IPL 2021: ಐಪಿಎಲ್‌ನಿಂದ ಸಿಕ್ಕಿದ ಹಣದಿಂದಾಗಿ ನನ್ನ ತಂದೆಗೆ ಉತ್ತಮ ಚಿಕಿತ್ಸೆ ಕೊಡಿಸುವಂತಾಯಿತು..!

ಜನರು ಐಪಿಎಲ್ ನಿಲ್ಲಿಸಿ ಎಂದು ಹೇಳುತ್ತಿದ್ದಾರೆ. ಹೀಗೆ ಹೇಳುವವರು ಈ ಬಗ್ಗೆ ಕೂಡ ಯೋಚಿಸಬೇಕು. ನನ್ನ ಕುಟುಂಬದ ಸಂಪೂರ್ಣ ಜವಾಬ್ದಾರಿ ನನ್ನ ಮೇಲಿದೆ. ನನ್ನ ಗಳಿಕೆಯ ಏಕೈಕ ಮೂಲ ಕ್ರಿಕೆಟ್.

Chetan Sakariya

Chetan Sakariya

  • Share this:
    ಈ ಬಾರಿಯ ಐಪಿಎಲ್​ನಲ್ಲಿ ಬೆಳಕಿಗೆ ಬಂದ ಪ್ರತಿಭೆಗಳಲ್ಲಿ ಚೇತನ್ ಸಕರಿಯಾ ಕೂಡ ಒಬ್ಬರು. ರಾಜಸ್ಥಾನ್ ರಾಯಲ್ಸ್ ಪರ ಕಣಕ್ಕಿಳಿದಿದ್ದ ಯುವ ಎಡಗೈ ವೇಗಿ ಟೂರ್ನಿಯುದ್ದಕ್ಕೂ ಲಯಬದ್ಧ ಬೌಲಿಂಗ್ ಮೂಲಕ ಗಮನ ಸೆಳೆದಿದ್ದರು. ಇದೀಗ ಐಪಿಎಲ್ ಮುಂದೂಡಿಕೆಯಿಂದ ಸಕರಿಯಾ ಮನೆಗೆ ವಾಪಾಸ್ಸಾಗಿದ್ದಾರೆ. ಆದರೆ ದುರಾದೃಷ್ಟ ಇತ್ತ ಮನೆಗೆ ತೆರಳುವ ವೇಳೆಗಾಗಲೇ ಚೇತನ್ ಸಕರಿಯಾ ಅವರ ತಂದೆ ಕೊರೋನಾ ಪಾಸಿಟಿವ್ ಆಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೀಗಾಗಿ ಐಪಿಎಲ್ ಕ್ಯಾಂಪ್​ನಿಂದ ಯುವ ಆಟಗಾರ ನೇರವಾಗಿ ಆಸ್ಪತ್ರೆಗೆ ತೆರಳಿದ್ದಾರೆ.

    ತಂದೆಯ ಆರೋಗ್ಯದ ಬಗ್ಗೆ ಮಾತನಾಡಿದ ಚೇತನ್ ಸಕರಿಯಾ, "ನಾನು ಅದೃಷ್ಟಶಾಲಿಯಾಗಿದ್ದೇನೆ. ಏಕೆಂದರೆ ಕೆಲವು ದಿನಗಳ ಹಿಂದೆ ರಾಜಸ್ಥಾನ್ ರಾಯಲ್ಸ್​ ತಂಡದಿಂದ ನನ್ನ ವೇತನವನ್ನು ಸ್ವೀಕರಿಸಿದ್ದೇನೆ. ಆ ಹಣವನ್ನು ಮನೆಗೆ ಕಳುಹಿಸಿದ್ದೇವೆ. ಇಂದು ಆ ಹಣದಿಂದ ಇಂತಹ ಕಠಿಣ ಸಮಯದಲ್ಲಿ ನೆರವಾಗುತ್ತಿದೆ ಎಂದು ಯುವ ಕ್ರಿಕೆಟಿಗ ತಿಳಿಸಿದ್ದಾರೆ.

    ಜನರು ಐಪಿಎಲ್ ನಿಲ್ಲಿಸಿ ಎಂದು ಹೇಳುತ್ತಿದ್ದಾರೆ. ಹೀಗೆ ಹೇಳುವವರು ಈ ಬಗ್ಗೆ ಕೂಡ ಯೋಚಿಸಬೇಕು. ನನ್ನ ಕುಟುಂಬದ ಸಂಪೂರ್ಣ ಜವಾಬ್ದಾರಿ ನನ್ನ ಮೇಲಿದೆ. ನನ್ನ ಗಳಿಕೆಯ ಏಕೈಕ ಮೂಲ ಕ್ರಿಕೆಟ್. ಐಪಿಎಲ್‌ನಿಂದ ನಾನು ಗಳಿಸಿದ ಹಣದಿಂದಾಗಿ ಇಂದು ನನ್ನ ತಂದೆಗೆ ಉತ್ತಮ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿದೆ. ಈ ಬಾರಿ ಟೂರ್ನಿ ನಡೆಯದಿದ್ದರೆ ನನ್ನ ಪಾಲಿಗೆ ಕಷ್ಟಕರವಾಗುತ್ತಿತ್ತು. ನಾನು ಬಡ ಕುಟುಂಬದಿಂದ ಬಂದವನು.ಐಪಿಎಲ್ ಕಾರಣದಿಂದಾಗಿ ನನ್ನ ಇಡೀ ಜೀವನವು ಬದಲಾಗಲಿದೆ. ಹೀಗಾಗಿ ಸುಖಾಸುಮ್ಮನೆ ಐಪಿಎಲ್ ರದ್ದುಗೊಳಿಸಿ ಎಂದು ಮಾತನಾಡುವವರು ಈ ಬಗ್ಗೆ ಕೂಡ ಯೋಚಿಸಬೇಕು ಎಂದು ಚೇತನ್ ಸಕರಿಯಾ ತಿಳಿಸಿದರು.

    ನನ್ನ ಕುಟುಂಬದಲ್ಲಿ ಇಷ್ಟೊಂದು ಹಣ ಸಂಪಾದಿಸಿದ ಏಕೈಕ ಸದಸ್ಯ ನಾನು. ಒಂದು ಕೋಟಿಯಲ್ಲಿ ಎಷ್ಟು ಸೊನ್ನೆಗಳಿವೆ ಎಂಬುದು ಕೂಡ ನನ್ನ ತಾಯಿಗೆ ತಿಳಿದಿರಲಿಲ್ಲ. ನಮ್ಮ ಮೊದಲ ಆದ್ಯತೆಯೆಂದರೆ ನನ್ನ ತಂದೆಯನ್ನು ಉಳಿಸಿಕೊಳ್ಳುವುದು. ಹಾಗೆಯೇ ಸ್ವಂತ ಮನೆಯನ್ನು ನಿರ್ಮಿಸುವುದು. ಅದಕ್ಕಾಗಿ ಐಪಿಎಲ್ ಆಡಲೇಬೇಕಾಗುತ್ತದೆ ಎಂದು ಚೇತನ್ ಸಕರಿಯಾ ಹೇಳಿದರು.

    ಈ ವರ್ಷದ ಹರಾಜಿನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವು 22 ವರ್ಷದ ಚೇತನ್ ಸಕರಿಯಾ ಅವರನ್ನು 1.2 ಕೋಟಿ ರೂ.ಗೆ ಖರೀದಿಸಿತ್ತು. ಇದೀಗ ಈ ಮೊತ್ತದ ಅರ್ಧ ಭಾಗವನ್ನು ಯುವ ಕ್ರಿಕೆಟಿಗ ಪಡೆದಿದ್ದು, ಇದೇ ಹಣ ಈಗ ನನ್ನ ತಂದೆಯ ಚಿಕಿತ್ಸೆಗೆ ವೆಚ್ಚ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.
    Published by:zahir
    First published: