IPL

  • associate partner
HOME » NEWS » Ipl » IPL 2021 AUCTION WHEN WHERE AND TEAM SQUAD OF IPL 2021 SCHEDULE FULL DETAILS HERE VB 2

IPL 2021 Auction: ಐಪಿಎಲ್ 2021 ಹರಾಜು ಪ್ರಕ್ರಿಯೆ ಯಾವಾಗ?: ಟೂರ್ನಿ ಆರಂಭದ ಕುರಿತ ಮಾಹಿತಿ ಇಲ್ಲಿದೆ

ಸದ್ಯದ ಮಾಹಿತಿ ಪ್ರಕಾರ ಭಾರತದಲ್ಲೇ ಐಪಿಎಲ್ 2021 ಆವೃತ್ತಿ ಟೂರ್ನಿ ನಡೆಸಲು ಬಿಸಿಸಿಐ ಪ್ಲಾನ್​ ಹಾಕಿಕೊಂಡಿದ್ದು, ಅದಕ್ಕೂ ಮುಂಚಿತವಾಗಿ ದೊಡ್ಡ ಮಟ್ಟದಲ್ಲಿ ಆಟಗಾರರ ಹರಾಜು ಪ್ರಕ್ರಿಯೆ ನಡೆಸುವ ಸಾಧ್ಯತೆ ಇದೆಯಂತೆ.

news18-kannada
Updated:November 15, 2020, 12:20 PM IST
IPL 2021 Auction: ಐಪಿಎಲ್ 2021 ಹರಾಜು ಪ್ರಕ್ರಿಯೆ ಯಾವಾಗ?: ಟೂರ್ನಿ ಆರಂಭದ ಕುರಿತ ಮಾಹಿತಿ ಇಲ್ಲಿದೆ
IPL 2021
  • Share this:
ಸೆಪ್ಟೆಂಬರ್ 19ಕ್ಕೆ ಆರಂಭವಾದ ಐಪಿಎಲ್ 2020 ಟೂರ್ನಿ ಮಂಗಳವಾರ ನವೆಂಬರ್ 10ಕ್ಕೆ ಕೊನೆಗೊಂಡಿತು. ಮುಂಬೈ ಇಂಡಿಯನ್ಸ್ ತಂಡ ದಾಖಲೆಯ 5ನೇ ಬಾರಿ ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ಮೂಲಕ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ಗೆ ತೆರೆಬಿದ್ದಿದೆ. ಮಾರಕ ಕೊರೋನಾ ವೈರಸ್ ಹಿನ್ನಡೆ ಭಾರತದ ಬದಲು ದೂರದ ಯುಎಇನಲ್ಲಿ ಐಪಿಎಲ್ ಆಯೋಜಿಸಿ ಬಿಸಿಸಿಐ ಯಶಸ್ವಿಯಾಗಿದೆ. ಇದರ ಬೆನ್ನಲ್ಲೆ ಐಪಿಎಲ್ 2021ಕ್ಕೆ ಬಿಸಿಸಿಐ ಸಿದ್ಧತೆ ಶುರು ಮಾಡಿದೆ. 14ನೇ ಆವೃತ್ತಿಯ ಐಪಿಎಲ್​ ಬಗ್ಗೆ ಕೆಲವು ಮಾಹಿತಿಗಳು ಈಗಾಗಲೇ ಹೊರಬಿದ್ದಿವೆ.

ಐಪಿಎಲ್ 2020 ಆರಂಭವಾಗುವ ಹೊತ್ತಲ್ಲಿ 14ನೇ ಅವೃತ್ತಿಯ ಹರಾಜು ಪ್ರಕ್ರಿಯೆ ನಡೆಯುವುದಿಲ್ಲ ಎಂದು ಹೇಳಲಾಗಿತ್ತು. ಯಾಕೆಂದರೆ ಐಪಿಎಲ್ 2020 ಮುಗಿಯುವುದೇ ನ. 10ಕ್ಕೆ ಅದಾದ ಒಂದು ತಿಂಗಳಲ್ಲಿ ಮುಂದಿನ ಆವೃತ್ತಿಯ ಹರಾಜು ಪ್ರಕ್ರಿಯೆ ನಡೆಸುವುದು ಸುಲಭವಲ್ಲ ಎಂಬ ಮಾತುಗಳು ಕೇಳಿಬಂದಿದ್ದವು. ಅಲ್ಲದೆ ಐಪಿಎಲ್ ನಡೆದರೂ ಬಾರತದಲ್ಲಿ ಆಯೋಜನೆ ಅನುಮಾನ ಎನ್ನಲಾಗಿತ್ತು.

IPL: ಆರ್​ಸಿಬಿಯಿಂದ ಶಾಕಿಂಗ್ ನಿರ್ಧಾರ: 3 ಸ್ಟಾರ್ ಆಟಗಾರರನ್ನು ತಂಡದಿಂದ ಕೈಬಿಡುವ ಸಾಧ್ಯತೆ

ಆದರೆ, ಸದ್ಯದ ಮಾಹಿತಿ ಪ್ರಕಾರ ಭಾರತದಲ್ಲೇ ಐಪಿಎಲ್ 2021 ಆವೃತ್ತಿ ಟೂರ್ನಿ ನಡೆಸಲು ಬಿಸಿಸಿಐ ಪ್ಲಾನ್​ ಹಾಕಿಕೊಂಡಿದ್ದು, ಅದಕ್ಕೂ ಮುಂಚಿತವಾಗಿ ದೊಡ್ಡ ಮಟ್ಟದಲ್ಲಿ ಆಟಗಾರರ ಹರಾಜು ಪ್ರಕ್ರಿಯೆ ನಡೆಸುವ ಸಾಧ್ಯತೆ ಇದೆಯಂತೆ.

ಇನ್ನೊಂದು ಅಚ್ಚರಿಯ ವಿಚಾರ ಎಂದರೆ, 2021ರ ಐಪಿಎಲ್​ ಟೂರ್ನಿಯಲ್ಲಿ ಮತ್ತೊಂದು ತಂಡ ಸೇರಿಸಿಕೊಳ್ಳುವ ಬಗ್ಗೆ ಬಿಸಿಸಿಐ ಮಾತುಕತೆ ನಡೆಸುತ್ತಿದೆ ಎನ್ನಲಾಗಿದೆ. 13ನೇ ಆವೃತ್ತಿ ಐಪಿಎಲ್​ನಲ್ಲಿ ಕೊರೋನಾ ವೈರಸ್​ ಕಾರಣ ಬಿಸಿಸಿಐ ಸಾಕಷ್ಟು ನಷ್ಟ ಅನುಭವಿಸಿದ್ದು, ಇದೀಗ ಅದನ್ನ ಸರಿದೂಗಿಸಲು ಈ ನಿರ್ಧಾರ ಕೈಗೊಳ್ಳಾಗಿದೆ ಎಂದು ಹೇಳಲಾಗುತ್ತಿದೆ.

ಮಾಹಿತಿಯ ಪ್ರಕಾರ ಅಹಮದಾಬಾದ್​ ಮೂಲದ ಪ್ರಾಂಚೈಸಿ ಹೊಸದಾಗಿ ಐಪಿಎಲ್ ಸೇರಿಕೊಳ್ಳುವ ಸಾಧ್ಯತೆ ಇದೆ. ಆದರೆ, ಈ ಬಗ್ಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಆದರೆ, ಹರಾಜು ಪ್ರಕ್ರಿಯೆ ಕೂಡ ಭಾರತದಲ್ಲೇ ನಡೆಯಲಿದ್ದು, ದಿನಾಂಕ ಇನ್ನೂ ಫೈನಲ್ ಮಾಡಬೇಕಷ್ಟೆ.

IND vs AUS: ಸಾಹ ಸಿದ್ಧ, ರೋಹಿತ್ ನಾಟ್ ಫಿಟ್: ಕ್ವಾರಂಟೈನ್ ಅವಧಿಯಲ್ಲೇ ಟೀಂ ಇಂಡಿಯಾ ಆಟಗಾರರ ಭರ್ಜರಿ ಅಭ್ಯಾಸಇನ್ನೂ ಮುಂದಿನ ಆವೃತ್ತಿಯ ಐಪಿಎಲ್​ನಲ್ಲಿ ತಂಡದ ಆಡುವ ಬಳಗದಲ್ಲಿ ವಿದೇಶಿ ಕ್ರಿಕೆಟಿಗರ ಸಂಖ್ಯೆಯನ್ನು ಹೆಚ್ಚಿಸುವ ಬಗ್ಗೆ ಬಿಸಿಸಿಐ ಚಿಂತನೆ ನಡೆಸುತ್ತಿದೆ. ಐಪಿಎಲ್ ಆರಂಭದಿಂದಲೂ ಈ ಸಂಖ್ಯೆ ಕೇವಲ ನಾಲ್ಕೇ ಆಟಗಾರರಿಗೆ ಸೀಮಿತಗೊಂಡಿದೆ. ಇದನ್ನು ಸದ್ಯ ಐದಕ್ಕೆ ಏರಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ.

ಈಗಾಗಲೇ ಗಂಗೂಲಿ, 2021ರ ಐಪಿಎಲ್‌ ಅವೃತ್ತಿ ಮುಂದಿನ ವರ್ಷ ಮಾರ್ಚ್ ಮಧ್ಯದಲ್ಲಿ ಆರಂಭವಾಗಲಿದೆ. ಕೊರೊನಾ ಲಸಿಕೆ ಐಪಿಎಲ್ ಸಮಯದಲ್ಲಿ ಕಂಡು ಹಿಡಿಯಬಹುದು. ಹೀಗಾಗಿ ಮುಂದಿನ ಐಪಿಎಲ್ ಅನ್ನು ಭಾರತದಲ್ಲೇ ನಡೆಸಲು ಬಯಸಿರುವುದಾಗಿ ಹೇಳಿಕೊಂಡಿದ್ದಾರೆ.
Published by: Vinay Bhat
First published: November 15, 2020, 12:20 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading