HOME » NEWS » Ipl » IPL 2021 BRAD HOGG RAISES THE SPIRIT OF THE GAME QUESTION AFTER MIS NON STRIKER ZP

IPL 2021: ಹೊಸ ಚರ್ಚೆಗೆ ಕಾರಣವಾದ ಮುಂಬೈ-ಸಿಎಸ್​ಕೆ ಪಂದ್ಯದ ಅಂತಿಮ ಓವರ್..!

ಈ ಗೆಲುವಿನ ಬೆನ್ನಲ್ಲೇ ಇದೀಗ ಅಂಪೈರ್​ಗಳ ನಡೆಯ ಬಗ್ಗೆ ಪ್ರಶ್ನೆಗಳೆದ್ದಿವೆ. ಕೊನೆಯ ಓವರ್​ನಲ್ಲಿ ಮುಂಬೈಗೆ 16 ರನ್​ಗಳು ಬೇಕಿತ್ತು. ಮೊದಲ ಎಸೆತದಲ್ಲಿ ಯಾವುದೇ ರನ್ ಬಂದಿರಲಿಲ್ಲ.

news18-kannada
Updated:May 3, 2021, 2:54 PM IST
IPL 2021: ಹೊಸ ಚರ್ಚೆಗೆ ಕಾರಣವಾದ ಮುಂಬೈ-ಸಿಎಸ್​ಕೆ ಪಂದ್ಯದ ಅಂತಿಮ ಓವರ್..!
csk vs mi
  • Share this:
ಇಂಡಿಯನ್ ಪ್ರೀಮಿಯರ್ ಲೀಗ್​ನ 27ನೇ ಪಂದ್ಯವು ರೋಚಕ ಹೋರಾಟಕ್ಕೆ ಸಾಕ್ಷಿಯಾಗಿತ್ತು. ಸಿಎಸ್​ಕೆ ನೀಡಿದ 218 ರನ್​ಗಳ ಬೃಹತ್ ಟಾರ್ಗೆಟ್​ನ್ನು ಬೆನ್ನತ್ತುವ ಮೂಲಕ ಮುಂಬೈ ಇಂಡಿಯನ್ಸ್ 4 ವಿಕೆಟ್​ಗಳ ರೋಚಕ ಜಯ ಸಾಧಿಸಿತು. ಇದರೊಂದಿಗೆ ಐಪಿಎಲ್ ಇತಿಹಾಸದಲ್ಲೇ ಗರಿಷ್ಠ ರನ್ ಚೇಸ್ ಮಾಡಿದ 2ನೇ ತಂಡ ಎಂಬ ಹೆಗ್ಗಳಿಕೆ ಮುಂಬೈ ಇಂಡಿಯನ್ಸ್ ಪಾಲಾಯಿತು.

ಅಂಬಾಟಿ ರಾಯುಡು ಬಾರಿಸಿದ ಸ್ಪೋಟಕ 72, ಮೊಯೀನ್ ಅಲಿಯ ಬಿರುಸಿನ 58 ಹಾಗೂ ಫಾಫ್ ಡುಪ್ಲೆಸಿಸ್​ ಅವರ ಅರ್ಧಶತಕದ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್​ 218 ರನ್​ ಕಲೆಹಾಕಿತ್ತು. ಈ ಬೃಹತ್ ಗುರಿಯನ್ನು ಬೆನ್ನತ್ತಿದ ಮುಂಬೈ ಉತ್ತಮ ಆರಂಭ ಪಡೆಯಿತು. ಆದರೆ ಮಧ್ಯಮ ಕ್ರಮಾಂಕದಲ್ಲಿ ದಿಢೀರ್ ಕುಸಿತದ ಹೊರತಾಗಿ ಏಕಾಂಗಿಯಾಗಿ ನಿಂತು ಕೀರನ್ ಪೊಲಾರ್ಡ್​ ಅಬ್ಬರಿಸಿದರು. ಕೇವಲ 34 ಎಸೆತಗಳಿಂದ 87 ರನ್ ಚಚ್ಚಿದ ಪೊಲಾರ್ಡ್ ಅಂತಿಮ ಎಸೆತದಲ್ಲಿ ತಂಡಕ್ಕೆ ಗೆಲುವು ತಂದು ಕೊಟ್ಟರು.

ಈ ಗೆಲುವಿನ ಬೆನ್ನಲ್ಲೇ ಇದೀಗ ಅಂಪೈರ್​ಗಳ ನಡೆಯ ಬಗ್ಗೆ ಪ್ರಶ್ನೆಗಳೆದ್ದಿವೆ. ಕೊನೆಯ ಓವರ್​ನಲ್ಲಿ ಮುಂಬೈಗೆ 16 ರನ್​ಗಳು ಬೇಕಿತ್ತು. ಮೊದಲ ಎಸೆತದಲ್ಲಿ ಯಾವುದೇ ರನ್ ಬಂದಿರಲಿಲ್ಲ. 2ನೇ ಎಸೆತದಲ್ಲಿ ಪೊಲಾರ್ಡ್ ಬೌಂಡರಿ ಬಾರಿಸಿದರು. ಮೂರನೇ ಎಸೆತದಲ್ಲಿ ಮತ್ತೊಂದು ಬೌಂಡರಿ. ನಾಲ್ಕನೇ ಎಸೆತದಲ್ಲಿ ಯಾವುದೇ ರನ್ ಇಲ್ಲ. 5ನೇ ಎಸೆತದಲ್ಲಿ ಭರ್ಜರಿ ಸಿಕ್ಸ್. ಕೊನೆಯ ಎಸೆತದಲ್ಲಿ ಮುಂಬೈಗೆ 2 ರನ್​ಗಳ ಅವಶ್ಯಕತೆ. ಕೊನೆಯ ಎಸೆತದಲ್ಲಿ ಯಶಸ್ವಿಯಾಗಿ 2 ರನ್‌ಗಳನ್ನು ಓಡಿದ ಮುಂಬೈ ಇಂಡಿಯನ್ಸ್ ತಂಡ ಗೆಲುವು ಸಾಧಿಸಿತು.

ಆದರೆ ಲುಂಗಿ ಎನ್​ಗಿಡಿ ಕೊನೆಯ ಎಸೆತವನ್ನು ಎಸೆಯುವ ಮುನ್ನವೇ ನಾನ್ ಸ್ಟ್ರೈಕರ್ ತುದಿಯಲ್ಲಿದ್ದ ಧವಳ್ ಕುಲಕರ್ಣಿ ಕ್ರೀಸ್ ಬಿಟ್ಟಿದ್ದರು. ಅದು ಕೂಡ 2ನೇ ಪಿಚ್​ ಮೂಲಕ. ಎರಡನೇ ಪಿಚ್​ ಮೂಲಕ ಓಡುವ ಅವಕಾಶವಿದ್ದರೂ, ಚೆಂಡೆಸೆಯುವ ಮುನ್ನ ಓಡುವಾಗ ಅಂಪೈರ್​ಗೆ ಗೊತ್ತಾಗುತ್ತೆ. ಆದರೆ ಬಾಲ್ ಮಾಡಲು ಬರುವ ಮೊದಲೇ ಕುಲಕರ್ಣಿ ಅಂಪೈರ್​ ಬಲಭಾಗದಿಂದ ಒಂದೆರಡು ಹೆಜ್ಜೆ ಮುಂದೆ ಹೋದರೂ, ಅಂಪೈರ್ ಯಾವುದೇ ಸೂಚನೆ ನೀಡಿಲ್ಲ ಎಂಬುದೇ ಅಚ್ಚರಿ. ಇತ್ತ ಬೌಲರ್ ಕೂಡ ಅದರ ಬಗ್ಗೆ ಯಾವುದೇ ಚಕಾರ ಎತ್ತಲಿಲ್ಲ. ಅಂತಿಮ ಎಸೆತದ ಈ ಘಟನೆಯ ದೃಶ್ಯಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಲ್ಲದೆ ಅಂಪೈರ್ ನಡೆಯನ್ನು ಕ್ರಿಕೆಟ್ ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ.


ಅತ್ತ ಆಸ್ಟ್ರೇಲಿಯಾದ ಮಾಜಿ ಆಟಗಾರ ಬ್ರಾಡ್ ಹಾಗ್ ಕೂಡ ಈ ಬಗ್ಗೆ ಟ್ವೀಟ್ ಮಾಡಿದ್ದು, ಕೊನೆಯ ಎಸೆತದಲ್ಲಿ 2 ರನ್ ಬೇಕಿದ್ದಾಗ ಮುಂಬೈ ಇಂಡಿಯನ್ಸ್ ಸಂಪೂರ್ಣ ಲಾಭ ಪಡೆದುಕೊಂಡಿದ್ದಾರೆ ಎಂದಿದ್ದಾರೆ. ಅಲ್ಲದೆ ಇದು ಕ್ರೀಡಾಸ್ಪೂರ್ತಿನಾ ಪ್ರಶ್ನಿಸಿದ್ದಾರೆ. ಒಟ್ಟಿನಲ್ಲಿ ಮುಂಬೈ ಇಂಡಿಯನ್ಸ್-ಚೆನ್ನೈ ಸೂಪರ್ ಕಿಂಗ್ಸ್​ ನಡುವಣ ಅಂತಿಮ ಓವರ್ ಹೈಡ್ರಾಮಾ ಇದೀಗ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.
Published by: zahir
First published: May 3, 2021, 2:54 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories