IPL 2021: ನಿಮ್ಮಂತೆ ಇನ್ನೊಬ್ಬರಿಲ್ಲ...ಧೋನಿ ವಿಕೆಟ್ ಪಡೆದ ಬಳಿಕ ಚೇತನ್ ಸಕರಿಯಾ..!

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್​ಸಿಬಿ) ಮತ್ತು ರಾಜಸ್ಥಾನ್ ರಾಯಲ್ಸ್ (ಆರ್​ಆರ್) ನಡುವೆ ಖರೀದಿ ಪೈಪೋಟಿ ಮೂಡಿತ್ತು. ಕೊನೆಗೆ ರಾಜಸ್ಥಾನ್ ರಾಯಲ್ಸ್ 1.2 ಕೋಟಿ ರೂಪಾಯಿಗೆ ಖರೀದಿಸಿತು. ಈ ಸೀಸನ್​ನಲ್ಲಿ ರಾಜಸ್ಥಾನ್ ಪರ ಅತೀ ಹೆಚ್ಚು ವಿಕೆಟ್ ಪಡೆದ ಬೌಲರುಗಳ ಪಟ್ಟಿಯಲ್ಲಿ ಚೇತನ್ ಸಕರಿಯಾ ಅಗ್ರಸ್ಥಾನದಲ್ಲಿದ್ದಾರೆ.

Dhoni-chetan

Dhoni-chetan

 • Share this:
  ಇಂಡಿಯನ್ ಪ್ರೀಮಿಯರ್ ಲೀಗ್​ನ 12ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಎಡಗೈ ವೇಗದ ಬೌಲರ್ ಚೇತನ್ ಸಕರಿಯಾ ಎಲ್ಲರ ಗಮನ ಸೆಳೆದರು. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ದ ನಡೆದ ಈ ಪಂದ್ಯದಲ್ಲಿ ಮೂರು ವಿಕೆಟ್ ಕಬಳಿಸಿ ಸಕರಿಯಾ, ಮತ್ತೊಮ್ಮೆ ಮಿಂಚಿದರು. ಆದರೆ ಈ ಬಾರಿ 23ರ ಯುವ ಎಡಗೈ ವೇಗಿಗೆ ಬಲಿಯಾಗಿದ್ದು ಸಿಎಸ್​ಕೆ ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತು ಸುರೇಶ್ ರೈನಾ ಎಂಬ ಅತಿರಥರು ಎಂಬುದು ವಿಶೇಷ. ಅದರಲ್ಲೂ ಧೋನಿ ವಿಕೆಟ್ ಪಡೆದಾಗ ಯುವ ವೇಗಿಯ ಸಂತೋಷಕ್ಕೆ ಪಾರವೇ ಇರಲಿಲ್ಲ. ಅಂತಿಮವಾಗಿ 4 ಓವರ್ ಬೌಲ್ ಮಾಡಿದ ಸಕರಿಯಾ ಅಂತಿಮವಾಗಿ 36 ರನ್‌ ನೀಡಿ ಮೂರು ವಿಕೆಟ್ ಕಬಳಿಸಿದರು.

  ಈ ಪಂದ್ಯದ ಬಳಿಕ ಧೋನಿ ಅವರೊಂದಿಗೆ ಫೋಟೋ ಕ್ಲಿಕ್ಕಿಸಿದ ಚೇತನ್ ಸಕರಿಯಾ ಆ ಚಿತ್ರವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
  ನಾನು ಬಾಲ್ಯದಿಂದಲೂ ನಿಮ್ಮನ್ನು ಇಷ್ಟಪಡುತ್ತೇನೆ. ಇಂದು ನಿಮ್ಮ ವಿರುದ್ಧ ಪಂದ್ಯವನ್ನು ಆಡುವ ಅವಕಾಶ ಲಭಿಸಿತು. ಇದು ನನ್ನ ಜೀವನದ ಅತ್ಯಂತ ಸುಂದರ ಕ್ಷಣ. ಇದನ್ನು ನಾನು ಪ್ರತಿ ಯುಗದಲ್ಲೂ ನೆನಪಿಟ್ಟುಕೊಳ್ಳಲಿದ್ದೇನೆ. ನಿಮ್ಮಂತೆ ಬೇರೆ ಯಾರೂ ಇರಲು ಸಾಧ್ಯವಿಲ್ಲ. ನನ್ನಂತಹ ಆಟಗಾರರನ್ನು ಪ್ರೇರೇಪಿಸಿದ್ದಕ್ಕಾಗಿ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.  ಐಪಿಎಲ್ 2021 ರಲ್ಲಿ ಚೇತನ್ ಮಿಂಚು:
  ಸಿಎಸ್​ಕೆ ವಿರುದ್ಧ ಮೂರು ವಿಕೆಟ್ ಪಡೆಯುವ ಮೊದಲು, ಚೇತನ್ ಪಂಜಾಬ್ ಕಿಂಗ್ಸ್ ವಿರುದ್ಧ 3 ವಿಕೆಟ್ ಕಬಳಿಸಿದ್ದರು. ಈ ವೇಳೆ ಕೂಡ ಸ್ಟಾರ್ ಆಟಗಾರರಾದ ಮಾಯಾಂಕ್ ಅಗರ್ವಾಲ್, ಕೆ.ಎಲ್. ರಾಹುಲ್ ಮತ್ತು ಜೈ ರಿಚರ್ಡ್ಸನ್ ವಿಕೆಟ್ ಪಡೆದಿದ್ದರು. ಈ ವರ್ಷ ಐಪಿಎಲ್ ಹರಾಜಿನಲ್ಲಿ ಚೇತನ್ ಹೆಸರು ಮೂಲ ಬೆಲೆ 20 ಲಕ್ಷ ರೂ.ಗಳೊಂದಿಗೆ ಕಾಣಿಸಿಕೊಂಡಿತ್ತು. ಆದರೆ ದೇಶೀಯ ಕ್ರಿಕೆಟ್‌ನಲ್ಲಿ ಅವರ ಉತ್ತಮ ಸಾಧನೆಯ ಫಲವಾಗಿ ಅನೇಕ ಐಪಿಎಲ್ ಫ್ರಾಂಚೈಸಿಗಳು ಅವರನ್ನು ಟಾರ್ಗೆಟ್ ಮಾಡಿದ್ದವು.

  ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್​ಸಿಬಿ) ಮತ್ತು ರಾಜಸ್ಥಾನ್ ರಾಯಲ್ಸ್ (ಆರ್​ಆರ್) ನಡುವೆ ಖರೀದಿ ಪೈಪೋಟಿ ಮೂಡಿತ್ತು. ಕೊನೆಗೆ ರಾಜಸ್ಥಾನ್ ರಾಯಲ್ಸ್ 1.2 ಕೋಟಿ ರೂಪಾಯಿಗೆ ಖರೀದಿಸಿತು. ಈ ಸೀಸನ್​ನಲ್ಲಿ ರಾಜಸ್ಥಾನ್ ಪರ ಅತೀ ಹೆಚ್ಚು ವಿಕೆಟ್ ಪಡೆದ ಬೌಲರುಗಳ ಪಟ್ಟಿಯಲ್ಲಿ ಚೇತನ್ ಸಕರಿಯಾ ಅಗ್ರಸ್ಥಾನದಲ್ಲಿದ್ದಾರೆ.

  ಇಂಡಿಯನ್ ಪ್ರೀಮಿಯರ್ ಲೀಗ್​ನ 12ನೇ ಪಂದ್ಯದಲ್ಲಿ  ಚೆನ್ನೈ ಸೂಪರ್ ಕಿಂಗ್ಸ್ ತಂಡ ರಾಜಸ್ಥಾನ್ ರಾಯಲ್ಸ್​ ವಿರುದ್ದ 45 ರನ್​ಗಳ ಭರ್ಜರಿ ಜಯ ಸಾಧಿಸಿದೆ. ಸಿಎಸ್​ಕೆ ನೀಡಿದ 189 ರನ್​ಗಳ ಟಾರ್ಗೆಟ್ ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್​ 143 ರನ್​ಗಳಿಸಲಷ್ಟೇ ಶಕ್ತರಾದರು.
  Published by:zahir
  First published: