• ಹೋಂ
  • »
  • ನ್ಯೂಸ್
  • »
  • IPL
  • »
  • IPL 2021: ಈ ಸಲ ಐಪಿಎಲ್​ ನಡೆಯುತ್ತಾ, ನಡೆಯಲ್ವಾ? ಇಲ್ಲಿದೆ ಉತ್ತರ

IPL 2021: ಈ ಸಲ ಐಪಿಎಲ್​ ನಡೆಯುತ್ತಾ, ನಡೆಯಲ್ವಾ? ಇಲ್ಲಿದೆ ಉತ್ತರ

IPL 2021

IPL 2021

ಇದರ ಬೆನ್ನಲ್ಲೇ ಈ ಸಲ ಐಪಿಎಲ್ ಮುಂದುವರೆಯಲ್ವಾ? ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಇದಕ್ಕೆ ಸದ್ಯ ಸಿಗುತ್ತಿರುವ ಉತ್ತರ ಸದ್ಯಕ್ಕಂತು ಇಲ್ಲ.

  • Share this:

IPL 2021 ಟೂರ್ನಿಯನ್ನು ಬಿಸಿಸಿಐ ರದ್ದುಗೊಳಿಸಿದೆ. ನಾಲ್ಕು ಫ್ರಾಂಚೈಸಿಗಳಲ್ಲಿ ಕೋವಿಡ್-19 ಪ್ರಕರಣಗಳು ಕಾಣಿಸಿಕೊಂಡಿದ್ದರಿಂದ ಮಂಗಳವಾರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸೋಮವಾರ ಕೋಲ್ಕತ್ತಾ ನೈಟ್ ರೈಡರ್ಸ್‌ ತಂಡದ ಆಟಗಾರರಾದ ವರುಣ್ ಚಕ್ರವರ್ತಿ ಮತ್ತು ಸಂದೀಪ್ ವಾರಿಯರ್‌ ಅವರಲ್ಲಿ ಕೋವಿಡ್ ಲಕ್ಷಣಗಳು ಕಾಣಿಸಿಕೊಂಡಿದ್ದವು. ಇದರ ಬೆನ್ನಲ್ಲೇ ಚೆನ್ನೈ ಸೂಪರ್ ಕಿಂಗ್ಸ್‌ನ ಬೌಲಿಂಗ್‌ ಕೋಚ್ ಲಕ್ಷ್ಮೀಪತಿ ಬಾಲಾಜಿ, ಡೆಲ್ಲಿ ಕ್ಯಾಪಿಟಲ್ಸ್‌ನ ಪ್ರಮುಖ ಸ್ಪಿನ್ನರ್ ಅಮಿತ್ ಮಿಶ್ರಾ ಮತ್ತು ಸನ್ ರೈಸರ್ಸ್ ಹೈದರಾಬಾದ್‌ನ ವೃದ್ಧಿಮಾನ್ ಸಾಹಾಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು.  ಹೀಗಾಗಿ ಎಲ್ಲಾ ತಂಡಗಳನ್ನು ಕ್ವಾರಂಟೈನ್​ನಲ್ಲಿ ಇರಿಸುವುದು ಅನಿವಾರ್ಯವಾಗಿತ್ತು. ಹೀಗಾಗಿ ಇಡೀ ಟೂರ್ನಿಯನ್ನು ರದ್ದುಗೊಳಿಸುವ ತೀರ್ಮಾನಕ್ಕೆ ಬಿಸಿಸಿಐ ಬಂದಿದೆ.


ಇದರ ಬೆನ್ನಲ್ಲೇ ಈ ಸಲ ಐಪಿಎಲ್ ಮುಂದುವರೆಯಲ್ವಾ? ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಇದಕ್ಕೆ ಸದ್ಯ ಸಿಗುತ್ತಿರುವ ಉತ್ತರ ಸದ್ಯಕ್ಕಂತು ಇಲ್ಲ. ಕೊರೋನಾ ಪ್ರಕರಣಗಳು ಕಡಿಮೆಯಾದ ಮೇಲೆ ನಡೆಯಬಹುದು ಇಲ್ಲಾ, ನಡೆಯದಿರಬಹುದು. ಈಗ ಬಿಸಿಸಿಐ ಹೇಳಿರುವುದು ಐಪಿಎಲ್​ ಅನ್ನು ರದ್ದುಗೊಳಿಸದ್ದೇವೆ ಎಂದಷ್ಟೇ.


ಸದ್ಯಕ್ಕಂತೂ ನಾವು ಐಪಿಎಲ್​ನ್ನು ಅನಿರ್ಧಿಷ್ಟಾವಧಿಗೆ ರದ್ದಾಗೊಳಿಸಿದ್ದೇವೆ. ಮುಂದೆ ಹೊಸ ವೇಳಾಪಟ್ಟಿಯನ್ನು ಪ್ರಕಟಿಸಲಿದ್ದೇವೆ. ಇದೀಗ ಎಲ್ಲಾ ಆಟಗಾರರನ್ನು ಮನೆಗೆ ಕಳುಹಿಸುವ ವ್ಯವಸ್ಥೈ ಮಾಡುತ್ತಿರುವುದಾಗಿ ಬಿಸಿಸಿಐ ಮೂಲಗಳು ತಿಳಿಸಿವೆ. ಅದರಂತೆ ಐಪಿಎಲ್ 2021 ರಲ್ಲಿ ಪಾಲ್ಗೊಂಡಿದ್ದ ಎಲ್ಲರನ್ನೂ ಸುರಕ್ಷಿತವಾಗಿ ಸಾಗಿಸಲು ವ್ಯವಸ್ಥೆ ಮಾಡಲು ಬಿಸಿಸಿಐ ಮುಂದಾಗಿದೆ ಎಂದು ವರದಿಯಾಗಿದೆ. ಅಲ್ಲದೆ ವಿದೇಶಿ ಆಟಗಾರರಿಗೆ ಫ್ಲೈಟ್ ವ್ಯವಸ್ಥೆಯನ್ನು ಬಿಸಿಸಿಐ ಮಾಡಿಕೊಡಲಿದೆ ಎಂದು ತಿಳಿಸಿದೆ.


ಇದರಿಂದ ಬಿಸಿಸಿಐಗೆ ಸದ್ಯಕ್ಕಂತು ಟೂರ್ನಿಯನ್ನು ಮುಂದುವರೆಸುವ ಯಾವುದೇ ಪ್ಲ್ಯಾನ್​ ಇಲ್ಲ ಎಂಬುದು ಸ್ಪಷ್ಟ. ಒಟ್ಟಿನಲ್ಲಿ 29 ಪಂದ್ಯಗಳು ಮುಗಿದಿದ್ದ ಟೂರ್ನಿಯಲ್ಲಿ ಇನ್ನೂ 31 ಪಂದ್ಯಗಳು ಬಾಕಿ ಉಳಿದಿವೆ. ಈ ಪಂದ್ಯಗಳನ್ನು ಯಾವಾಗ ನಡೆಸಲಿದೆ ಎಂಬುದನ್ನು ಕಾದು ನೋಡಬೇಕಿದೆ.

top videos
    First published: