ಐಪಿಎಲ್ (IPL 2021) ಜಗತ್ತಿನ ಅತ್ಯಂತ ಶ್ರೀಮಂತ ಕ್ರಿಕೆಟ್ ಟೂರ್ನಿ. ಈ ಟೂರ್ನಿಯ ಭಾಗವಾಗಲು ಹಲವು ದೇಶದ ಆಟಗಾರರು ತುದಿಗಾಲಿನಲ್ಲಿ ನಿಂತಿದ್ದರೆ, ಕ್ರಿಕೆಟ್ ಅನ್ನು ಇಷ್ಟ ಪಡುವ ಎಲ್ಲಾ ದೇಶಗಳಲ್ಲೂ ಈ ಟೂರ್ನಿಯನ್ನು ಪ್ರಸಾರ ಮಾಡಲಾ ಗುತ್ತದೆ. ಆ ಮಟ್ಟಿಗೆ ಇದು ಜನಪ್ರಿಯ ಕ್ರಿಕೆಟ್ ಟೂರ್ನಿಯೂ ಹೌದು..! ಇತ್ತೀಚೆಗೆ ತಾಲಿಬಾನಿ ಉಗ್ರರ ವಶವಾಗಿದ್ದ ಅಫ್ಘಾನಿಸ್ತಾನದಲ್ಲೂ ಸಹ ಈ ಟೂರ್ನಿ ಪ್ರಸಾರವಾ ಗುತ್ತಿತ್ತು. ಆದರೆ, ಇದನ್ನು ಇದೀಗ ಇಸ್ಲಾಂ ವಿರೋಧಿ (Anti Islam) ಎಂದು ಆರೋಪಿಸಿರುವ ತಾಲಿಬಾನಿಗಳು (Taliban) ಅಫ್ಘಾನಿಸ್ತಾನದಲ್ಲಿ (Afghanistan) ಐಪಿಎಲ್ 2021 ಪ್ರಸಾರಕ್ಕೆ ನಿಷೇಧ ಹೇರಿದ್ದಾರೆ ಎಂದು ತಿಳಿದುಬಂದಿದೆ. ಅಫ್ಘಾನಿಸ್ತಾನವನ್ನು ತಾಲಿಬಾನಿಗಳು ವಶಪಡಿಸಿಕೊಳ್ಳುತ್ತಿದ್ದಂತೆ ಸಿನಿಮಾ, ಸಂಗೀತ ಸೇರಿದಂತೆ ಎಲ್ಲಾ ಬಗೆಯ ಮನರಂಜನಾ ಕಾರ್ಯಕ್ರಮಗಳಿಗೆ ನಿಷೇಧ ಹೇರಿದ್ದರು. ಆ ನಿಟ್ಟಿನಲ್ಲಿ ಇದೀಗ ಕ್ರಿಕೆಟ್ಗೂ ನಿಷೇಧ ಹೇರಿದ್ದಾರೆ.
Afghanistan national 📻 📺 will not broadcast the @IPL as usual as it was reportedly banned to live the matches resumed tonight due to possible anti-islam contents, girls dancing & the attendence of barred hair women in the 🏟️ by Islamic Emirates of the Taliban. #CSKvMI pic.twitter.com/dmPZ3rrKn6
— M.ibrahim Momand (@IbrahimReporter) September 19, 2021
ಕಠಿಣವಾದ ಇಸ್ಲಾಮಿಸ್ಟ್‌ಗಳು ಪುರುಷರು ಕ್ರಿಕೆಟ್ ಆಡುವ ಬಗ್ಗೆ ತಲೆಕೆಡಿಸಿಕೊಂಡಿಲ್ಲ ವಾದರೂ, ಮಹಿಳೆಯರು ಕ್ರಿಕೆಟ್ನಲ್ಲಿ ಪಾಲ್ಗೊಳ್ಳುವುದಕ್ಕೆ ನಿಷೇಧ ಹೇರಲಾಗಿತ್ತು. ಅಫಘಾನಿಸ್ತಾನದ ಹೊಸ ಕ್ರೀಡಾ ನಿರ್ದೇಶಕರಾದ ಬಶೀರ್ ಅಹ್ಮದ್ ರುಸ್ತಮ್‌ಜೈ ಕಳೆದ ವಾರ ಅಧಿಕಾರ ಸ್ವೀಕರಿಸಿದ್ದು, ಈ ಬಗ್ಗೆ ಉತ್ತರಿಸಲು ನಿರಾಕರಿಸಿದರು. ಅಲ್ಲದೆ, ಮಹಿಳೆಯರಿಗೆ ಕ್ರೀಡೆಗಳನ್ನು ಆಡಲು ಅನುಮತಿಸಲಾಗುವುದು-ಉನ್ನತ ಮಟ್ಟದ ತಾಲಿಬಾನ್ ನಾಯಕರು ಈ ಬಗ್ಗೆ ಶೀಘ್ರದಲ್ಲೇ ನಿರ್ಧರಿಸಲಿದ್ದಾರೆ ಎಂದು ಹಾರಿಕೆಯ ಉತ್ತರ ನೀಡಿದ್ದರು.
ಆದರೆ, ಈ ನಡುವೆ ಅಫ್ಘಾನಿಸ್ತಾ ಪುರುಷರ ತಂಡ ಟೆಸ್ಟ್ ಕ್ರಿಕೆಟ್ನಲ್ಲಿ ಪಾಲ್ಗೊಳ್ಳುವುದು ಭವಿಷ್ಯದಲ್ಲಿ ಅಸಂಭವ ಎಂದು ಹೇಳಲಾಗುತ್ತಿದೆ. ಏಕೆಂದರೆ ಐಸಿಸಿ ನಿಯಮಗಳ ಪ್ರಕಾರ ಮಹಿಳಾ ಕ್ರಿಕೆಟ್ ತಂಡವನ್ನೂ ಹೊಂದಿರುವ ದೇಶಕ್ಕೆ ಮಾತ್ರ ಟೆಸ್ಟ್ ಆಡುವ ಮಾನ್ಯತೆ ನೀಡಲಾಗುತ್ತದೆ. ಹೀಗಾಗಿ ತಾಲಿಬಾನ್ ನಡೆಯಿಂದ ಇದೀಗ ಅಫ್ಘನ್ ಪುರುಷರ ಕ್ರಿಕೆಟ್ ಸಹ ಸಂಕಷ್ಟಕ್ಕೆ ಒಳಗಾಗಿದೆ.
ಆಸ್ಟ್ರೇಲಿಯಾ ತಂಡ ಮುಂದಿನ ತಿಂಗಳು ಮೊದಲ ಬಾರಿಗೆ ಅಫ್ಘನ್ ವಿರುದ್ಧ ಟೆಸ್ಟ್ ಪಂದ್ಯ ಆಡಲಿದೆ. ಆದರೆ, ಹಿರಿಯ ತಾಲಿಬಾನ್ ಅಧಿಕಾರಿಯೊಬ್ಬರು ದೂರದರ್ಶನಕ್ಕೆ ನೀಡಿದ ಸಂದರ್ಶನದಲ್ಲಿ ಅವರು "ಮಹಿಳೆಯರು ಕ್ರಿಕೆಟ್ ಆಡುವ ಅಗತ್ಯವಿಲ್ಲ" ಎಂದು ಹೇಳಿದ್ದ ಸುದ್ದಿ ದೊಡ್ಡ ಸದ್ದು ಮಾಡಿತ್ತು. ಇದರ ಬೆನ್ನಿಗೆ ಇದೀಗ ಆಫ್ಘನ್ ವಿರುದ್ಧದ ಟೆಸ್ಟ್ ಅನ್ನು ಆಸ್ಟ್ರೇಲಿಯಾ ರದ್ದು ಮಾಡುವ ಬೆದರಿಕೆ ಒಡ್ಡಿದೆ.
2001 ರಲ್ಲಿ ಅಧಿಕಾರದಿಂದ ಹೊರಹಾಕಲ್ಪಡುವ ಮೊದಲು ತಾಲಿಬಾನರು ಅಫ್ಘಾನಿಸ್ತಾನದಲ್ಲಿ ಹೆಚ್ಚಿನ ಮನರಂಜನೆಯನ್ನು ನಿಷೇಧಿಸಿದ್ದರು. ಅನೇಕ ಕ್ರೀಡಾಂಗಣಗಳನ್ನು ಸಾರ್ವಜನಿಕ ಮರಣದಂಡನೆ ಸ್ಥಳಗಳಾಗಿ ಬಳಸಲಾಗುತ್ತಿತ್ತು. ಆದರೆ ಕಳೆದ ಕೆಲವು ದಶಕಗಳಲ್ಲಿ ಈ ಕ್ರೀಡೆಯು ಬಹಳ ಜನಪ್ರಿಯವಾಗಿದೆ, ಹೆಚ್ಚಾಗಿ ಕ್ರಿಕೆಟ್ ಸಾಕಷ್ಟು ಜನಪ್ರಿಯತೆ ಗಳಿಸಿತ್ತು.
ಅಫ್ಘಾನ್ ಪುರುಷರ ತಂಡವು ಅಕ್ಟೋಬರ್ 17 ರಿಂದ ನವೆಂಬರ್ 14 ರವರೆಗೆ ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಒಮಾನ್‌ನಲ್ಲಿ ಟಿ 20 ವಿಶ್ವಕಪ್ ಆಡಲಿದೆ. ಈ ನಡುವೆ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ (ಎಸಿಬಿ) ಕಳೆದ ವಾರ ಆಸ್ಟ್ರೇಲಿಯಾವನ್ನು ಟೆಸ್ಟ್ ಸರಣಿ ರದ್ದು ಮಾಡದಂತೆ ಮನವಿ ಮಾಡಿದೆ ಎಂದು ತಿಳಿದುಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ