IPL 2021: ಐಪಿಎಲ್ ತೊರೆದು ತವರಿಗೆ ಮರಳಲು ಸ್ಮಿತ್-ವಾರ್ನರ್ ನಿರ್ಧಾರ..?

ಐಪಿಎಲ್ 2021 ರಲ್ಲಿ ಆಸ್ಟ್ರೇಲಿಯಾದ 17 ಆಟಗಾರರು ಭಾಗವಹಿಸುತ್ತಿದ್ದಾರೆ. ಈ ಪೈಕಿ ಮೂರು - ಆಡ್ಯಂ ಝಂಪಾ, ಕೆನ್ ರಿಚರ್ಡ್ಸನ್ (ಆರ್​ಸಿಬಿ) ಮತ್ತು ಆಂಡ್ರ್ಯೂ ಟೈ (ರಾಜಸ್ಥಾನ್ ರಾಯಲ್ಸ್​) ಈಗಾಗಲೇ ತವರಿಗೆ ಮರಳಿದ್ದಾರೆ.

Smith - Warner

Smith - Warner

  • Share this:
    ಸನ್‌ರೈಸರ್ಸ್ ಹೈದರಾಬಾದ್ (SRH) ನಾಯಕ ಡೇವಿಡ್ ವಾರ್ನರ್ ಮತ್ತು ದೆಹಲಿ ಕ್ಯಾಪಿಟಲ್ಸ್ (DC) ಆಟಗಾರ ಸ್ಟೀವ್ ಸ್ಮಿತ್ ಸೇರಿದಂತೆ ಕೆಲ ಆಸ್ಟ್ರೇಲಿಯಾದ ಕ್ರಿಕೆಟಿಗರು ಶೀಘ್ರದಲ್ಲೇ ಐಪಿಎಲ್​ ತೊರೆದು ತವರಿಗೆ ಮರಳಲಿದ್ದಾರೆ ಎಂದು ವರದಿಯಾಗಿದೆ. ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಅವರು ಮೇ 15 ರವರೆಗೆ ಭಾರತದಿಂದ ವಿಮಾನಗಳ ನಿಷೇಧವನ್ನು ಘೋಷಿಸಿದ್ದಾರೆ. ಇದರ ಬೆನ್ನಲ್ಲೇ ಈ ಇಬ್ಬರು ಆಟಗಾರರು ತವರಗೆ ಮರಳಲು ಚಿಂತಿಸಿದ್ದಾರೆ ಎಂದು ವರದಿಯಾಗಿದೆ.

    9 ನ್ಯೂಸ್‌ ವರದಿ ಪ್ರಕಾರ, "ಡೇವಿಡ್ ವಾರ್ನರ್ ಮತ್ತು ಸ್ಟೀವ್ ಸ್ಮಿತ್ ಸೇರಿದಂತೆ ಕೆಲ ಕ್ರಿಕೆಟಿಗರು ಆಸ್ಟ್ರೇಲಿಯಾಗೆ ಮರಳು ಇಚ್ಛಿಸಿದ್ದಾರೆ ಎಂದು ತಿಳಿಸಿದೆ. ವಾರ್ನರ್ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಮುನ್ನಡೆಸುತ್ತಿದ್ದರೆ, ಸ್ಟೀವ್ ಸ್ಮಿತ್ ದೆಹಲಿ ರಾಜಧಾನಿಗಳ ಪರ ಆಡುತ್ತಿದ್ದಾರೆ. ಪ್ರಸ್ತುತ ಐಪಿಎಲ್​ನಲ್ಲಿ ಆಸ್ಟ್ರೇಲಿಯಾ ಆಟಗಾರರು, ತರಬೇತುದಾರರು ಮತ್ತು ಕಮೆಂಟೇಟರ್​ಗಳು ಇದ್ದು, ಇವರಲ್ಲಿ ಅನೇಕರು ವಿಮಾನ ವ್ಯವಸ್ಥೆ ಸಂಪೂರ್ಣ ಮುಚ್ಚುವ ಮೊದಲು ತವರಿಗೆ ಮರಳಲು ಉತ್ಸುಕರಾಗಿದ್ದಾರೆ ಎಂದು ತಿಳಿಸಿದೆ.

    ಐಪಿಎಲ್ 2021 ರಲ್ಲಿ ಆಸ್ಟ್ರೇಲಿಯಾದ 17 ಆಟಗಾರರು ಭಾಗವಹಿಸುತ್ತಿದ್ದಾರೆ. ಈ ಪೈಕಿ ಮೂರು - ಆಡ್ಯಂ ಝಂಪಾ, ಕೆನ್ ರಿಚರ್ಡ್ಸನ್ (ಆರ್​ಸಿಬಿ) ಮತ್ತು ಆಂಡ್ರ್ಯೂ ಟೈ (ರಾಜಸ್ಥಾನ್ ರಾಯಲ್ಸ್​) ಈಗಾಗಲೇ ತವರಿಗೆ ಮರಳಿದ್ದಾರೆ. ಇನ್ನು ರಿಕಿ ಪಾಂಟಿಂಗ್ (ಡಿಸಿ ಕೋಚ್), ಡೇವಿಡ್ ಹಸ್ಸಿ (ಕೆಕೆಆರ್ ಸಹಾಯಕ ಕೋಚ್) ಮತ್ತು ಸೈಮನ್ ಕ್ಯಾಟಿಚ್ (ಆರ್‌ಸಿಬಿ ಕೋಚ್) ಹಾಗೂ ಕಮೆಂಟೇಟರ್​ಗಳಾದ ಬ್ರೆಟ್ ಲೀ, ಮೈಕೆಲ್ ಸ್ಲೇಟರ್ ಮತ್ತು ಮ್ಯಾಥ್ಯೂ ಹೇಡನ್ ಸೇರಿದಂತೆ ಹಲವು ಆಟಗಾರರು ಭಾರತದಲ್ಲಿದ್ದಾರೆ. ಇವರನ್ನು ಶೀಘ್ರದಲ್ಲೇ ಚಾರ್ಟರ್ಡ್ ವಿಮಾನದ ಮರಳಿ ಕರೆತರಲು ಆಸ್ಟ್ರೇಲಿಯಾ ಕ್ರಿಕೆಟ್ ಸಂಘದಲ್ಲಿ ಮಾತುಕತೆ ನಡೆಯುತ್ತಿದೆ ಎಂದು ವರದಿ ತಿಳಿಸಿದೆ.

    ಅದಾಗ್ಯೂ, ಟೂರ್ನಿಯಲ್ಲಿ ಆಟಗಾರರಿಗೆ ಸರ್ಕಾರದಿಂದ ಯಾವುದೇ ವಿಮಾನ ವ್ಯವಸ್ಥೆ ಮಾಡುವುದಿಲ್ಲ ಆಸ್ಟ್ರೇಲಿಯಾ ಪ್ರಧಾನಿ ತಿಳಿಸಿದ್ದಾರೆ. ಹೀಗಾಗಿ ಆಟಗಾರರು ತವರಿಗೆ ತೆರಳಲು ಎರಡನೇ ಆಯ್ಕೆಯನ್ನು ಚರ್ಚಿಸುತ್ತಿದೆ. ಹೀಗಾಗಿ ಭಾರತದಿಂದ ಬೇರೊಂದು ದೇಶಕ್ಕೆ ತೆರಳಿ ಅಲ್ಲಿಂದ ಆಸ್ಟ್ರೇಲಿಯಾಗೆ ತೆರಳುವ ಬಗ್ಗೆ ಕೂಡ ಯೋಚಿಸಲಾಗುತ್ತಿದೆ. ಇತ್ತ ಎಲ್ಲ ವಿದೇಶಿ ಆಟಗಾರರನ್ನು ತಮ್ಮ ದೇಶಕ್ಕೆ ಕಳುಹಿಸಲು ಬದ್ಧವಾಗಿದೆ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ. ಈ ಬಗ್ಗೆ ಸಂಬಂಧಪಟ್ಟ ಎಲ್ಲ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗುತ್ತಿದೆ ಎಂದು ತಿಳಿಸಿದೆ. ಇದಾಗ್ಯೂ ಆಸ್ಟ್ರೇಲಿಯಾ ಆಟಗಾರರು ಅರ್ಧದಲ್ಲೇ ಐಪಿಎಲ್ ತೊರೆಯಲಿದ್ದಾರಾ ಕಾದು ನೋಡಬೇಕಿದೆ.
    Published by:zahir
    First published: