುನಾರಂಭಗೊಳ್ಳಲಿದ್ದು, ಫೈನಲ್ ಪಂದ್ಯ ಅಕ್ಟೋಬರ್ 10 ರಂದು ನಡೆಯಲಿದೆ. ಆದರೆ ಈ ನಿಟ್ಟಿನಲ್ಲಿ ಸಾಕಷ್ಟು ಕೆಲಸಗಳು ನಡೆಯಬೇಕಿದೆ. ಈ ದಿನಾಂಕಗಳು ಸಿಪಿಎಲ್ 2021ರ ಜೊತೆ ಘರ್ಷಣೆಯಾಗುವ ಸಾಧ್ಯತೆಗಳಿವೆ. ಆಗಸ್ಟ್ 28 ರಿಂದ ಸೆಪ್ಟೆಂಬರ್ 19 ರವರೆಗೆ ಸಿಪಿಎಲ್ ನಡೆಯಲಿದೆ. ಹೀಗಾಗಿ ಸಿಪಿಎಲ್ ಹಾಗೂ ಐಪಿಎಲ್ ನಡುವೆ ಘರ್ಷಣೆ ಆಗುವ ಸಾಧ್ಯತೆ ಇದೆ. 


ಇನ್ನು, ಬಿಸಿಸಿಐ ತನ್ನ ದಿನಾಂಕಗಳನ್ನು 7-10 ದಿನಗಳ ಕಾಲ ಮುಂಚೆಯೇ ಮಾಡಬೇಕೆಂದು ಬಯಸಿದೆ. ಇದರಿಂದಾಗಿ ಲೀಗ್‌ನ ಎಲ್ಲಾ ಆಟಗಾರರು ಐಪಿಎಲ್‌ನಲ್ಲಿ ಭಾಗವಹಿಸಬಹುದು. ವರದಿಯ ಪ್ರಕಾರ ಬಿಸಿಸಿಐ ಸಿಪಿಎಲ್ ದಿನಾಂಕ ಬದಲಾವಣೆ ಕುರಿತಂತೆ ಕೆರಿಬಿಯನ್ ಮಂಡಳಿಗೆ ಮನವಿ ಸಲ್ಲಿಸಲಿದೆ.


ನಾವು ಎಲ್ಲಾ ಮಂಡಳಿಗಳೊಂದಿಗೆ ಅವರ ಆಟಗಾರರ ಲಭ್ಯತೆಯ ಬಗ್ಗೆ ಮಾತನಾಡುತ್ತೇವೆ. ನಾವು ಕ್ರಿಕೆಟ್ ವೆಸ್ಟ್ ಇಂಡೀಸ್‌ನೊಂದಿಗೆ ಮಾತನಾಡುತ್ತೇವೆ. ನಾವು ಯಾವಾಗಲೂ ಎಲ್ಲರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದೇವೆ ಮತ್ತು ಮುಂದಿನ ಕೆಲವು ದಿನಗಳಲ್ಲಿ ಕೆಲವು ಪರಿಹಾರಗಳು ಹೊರಬರುತ್ತವೆ ಎಂಬ ವಿಶ್ವಾಸ ನಮಗಿದೆ ಎಂದು ಬಿಸಿಸಿಐನ ಉನ್ನತ ಅಧಿಕಾರಿಗಳಲ್ಲಿ ಒಬ್ಬರು ಹೇಳಿದರು.


ಈ ನಡುವೆ ಮುಂದಿನ 10 ದಿನಗಳಲ್ಲಿ ಐಪಿಎಲ್ 2021ರ ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಲಾಗುವುದು. ಅಂತಾರಾಷ್ಟ್ರೀಯ ವೇಳಾಪಟ್ಟಿಯನ್ನು ಗಮನದಲ್ಲಿಟ್ಟುಕೊಂಡು ಇತರ ಕೆಲವು ಆಟಗಾರರಿಗೆ ಐಪಿಎಲ್ 2021ರಲ್ಲಿ ಸ್ಥಾನ ಪಡೆಯುವುದು ಕಷ್ಟವಾಗುತ್ತದೆ ಎನ್ನಲಾಗುತ್ತಿದೆ.


ಇದನ್ನೂ ಓದಿ: IPL 2021: ಮತ್ತೆ ಪುನರಾರಂಭವಾಗಲಿರುವ ಐಪಿಎಲ್ ಪಂದ್ಯವನ್ನು ಸ್ವಾಗತಿಸಿದ Rajasthan Royals ತಂಡ; ವಿಡಿಯೋ ವೈರಲ್!


ಈ ಸಮಯದಲ್ಲಿ ಆಸ್ಟ್ರೇಲಿಯ ಬಾಂಗ್ಲಾದೇಶ ಪ್ರವಾಸದಲ್ಲಿ ನಿರತವಾಗಲಿದೆ. ನ್ಯೂಜಿಲೆಂಡ್, ಬಾಂಗ್ಲಾದೇಶ ಮತ್ತು ಪಾಕಿಸ್ತಾನ ವಿರುದ್ಧ ಸರಣಿ ಆಡಲಿದೆ, ಇಂಗ್ಲೆಂಡ್ ಕೂಡ ಬಾಂಗ್ಲಾದೇಶ ಮತ್ತು ಪಾಕಿಸ್ತಾನ ವಿರುದ್ಧ ಆಡಲಿದೆ. ಐಪಿಎಲ್ ಸಮಯದಲ್ಲಿ ಪಾಕಿಸ್ತಾನವು ಅಫ್ಘಾನಿಸ್ತಾನದೊಂದಿಗೆ ನಿಗದಿತ ಸರಣಿಯನ್ನು ಹೊಂದಿದೆ.


ಆದರೆ ಭಾನುವಾರ, ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಅವರು ಸೆಪ್ಟೆಂಬರ್ 19 ರಿಂದ ಐಪಿಎಲ್ ಪ್ರಾರಂಭವಾಗಬಹುದು ಎಂದು ಮಾಹಿತಿ ನೀಡಿದ್ದಾರೆ. ವಿದೇಶಿ ಆಟಗಾರರು ಲಭ್ಯವಿಲ್ಲದಿದ್ದರೂ ಕೂಡ ಐಪಿಎಲ್ ಮುಂದುವರಿಯುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.


ಇದನ್ನೂ ಓದಿ: Sex Scandals: ಲೈಂಗಿಕ ಹಗರಣದಲ್ಲಿ ಭಾಗಿಯಾಗಿದ್ದ ಕ್ರಿಕೆಟಿಗರು!

top videos


  ಪಂದ್ಯಾವಳಿಯನ್ನು ಪೂರ್ಣಗೊಳಿಸಲು ನಮಗೆ ಸುಮಾರು 20 ದಿನಗಳ ಅವಕಾಶ ಸಿಕ್ಕಿವೆ. ನಾವು ಸೆಪ್ಟೆಂಬರ್ 19 ರಂದು ಪ್ರಾರಂಭಿಸಿದರೂ, ಅಕ್ಟೋಬರ್ 10 ರೊಳಗೆ ನಾವು ಅದನ್ನು ಮುಗಿಸಬೇಕು ಎಂದು ಅವರು ಹೇಳಿದ್ದಾರೆ.ನಾವು (ವಿದೇಶಿ ಆಟಗಾರರು) ಸಮಸ್ಯೆಯನ್ನು ಚರ್ಚಿಸಿದ್ದೇವೆ. ಐಪಿಎಲ್‌ನ ಈ ಆವೃತ್ತಿಯನ್ನು ಪೂರ್ಣಗೊಳಿಸುವುದರ ಮೇಲೆ ನಮ್ಮ ಮುಖ್ಯ ಗಮನವಿದೆ. ಅದನ್ನು ಅರ್ಧದಾರಿಯಲ್ಲೇ ಬಿಡಬಾರದು. ಆದ್ದರಿಂದ ಯಾವುದೇ ವಿದೇಶಿ ಆಟಗಾರರು ಲಭ್ಯವಿರುವುದು ಉತ್ತಮ. ಯಾರು ಲಭ್ಯವಿಲ್ಲದಿದ್ದರೂ ಪಂದ್ಯಾವಳಿಯನ್ನು ಆಯೋಜಿಸುವುದನ್ನು ತಡೆಯುವುದು ಕಷ್ಟ ಎಂದು ಶುಕ್ಲಾ ಹೇಳಿದ್ದಾರೆ.


  ಭಾರತೀಯ ಆಟಗಾರರು ಐಪಿಎಲ್ ಉಳಿದ ಪಂದ್ಯಗಳಿಗಾಗಿ ಲಭ್ಯವಿದ್ದರೆ. ವಿದೇಶಿ ಆಟಗಾರರಲ್ಲಿ ಕೆಲವರು ಲಭ್ಯವಿದ್ದಾರೆ. ಆದರೆ ಕೆಲವೇ ವಿದೇಶಿ ಆಟಗಾರರು ಲಭ್ಯವಿರುವುದಿಲ್ಲ. ನಾನು ಹೇಳಿದಂತೆ, ನಾವು ನಮ್ಮ ಪಂದ್ಯಾವಳಿಯನ್ನು ಪೂರ್ಣಗೊಳಿಸಬೇಕು. ಆದ್ದರಿಂದ ಫ್ರಾಂಚೈಸಿಗಳು ಖಂಡಿತವಾಗಿಯೂ ಇತರ ಆಟಗಾರರನ್ನು ಹುಡುಕುತ್ತಾರೆ. ಯಾರು ಲಭ್ಯವಿದ್ದರೂ, ನಾವು ಅವರೊಂದಿಗೆ ಪಂದ್ಯಾವಳಿಯನ್ನು ನಡೆಸಲಿದ್ದೇವೆ. ಅದು ನಮ್ಮ ನೀತಿ ಎಂದು ರಾಜೀವ್ ಶುಕ್ಲ ಮಾಹಿತಿ ನೀಡಿದ್ದಾರೆ.

  First published: