IPL2021: ಇಂದು ಚೆನ್ನೈ ಸೂಪರ್ ಕಿಂಗ್ಸ್ vs ಡೆಲ್ಲಿ ಕ್ಯಾಪಿಟಲ್ಸ್ ಕದನ; ಯಾರ ಪಾಲಿಗೆ ಒಲಿಯಲಿದೆ ಜಯ?
CSK vs DC: ಚೆನ್ನೈ ತಂಡದ ಬ್ಯಾಟ್ಸ್ಮನ್ ಫಾಫ್ ಡು ಪ್ಲೆಸಿಸ್ ಮೇಲೆ ಭಾರಿ ನಿರೀಕ್ಷೆ ಕಾಣುತ್ತಿದೆ. ಅತ್ತ ಡೆಲ್ಲಿ ತಂಡದಲ್ಲಿ ಬೌಲರ್ ಅಶ್ವಿನ್ ಮೇಲೂ ನಿರೀಕ್ಷೆಯಿದೆ. ಇಂದಿನ ವಾಂಖೆಡೆ ಮೈದಾನದ ಪಿಚ್ ಸ್ಟೀನ್ ಮಾಡಲು ಯೋಗ್ಯವಾಗಿಲ್ಲವಾಗಿದ್ದರು. ಅವರ ಅನುಭವದಿಂದ ತಂಡದ ದಿಕ್ಕನ್ನು ಬದಲಾಯಿಸುವ ಸಾಮರ್ಥ್ಯ ಅವರಲ್ಲಿದೆ.
2021ರ ಐಪಿಎಲ್ ಸಡಗರ ಪ್ರಾರಂಭವಾಗಿದೆ. ನಿನ್ನೆ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಮೊದಲ ರೋಚಕ ಹಣಾಹಣಿ ನಡೆದಿದ್ದು, ಅದರಲ್ಲಿ ಆರ್ಸಿಬಿ ಗೆದ್ದು ಬೀಗಿದೆ. ಇಂದು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯಾಟ ನಡೆಯಲಿದೆ. 7;30ಕ್ಕೆ ಪಂದ್ಯ ಪ್ರಾರಂಭವಾಗಲಿದ್ದು, ವಾಂಖೆಡೆ ಸ್ಟೇಡಿಯಂನಲ್ಲಿ 2 ತಂಡಗಳು ಪ್ರದರ್ಶನ ತೋರಿಸಲಿದೆ.
ಧೋನಿ ನಾಯಕತ್ವದ ಚೆನ್ನೈ ತಂಡ ಒಂದೆಡೆಯಾದರೆ ಇತ್ತ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ರಿಷಭ್ ಪಂತ್ ಮುನ್ನಡೆಸುತ್ತಿದ್ದಾರೆ. ಕೊರೋನಾ ನಡುವೆಯೂ ಭಾರಿ ನೀರೀಕ್ಷೆ ಮೂಡಿಸಿರುವ ಪಂದ್ಯ ಇದಾಗಿಲಿದೆ ಎಂದು ಅಭಿಮಾನಿಗಳು ಅಂದುಕೊಳ್ಳುತ್ತಿದ್ದಾರೆ.
ಮುಂಬೈನ ವಾಂಖೆಡೆ ಮೈದಾನವು ಬ್ಯಾಟಿಂಗ್ ಮಾಡಲು ಯೋಗ್ಯವಾಗಿದ್ದರು, 200ಕ್ಕಿಂತ ಹೆಚ್ಚಿನ ರನ್ ನಿರೀಕ್ಷಿಸುವು ಕಷ್ಟಕರ. ಮತ್ತೊಂದೆಡೆ ಸ್ಟಿನ್ ಬೌಲಿಂಗ್ ಮಾಡಲು ಅಷ್ಟೇನು ಯೋಗ್ಯವಾಗಿಲ್ಲ. 30 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಆಟಗಾರರ ಪರಿಸ್ಥಿತಿ ಗೊತ್ತಾಗಲಿದೆ.
ಆದರೆ ಚೆನ್ನೈ ತಂಡದ ಬ್ಯಾಟ್ಸ್ಮನ್ ಫಾಫ್ ಡು ಪ್ಲೆಸಿಸ್ ಮೇಲೆ ಭಾರಿ ನಿರೀಕ್ಷೆ ಕಾಣುತ್ತಿದೆ. ಅತ್ತ ಡೆಲ್ಲಿ ತಂಡದಲ್ಲಿ ಬೌಲರ್ ಅಶ್ವಿನ್ ಮೇಲೂ ನಿರೀಕ್ಷೆಯಿದೆ. ಇಂದಿನ ವಾಂಖೆಡೆ ಮೈದಾನದ ಪಿಚ್ ಸ್ಟೀನ್ ಮಾಡಲು ಯೋಗ್ಯವಾಗಿಲ್ಲವಾಗಿದ್ದರು. ಅವರ ಅನುಭವದಿಂದ ತಂಡದ ದಿಕ್ಕನ್ನು ಬದಲಾಯಿಸುವ ಸಾಮರ್ಥ್ಯ ಅವರಲ್ಲಿದೆ.
ಇತ್ತಂಡಗಳ ಮುಖಾಮುಖಿಯಲ್ಲಿ ಯಾವ ತಂಡ ಎಷ್ಟು ಬಾರಿ ಜಯ ಗಳಿಸಿದೆ?
ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ 23 ಪಂದ್ಯಗಳನ್ನು ಎದುರಿಸಿದೆ. ಅದರಲ್ಲಿ 15 ಬಾರಿ ಸಿಎಸ್ಕೆ ಜಯ ಸಾಧಿಸಿದರೆ. ಡೆಲ್ಲಿ ಕ್ಯಾಪಿಟಲ್ಸ್ 8 ಬಾರಿ ಜಯ ಸಾಧಿಸಿದೆ.
ಇಂದಿನ ಜಯ ಯಾರ ಪಾಲಿಗೆ?
ಎರಡು ತಂಡಗಳು ಬಲಿಷ್ಠ ಆಟಗಾರರನ್ನು ಹೊಂದಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬ್ರಾಂಡ್ ವ್ಯಾಲ್ಯೂ ಗಮನಿಸಿದಾಗ ಸಿಎಸ್ಕೆ ತಂಡ ಶೇ 59.8ರಷ್ಟನ್ನು ಹೊಂದಿದೆ. ಅಂತೆಯೇ ರಿಷಭ್ ಪಂತ್ ತಂಡ ಶೇ.52.2 ರಷ್ಟನ್ನು ಹೊಂದಿದೆ.
2009ರಿಂದ 2020ರವರೆಗೆ ಈ ಎರಡು ತಂಡಗಳ ಬೆಳವಣೆಗೆಯನ್ನು ಗಮನಿಸುದಾದರೆ ಚೆನ್ನೈ ತಂಡ ಶೇ. 53 ರಷ್ಟು ಬೆಳವಣಿಗೆ ಕಂಡು ಮುನ್ನುಗ್ಗುತ್ತಿದೆ. ಡೆಲ್ಲಿ ತಂಡ ಶೇ.33 ರಷ್ಟಿದ್ದು ಸಾಗುತ್ತಿದೆ.
ಚೆನ್ನೈ ತಂಡ ಅಸಖ್ಯಾಂತ ಅಭಿಮಾನಿಒ ಬಳಗವನ್ನು ಹೊಂದಿದೆ. ಅತ್ತ ಡೆಲ್ಲಿ ತಂಡದಲ್ಲಿರುವ ಅಶ್ವಿನ್ ಮೂಲತಃ ಚೆನ್ನೈನವರಾಗಿದ್ದು ಅವರಿಗೂ ಅಷ್ಟೇ ಅಭಿಮಾನಿಗಳಿದ್ದಾರೆ. ಹಾಗಾಗಿ ಯಾವ ತಂಡ ಜಯ ಸಾಧಿಸಲಿದ್ದಾರೆ ಎಂಬುದು ಪಂದ್ಯದ ಕೊನೆಯಲ್ಲಿ ಗೊತ್ತಾಗಲಿದೆ.
Published by:Harshith AS
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ