IPL

  • associate partner
HOME » NEWS » Ipl » IPL 2021 AUCTION WHEN WHERE AND TEAM SQUAD OF IPL 2021 SCHEDULE FULL DETAILS HERE VB

IPL 2021: ಐಪಿಎಲ್ 2021 ಯಾವಾಗ?, ಏಲ್ಲಿ?, ಹೊಸ ತಂಡ, ಹರಾಜು ಪ್ರಕ್ರಿಯೆ ಕುರಿತ ಮಾಹಿತಿ ಇಲ್ಲಿದೆ

ಸದ್ಯದ ಮಾಹಿತಿ ಪ್ರಕಾರ ಭಾರತದಲ್ಲೇ ಐಪಿಎಲ್ 2021 ಆವೃತ್ತಿ ಟೂರ್ನಿ ನಡೆಸಲು ಬಿಸಿಸಿಐ ಪ್ಲಾನ್​ ಹಾಕಿಕೊಂಡಿದ್ದು, ಅದಕ್ಕೂ ಮುಂಚಿತವಾಗಿ ದೊಡ್ಡ ಮಟ್ಟದಲ್ಲಿ ಆಟಗಾರರ ಹರಾಜು ಪ್ರಕ್ರಿಯೆ ನಡೆಸುವ ಸಾಧ್ಯತೆ ಇದೆಯಂತೆ.

news18-kannada
Updated:November 11, 2020, 3:00 PM IST
IPL 2021: ಐಪಿಎಲ್ 2021 ಯಾವಾಗ?, ಏಲ್ಲಿ?, ಹೊಸ ತಂಡ, ಹರಾಜು ಪ್ರಕ್ರಿಯೆ ಕುರಿತ ಮಾಹಿತಿ ಇಲ್ಲಿದೆ
IPL 2021
  • Share this:
ಸೆಪ್ಟೆಂಬರ್ 19ಕ್ಕೆ ಆರಂಭವಾದ ಐಪಿಎಲ್ 2020 ಟೂರ್ನಿ ಮಂಗಳವಾರ ನವೆಂಬರ್ 10ಕ್ಕೆ ಕೊನೆಗೊಂಡಿತು. ಮುಂಬೈ ಇಂಡಿಯನ್ಸ್ ತಂಡ ದಾಖಲೆಯ 5ನೇ ಬಾರಿ ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ಮೂಲಕ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ಗೆ ತೆರೆಬಿದ್ದಿದೆ. ಮಾರಕ ಕೊರೋನಾ ವೈರಸ್ ಹಿನ್ನಡೆ ಭಾರತದ ಬದಲು ದೂರದ ಯುಎಇನಲ್ಲಿ ಐಪಿಎಲ್ ಆಯೋಜಿಸಿ ಬಿಸಿಸಿಐ ಯಶಸ್ವಿಯಾಗಿದೆ. ಇದರ ಬೆನ್ನಲ್ಲೆ ಐಪಿಎಲ್ 2021ಕ್ಕೆ ಬಿಸಿಸಿಐ ಸಿದ್ಧತೆ ಶುರು ಮಾಡಿದೆ. 14ನೇ ಆವೃತ್ತಿಯ ಐಪಿಎಲ್​ ಬಗ್ಗೆ ಕೆಲವು ಮಾಹಿತಿಗಳು ಈಗಾಗಲೇ ಹೊರಬಿದ್ದಿವೆ.

ಐಪಿಎಲ್ 2020 ಆರಂಭವಾಗುವ ಹೊತ್ತಲ್ಲಿ 14ನೇ ಅವೃತ್ತಿಯ ಹರಾಜು ಪ್ರಕ್ರಿಯಡೆ ನಡೆಯುವುದಿಲ್ಲ ಎಂದು ಹೇಳಲಾಗಿತ್ತು. ಯಾಕೆಂದರೆ ಐಪಿಎಲ್ 2020 ಮುಗಿಯುವುದೇ ನ. 10ಕ್ಕೆ ಅದಾದ ಒಂದು ತಿಂಗಳಲ್ಲಿ ಮುಂದಿನ ಆವೃತ್ತಿಯ ಹರಾಜು ಪ್ರಕ್ರಿಯೆ ನಡೆಸುವುದು ಸುಲಭವಲ್ಲ ಎಂಬ ಮಾತುಗಳು ಕೇಳಿಬಂದಿದ್ದವು. ಅಲ್ಲದೆ ಐಪಿಎಲ್ ನಡೆದರೂ ಬಾರತದಲ್ಲಿ ಆಯೋಜನೆ ಅನುಮಾನ ಎನ್ನಲಾಗಿತ್ತು.

IPL 2020 Prize Money: ಚಾಂಪಿಯನ್ ಮುಂಬೈಗೆ, ರನ್ನರ್ ಅಪ್ ಡೆಲ್ಲಿಗೆ ಸಿಕ್ಕ ಒಟ್ಟು ಹಣವೆಷ್ಟು ಗೊತ್ತೇ?: ಇಲ್ಲಿದೆ ಮಾಹಿತಿ

ಆದರೆ, ಸದ್ಯದ ಮಾಹಿತಿ ಪ್ರಕಾರ ಭಾರತದಲ್ಲೇ ಐಪಿಎಲ್ 2021 ಆವೃತ್ತಿ ಟೂರ್ನಿ ನಡೆಸಲು ಬಿಸಿಸಿಐ ಪ್ಲಾನ್​ ಹಾಕಿಕೊಂಡಿದ್ದು, ಅದಕ್ಕೂ ಮುಂಚಿತವಾಗಿ ದೊಡ್ಡ ಮಟ್ಟದಲ್ಲಿ ಆಟಗಾರರ ಹರಾಜು ಪ್ರಕ್ರಿಯೆ ನಡೆಸುವ ಸಾಧ್ಯತೆ ಇದೆಯಂತೆ.

ಇನ್ನೊಂದು ಅಚ್ಚರಿಯ ವಿಚಾರ ಎಂದರೆ, 2021ರ ಐಪಿಎಲ್​ ಟೂರ್ನಿಯಲ್ಲಿ ಮತ್ತೊಂದು ತಂಡ ಸೇರಿಸಿಕೊಳ್ಳುವ ಬಗ್ಗೆ ಬಿಸಿಸಿಐ ಮಾತುಕತೆ ನಡೆಸುತ್ತಿದೆ ಎನ್ನಲಾಗಿದೆ. 13ನೇ ಆವೃತ್ತಿ ಐಪಿಎಲ್​ನಲ್ಲಿ ಕೊರೋನಾ ವೈರಸ್​ ಕಾರಣ ಬಿಸಿಸಿಐ ಸಾಕಷ್ಟು ನಷ್ಟ ಅನುಭವಿಸಿದ್ದು, ಇದೀಗ ಅದನ್ನ ಸರಿದೂಗಿಸಲು ಈ ನಿರ್ಧಾರ ಕೈಗೊಳ್ಳಾಗಿದೆ ಎಂದು ಹೇಳಲಾಗುತ್ತಿದೆ.

ಮಾಹಿತಿಯ ಪ್ರಕಾರ ಅಹಮದಾಬಾದ್​ ಮೂಲದ ಪ್ರಾಂಚೈಸಿ ಹೊಸದಾಗಿ ಐಪಿಎಲ್ ಸೇರಿಕೊಳ್ಳುವ ಸಾಧ್ಯತೆ ಇದೆ. ಆದರೆ, ಈ ಬಗ್ಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಆದರೆ, ಹರಾಜು ಪ್ರಕ್ರಿಯೆ ಕೂಡ ಭಾರತದಲ್ಲೇ ನಡೆಯಲಿದ್ದು, ದಿನಾಂಕ ಇನ್ನೂ ಫೈನಲ್ ಮಾಡಬೇಕಷ್ಟೆ.

IPL 2020: ಕೆ. ಎಲ್ ರಾಹುಲ್​ to ವರುಣ್ ಚಕ್ರವರ್ತಿ: ಕೊಲ್ಲಿ ರಾಷ್ಟ್ರದಲ್ಲಿ ನಡೆದಿದ್ದು ಈ ಆಟಗಾರರ ಮ್ಯಾಜಿಕ್!ಈಗಾಗಲೇ ಗಂಗೂಲಿ, 2021ರ ಐಪಿಎಲ್‌ ಅವೃತ್ತಿ ಮುಂದಿನ ವರ್ಷ ಮಾರ್ಚ್ ಮಧ್ಯದಲ್ಲಿ ಆರಂಭವಾಗಲಿದೆ. ಕೊರೊನಾ ಲಸಿಕೆ ಐಪಿಎಲ್ ಸಮಯದಲ್ಲಿ ಕಂಡು ಹಿಡಿಯಬಹುದು. ಹೀಗಾಗಿ ಮುಂದಿನ ಐಪಿಎಲ್ ಅನ್ನು ಭಾರತದಲ್ಲೇ ನಡೆಸಲು ಬಯಸಿರುವುದಾಗಿ ಹೇಳಿಕೊಂಡಿದ್ದಾರೆ.
Published by: Vinay Bhat
First published: November 11, 2020, 3:00 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories